ರೋಹಿತ್ ಅಬ್ಬರಿಸಿದ್ದ ಮೈದಾನದಲ್ಲಿ ಭಾರತ-ಅಫ್ಘಾನಿಸ್ತಾನ ಎರಡನೇ ಟಿ20; ಇಂದೋರ್‌ನಲ್ಲಿ ಭಾರತದ ದಾಖಲೆ ಹೀಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್ ಅಬ್ಬರಿಸಿದ್ದ ಮೈದಾನದಲ್ಲಿ ಭಾರತ-ಅಫ್ಘಾನಿಸ್ತಾನ ಎರಡನೇ ಟಿ20; ಇಂದೋರ್‌ನಲ್ಲಿ ಭಾರತದ ದಾಖಲೆ ಹೀಗಿದೆ

ರೋಹಿತ್ ಅಬ್ಬರಿಸಿದ್ದ ಮೈದಾನದಲ್ಲಿ ಭಾರತ-ಅಫ್ಘಾನಿಸ್ತಾನ ಎರಡನೇ ಟಿ20; ಇಂದೋರ್‌ನಲ್ಲಿ ಭಾರತದ ದಾಖಲೆ ಹೀಗಿದೆ

India vs Afghanistan 2nd T20: ಭಾರತ ಮತ್ತು ಅಫ್ಘಾನಿಸ್ತಾನ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಭಾರತದ ಟಿ20 ದಾಖಲೆಗಳು ಹೇಗಿವೆ ಎಂಬುದನ್ನು ನೋಡೋಣ.

ಇಂದೋರ್‌ನ ಹೋಳ್ಕರ್ ಕ್ರೀಡಾಂಗಣ
ಇಂದೋರ್‌ನ ಹೋಳ್ಕರ್ ಕ್ರೀಡಾಂಗಣ (Twitter)

ಮೊಹಾಲಿಯಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 (India vs Afghanistan) ಪಂದ್ಯದಲ್ಲಿ ಭಾರತ ತಂಡವು ಆರು ವಿಕೆಟ್‌ಗಳ ಅಂತರದಿಂದ ಸುಲಭ ಜಯ ಸಾಧಿಸಿತು. ಇದೀಗ ಸರಣಿಯ ಎರಡನೇ ಪಂದ್ಯಕ್ಕಾಗಿ ಉಭಯ ತಂಡಗಳು ಇಂದೋರ್‌ನ ಹೋಳ್ಕರ್ ಕ್ರೀಡಾಂಗಣಕ್ಕೆ (Holkar Stadium in Indore) ತಲುಪಿವೆ. ಜನವರಿ 14ರ ಭಾನುವಾರ ಎರಡನೇ ಟಿ20 ಪಂದ್ಯ ನಡೆಯಲಿರುವ ಮೈದಾನದಲ್ಲಿ ಟೀಮ್‌ ಇಂಡಿಯಾದ ಟಿ20 ದಾಖಲೆಗಳನ್ನು ನೋಡೋಣ.

ಭಾರತ ತಂಡವು ಇದುವರೆಗೆ ಭಾರತದ ಅತ್ಯಂತ ಸ್ವಚ್ಛಂದ ನಗರವಾದ ಇಂದೋರ್‌ನಲ್ಲಿ ಮೂರು ಟಿ20 ಪಂದ್ಯಗಳನ್ನು ಮಾತ್ರ ಆಡಿದೆ. ಅದರಲ್ಲಿ ಎರಡರಲ್ಲಿ ಗೆದ್ದರೆ, ಒಂದು ಪಂದ್ಯದಲ್ಲಿ ಸೋಲೊಪ್ಪಿದೆ. ಸದ್ಯ ರೋಹಿತ್ ಶರ್ಮಾ ನಾಯಕತ್ವದಲ್ಲಿ ಆತಿಥೇಯ ಭಾರತವು ಪಂದ್ಯ ಗೆದ್ದು ಗೆದ್ದು ಸರಣಿ ವಶಪಡಿಸಿಕೊಳ್ಳುವ ಗುರಿ ಹಾಕಿಕೊಂಡಿದೆ. ಆ ಮೂಲಕ ಅಫ್ಘಾನಿಸ್ತಾನ ವಿರುದ್ಧ ಅಜೇಯ ಓಟ ಮುಂದುವರೆಸುವ ವಿಶ್ವಾಸದಲ್ಲಿದೆ.

ಇಂಡೋ-ಅಫ್ಘನ್ ಎರಡನೇ ಟಿ20 ಪಂದ್ಯದ ಆರಂಭಕ್ಕೂ ಮುನ್ನ ಹೋಳ್ಕರ್ ಸ್ಟೇಡಿಯಂನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಭಾರತದ ಟಿ20 ದಾಖಲೆಗಳು ಹೇಗಿವೆ ಎಂಬುದನ್ನು ಮೆಲುಕು ಹಾಕೋಣ.

