ಶತಕವೀರ ಟ್ರಾವಿಸ್​ ಹೆಡ್​ಗೆ ನಿಂದಿಸುತ್ತಾ ಸೆಂಡ್ ಆಫ್ ಕೊಟ್ಟ ಮೊಹಮ್ಮದ್ ಸಿರಾಜ್; ತರಾಟೆ ತೆಗೆದುಕೊಂಡ ಗವಾಸ್ಕರ್, VIDEO
ಕನ್ನಡ ಸುದ್ದಿ  /  ಕ್ರಿಕೆಟ್  /  ಶತಕವೀರ ಟ್ರಾವಿಸ್​ ಹೆಡ್​ಗೆ ನಿಂದಿಸುತ್ತಾ ಸೆಂಡ್ ಆಫ್ ಕೊಟ್ಟ ಮೊಹಮ್ಮದ್ ಸಿರಾಜ್; ತರಾಟೆ ತೆಗೆದುಕೊಂಡ ಗವಾಸ್ಕರ್, Video

ಶತಕವೀರ ಟ್ರಾವಿಸ್​ ಹೆಡ್​ಗೆ ನಿಂದಿಸುತ್ತಾ ಸೆಂಡ್ ಆಫ್ ಕೊಟ್ಟ ಮೊಹಮ್ಮದ್ ಸಿರಾಜ್; ತರಾಟೆ ತೆಗೆದುಕೊಂಡ ಗವಾಸ್ಕರ್, VIDEO

Mohammed Siraj: ಅಡಿಲೇಡ್​​ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​​​ನ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರು ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡಿದ ನಂತರ ಮಾತಿಕ ಚಕಮಕಿ ನಡೆಸಿದ್ದಾರೆ.

ಟ್ರಾವಿಸ್​ ಹೆಡ್​ಗೆ ಅಗ್ರೆಸ್ಸಿವ್ ಸೆಂಡ್ ಆಫ್ ಕೊಟ್ಟ ಮೊಹಮ್ಮದ್ ಸಿರಾಜ್, ನಿಂದಿಸಿದ ಶತಕವೀರ; ಕೆರಳಿದ ಅಡಿಲೇಡ್ ಪ್ರೇಕ್ಷಕರು
ಟ್ರಾವಿಸ್​ ಹೆಡ್​ಗೆ ಅಗ್ರೆಸ್ಸಿವ್ ಸೆಂಡ್ ಆಫ್ ಕೊಟ್ಟ ಮೊಹಮ್ಮದ್ ಸಿರಾಜ್, ನಿಂದಿಸಿದ ಶತಕವೀರ; ಕೆರಳಿದ ಅಡಿಲೇಡ್ ಪ್ರೇಕ್ಷಕರು

ಅಡಿಲೇಡ್​​​ನ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಅಥವಾ ಪಿಂಕ್ ಬಾಲ್ ಟೆಸ್ಟ್​​ನ 2ನೇ ದಿನದಂದು ಆಸ್ಟ್ರೇಲಿಯಾ ಬ್ಯಾಟರ್​ ಟ್ರಾವಿಸ್ ಹೆಡ್​ ಅದ್ಭುತ ಶತಕ ಸಿಡಿಸಿ ಔಟಾದ ಬಳಿಕ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅಗ್ರೆಸ್ಸಿವ್ ಸೆಂಡ್ ಆಫ್ ಕೊಟ್ಟಿದ್ದು, ಇಬ್ಬರ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ. ಒಂದು ತುದಿಯಲ್ಲಿ ಸತತ ವಿಕೆಟ್​ ಕಳೆದುಕೊಳ್ಳುತ್ತಿದ್ದ ಆಸ್ಟ್ರೇಲಿಯಾಗೆ ಆಸರೆಯಾಗಿ 141 ಎಸೆತಗಳಲ್ಲಿ 140 ರನ್ ಸಿಡಿಸಿ ಭಾರತೀಯ ಬೌಲರ್​​ಗಳ ತಲೆಬಿಸಿ ಹೆಚ್ಚಿಸಿದ ಹೆಡ್, ಸಿರಾಜ್ ಬೌಲಿಂಗ್​ನಲ್ಲಿ ಕ್ಲೀನ್​​ ಬೋಲ್ಡ್ ಆದರು. ಈ ವೇಳೆ ಸಿರಾಜ್​ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.

