Imam-ul-Haq: ನಮ್ಮ ತಂಡವನ್ನು ನೋಡಿದ್ರೆ ಜನ ಹೆದರುತ್ತಾರೆ; ಪಾಕ್ ಓಪನರ್​ ಇಮಾಮ್ ಉಲ್ ಹಕ್ ಪ್ರಚೋದನಕಾರಿ ಹೇಳಿಕೆ
ಕನ್ನಡ ಸುದ್ದಿ  /  ಕ್ರಿಕೆಟ್  /  Imam-ul-haq: ನಮ್ಮ ತಂಡವನ್ನು ನೋಡಿದ್ರೆ ಜನ ಹೆದರುತ್ತಾರೆ; ಪಾಕ್ ಓಪನರ್​ ಇಮಾಮ್ ಉಲ್ ಹಕ್ ಪ್ರಚೋದನಕಾರಿ ಹೇಳಿಕೆ

Imam-ul-Haq: ನಮ್ಮ ತಂಡವನ್ನು ನೋಡಿದ್ರೆ ಜನ ಹೆದರುತ್ತಾರೆ; ಪಾಕ್ ಓಪನರ್​ ಇಮಾಮ್ ಉಲ್ ಹಕ್ ಪ್ರಚೋದನಕಾರಿ ಹೇಳಿಕೆ

Asia Cup 2023: ನಮ್ಮ ತಂಡವನ್ನು ನೋಡಿ ಇತರ ತಂಡಗಳು ಹೆದರುತ್ತವೆ ಎಂದು ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ (Imam-ul-Haq) ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್.
ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್.

ಏಷ್ಯಾಕಪ್ ಟೂರ್ನಿಗೆ (Asia Cup 2023) ದಿನಗಣನೆ ಆರಂಭವಾಗಿದೆ. ಆಗಸ್ಟ್​ 30ರಿಂದ ಬಹುನಿರೀಕ್ಷಿತ ಟೂರ್ನಿ ಪ್ರಾರಂಭಗೊಳ್ಳಲಿದೆ. ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಆಟಗಾರರಿಂದ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ ಪಾಕಿಸ್ತಾನದ ಆಟಗಾರರು ಮೈಂಡ್ ಗೇಮ್ ಆರಂಭಿಸಿದ್ದಾರೆ. ನಮ್ಮ ತಂಡವನ್ನು ನೋಡಿ ಇತರ ತಂಡಗಳು ಹೆದರುತ್ತವೆ ಎಂದು ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ (Imam-ul-Haq) ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.

ಸೆಪ್ಟೆಂಬರ್ 2ರಂದು 2023ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಲಿವೆ. ಲೀಗ್​ ಹಂತದ ನಂತರ ಸೂಪರ್​​-4 ಹಂತದಲ್ಲೂ ಮತ್ತೊಮ್ಮೆ ಕಾದಾಟ ನಡೆಸಲಿವೆ. ಒಂದು ವೇಳೆ ಫೈನಲ್​ ಪ್ರವೇಶಿಸಿದರೂ ಮೂರನೇ ಬಾರಿಗೆ ಏಷ್ಯಾಕಪ್​​ನಲ್ಲಿ ಮುಖಾಮುಖಿಯಾಗಲಿವೆ. ಅಲ್ಲದೆ, ಅಕ್ಟೋಬರ್​ 5ರಿಂದ ಶುರುವಾಗುವ ಏಕದಿನ ವಿಶ್ವಕಪ್​​ನಲ್ಲಿ (ODI World Cup 2023) ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್​​ 14ರಂದು ಮುಖಾಮುಖಿಯಾಗಲಿವೆ.

ಪ್ರಚೋದನಾಕಾರಿ ಹೇಳಿಕೆ ನೀಡಿದ ಇಮಾಮ್

ಏಷ್ಯಾಕಪ್​​​ ಟೂರ್ನಿಯಲ್ಲಿ ಉಭಯ ತಂಡಗಳ ಮುಖಾಮುಖಿಗಿಂತ ಈ ವಿಶ್ವಕಪ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ನಡುವೆ ಪಾಕಿಸ್ತಾನದ ಆಟಗಾರ ಸಂಚಲನ ಹೇಳಿಕೆ ನೀಡಿದ್ದು, ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಭಾರತ ತಂಡವನ್ನು ಅವರದ್ದೇ ತವರು ನೆಲದಲ್ಲಿ ಎದುರಿಸಲು ಪಾಕಿಸ್ತಾನ ಅತ್ಯಂತ ಉತ್ಸಾಹದಿಂದ ಕಾಯುತ್ತಿದೆ. ವರ್ಲ್ಡ್​​ಕಪ್​​ನಲ್ಲಿ ಪಾಕ್ ಸಾಮರ್ಥ್ಯ ಪ್ರದರ್ಶಿಸಲು ದಿಟ್ಟತನ ತೋರಿದ್ದಾರೆ.