ಇದನ್ನೂ ಓದಿ | 14 ತಿಂಗಳ ಬಳಿಕ ತನ್ನ ಮೊದಲ ಟಿ20 ಆಡಲು ಇಂದೋರ್ ತಲುಪಿದ ಕೊಹ್ಲಿ; ಹಲವು ದೊಡ್ಡ ದಾಖಲೆಗಳ ಮೇಲೆ ಕಣ್ಣು

ಇಂದೋರ್‌ನಲ್ಲಿ ಭಾರತ ಆಡಿದ ಮೊದಲ ಚುಟುಕು ಪಂದ್ಯದಲ್ಲೇ ದಾಖಲೆ ನಿರ್ಮಾಣವಾಗಿತ್ತು. ರೋಹಿತ್‌ ಶರ್ಮಾ ಕೇವಲ 43 ಎಸೆತಗಳಲ್ಲಿ 118 ರನ್‌ ಗಳಿಸುವುದರೊಂದಿಗೆ ಭಾರತ ತಂಡ ಭರ್ಜರಿ 260 ರನ್‌ ಪೇರಿಸಿತ್ತು. ಇದೇ ಮೈದಾನದಲ್ಲಿ ಮತ್ತೊಂದು ದಾಖಲೆಗೆ ಟೀಮ್‌ ಇಂಡಿಯಾ ಸಜ್ಜಾಗಿದೆ.

ಫಲಿತಾಂಶಗಳು

ಭಾರತ ಇಲ್ಲಿ ಒಟ್ಟು 3 ಟಿ20 ಪಂದ್ಯಗಳಲ್ಲಿ ಆಡಿದ್ದು, ಅದರಲ್ಲಿ 2 ಗೆಲುವು ಮತ್ತು 1 ಸೋಲು ಕಂಡಿದೆ. 2022ರಲ್ಲಿ ಆಡಿದ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 49 ರನ್‌ ಅಂತರದಿಂದ ಸೋತಿತ್ತು. ಅದಕ್ಕೂ ಮುನ್ನ 2020 ಹಾಗೂ 2017ರಲ್ಲಿ ನಡೆದ ಪಂದ್ಯಗಳಲ್ಲಿ ಶ್ರೀಲಂಕಾ ವಿರುದ್ಧ ಜಯ ಸಾಧಿಸಿತ್ತು. 2020ರಲ್ಲಿ 7 ವಿಕೆಟ್‌ಗಳಿಂದ ಗೆದ್ದರೆ, 2017ರಲ್ಲಿ 88 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತ್ತು.

ಇದನ್ನೂ ಓದಿ | ತಿಲಕ್ ವರ್ಮಾ ಸಿಕ್ಕ ಅವಕಾಶ ಕೈಚೆಲ್ಲಿದ್ರು, 2ನೇ ಪಂದ್ಯಕ್ಕೆ ಕೈಬಿಡಿ; ಆಕಾಶ್ ಚೋಪ್ರಾ ಸಲಹೆ

  • ಗರಿಷ್ಠ ಮೊತ್ತ: ಶ್ರೀಲಂಕಾ ವಿರುದ್ಧ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 260 ರನ್ (ಡಿಸೆಂಬರ್ 22, 2017 ರಂದು).
  • ಕನಿಷ್ಠ ಮೊತ್ತ: ಶ್ರೀಲಂಕಾ ವಿರುದ್ಧ 17.3 ಓವರ್‌ಗಳಲ್ಲಿ 3 ವಿಕೆಟ್‌ಗೆ 144 (ಜನವರಿ 7, 2020 ರಂದು).
  • ಅತಿದೊಡ್ಡ ಗೆಲುವು: 2017ರ ಡಿಸೆಂಬರ್ 22ರಂದು ಭಾರತವು ಶ್ರೀಲಂಕಾವನ್ನು 88 ರನ್‌ಗಳಿಂದ ಸೋಲಿಸಿತು.
  • ಅತಿ ಹೆಚ್ಚು ರನ್: ಕೆಎಲ್ ರಾಹುಲ್ 2 ಪಂದ್ಯಗಳಲ್ಲಿ 134 ರನ್.
  • ಗರಿಷ್ಠ ವೈಯಕ್ತಿಕ ಸ್ಕೋರ್: ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ 43 ಎಸೆತಗಳಲ್ಲಿ 118 ರನ್.
  • ಅತಿ ಹೆಚ್ಚು ಶತಕ: ರೋಹಿತ್ ಶರ್ಮಾ 1 ಶತಕ.
  • ಹೆಚ್ಚು ಅರ್ಧಶತಕ: ಕೆಎಲ್ ರಾಹುಲ್ ಅವರಿಂದ ಎರಡು ಟಿ20 ಪಂದ್ಯಗಳಲ್ಲಿ 1 ಫಿಫ್ಟಿ.
  • ಅತಿ ಹೆಚ್ಚು ಸಿಕ್ಸರ್‌ಗಳು: ರೋಹಿತ್ ಶರ್ಮಾ, ಎರಡು ಟಿ20 ಪಂದ್ಯಗಳಲ್ಲಿ 10 ಸಕ್ಸರ್.‌
  • ಹೆಚ್ಚು ವಿಕೆಟ್: ಕುಲ್ದೀಪ್ ಯಾದವ್ ಎರಡು ಟಿ20ಗಳಲ್ಲಿ 5 ವಿಕೆಟ್.
  • ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು: ಯುಜುವೇಂದ್ರ ಚಹಾಲ್, ನಾಲ್ಕು ಓವರ್‌ಗಳಲ್ಲಿ 52 ರನ್‌ಗಳಿಗೆ 4 ವಿಕೆಟ್.
  • ಗರಿಷ್ಠ ಜೊತೆಯಾಟ: ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್. ಶ್ರೀಲಂಕಾ ವಿರುದ್ಧ ಮೊದಲ ವಿಕೆಟ್‌ಗೆ 165 ರನ್.

Whats_app_banner