ಕನ್ನಡ ಸುದ್ದಿ  /  Cricket  /  Test Cricket Is Hard Rahul Dravid Rohit Sharma Dressing Room Pep Talk After 4-1 Series Win Goes Viral Watch Prs

ಟೆಸ್ಟ್ ಕ್ರಿಕೆಟ್ ಕಠಿಣ, ಆದರೆ ತೃಪ್ತಿ ನೀಡುತ್ತದೆ; ಡ್ರೆಸ್ಸಿಂಗ್​ ರೂಮ್​ನಲ್ಲಿ ಆಟಗಾರರಿಗೆ ರಾಹುಲ್ ದ್ರಾವಿಡ್ ಭಾಷಣ

Rahul Dravid : ಇಂಗ್ಲೆಂಡ್ ವಿರುದ್ಧದ ಸರಣಿ ಮುಕ್ತಾಯದ ನಂತರ ಡ್ರೆಸ್ಸಿಂಗ್​ ರೂಮ್​ನಲ್ಲಿ ಆಟಗಾರರಿಗೆ ಭಾರತದ ಹೆಡ್​ಕೋಚ್​ ರಾಹುಲ್ ದ್ರಾವಿಡ್ ಪ್ರರಣದಾಯಕ ಭಾಷಣ ನಡೆಸಿದ್ದಾರೆ. ಅದರ ವಿಡಿಯೋ ಇಲ್ಲಿದೆ.

ಡ್ರೆಸ್ಸಿಂಗ್​ ರೂಮ್​ನಲ್ಲಿ ಆಟಗಾರರಿಗೆ ರಾಹುಲ್ ದ್ರಾವಿಡ್ ಭಾಷಣ
ಡ್ರೆಸ್ಸಿಂಗ್​ ರೂಮ್​ನಲ್ಲಿ ಆಟಗಾರರಿಗೆ ರಾಹುಲ್ ದ್ರಾವಿಡ್ ಭಾಷಣ

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 4-1 ರಲ್ಲಿ ಸರಣಿ ಕೈವಶ ಮಾಡಿಕೊಂಡಿದೆ. ಹೈದರಾಬಾದ್​​ನಲ್ಲಿ ಮೊದಲ ಪಂದ್ಯದ ಸೋಲಿನ ಬಳಿಕ ತಿರುಗಿಬಿದ್ದ ಭಾರತ ತಂಡ, ಉಳಿದೆಲ್ಲಾ ಪಂದ್ಯಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ಸು ಕಂಡಿತು. ಧರ್ಮಶಾಲಾ ಟೆಸ್ಟ್ ನಂತರ ಸರಣಿ ಗೆಲುವಿಗೆ ಶ್ರಮಿಸಿದ ಆಟಗಾರರಿಗೆ ಹೆಡ್​ಕೋಚ್​ ರಾಹುಲ್ ದ್ರಾವಿಡ್ ಅಭಿನಂದಿಸಿದ್ದಾರೆ.

ಡ್ರೆಸ್ಸಿಂಗ್​​​ ರೂಮ್​ನಲ್ಲಿ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ದ್ರಾವಿಡ್, ಆಟಗಾರರಿಗೆ ಪ್ರೋತ್ಸಾಹ ತುಂಬಿದರು. ಆಟಗಾರರ ಆಟದ ಬಗ್ಗೆ ನನಗೆ ಹೆಮ್ಮೆ ಇದೆ. ಸರಣಿಯಲ್ಲಿ ನಮಗೆ ಅನೇಕ ಸವಾಲುಗಳು ಎದುರಾದವು. ಇವು ಆಟಗಾರರಿಂದ ಕೌಶಲ್ಯಗಳು, ಸ್ಥಿತಿಸ್ಥಾಪಕತ್ವ ಹೊರತರಲು ಸಾಧ್ಯವಾಯಿತು. ಅವುಗಳನ್ನು ಧೈರ್ಯವಾಗಿ ಎದುರಿಸಿ ಕಂಬ್ಯಾಕ್ ಮಾಡಿದೆವು ಎಂದು ಹೇಳಿದ್ದಾರೆ.

ಎಲ್ಲರಿಗೂ, ಸಹಾಯಕ ಸಿಬ್ಬಂದಿ, ಆಟಗಾರರಿಗೆ ಅಭಿನಂದನೆಗಳು. ಎಲ್ಲರೂ ನಿಸ್ವಾರ್ಥವಾಗಿರಬೇಕು. ಸಹ ಆಟಗಾರರಿಗೆ ಏನಾದರೂ ನೆರವಾಗಲು ಸಿದ್ಧರಾಗಿರಬೇಕು. ಇದು ಪ್ರತಿಯೊಬ್ಬರು ಯಶಸ್ಸು ಕಾಣಲು ನೆರವಾಗುತ್ತದೆ. ಗೆಲುವು ಸೋಲು ಲೆಕ್ಕಿಸದೆ ಈ ಸರಣಿ ನಮಗೆ ಸಾಕಷ್ಟು ಕಲಿಸಿದೆ. ಆನ್​ಫೀಲ್ಡ್ ಮತ್ತು ಆಫ್​ ಫೀಲ್ಡ್​​ನಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೀರಿ. ಆದರೆ ಒಂದು ತಂಡವಾಗಿ ನೀವು ಯಶಸ್ಸು ಕಂಡಿದ್ದು ಅಸಾಧಾರಣವಾಗಿತ್ತು ಎಂದಿದ್ದಾರೆ.

