ಕನ್ನಡ ಸುದ್ದಿ  /  ಕ್ರಿಕೆಟ್  /  ಮುಂಬೈ ಪಂದ್ಯದಲ್ಲಿ ಟಾಸ್ ಟ್ಯಾಂಪರಿಂಗ್ ಆಗಿತ್ತು; ಪ್ಯಾಟ್ ಕಮಿನ್ಸ್​​ಗೆ ಘಟನೆ ವಿವರಿಸಿದ ಫಾಫ್ ಡು ಪ್ಲೆಸಿಸ್ ವಿಡಿಯೋ ವೈರಲ್

ಮುಂಬೈ ಪಂದ್ಯದಲ್ಲಿ ಟಾಸ್ ಟ್ಯಾಂಪರಿಂಗ್ ಆಗಿತ್ತು; ಪ್ಯಾಟ್ ಕಮಿನ್ಸ್​​ಗೆ ಘಟನೆ ವಿವರಿಸಿದ ಫಾಫ್ ಡು ಪ್ಲೆಸಿಸ್ ವಿಡಿಯೋ ವೈರಲ್

Toss-Tampering: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಟ್ಯಾಂಪರಿಂಗ್ ಆಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿ ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್, ಪ್ಯಾಟ್ ಕಮಿನ್ಸ್​ಗೆ ವಿವರಣೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಟಾಸ್ ಟ್ಯಾಂಪರಿಂಗ್ ಕುರಿತು ಕಮಿನ್ಸ್​​ಗೆ ಫಾಫ್ ಡು ಪ್ಲೆಸಿಸ್ ಘಟನೆ ವಿವರಿಸಿದ ಎನ್ನಲಾದ ವಿಡಿಯೋ ವೈರಲ್
ಟಾಸ್ ಟ್ಯಾಂಪರಿಂಗ್ ಕುರಿತು ಕಮಿನ್ಸ್​​ಗೆ ಫಾಫ್ ಡು ಪ್ಲೆಸಿಸ್ ಘಟನೆ ವಿವರಿಸಿದ ಎನ್ನಲಾದ ವಿಡಿಯೋ ವೈರಲ್

ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (MI vs RCB) ನಡುವಿನ ಪಂದ್ಯದಲ್ಲಿ ಟಾಸ್​ ಫಿಕ್ಸಿಂಗ್ಸ್ ನಡೆದಿತ್ತು ಎಂದು ಕೇಳಿಬಂದ ಆರೋಪಕ್ಕೆ ಸಂಬಂಧಿಸಿ ಈ ಘಟನೆಯೇ ಸಾಕ್ಷಿ. ಏಪ್ರಿಲ್ 11ರಂದು ಮುಂಬೈನ ಐಕಾನಿಕ್ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಟಾಸ್ ನಂತರ ನಾಣ್ಯವನ್ನು ಬದಲಿಸಿ ಮುಂಬೈ ಪರ ಫಲಿತಾಂಶ ಕೊಟ್ಟು ಮೋಸ ಮಾಡಲಾಗಿತ್ತು ಎನ್ನುವಂತಹ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಟ್ರೆಂಡಿಂಗ್​ ಸುದ್ದಿ

ಇದರ ಮಧ್ಯೆ ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಅವರ ವಿಡಿಯೋ ವೈರಲ್ ಆಗಿದ್ದು, ಎಲ್ಲರಿಗೂ ಅಚ್ಚರಿ ತಂದಿದೆ. ಏಪ್ರಿಲ್ 15ರಂದು ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್, ಎದುರಾಳಿ ತಂಡದ ನಾಯಕ ಪ್ಯಾಟ್ ಕಮಿನ್ಸ್​ಗೆ (Pat cummins) ವಿವರಣೆಯೊಂದನ್ನು ನೀಡಿದ್ದಾರೆ. ಮುಂಬೈ ಪಂದ್ಯದ ಟಾಸ್ ಕುರಿತು ಎಂಬ ವಿವರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಿನ ಘಟನೆ ಕುರಿತು ಎಳೆ ಎಳೆಯಾಗಿ ವಿವರಿಸಿದ್ದಾರೆ ಎಂಬರ್ಥ ನೀಡುತ್ತಿದೆ ಈ ವಿಡಿಯೋ.

ಅಂದು ನಡೆದಿದ್ದೇನು?

ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್​ನ 25ನೇ ಪಂದ್ಯದಲ್ಲಿ ಟಾಸ್ ಬಹು ಮುಖ್ಯ ಪಾತ್ರವಹಿಸಿತ್ತು. ಎಂಐ ನಾಯಕ ಹಾರ್ದಿಕ್ ಪಾಂಡ್ಯ ನಾಣ್ಯವನ್ನು ತನ್ನ ಹಿಂಬದಿಗೆ ಚಿಮ್ಮಿದರು. ಈ ನಾಣ್ಯವನ್ನು ಮ್ಯಾಚ್​ ರೆಫ್ರಿ ಜಾವಗಲ್ ಶ್ರೀನಾಥ್ ಅವರು ತೆಗೆದುಕೊಳ್ಳುವಾಗ ಬದಲಿಸಿ ಟ್ಯಾಂಪರಿಂಗ್ ಮಾಡಿದ್ದಾರೆ ಎನ್ನುವಂತಹ ವಿಡಿಯೋಗಳು ವೈರಲ್ ಆಗಿದ್ದವು. ಈ ಕಾರಣದಿಂದ ಮುಂಬೈ ಗೆಲುವು ಸಾಧಿಸಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಆ ಬಳಿಕ ಕಾಯಿನ್ ಎತ್ತಿಕೊಳ್ಳುವ ಸ್ಪಷ್ಟವಾದ ವಿಡಿಯೋ ಕೂಡ ವೈರಲ್ ಆಗಿತ್ತು.