ಈ ಬಗ್ಗೆ ಮಾತನಾಡಿರುವ ಇಮಾಮ್-ಉಲ್-ಹಕ್, ಪ್ರಸ್ತುತ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿ ಕುರಿತು ಯೋಚಿಸಬೇಕು. ಈಗಲೇ ವಿಶ್ವಕಪ್​ ಕುರಿತು ಯೋಚಿಸಬಾರದು ಎಂದುಕೊಳ್ಳುತ್ತೇನೆ. ಆದರೆ, ನನ್ನೆಲ್ಲಾ ಆಲೋಚನೆಗಳು ಆ ಕಡೆಯೇ ಹೆಚ್ಚು ಗಮನ ಕೊಡುತ್ತವೆ. ಮಾನಸಿಕ ಮತ್ತು ದೈಹಿಕವಾಗಿ ಏಕದಿನ ವಿಶ್ವಕಪ್​ ಕಡೆಯೇ, ಎಲ್ಲಾ ರೀತಿಯಲ್ಲೂ ತಯಾರಿ ನಡೆಸುತ್ತಿದ್ದೇವೆ ಎಂದಿದ್ದಾರೆ.

ಜನ ಭಯ ಪಡುತ್ತಾರೆ!

ನಿಜ ಹೇಳಬೇಕೆಂದರೆ ನನ್ನ ಪ್ರಕಾರ, ಪಾಕಿಸ್ತಾನ ಏಕದಿನ ತಂಡವನ್ನು ನೋಡಿ ಜನರು ಭಯಪಡುತ್ತಾರೆ. ನಮ್ಮ ಏಕದಿನ ಕ್ರಿಕೆಟ್​ ತಂಡವು ಅದ್ಭುತ ಪ್ರದರ್ಶನ ನೀಡಿದೆ. ಅದ್ಭುತ ಗೆಲುವುಗಳನ್ನು ಸಾಧಿಸಿದ್ದೇವೆ. ನಮ್ಮಲ್ಲಿ ಬಲಿಷ್ಠವಾದ ಬೌಲಿಂಗ್​ ಲೈನಪ್​ ಇದೆ. ಹಾಗೆಯೇ ವರ್ಲ್ಡ್​ ಕ್ಲಾಸ್​ ಬ್ಯಾಟರ್​​ಗಳು ಇದ್ದಾರೆ. ಏಕದಿನ ಕ್ರಿಕೆಟ್​​ನಲ್ಲಿ ನಮ್ಮ ತಂಡವು ಅತ್ಯುತ್ತಮವಾದದ್ದೆಂದು ನಂಬುತ್ತೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಮ್ಮದ್ದು ಬಲಿಷ್ಠ ತಂಡ

ನಾನು ಈವರೆಗೂ 60 ಏಕದಿನ ಆಡಿದ್ದೇನೆ. ಫಕಾರ್​ 70, ಬಾಬರ್ 100 ಏಕದಿನ ಪಂದ್ಯಗಳನ್ನು ಆಡಿದ್ದೇವೆ. ನಸೀಂ ಶಾ, ಶಾಹೀನ್ ಶಾ ಅಫ್ರಿದಿ, ಹ್ಯಾರಿಸ್ ರವೂಫ್, ವಾಸೀಂ ಜೂನಿಯನ್, ಶಾದಾಬ್, ನವಾಜ್, ಒಸಾಮ ಮಿರ್​, ಇಫ್ತಿಕಾರ್ ಅಹ್ಮದ್, ಸಲ್ಮಾನ್ ಅಲಿ ಆಘಾ, ರಿಜ್ವಾನ್.. ನಮ್ಮ ತಂಡದಲ್ಲಿ ಎಲ್ಲರೂ ಮ್ಯಾಚ್​ ವಿನ್ನರ್​​ಗಳೇ, ಗೇಮ್​ ಚೇಂಜರ್​​ಗಳೇ ಎಂದು ಇಮಾಮ್ ಉಲ್ ಹಕ್, ತಮ್ಮ ತಂಡ ಬಲಿಷ್ಠವೆಂದು ಆ ಮೂಲಕ ಹೇಳಿದ್ದಾರೆ.

ಎಲ್ಲರಿಗೂ ಅವರವರ ಪಾತ್ರದ ಬಗ್ಗೆ ಸ್ಪಷ್ಟನೆ ಇದೆ

ನಾನು ತಂಡದಲ್ಲಿದ್ದೇನೆಂದು ನಮ್ಮ ತಂಡವು ಬಲಿಷ್ಠ ಎಂದು ಈ ಮಾತು ಹೇಳುತ್ತಿಲ್ಲ. ನಾನು ತಂಡದಲ್ಲಿ ಭಾಗವಾಗದಿದ್ದರೂ, ನಮ್ಮ ತಂಡವೇ ಬಲಿಷ್ಠ ಎಂದು ಒಪ್ಪಿಕೊಳ್ಳುತ್ತೇನೆ. ನಮಗೆ ನೀಡಿರುವ ಪ್ರತಿ ಪಾತ್ರದ ಬಗ್ಗೆಯೂ ಸ್ಪಷ್ಟನೆ ಇದೆ. ಸುಲಭವಾಗಿ ವಿಶ್ವಕಪ್​ ಗೆಲ್ಲುತ್ತೇವೆ ಎಂದು ಭಾವಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ ಪಾಕಿಸ್ತಾನದ ಆರಂಭಿಕ ಆಟಗಾರ.

Whats_app_banner