ಕ್ಷಮಿಸಿ, ಇಂದಿನ ಕ್ರಿಕೆಟರ್ಸ್ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ; ಬೇಸರ ವ್ಯಕ್ತಪಡಿಸಿ ಧೈರ್ಯ ತುಂಬಿದ ಕಪಿಲ್ ದೇವ್-todays cricketers sorry they couldnt win the world cup kapil devs message to india after cwc final loss vs australia prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಕ್ಷಮಿಸಿ, ಇಂದಿನ ಕ್ರಿಕೆಟರ್ಸ್ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ; ಬೇಸರ ವ್ಯಕ್ತಪಡಿಸಿ ಧೈರ್ಯ ತುಂಬಿದ ಕಪಿಲ್ ದೇವ್

ಕ್ಷಮಿಸಿ, ಇಂದಿನ ಕ್ರಿಕೆಟರ್ಸ್ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ; ಬೇಸರ ವ್ಯಕ್ತಪಡಿಸಿ ಧೈರ್ಯ ತುಂಬಿದ ಕಪಿಲ್ ದೇವ್

Kapil Dev on Team India: ತಮ್ಮ ಪ್ರಾಬಲ್ಯದ ಹೊರತಾಗಿ ಭಾರತ ಟ್ರೋಫಿ ಗೆಲ್ಲದಿರುವ ಬಗ್ಗೆ ಹಿರಿಯ ಕ್ರಿಕೆಟಿಗ ಕಪಿಲ್ ದೇವ್ ತಮ್ಮ ನಿರಾಶೆ ವ್ಯಕ್ತಪಡಿಸಿದರು. ಇದರಿಂದ ಪಾಠ ಕಲಿತು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ನೂತನ ಹೆಜ್ಜೆ ಇಡಬೇಕು ಎಂದು ಆಶಿಸಿದರು.

ವಿಶ್ಚಕಪ್​ನಲ್ಲಿ ಭಾರತದ ಸೋಲಿಗೆ ಬೇಸರ ವ್ಯಕ್ತಪಡಿಸಿ ಧೈರ್ಯ ತುಂಬಿದ ಕಪಿಲ್ ದೇವ್.
ವಿಶ್ಚಕಪ್​ನಲ್ಲಿ ಭಾರತದ ಸೋಲಿಗೆ ಬೇಸರ ವ್ಯಕ್ತಪಡಿಸಿ ಧೈರ್ಯ ತುಂಬಿದ ಕಪಿಲ್ ದೇವ್.

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್​​​​ನಲ್ಲಿ (ICC ODI World Cup 2023) ಭಾರತದ ಸೋಲಿನ ನೋವು ಒಂದು ವಾರ ಕಳೆದರೂ ಈಗಲೂ ಕಾಡುತ್ತಿದೆ. ನವೆಂಬರ್ 19 ರಂದು (ಭಾನುವಾರ) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ 2023ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಭಾರತ ತಂಡವನ್ನು (India vs Australia) ಸೋಲಿಸಿದಾಗ ಶತಕೋಟಿ ಹೃದಯಗಳು ಚೂರಾದವು.

ಟೀಮ್ ಇಂಡಿಯಾ ಸೆಮಿಫೈನಲ್‌ವರೆಗೆ ಸತತ 10 ಪಂದ್ಯಗಳನ್ನು ಗೆದ್ದ ಕಾರಣ, ಆಟಗಾರರಿಗೂ ಸೋಲಿನ ನೋವು ತಡೆಯಲು ಸಾಧ್ಯವಾಗಿಲ್ಲ. ಹೃದಯವಿದ್ರಾವಕ ಸೋಲಿನ ಕೆಲವು ದಿನಗಳ ನಂತರ 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ (Kapil Dev), ರೋಹಿತ್ ಶರ್ಮಾ (Rohit Sharma) ಮತ್ತು ತಂಡದ ಬಗ್ಗೆ ಹಂಚಿಕೊಂಡಿದ್ದಾರೆ. ಸ್ಪೋರ್ಟ್‌ಸ್ಟಾರ್‌ನೊಂದಿಗಿನ ಸಂವಾದದಲ್ಲಿ ಕಪಿಲ್ ದೇವ್ ಈ ಬಗ್ಗೆ ಹಂಚಿಕೊಂಡಿದ್ದಾರೆ.