ಫಾಫ್ ಮತ್ತು ಕಮಿನ್ಸ್ ಮಾತುಕತೆ

ಬೆಂಗಳೂರು ಮತ್ತು ಹೈದರಾಬಾದ್ ತಂಡಗಳು ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಅವಧಿಯಲ್ಲಿ ಫಾಫ್ ಡು ಪ್ಲೆಸಿಸ್ ಮತ್ತು ಪ್ಯಾಟ್ ಕಮಿನ್ಸ್​ ಇದೇ ಘಟನೆ ಕುರಿತು ಮಾತನಾಡಿಕೊಂಡಿದ್ದಾರೆ ಎಂಬ ವಿಡಿಯೋ ಈಗ ಹರಿದಾಡುತ್ತಿದೆ. ಅಂದು ಟಾಸ್ ಸಂದರ್ಭದಲ್ಲಿ ಏನೆಲ್ಲಾ ಆಯಿತು ಎಂಬುದನ್ನು ಫಾಫ್ ವಿವರಿಸಿದ್ದಾರೆ. ಇದನ್ನು ಕೇಳಿದ ಫಾಫ್ ಅಚ್ಚರಿಗೆ ಒಳಗಾಗಿದ್ದಾರೆ. ಹಾಗಾಗಿ ಅಂದು ನಡೆದಿದ್ದ ಘಟನೆಗೆ ಫಾಫ್ ಮತ್ತು ಕಮಿನ್ಸ್ ನಡೆಸಿರುವ ಮಾತುಕತೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಇದರಿಂದ ಎಲ್ಲರಿಗೂ ಅನುಮಾನ ಮೂಡುವಂತೆ ಮಾಡಿದೆ.

ಆರ್​ಸಿಬಿಗೆ ವಿರೋಚಿತ ಸೋಲು

ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್​ಸಿಬಿ ವಿರೋಚಿತ ಸೋಲು ಅನುಭವಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಸನ್​ರೈಸರ್ಸ್, 20 ಓವರ್​​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ವಿಶ್ವದಾಖಲೆಯ 287 ರನ್ ಗಳಿಸಿತ್ತು. 288 ರನ್​ಗಳ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್, 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತು. ಇದರೊಂದಿಗೆ 25 ರನ್​ಗಳಿಂದ ಸೋಲು ಕಂಡಿತು. ಸೋತರೂ ಕೂಡ ಆರ್​ಸಿಬಿ ದಾಖಲೆ ಬರೆಯಿತು.

ಟ್ರಾವಿಸ್ ಹೆಡ್ ಶತಕ

ಸನ್​ರೈಸರ್ಸ್ ಬೃಹತ್ ಮೊತ್ತ ದಾಖಲಿಸಲು ಕಾರಣವಾಗಿದ್ದು ಟ್ರಾವಿಸ್ ಹೆಡ್. ಆರಂಭದಿಂದ ತಾನು ಕ್ರೀಸ್​​ನಲ್ಲಿ ಉಳಿಯುವವರೆಗೂ ಅಬ್ಬರಿಸಿದ ಹೆಡ್​, ತನ್ನ ಚೊಚ್ಚಲ ಶತಕವನ್ನು ಪೂರೈಸಿದರು. ಕೇವಲ 41 ಎಸೆತಗಳಲ್ಲಿ 9 ಬೌಂಡರಿ, 8 ಸಿಕ್ಸರ್​ ಸಹಿತ 248ರ ಸ್ಟ್ರೈಕ್​ರೇಟ್​ನಲ್ಲಿ 102 ರನ್ ಬಾರಿಸಿದರು. ಅವರಿಗೆ ಅಭಿಷೇಕ್ ಶರ್ಮಾ (34), ಹೆನ್ರಿಚ್ ಕ್ಲಾಸೆನ್ (67), ಏಡನ್ ಮಾರ್ಕ್ರಮ್ (32*), ಅಬ್ದುಲ್ ಸಮದ್ (37) ಅದ್ಭುತ ಸಾಥ್ ನೀಡಿದರು. ಪರಿಣಾಮ ಎಸ್​ಆರ್​ಹೆಚ್ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು.

ದಿನೇಶ್ ಕಾರ್ತಿಕ್ ಅಬ್ಬರ

ಬೃಹತ್ ಮೊತ್ತವನ್ನು ಹಿಂಬಾಲಿಸಿದ ಬೆಂಗಳೂರು ಪರ ದಿನೇಶ್ ಕಾರ್ತಿಕ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಪಂದ್ಯವು ಸೋಲುತ್ತದೆ ಎಂದು ನಿರ್ಧರಿಸಿದ್ದ ಅಭಿಮಾನಿಗಳಿಗೆ ಗೆಲುವಿನ ಹುರುಪು ತಂದುಕೊಟ್ಟರು. ಕೇವಲ 35 ಎಸೆತಗಳಲ್ಲಿ 7 ಸಿಕ್ಸರ್​ ಮತ್ತು 4 ಬೌಂಡರಿ ಸಹಿತ 237ರ ಸ್ಟ್ರೈಕ್​ರೇಟ್​ನಲ್ಲಿ 83 ರನ್ ಬಾರಿಸಿ ಗೆಲುವಿಗಾಗಿ ಹೋರಾಟ ನಡೆಸಿದರು. ಫಾಫ್ ಡು ಪ್ಲೆಸಿಸ್ 62, ವಿರಾಟ್ ಕೊಹ್ಲಿ 42 ರನ್ ಬಾರಿಸಿದರು.

IPL_Entry_Point