ಪರಸ್ಪರರಿಗೆ ನೆರವಾಗಿ ಎಂದು ಸೂಚಿಸಿದ ಹೆಡ್​ಕೋಚ್

ನೀವು ಬ್ಯಾಟರ್ ಆಗಿರಲಿ ಅಥವಾ ಬೌಲರ್ ಆಗಿರಲಿ, ನಿಮ್ಮ ಯಶಸ್ಸು ಇತರರ ಯಶಸ್ಸಿಗೆ ಸಂಬಂಧಿಸಿದೆ. ನೀವೆಲ್ಲರೂ ಪರಸ್ಪರರ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುವುದು ತುಂಬಾ ಮುಖ್ಯವಾಗಿದೆ. ನಿಮ್ಮಲ್ಲಿ ಬಹಳಷ್ಟು ಆಟಗಾರರು ದೀರ್ಘಕಾಲ ಆಡುತ್ತೀರಿ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಒಬ್ಬರನ್ನೊಬ್ಬರು ಬೆಂಬಲಿಸಿ ಮತ್ತು ಆಟಗಾರರಾಗಿ ಬೆಳೆಯಲು ಪರಸ್ಪರ ಸಹಾಯ ಮಾಡಿ ಎಂದಿದ್ದಾರೆ.

ಇಂತಹ ಸರಣಿಗಳಿಂದ ಕಲಿಯಬೇಕು. ಟೆಸ್ಟ್ ಕ್ರಿಕೆಟ್ ಕೆಲವೊಮ್ಮೆ ಕಠಿಣವಾಗಿರುತ್ತದೆ. ನಿಮ್ಮ ಕೌಶಲ್ಯಗಳ ವಿಷಯದಲ್ಲಿ, ದೈಹಿಕ ಮತ್ತು ಮಾನಸಿಕವಾಗಿ ಕಷ್ಟ. ಇದು ಸುಲಭವಲ್ಲ. ಆದರೂ ದೊಡ್ಡ ತೃಪ್ತಿ ಇದೆ. ನಾವು ಮುಂದೆ ಹೋದಂತೆ ಕಠಿಣ ಸವಾಲುಗಳು ಎದುರಾಗಲಿವೆ. ಎಲ್ಲಿಯವರೆಗೆ ಬೆಳೆಯುತ್ತೇವೋ, ಕಲಿಯುತ್ತೇವೋ ಸುಧಾರಿಸುತ್ತೇವೋ ಆಗ ಘಟಕವಾಗಿ ಬಿಗಿಯಾಗಿ ಉಳಿಯುತ್ತೇವೆ ಎಂದು ಹೇಳಿದ್ದಾರೆ.

ಸಹಾಯಕ ಸಿಬ್ಬಂದಿಗೆ ಧನ್ಯವಾದ ಎಂದ ದ್ರಾವಿಡ್

ನಾನು ಸಹಾಯಕ ಸಿಬ್ಬಂದಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ನಾವು ಈಗ ವಿರಾಮಕ್ಕೆ ಹೋಗುತ್ತಿದ್ದೇವೆ. ನಮ್ಮ ತರಬೇತುದಾರರು, ಮತ್ತು ನೀವು ಮಾಡಿದ ಎಲ್ಲಾ ಪ್ರಯತ್ನಗಳಿಗಾಗಿ ಬ್ಯಾಕ್‌ರೂಮ್ ಸಿಬ್ಬಂದಿಯಲ್ಲಿರುವ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ನಾನು ನಿಮ್ಮೊಂದಿಗೆ ಕೆಲಸ ಮಾಡಲು ತುಂಬಾ ಇಷ್ಟಪಡುತ್ತೇನೆ. ಶುಭವಾಗಲಿ, ನೀವು ಮಾಡಿದ ಪ್ರಯತ್ನಕ್ಕೆ ಧನ್ಯವಾದಗಳು. ನೀವು ಏನು ಸಾಧಿಸಿದ್ದೀರಿ ಎಂಬುದರ ಬಗ್ಗೆ ಹೆಮ್ಮೆ ಇದೆ ಎಂದು ತಮ್ಮ ಭಾಷಣ ಮುಗಿಸಿದ್ದಾರೆ.

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point