ಭಾರತಕ್ಕೆ ಗೆಲ್ಲುವುದು ಸರ್ವಸ್ವವಾಗಿತ್ತು. ಆದರೆ, ಆಸ್ಟ್ರೇಲಿಯಾ ಅದ್ಭುತ ಕಾರ್ಯನಿರ್ವಹಣೆ ತೋರಿತು. ಪ್ರತಿ ಹಂತದಲ್ಲೂ ಪರಿಣಾಮಕಾರಿ ಪ್ರದರ್ಶನ ನೀಡಿತು. ಇದೇ ಕಾರಣಕ್ಕೆ ಆಸೀಸ್ ಚಾಂಪಿಯನ್ ಪಟ್ಟ ಅಲಂಕರಿಸಿತು ಎಂದ ಕಪಿಲ್ ದೇವ್, ತಮ್ಮ ಪ್ರಾಬಲ್ಯದ ಹೊರತಾಗಿ ಭಾರತ ಟ್ರೋಫಿ ಗೆಲ್ಲದಿರುವ ಬಗ್ಗೆ ತಮ್ಮ ನಿರಾಶೆ ವ್ಯಕ್ತಪಡಿಸಿದರು. ಇದರಿಂದ ಪಾಠ ಕಲಿತು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ನೂತನ ಹೆಜ್ಜೆ ಇಡಬೇಕು ಎಂದು ಆಶಿಸಿದರು.

ಕ್ಷಮಿಸಿ…

ಕ್ಷಮಿಸಿ, ಇಂದಿನ ಕ್ರಿಕೆಟಿಗರು ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ, ಅವರು ಟೂರ್ನಿಯುದ್ದಕ್ಕೂ ಚೆನ್ನಾಗಿ ಆಡಿದರು ಎಂಬುದನ್ನು ಮರೆಯುವಂತಿಲ್ಲ. ಎಲ್ಲರಿಗೂ ಗೆಲ್ಲಬೇಕೆಂದು ಮನಸಿನಲ್ಲಿ ಇರುತ್ತದೆ ಎಂಬುದು ನನಗೆ ಗೊತ್ತಿದೆ. ಎಲ್ಲಾ ತಂಡಗಳು ಸಹ ಗೆಲ್ಲಲು ಬರುತ್ತವೆ ಆದರೆ ಹೇಗೆ ಆಡುತ್ತೇವೆ? ಕೊನೆಯಲ್ಲಿ ಗೆಲ್ಲುವುದು ಬಹಳ ಮುಖ್ಯವಾಗುತ್ತದೆ. ಆದರೆ ಆಸ್ಟ್ರೇಲಿಯಾ ತಂಡವು ಅದ್ಭುತ ಪ್ರದರ್ಶನ ನೀಡಿತು. ನಾವು ಅದನ್ನು ಗೌರವಿಸಬೇಕು ಎಂದು ಕಪಿಲ್ ದೇವ್ ಹೇಳಿದ್ದಾರೆ.

‘ಸೋಲಿನಿಂದ ಪಾಠ ಕಲಿಯಬೇಕು’

ಟೀಮ್ ಇಂಡಿಯಾ ಅತ್ಯದ್ಬುತವಾಗಿ ಆಡಿದರೂ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ನಾನು ನಿರಾಶೆಗೊಂಡಿದ್ದೇನೆ ಮತ್ತು ಹತಾಶನಾಗಿದ್ದೇನೆ. ಆ ನೋವು ಬಾರಿ ಈಗಲೂ ಕಾಡುತ್ತದೆ. ಹಾಗಂತ ನಾವು ನಮ್ಮ ತಂಡವನ್ನು ಎಂದಿಗೂ ಕಡಿಮೆ ಅಂದಾಜು ಮಾಡಬಾರದು. ಆದರೆ, ಈ ಬಾರಿ ನಮಗೇನು ಅರ್ಥವಾಗಲಿಲ್ಲವೋ ಅದನ್ನು ನಾವು ಕಲಿಯಲು ಮುಂದುವರೆಸಬೇಕು. ಈ ಸೋಲಿನಿಂದ ಹಲವು ವಿಷಯಗಳನ್ನು ಕಲಿಯಬೇಕು. ಭವಿಷ್ಯದಲ್ಲಿ ಮತ್ತಷ್ಟು ವಿಶ್ವಾಸದೊಂದಿಗೆ ಮರಳಬೇಕು. ಆಗ ಮಾತ್ರ ಚಾಂಪಿಯನ್ ಆಗುವ ಅವಕಾಶ ಸಿಗುತ್ತದೆ ಎಂದು ರೋಹಿತ್ ಪಡೆಗೆ ಧೈರ್ಯ ತುಂಬಿದ್ದಾರೆ.

