ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟಿಸಲು ಮಹೂರ್ತ ಫಿಕ್ಸ್; ಖಚಿತವಾದ ಆಟಗಾರರ ಸಂಭಾವ್ಯ ಲಿಸ್ಟ್​ ಇಲ್ಲಿದೆ

ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟಿಸಲು ಮಹೂರ್ತ ಫಿಕ್ಸ್; ಖಚಿತವಾದ ಆಟಗಾರರ ಸಂಭಾವ್ಯ ಲಿಸ್ಟ್​ ಇಲ್ಲಿದೆ

ಏಪ್ರಿಲ್‌ ತಿಂಗಳ ಕೊನೆಯ ವಾರದಲ್ಲಿ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ವಿಂಡೀಸ್‌ ಹಾಗೂ ಯುಎಸ್‌ಎ ನೆಲದಲ್ಲಿ ನಡೆಯು ಪಂದ್ಯಾವಳಿಗೆ ತಂಡಗಳ ಪಟ್ಟಿಯನ್ನು ಸಲ್ಲಿಸಲು ಮೇ 1 ಕೊನೆಯ ದಿನವಾಗಿದೆ. ಅದಕ್ಕೂ ಮುನ್ನ ತಂಡವನ್ನು ಅಂತಿಮಗೊಳಿಸಬೇಕಾಗಿದೆ.

ಟಿ20 ವಿಶ್ವಕಪ್‌ಗೆ ಈ ದಿನದಂದು ಭಾರತ ತಂಡದ ಘೋಷಣೆ
ಟಿ20 ವಿಶ್ವಕಪ್‌ಗೆ ಈ ದಿನದಂದು ಭಾರತ ತಂಡದ ಘೋಷಣೆ

ಐಪಿಎಲ್‌ ಪಂದ್ಯಾವಳಿಯು ಮುಗಿದ ಬೆನ್ನಲ್ಲೇ ಐಸಿಸಿ ಟಿ20 ಕ್ರಿಕೆಟ್​ ವಿಶ್ವಕಪ್​ (T20 World Cup 2024) ಪಂದ್ಯಾವಳಿ ಆರಂಭವಾಗಲಿದೆ. ಜೂನ್​ 1ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಸಂಪೂರ್ಣ ಟೂರ್ನಿ ನಡೆಯಲಿದೆ. ಪಂದ್ಯಾವಳಿಗೆ ಬಲಿಷ್ಠ ತಂಡವನ್ನು ಕಳುಹಿಸಲು ಅರ್ಹತೆ ಪಡೆದಿರುವ ರಾಷ್ಟ್ರಗಳು ಎದುರು ನೋಡುತ್ತಿವೆ. ಬಿಸಿಸಿಐ ಕೂಡಾ ಅಳೆದು ತೂಗಿ ತಂಡದ ಆಯ್ಕೆಗೆ ಮುಂದಾಗಿದ್ದು, ಐಪಿಎಲ್‌ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರು ವಿಶ್ವಸಮರಕ್ಕೆ ಟಿಕೆಟ್‌ ಪಡೆಯುವುದು ಬಹುತೇಕ ಖಚಿತ. ಜೂನ್ 5ರಂದು ಐರ್ಲೆಂಡ್ ಎದುರು ಕಣಕ್ಕಿಳಿಯುವ ಮೂಲಕ ರೋಹಿತ್​ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್‌ ತಂಡವು (Indian Cricket Team) ವಿಶ್ವಕಪ್‌ನಲ್ಲಿ ಅಭಿಯಾನ ಆರಂಭಿಸಲಿದೆ.

ಟ್ರೆಂಡಿಂಗ್​ ಸುದ್ದಿ

ಲಭ್ಯ ವರದಿಗಳ ಪ್ರಕಾರ, ಏಪ್ರಿಲ್‌ ತಿಂಗಳ ಅಂತ್ಯದಲ್ಲೇ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಚುಟುಕು ವಿಶ್ವಕಪ್ ಪಂದ್ಯಾವಳಿಗೆ ತಂಡಗಳ ಪಟ್ಟಿಯನ್ನು ಸಲ್ಲಿಸಲು ಮೇ 1 ಕೊನೆಯ ದಿನವಾಗಿದೆ. ಆ ಬಳಿಕ ಮೇ 25ರವರೆಗೆ ತಂಡವನ್ನು ಬದಲಿಸಲು ಅವಕಾಶ ನೀಡಲಾಗಿದೆ.

