ಈ ಮಗು ಟೆಸ್ಟ್ ಕ್ರಿಕೆಟ್‌ಗೆ ಇನ್ನೂ ಸಿದ್ಧವಾಗಿಲ್ಲ; ಪ್ರಸಿದ್ಧ್ ವಿರುದ್ಧ ಸಿಡಿದೆದ್ದ ಮಾಜಿ ಕ್ರಿಕೆಟಿಗ
ಕನ್ನಡ ಸುದ್ದಿ  /  ಕ್ರಿಕೆಟ್  /  ಈ ಮಗು ಟೆಸ್ಟ್ ಕ್ರಿಕೆಟ್‌ಗೆ ಇನ್ನೂ ಸಿದ್ಧವಾಗಿಲ್ಲ; ಪ್ರಸಿದ್ಧ್ ವಿರುದ್ಧ ಸಿಡಿದೆದ್ದ ಮಾಜಿ ಕ್ರಿಕೆಟಿಗ

ಈ ಮಗು ಟೆಸ್ಟ್ ಕ್ರಿಕೆಟ್‌ಗೆ ಇನ್ನೂ ಸಿದ್ಧವಾಗಿಲ್ಲ; ಪ್ರಸಿದ್ಧ್ ವಿರುದ್ಧ ಸಿಡಿದೆದ್ದ ಮಾಜಿ ಕ್ರಿಕೆಟಿಗ

Prasidh Krishna: ಈ ಮಗು ಟೆಸ್ಟ್ ಕ್ರಿಕೆಟ್‌ಗೆ ಇನ್ನೂ ಸಿದ್ಧವಾಗಿಲ್ಲ. ಅವರಿಗೆ 2ನೇ ಮತ್ತು 3ನೇ ಸ್ಪೆಲ್‌ಗಳನ್ನು ಬೌಲ್ ಮಾಡುವ ಕೌಶಲ್ಯ ಇಲ್ಲ. ಡೆಕ್ ಅಂದರೆ ಹೆಚ್ಚುವರಿ ಬೌನ್ಸ್ ಹಾಕುವ ಸಾಮರ್ಥ್ಯ ಇಲ್ಲ ಎಂದು ಪ್ರಸಿದ್ಧ್ ವಿರುದ್ಧ ಮಾಜಿ ಕ್ರಿಕೆಟಿಗರೊಬ್ಬರು ಕಿಡಿಕಾರಿದ್ದಾರೆ.

ಪ್ರಸಿದ್ಧ್ ಕೃಷ್ಣ.
ಪ್ರಸಿದ್ಧ್ ಕೃಷ್ಣ.

ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದ 2 ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ, ಇನಿಂಗ್ಸ್‌ ಮತ್ತು 32 ರನ್​​ಗಳ ಅಂತರದಿಂದ ಮುಜುಗರದ ಸೋಲಿಗೆ ಒಳಗಾಯಿತು. ಅಲ್ಲದೆ, ದಕ್ಷಿಣ ಆಫ್ರಿಕಾದಲ್ಲಿ ಮೊದಲ ಟೆಸ್ಟ್ ಸರಣಿ ಗೆಲುವಿನ ಕನಸು ಮತ್ತೊಮ್ಮೆ ಈಡೇರಿಲ್ಲ. ಭಾರತದ ಗೆಲುವಿನಲ್ಲಿ ಬೌಲರ್​​ಗಳು ಪ್ರಮುಖ ಪಾತ್ರವಹಿಸಿದ ಬೌಲರ್​​ಗಳ ವಿರುದ್ದ ಭಾರಿ ಟೀಕೆ ವ್ಯಕ್ತವಾಗಿದೆ.

ಅದರಲ್ಲೂ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಪ್ರಸಿದ್ಧ್ ಕೃಷ್ಣ ವಿರುದ್ಧವಂತೂ ಮಾಜಿಗಳು ಕೆಂಡಕಾರುತ್ತಿದ್ದಾರೆ. ಹೆಚ್ಚು ಪ್ರಭಾವಶಾಲಿ ಬೌಲಿಂಗ್ ನಡೆಸದ ಪ್ರಸಿದ್ಧ್, ತಮ್ಮ 20 ಓವರ್‌ಗಳಲ್ಲಿ 93 ರನ್‌ ಬಿಟ್ಟುಕೊಟ್ಟರು ಮತ್ತು ಕೇವಲ 1 ವಿಕೆಟ್ ಪಡೆದರು. ನಿರ್ಣಾಯಕ ಪಂದ್ಯದಲ್ಲಿ ಯುವ ಆಟಗಾರನ ಪ್ರದರ್ಶನಕ್ಕೆ ಭಾರತದ ಮಾಜಿ ವೇಗದ ಬೌಲರ್‌ ಬೇಸರ ವ್ಯಕ್ತಪಡಿಸಿದ್ದಾರೆ. ಈಗಷ್ಟೇ ಕಲಿಯುತ್ತಿದೆ ಎಂದು ಹೇಳಲು ಅವರೇನು ಮಗು ಅಲ್ಲ ಎಂದು ಸಿಡಿದೆದ್ದಿದ್ದಾರೆ.