ತಲೆ ಎತ್ತಿ ಓಡಾಡಬೇಕು ಎಂದಿದ್ದ ಕಪಿಲ್

ಏಕದಿನ ವಿಶ್ವಕಪ್​ನಲ್ಲಿ ಭಾರತ ಸೋತ ನಂತರ ಹಿರಿಯ ಕ್ರಿಕೆಟಿಗ ಕಪಿಲ್ ದೇವ್ ಭಾರತ ತಂಡವನ್ನು ಗುಣಗಾನ ಮಾಡಿದ್ದರು. ಟೀಮ್ ಇಂಡಿಯಾದ ಪ್ರದರ್ಶನದ ಬಗ್ಗೆ ದೇಶವೇ ಹೆಮ್ಮೆಪಡುತ್ತಿದೆ. ನೀವು ಚಾಂಪಿಯನ್‌ಗಳಂತೆ ಆಡಿದ್ದೀರಿ. ಹೆಮ್ಮೆಯಿಂದ ತಲೆ ಎತ್ತಿ ಓಡಾಡಿ. ಫೈನಲ್ ಸೋತರೂ ನೀವೆಂದಿಗೂ ವಿಜೇತರೇ. ರೋಹಿತ್ ನೀವೊಬ್ಬ ಮಾಸ್ಟರ್​. ಮುಂದಿನ ಹಂತದಲ್ಲಿ ಹೆಚ್ಚಿನ ಯಶಸ್ಸು ನಿಮಗೆ ಸಿಗಲಿದೆ. ಇಂತಹ ಕಷ್ಟದ ಸಮಯದಲ್ಲಿ ಉತ್ಸಾಹ ಕಳೆದುಕೊಳ್ಳಬೇಡಿ ಎಂದು ಕಪಿಲ್ ಧೈರ್ಯ ತುಂಬಿದ್ದರು.

ಇಂಡೋ-ಆಸೀಸ್ ಫೈನಲ್ ಸಂಕ್ಷಿಪ್ತ ಸ್ಕೋರ್

ಫೈನಲ್​ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 50 ಓವರ್​​ಗಳಲ್ಲಿ 240 ರನ್​ಗಳಿಗೆ ಆಲೌಟ್ ಆಯಿತು. ವಿರಾಟ್ ಕೊಹ್ಲಿ 54, ಕೆಎಲ್ ರಾಹುಲ್ 66, ರೋಹಿತ್ ಶರ್ಮಾ 47 ರನ್ ಸಿಡಿಸಿದರು. ಆದರೆ 241 ಗುರಿ ಬೆನ್ನಟ್ಟಿದ ಗುರಿ ಬೆನ್ನಟ್ಟಿದ ಆಸೀಸ್, 43 ಓವರ್​ಗಳಲ್ಲಿ ಗೆಲುವಿನ ನಗೆ ಬೀರಿತು. ಟ್ರಾವಿಸ್ ಹೆಡ್​ ಭರ್ಜರಿ 137 ರನ್, ಮಾರ್ನಸ್ ಲಬುಶೇನ್ ಅಜೇಯ 58 ರನ್ ಸಿಡಿಸಿದರು. ಕಾಂಗರೂ ಪಡೆ ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸಿ, 6ನೇ ಐಸಿಸಿ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿಹಿಡಿಯಿತು.