ಭಾರತ ತಂಡ ನಿಜಕ್ಕೂ ಆತನನ್ನು ಮಿಸ್ ಮಾಡಿಕೊಳ್ತಿದೆ; ಸ್ಟಾರ್ ಆಟಗಾರನ ಅನುಪಸ್ಥಿತಿಗೆ ದಿನೇಶ್ ಕಾರ್ತಿಕ್ ಬೇಸರ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ತಂಡ ನಿಜಕ್ಕೂ ಆತನನ್ನು ಮಿಸ್ ಮಾಡಿಕೊಳ್ತಿದೆ; ಸ್ಟಾರ್ ಆಟಗಾರನ ಅನುಪಸ್ಥಿತಿಗೆ ದಿನೇಶ್ ಕಾರ್ತಿಕ್ ಬೇಸರ

ಭಾರತ ತಂಡ ನಿಜಕ್ಕೂ ಆತನನ್ನು ಮಿಸ್ ಮಾಡಿಕೊಳ್ತಿದೆ; ಸ್ಟಾರ್ ಆಟಗಾರನ ಅನುಪಸ್ಥಿತಿಗೆ ದಿನೇಶ್ ಕಾರ್ತಿಕ್ ಬೇಸರ

Dinesh Karthik: ಭಾರತದ ಅನುಭವಿ ವಿಕೆಟ್‌ ಕೀಪರ್ ಹಾಗೂ ಬ್ಯಾಟರ್ ದಿನೇಶ್ ಕಾರ್ತಿಕ್, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಭಾರತವು‌ ಸ್ಟಾರ್‌ ವೇಗಿಯನ್ನು ಮಿಸ್‌ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಭಾರತ ತಂಡವು ಈ ಕ್ರಿಕೆಟಿಗನನ್ನು ಮಿಸ್‌ ಮಾಡಿಕೊಳ್ತಿದೆ ಎಂದ ದಿನೇಶ್‌ ಕಾರ್ತಿಕ್
ಭಾರತ ತಂಡವು ಈ ಕ್ರಿಕೆಟಿಗನನ್ನು ಮಿಸ್‌ ಮಾಡಿಕೊಳ್ತಿದೆ ಎಂದ ದಿನೇಶ್‌ ಕಾರ್ತಿಕ್

ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ (South Africa vs India) ತಂಡಗಳ ನಡುವಿನ ಟೆಸ್ಟ್‌ ಸರಣಿಯ ಮೊದಲ ಪಂದ್ಯ ನಡೆಯುತ್ತಿದೆ. ಸದ್ಯ ಮೂರನೇ ದಿನದಾಟ ನಡೆಯುತ್ತಿದ್ದು, ಆತಿಥೇಯ ಆಫ್ರಿಕಾ ಮುನ್ನಡೆ ಕಾಯ್ದುಕೊಂಡಿದೆ.

ಭಾರತ ತಂಡವು ಅನುಭವಿ ಟೆಸ್ಟ್‌ ಆಟಗಾರ ಚೆತೇಶ್ವರ ಪೂಜಾರ, ವೇಗಿ ಮೊಹಮ್ಮದ್ ಶಮಿ ಮತ್ತು ನಂಬರ್‌ ವನ್‌ ಆಲ್‌ರೌಂಡರ್ ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ಮೊದಲ ಟೆಸ್ಟ್ ಆಡುತ್ತಿದೆ. ಏಕದಿನ ವಿಶ್ವಕಪ್‌ನಲ್ಲಿ ಮಿಂಚಿದ್ದ ಶಮಿ ಪಾದದ ಗಾಯದಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಅತ್ತ ಬೆನ್ನಿನ ನೋವಿನಿಂದಾಗಿ ಜಡೇಜಾ ಸರಣಿಯ ಮೊದಲ ಪಂದ್ಯ ಮಿಸ್‌ ಮಾಡಿಕೊಂಡಿದ್ದಾರೆ.

ಜಡೇಜಾ ಮತ್ತು ಶಮಿ ಅನುಪಸ್ಥಿತಿಯಲ್ಲಿ ಭಾರತೀಯ ಬೌಲರ್‌ಗಳು ಮೇಲುಗೈ ಸಾಧಿಸಲು ವಿಫಲರಾದರು. ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ಕೂಡಾ ಪ್ರಭಾವ ಬರಲಿಲ್ಲ. ಹೀಗಾಗಿ ಭಾರತದ ಅನುಭವಿ ವಿಕೆಟ್‌ ಕೀಪರ್ ಹಾಗೂ ಬ್ಯಾಟರ್ ದಿನೇಶ್ ಕಾರ್ತಿಕ್, ಭಾರತವು‌ ಮೊಹಮ್ಮದ್ ಶಮಿಯನ್ನು ನಿಜಕ್ಕೂ ಮಿಸ್‌ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | ಟೆಸ್ಟ್ ಕ್ರಿಕೆಟ್​ನಲ್ಲಿ ಕೆಎಲ್ ರಾಹುಲ್ ಪಾಲಿಗೆ ಡಿಸೆಂಬರ್ 26 ವಿಶೇಷ ದಿನ; ಅದಕ್ಕಿದೆ ವಿಶೇಷ ಕಾರಣ

ಕ್ರಿಕ್‌ಬಜ್‌ ಜೊತೆಗಿನ ಚರ್ಚೆಯಲ್ಲಿ ಮಾತನಾಡಿದ ಕಾರ್ತಿಕ್‌, ವೇಗಿಗಳಿಗೆ ನೆರವಾಗುವ ಸೂಪರ್‌ಸ್ಪೋರ್ಟ್ ಪಾರ್ಕ್‌ನ ಪಿಚ್‌ನಲ್ಲಿ ಶಮಿ ಉತ್ತಮ ಯಶಸ್ಸು ಸಾಧಿಸುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.

