ಕನ್ನಡ ಸುದ್ದಿ  /  ಕ್ರಿಕೆಟ್  /  ತಂಡವೇ 100 ರನ್ ಗಳಿಸುತ್ತಿದೆ; ವಿರಾಟ್ ಕೊಹ್ಲಿ-ರೋಹಿತ್​ ಶರ್ಮಾ ಕಳಪೆ ಫಾರ್ಮ್ ಕುರಿತು ದಿನೇಶ್ ಕಾರ್ತಿಕ್ ಮನದ ಮಾತು

ತಂಡವೇ 100 ರನ್ ಗಳಿಸುತ್ತಿದೆ; ವಿರಾಟ್ ಕೊಹ್ಲಿ-ರೋಹಿತ್​ ಶರ್ಮಾ ಕಳಪೆ ಫಾರ್ಮ್ ಕುರಿತು ದಿನೇಶ್ ಕಾರ್ತಿಕ್ ಮನದ ಮಾತು

Dinesh Karthik on Virat Kohli: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನದ ಕುರಿತು ದಿನೇಶ್ ಕಾರ್ತಿಕ್ ಮಾತನಾಡಿದ್ದಾರೆ.

ತಂಡವೇ 100 ರನ್ ಗಳಿಸುತ್ತಿದೆ; ವಿರಾಟ್ ಕೊಹ್ಲಿ-ರೋಹಿತ್​ ಶರ್ಮಾ ಕಳಪೆ ಫಾರ್ಮ್ ಕುರಿತು ದಿನೇಶ್ ಕಾರ್ತಿಕ್ ಮನದ ಮಾತು
ತಂಡವೇ 100 ರನ್ ಗಳಿಸುತ್ತಿದೆ; ವಿರಾಟ್ ಕೊಹ್ಲಿ-ರೋಹಿತ್​ ಶರ್ಮಾ ಕಳಪೆ ಫಾರ್ಮ್ ಕುರಿತು ದಿನೇಶ್ ಕಾರ್ತಿಕ್ ಮನದ ಮಾತು

ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಗುಂಪು ಹಂತದಲ್ಲಿ ಸತತ ಮೂರು ಗೆಲುವು ಸಾಧಿಸಿರುವ ಭಾರತ ತಂಡ, ಎ ಗುಂಪಿನಲ್ಲಿ ಮೊದಲ ತಂಡವಾಗಿ ಸೂಪರ್​-8 ಸುತ್ತಿಗೆ ಲಗ್ಗೆ ಇಟ್ಟಿದೆ. ಆರಂಭಿಕ ಪಂದ್ಯದಲ್ಲಿ ಐರ್ಲೆಂಡ್ ಸೋಲಿಸಿದ ರೋಹಿತ್ ಪಡೆ ನಂತರ ಪಾಕಿಸ್ತಾನ ತಂಡ ಮಣಿಸಿತ್ತು. ಜೂನ್ 12 ರಂದು ಯುಎಸ್​ಎ ತಂಡವನ್ನು ಸೋಲಿಸಿ ಮುಂದಿನ ಹಂತಕ್ಕೆ ಲಗ್ಗೆ ಇಟ್ಟಿತು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಆಕರ್ಷಕ ಅರ್ಧಶತಕ ಸಿಡಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಆದಾಗ್ಯೂ, ಪ್ರಸ್ತುತ ಟಿ20 ಆವೃತ್ತಿಯಲ್ಲಿ ಪ್ರಾಬಲ್ಯ ಸಾಧಿಸಲು ಸಾಧ್ಯವಾಗದ ಒಬ್ಬ ಬ್ಯಾಟರ್​ ಅಂದರೆ ಅದು ವಿರಾಟ್ ಕೊಹ್ಲಿ. ಭಾರತದ ಮಾಜಿ ನಾಯಕ ಕೊಹ್ಲಿ ಈವರೆಗೂ ಎರಡಂಕಿ ಮುರಿಯಲು ವಿಫಲರಾಗಿದ್ದಾರೆ. ಯುಎಸ್ಎ ವಿರುದ್ಧದ ಪಂದ್ಯದಲ್ಲಿ ಗೋಲ್ಡನ್ ಡಕ್ ದಾಖಲಿಸಿದ ಕೊಹ್ಲಿ ಮೂರು ಪಂದ್ಯಗಳಿಂದ ಗಳಿಸಿದ ಸ್ಕೋರ್ ಕೇವಲ 5. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಅವರಿಂದ ದಾಖಲಾದ ಮೊದಲ ಗೋಲ್ಡನ್ ಡಕ್. ಐಪಿಎಲ್​ನಲ್ಲಿ ಆರ್​ಸಿಬಿ ಪರ ಅಬ್ಬರಿಸಿದ್ದ ವಿರಾಟ್ ಬ್ಯಾಟ್ ಈಗ ಸೈಲೆಂಟಾಗಿದೆ.