ಅದಕ್ಕೂ ಮುನ್ನ ತಂಡವನ್ನು ಆಯ್ಕೆ ಮಾಡಿ ಪಟ್ಟಿಯನ್ನು ಐಸಿಸಿಗೆ ಸಲ್ಲಿಸಬೇಕಾಗಿದೆ. ಹೀಗಾಗಿ ತಂಡದ ಅಧಿಕೃತ ಘೋಷಣೆಯನ್ನು ಏಪ್ರಿಲ್ ಕೊನೆಯ ವಾರ ನಡೆಸುವುದು ಬಹುತೇಕ ಖಚಿತವಾಗಿದೆ. ಸ್ಪೋರ್ಟ್ಸ್‌ಕೀಡಾ ವರದಿಯ ಪ್ರಕಾರ, ಏಪ್ರಿಲ್ 27 ಅಥವಾ 28ರಂದು ತಂಡವನ್ನು ಘೋಷಿಸಲಾಗುತ್ತದೆ. ಆದರೆ, ಈ ಬಗ್ಗೆ ಬಿಸಿಸಿಐ ಅಥವಾ ಆಯ್ಕೆ ಸಮಿತಿ ಮುಖ್ಯಸ್ಥರಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಕೊನೆಯ ವಾರದಲ್ಲೇ ತಂಡ ಪ್ರಕಟ ಮಾಡಬೇಕಾಗಿರುವುದರಿಂದ, ಈ ದಿನಾಂಕವೇ ಬಹುತೇಕ ಅಂತಿಮವಾಗಲಿದೆ.

ಕೆಲವು ಆಟಗಾರರ ಆಯ್ಕೆ ಖಚಿತ

ಪಂದ್ಯಾವಳಿಗೆ ಯಾವೆಲ್ಲಾ ಆಟಗಾರರು ಆಯ್ಕೆಯಾಗಬಹುದು ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ಆದರೆ, ಕೆಲವು ಆಟಗಾರರು ಆಯ್ಕೆಯಾಗುವುದು ಬಹುತೇಕ ಖಚಿತ. ಸುದ್ದಿಸಂಸ್ಥೆ ಪಿಟಿಐ ವರದಿ ಪ್ರಕಾರ, ಭಾರತ ವಿಶ್ವಕಪ್ ತಂಡಕ್ಕೆ ಖಚಿತವಾಗಿರುವ 10 ಆಟಗಾರರ ಪೈಕಿ ವಿಕೆಟ್‌ ಕೀಪರ್‌ ಹಾಗೂ ಬ್ಯಾಟರ್ ರಿಷಭ್​ ಪಂತ್ ಪ್ರಮುಖರು. ಇದೇ ವೇಳೆ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ನಂಬರ್‌ ವನ್‌ ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್, ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ, ಆಲ್‌ರೌಂಡರ್‌ ರವೀಂದ್ರ ಜಡೇಜಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಸ್ಪಿನ್ನರ್ ಕುಲ್ದೀಪ್ ಯಾದವ್ ಆಯ್ಕೆ ಬಹುತೇಕ ಖಚಿತ. ಉಳಿದಂತೆ ಹಾರ್ದಿಕ್ ಪಾಂಡ್ಯ ಕೂಡಾ ಆಯ್ಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ | ಟಿ20 ವಿಶ್ವಕಪ್​ಗೆ ದಿನೇಶ್ ಕಾರ್ತಿಕ್ ಸೇರಿ 6 ವಿಕೆಟ್​ ಕೀಪರ್ಸ್ ಮಧ್ಯೆ ಸ್ಪರ್ಧೆ; ಆದರೆ 26 ವರ್ಷದ ಆಟಗಾರನಿಗೆ ಮೊದಲ ಆದ್ಯತೆ

ಅತ್ತ ಟೂರ್ನಿಯಲ್ಲಿ ಪ್ರಭಾವ ಬೀರಲು ವಿಫಲರಾಗಿರುವ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್‌ ಮತ್ತು ಶುಭ್ಮನ್ ಗಿಲ್ ಆಯ್ಕೆ ಇನ್ನೂ ಗೊಂದಲದಲ್ಲಿದೆ. ಉಳಿದಂತೆ ಫಿನಿಶರ್‌ ಪಾತ್ರಕ್ಕೆ ಉತ್ತಮ ಲಯದಲ್ಲಿರುವ ರಿಂಕು ಸಿಂಗ್ ಆಯ್ಕೆ ಸಾಧ್ಯತೆ ಇದೆ. ಸಂಜು ಸ್ಯಾಮ್ಸನ್ (ಬ್ಯಾಕಪ್ ವಿಕೆಟ್ ಕೀಪರ್), ರವಿ ಬಿಷ್ಣೋಯ್ (ಬ್ಯಾಕಪ್ ಸ್ಪಿನ್ನರ್​) ಮತ್ತು ಮಯಾಂಕ್ ಯಾದವ್ (ಬ್ಯಾಕಪ್ ಪೇಸರ್​) ಆಯ್ಕೆಗೆ ಬಿಸಿಸಿಐ ಯೋಚಿಸುವುದು ಖಚಿತ.

IPL_Entry_Point