‘ಬೌಲಿಂಗ್ ಕೌಶಲವೇ ಇಲ್ಲ’

ಅಚ್ಚರಿಯ ಸಂಗತಿ ಏನೆಂದರೆ, ಹೀಗೆ ಟೀಕಿಸಿರುವ ಮಾಜಿ ವೇಗಿ ತಮ್ಮ ಹೆಸರು ಹೇಳಲು ಹಿಂಜರಿದಿದ್ದಾರೆ. ಪಿಟಿಐ ಜೊತೆಗಿನ ಸಂವಾದದಲ್ಲಿ ಹೆಸರು ಹೇಳಲು ಇಚ್ಛಿಸದ ಭಾರತದ ಮಾಜಿ ಆಟಗಾರ, ಪ್ರಸಿದ್ಧ್ ಕೃಷ್ಣ ಅವರು ಎರಡನೇ ಮತ್ತು ಮೂರನೇ ಸ್ಪೆಲ್‌ಗಳನ್ನು ಬೌಲ್ ಮಾಡುವ ಕೌಶಲ್ಯ ಹೊಂದಿಲ್ಲ. ಲೈನ್​ ಅಂಡ್ ಲೆಂತ್ ಬೌಲಿಂಗ್​ ಸರಿಯಿಲ್ಲ. ಆತನ ಇನ್ನೂ ಟೆಸ್ಟ್ ಕ್ರಿಕೆಟ್‌ಗೆ ಸಿದ್ಧವಾಗಿಲ್ಲ. ರಣಜಿ ಟ್ರೋಫಿಯಲ್ಲೂ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ ಎಂದು ಅವರು ಹೇಳಿದ್ದಾರೆ.

‘ಬೌನ್ಸ್ ಹಾಕುವ ಸಾಮರ್ಥ್ಯ ಇಲ್ಲ’

ಕಳಪೆ ಪ್ರಸಿದ್ಧ್, ಈ ಮಗು ಟೆಸ್ಟ್ ಕ್ರಿಕೆಟ್‌ಗೆ ಇನ್ನೂ ಸಿದ್ಧವಾಗಿಲ್ಲ. ಅವರಿಗೆ ಇನ್ನೂ ಎರಡನೇ ಮತ್ತು ಮೂರನೇ ಸ್ಪೆಲ್‌ಗಳನ್ನು ಬೌಲ್ ಮಾಡುವ ಕೌಶಲ್ಯ ಇಲ್ಲ. ಡೆಕ್ ಅಂದರೆ ಹೆಚ್ಚುವರಿ ಬೌನ್ಸ್ ಹಾಕುವ ಸಾಮರ್ಥ್ಯ ಇಲ್ಲ. ಹೆಚ್ಚುವರಿ ಬೌನ್ಸ್​ ಹಾಕುತ್ತಾರೆಂಬ ಆಧಾರದ ಮೇಲೆಯೇ ತಂಡಕ್ಕೆ ಆಯ್ಕೆಯಾದರು. ಆದರೆ ಕೊನೆಯದಾಗಿ ಯಾವಾಗ ಹಾಕಿದರು ಎಂಬುದೇ ಅವರಿಗೆ ನೆನಪಿಲ್ಲ ಎಂದಿದ್ದಾರೆ.

‘ಯುವ ವೇಗಿಗಳು ಪರಿಣಾಮಕಾರಿಯಾಗಿಲ್ಲ’

ಭಾರತ ಎ ಪರ ಒಂದು ಪಂದ್ಯದಲ್ಲಿ ಕಣಕ್ಕಿಳಿದರೆ ಸಾಕಾಗುವುದಿಲ್ಲ. ರಣಜಿ ಆವೃತ್ತಿಯಲ್ಲೂ ಸಂಪೂರ್ಣವಾಗಿ ಆಡಬೇಕು. ರಣಜಿಯನ್ನು ಪೂರ್ಣವಾಗಿ ಯಾವಾಗ ಆಡಿದ್ದಾರೆ ಎಂಬುದು ನಿಜಕ್ಕೂ ಮರೆತಿದ್ದಾರೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಸಿರಾಜ್ ಅವರಂತೆ ಯುವ ವೇಗಿಗಳು ಪ್ರಚೋದಿಸಲು ಸಾಧ್ಯವಿಲ್ಲ ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ. ಉದಾಹರಣೆಗೆ ನವದೀಪ್ ಸೈನಿ ಅವರನ್ನೇ ನೋಡಿ, 6 ವರ್ಷಗಳಿಂದ ಭಾರತ ಎ ತಂಡದೊಂದಿಗೆ ಆಡುತ್ತಿದ್ದಾರೆ. ಆದರೆ ಭವಿಷ್ಯ ಚಿಂತಾಜನಕ ಸ್ಥಿತಿಯಲ್ಲಿದೆ ಎಂದರು.

ಬುಮ್ರಾ, ಶಮಿ, ಇಶಾಂತ್ ಮತ್ತು ಸಿರಾಜ್ ನಿರ್ಮಿಸಿದ ಅದೇ ರೀತಿಯ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ಭಾರತದ ಮುಂದಿನ ಪೀಳಿಗೆಯ ವೇಗಿಗಳು ಸೃಷ್ಟಿಸಲು ಸಾಧ್ಯವಿಲ್ಲ. ಈಗ 2ನೇ ಟೆಸ್ಟ್​ಗೆ ಆಯ್ಕೆಯಾದ ಆವೇಶ್ ಖಾನ್ ಸಹ ಪ್ರಸಿದ್ಧ್ ಅವರಂತಹ ಬೌಲರ್. ಆದರೆ ಅವರು ರೆಡ್-ಬಾಲ್ ಕ್ರಿಕೆಟ್ ಅನ್ನು ಹೆಚ್ಚು ನಿಯಮಿತವಾಗಿ ಆಡುತ್ತಾರೆ. ಹಾಗಾಗಿ ಉತ್ತಮ ಬೌನ್ಸ್​ ಹಾಕುವ ಸಾಧ್ಯತೆ ಇದೆ ಎಂದಿದ್ದಾರೆ.

Whats_app_banner