ರೋಹಿತ್​-ಕೊಹ್ಲಿಗೆ ಡಿಕೆ ಬೆಂಬಲ

ಟಿ20 ವಿಶ್ವಕಪ್ 2024 ರಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಕೊಹ್ಲಿ ಅವರನ್ನು ಆರ್​​ಸಿಬಿ ಸಹ ಆಟಗಾರ ದಿನೇಶ್ ಕಾರ್ತಿಕ್ ಬೆಂಬಲಿಸಿದ್ದಾರೆ. ರೋಹಿತ್​ ಮತ್ತು ವಿರಾಟ್ ಅವರು ಕಳಪೆ ಸ್ಕೋರಿಂಗ್​ ಕುರಿತು ದಿನೇಶ್ ಕಾರ್ತಿಕ್ ಅವರನ್ನು ಕೇಳಲಾಗಿತ್ತು. ಆದರೆ ಇಬ್ಬರು ಆಟಗಾರರನ್ನೂ ಡಿಕೆ ಬೆಂಬಲಿಸಿದ್ದಾರೆ. ನ್ಯೂಯಾರ್ಕ್​ ಪಿಚ್​​​ಗಳಲ್ಲಿ ಉತ್ತಮ ಪ್ರದರ್ಶನ ನೀಡದ ಇಬ್ಬರು ಸಹ ವೆಸ್ಟ್ ಇಂಡೀಸ್ ಪಿಚ್​​​ಗಳಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಆರ್​​ಸಿಬಿ ಮಾಜಿ ವಿಕೆಟ್ ಕೀಪರ್.

ಟ್ರೆಂಡಿಂಗ್​ ಸುದ್ದಿ

ಈ ಬಗ್ಗೆ ಮಾತನಾಡಿದ ದಿನೇಶ್ ಕಾರ್ತಿಕ್, ರೋಹಿತ್ ಮೊದಲ ಪಂದ್ಯದಲ್ಲಿ 50 ರನ್ ಗಳಿಸಿದ್ದರು. ಈ ಪಿಚ್​​​ಗಳಲ್ಲಿ ಇನ್ನೆಷ್ಟು ರನ್ ಗಳಿಸಲು ಸಾಧ್ಯ. ತಂಡವೇ 100 ರನ್ ಗಳಿಸುತ್ತಿದೆ ಎಂಬುದನ್ನು ನಾವು ಗಮನಿಸಬೇಕು. ವಿರಾಟ್ ಕೊಹ್ಲಿ ಬಗ್ಗೆ ಚಿಂತಿಸಬೇಡಿ. ಅಗತ್ಯವಿದ್ದಾಗ ಅವರು ಸ್ಕೋರ್ ಮಾಡೇ ಮಾಡುತ್ತಾರೆ ಎಂದು ಕಾರ್ತಿಕ್ ಕ್ರಿಕ್​ಬಜ್​ಗೆ ತಿಳಿಸಿದ್ದಾರೆ. ವಿರಾಟ್ ವೆಸ್ಟ್ ಇಂಡೀಸ್ ಪಿಚ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ದಿನೇಶ್ ಕಾರ್ತಿಕ್ ಭರವಸೆ ನೀಡಿದ್ದಾರೆ.

ಭರವಸೆ ನೀಡಿದ ದಿನೇಶ್ ಕಾರ್ತಿಕ್

ನಿಜ, ವಿರಾಟ್ ಸದ್ಯದ ಮಟ್ಟಿಗೆ ಉತ್ತಮ ಪ್ರದರ್ಶನ ನೀಡಿಲ್ಲ. ಆದರೆ ಮುಂದಿನ ಪಂದ್ಯಗಳಲ್ಲಿ ಅವರು ಅದ್ಭುತ ಪ್ರದರ್ಶನ ನೀಡುತ್ತಾರೆ. ಈ ವಿಶ್ವಕಪ್ ಬಗ್ಗೆಯೂ ಯಾವುದೇ ಸಂದೇಹವಿಲ್ಲ. ಅವರು ಶೇಕಡಾ 100 ರಷ್ಟು ಪ್ರದರ್ಶನ ನೀಡುತ್ತಾರೆ. ಸಮಯ ಬಂದಾಗ, ಆ ವ್ಯಕ್ತಿ ತಂಡಕ್ಕೆ ನೆರವಾಗುತ್ತಾನೆ. ವಿರಾಟ್ ಕೊಹ್ಲಿ ತಂಡಕ್ಕೆ ಬರುತ್ತಾರೆ. ನಾವು ಸೂಪರ್ ಎಂಟಕ್ಕೆ ಅರ್ಹತೆ ಪಡೆದಿದ್ದೇವೆ. ನಾನು ನಿಮಗೆ ಭರವಸೆ ನೀಡುತ್ತೇನೆ, ನಾವು ಕೆರಿಬಿಯನ್ ತಲುಪಿದ ನಂತರ ಅವರು ಅದ್ಭುತ ಪ್ರದರ್ಶನ ನೀಡಿಯೇ ತೀರುತ್ತಾರೆ ಎಂದು ಹೇಳಿದ್ದಾರೆ.

ಫ್ಲೋರಿಡಾ: ಭಾರತ ತಂಡ ಶನಿವಾರ ಫ್ಲೋರಿಡಾದಲ್ಲಿ ಕೆನಡಾ ವಿರುದ್ಧ ತನ್ನ ಗ್ರೂಪ್ ಹಂತದ ಪಂದ್ಯವನ್ನು ಆಡಲಿದೆ. ಆದಾಗ್ಯೂ, ಈ ಪ್ರದೇಶದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇರುವುದರಿಂದ ಹವಾಮಾನ ಪರಿಸ್ಥಿತಿಗಳು ಪಂದ್ಯ ನಡೆಯುವ ಕುರಿತು ಅನುಮಾನ ವ್ಯಕ್ತಪಡಿಸಿವೆ.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