“ಅವರು ಒಬ್ಬ ಬೌಲರ್ ಆಗಿ ತಂಡದಲ್ಲಿ ಎತ್ತರಕ್ಕೆ ಬೆಳೆದಿದ್ದಾರೆ. ಜಸ್ಪ್ರೀತ್ ಬುಮ್ರಾ ಜೊತೆಗೆ ಅವರು ಸಮರ್ಥ ವೇಗಿಯಾದ್ದಾರೆ. ಇಂಥಹ ಪಿಚ್‌ನಲ್ಲಿ ಸೀಮ್ ಅನ್ನು ನೀವು ಊಹಿಸಬಹುದು. ಇಲ್ಲಿ ಅವರು ಖಂಡಿತವಾಗಿಯೂ ಕೆಲವು ವಿಕೆಟ್‌ಗಳನ್ನು ಪಡೆಯುತ್ತಿದ್ದರು. ಭಾರತ ತಂಡವು ಅವರನ್ನು ನಿಜವಾಗಿಯೂ ಮಿಸ್ ಮಾಡಿಕೊಳ್ಳುತ್ತಿದೆ,” ಎಂದು ಕಾರ್ತಿಕ್‌ ಅಭಿಪ್ರಾಯಪಟ್ಟಿದ್ದಾರೆ.

“ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ಅವರ 27 ಓವರ್‌ಗಳಲ್ಲಿ 118 ರನ್‌ ಬಿಟ್ಟುಕೊಟ್ಟಿದ್ದಾರೆ. ಮತ್ತೊಂದೆಡೆ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ 31 ಓವರ್‌ಗಳಲ್ಲಿ ಕೇವಲ 111 ರನ್‌ ನೀಡಿದ್ದಾರೆ. ಸಿರಾಜ್ ತುಸು ದುಬಾರಿಯಾದರು. ಆದರೆ ಅವರು ಕೆಲವೊಂದು ಅದ್ಭುತ ಎಸೆತಗಳನ್ನು ಬೌಲ್ ಮಾಡಿದರು. ಪ್ರತಿ ಬಾರಿಯೂ ಅವರು ತಂಡಕ್ಕಾಗಿ ಒಂದು ಅಥವಾ ಎರಡು ವಿಕೆಟ್ ಪಡೆಯುತ್ತಾರೆ ಎಂಬ ಭಾವನೆ ಇತ್ತು. ಅತ್ತ ಶಾರ್ದೂಲ್ ಅಥವಾ ಪ್ರಸಿದ್ಧ್ ಬೌಲಿಂಗ್‌ ಮಾಡುವಾಗ ಬ್ಯಾಟರ್‌ಗಳು ತಪ್ಪು ಮಾಡುವುದಕ್ಕಾಗಿಯೇ ತಂಡ ಕಾಯಬೇಕಾಗಿತ್ತು,” ಎಂದು ಕಾರ್ತಿಕ್‌ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | ಭಾರತೀಯ ಬೌಲರ್‌ಗಳ ದಂಡಿಸಿದ ಡೀನ್ ಎಲ್ಗರ್; ರೋಹಿತ್ ಶರ್ಮಾ ಕಳಪೆ ನಾಯಕತ್ವಕ್ಕೆ ರವಿ ಶಾಸ್ತ್ರಿ ಅಸಮಾಧಾನ

ಭಾರತ ತಂಡದ ಆಟದ ತಂತ್ರಗಳಿಂದ ಭಾರತದ ಮಾಜಿ ಆಲ್ ರೌಂಡರ್ ರವಿ ಶಾಸ್ತ್ರಿ ಸ್ವಲ್ಪ ಮಟ್ಟಿಗೆ ಸಿಟ್ಟಿಗೆದ್ದಂತೆ ತೋರುತ್ತಿತ್ತು. “ನಾನು ತರಬೇತುದಾರನಾಗಿದ್ದಾಗ ನಾವು ಹಲವಾರು ಬಾರಿ ಚರ್ಚೆ ನಡೆಸಿದ್ದೆವು. ಹೆಚ್ಚಾಗಿ ನಾವು ಸೆಷನ್ ಆರಂಭದಲ್ಲಿ ಇಬ್ಬರು ಅತ್ಯುತ್ತಮ ಬೌಲರ್‌ಗಳನ್ನು ಕಣಕ್ಕಿಳಿಸಿಲು ಆದ್ಯತೆ ನೀಡುತ್ತಿದ್ದೆವು. ಊಟದ ವಿರಾಮದ ನಂತರದ‌ ಅವಧಿಯನ್ನು ಪ್ರಾರಂಭಿಸುವಾಗ ಈ ಇಬ್ಬರು (ಶಾರ್ದೂಲ್ ಮತ್ತು ಪ್ರಸಿದ್ಧ್) ಕೊನೆಯ ಆಯ್ಕೆ” ಎಂದು ಶಾಸ್ತ್ರಿ ಕಾಮೆಂಟರಿಯಲ್ಲಿ ಹೇಳಿದ್ದಾರೆ.

ವಿಡಿಯೋ ನೋಡಿ | Siddaramaiah : ಕನ್ನಡಕ್ಕೆ ಹೋರಾಟ ಮಾಡುವವರ ಬಗ್ಗೆ ತಕರಾರಿಲ್ಲ ; ಆದರೆ ಸರ್ಕಾರದ ಆಸ್ತಿ ನಾಶ ಮಾಡಲು ಅಧಿಕಾರವಿಲ್ಲ

Whats_app_banner