ಬೌಲಿಂಗ್ ವೇಳೆ ಮಾರ್ನಸ್ ಲಬುಶೇನ್ ಬ್ಯಾಟ್ ಮಾಡದೆ ಹಿಂದೆ ಸರಿದಿದ್ದಾಗಿ ಸಿರಾಜ್ ಕೋಪಗೊಂಡು ಅವರತ್ತ ಚೆಂಡು ಎಸೆದಿದ್ದರು. ಪ್ರೇಕ್ಷಕರೊಬ್ಬರು ಆಟಕ್ಕೆ ಅಡಚಣೆ ಉಂಟು ಮಾಡಿದ್ದಕ್ಕಾಗಿ ಲಬುಶೇನ್ ಬ್ಯಾಟ್ ಮಾಡದೆ ಹಿಂದೆ ಸರಿದಿದ್ದರು. ಆದರೆ ಸಿರಾಜ್ ಚೆಂಡು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾದ ನಡುವೆಯೇ ಇದೀಗ ಟ್ರಾವಿಸ್ ಹೆಡ್ ಅವರು ಔಟಾದ ಸಂದರ್ಭದಲ್ಲಿ ನಿಂದಿಸುತ್ತಾ ಸೆಂಡ್ ಆಫ್ ಕೊಟ್ಟಿದ್ದು ಮತ್ತಷ್ಟು ಟೀಕೆಗೆ ಗುರಿಯಾಗಿದ್ದಾರೆ ಸಿರಾಜ್. ಹೆಡ್ ಔಟ್ ಆದ ತಕ್ಷಣ ಭಾರತೀಯ ವೇಗಿ ಸೆಂಡ್ ಆಫ್ ಕೊಡುವಾಗ ಮಾತಿನ ಚಕಮಕಿ ನಡೆಯಿತು.

ಇಬ್ಬರ ನಡುವೆ ಮಾತುಗಳು ವಿನಿಮಯವಾದ ಬಳಿಕ ಅಡಿಲೇಡ್​ ಪ್ರೇಕ್ಷಕರು ಕೆರಳಿದರು. ಹೆಡ್​ ಡ್ರೆಸ್ಸಿಂಗ್​ ರೂಮ್​ಗೆ ಹೋದ ಬಳಿಕ ಭಾರತೀಯ ವೇಗಿಯನ್ನು ಆಸೀಸ್ ಫ್ಯಾನ್ಸ್​ ದೂಷಿಸಿದರು. ಮತ್ತೊಂದೆಡೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸಹ ಸಿರಾಜ್​ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಹೆಡ್​ ಔಟಾದಾಗ ನಿಮ್ಮ ಮಾತುಗಳು ಅನಗತ್ಯವಾಗಿದ್ದವು ಎಂದು ಗವಾಸ್ಕರ್​ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಹ ಸಿರಾಜ್​​ಗೆ ವಿರೋಧ ವ್ಯಕ್ತವಾಗಿದೆ. ವಿಕೆಟ್ ಕಬಳಿಸಿದ ಬಳಿಕ ಸಂಭ್ರಮಕ್ಕೊಂದು ಮಿತಿ ಇರಬೇಕು. ಸ್ಲೆಡ್ಜಿಂಗ್ ಮಾಡುವುದೇ ಆಟವಲ್ಲ ಎಂದು ಕಿರಿಕಾರಿದ್ದಾರೆ ನೆಟ್ಟಿಗರು. ಸಿರಾಜ್ ಮೊದಲ ಇನ್ನಿಂಗ್ಸ್​ನಲ್ಲಿ 4 ವಿಕೆಟ್ ಪಡೆದರು.

ಇದಕ್ಕೆ ಪ್ರತಿಕ್ರಿಯಿಸಿದ ಟ್ರಾವಿಸ್ ಹೆಡ್​, ನಾನು ಉತ್ತಮ ಬೌಲಿಂಗ್ ಮಾಡಿದೆ ಎಂದು ಆತನನ್ನು (ಸಿರಾಜ್) ಪ್ರಶಂಸಿಸಿದೆ. ಆದರೆ, ಅವರನ್ನು ತಪ್ಪಾಗಿ ಅರ್ಥ ಮಾಡಿಕೊಂಡರು ಎಂದು ಸ್ಪಷ್ಟನೆ ನೀಡಿದ್ದಾರೆ.

ಇಲ್ಲಿದೆ ಮಾತಿನ ಚಕಮಕಿ ವಿಡಿಯೋ

ಭಾರತೀಯ ಬೌಲರ್ಸ್​ಗೆ ಬೆಂಡೆತ್ತಿದ ಟ್ರಾವಿಸ್ ಹೆಡ್​

ಮೊದಲ ದಿನದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 86 ರನ್​ಗಳಿಸಿ 2ನೇ ದಿನ ಆರಂಭಿಸಿದ ಆಸೀಸ್​, ಮೊದಲ ಸೆಷನ್​​ನಲ್ಲಿ ನಾಥನ್ ಮೆಕ್ಸ್ವೀನಿ ಮತ್ತು ಸ್ಟೀವ್ ಸ್ಮಿತ್ ಅವರನ್ನು ಬೇಗನೇ ಕಳೆದುಕೊಂಡಿತು. ಬಳಿಕ ಕ್ರೀಸ್​ಗೆ ಹೆಡ್​​, ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಭಾರತೀಯ ಬೌಲರ್​​ಗಳಿಗೆ ಮನಬಂದಂತೆ ಚಚ್ಚಿದರು. ಟೆಸ್ಟ್ ಕ್ರಿಕೆಟ್ ಅನ್ನು ಏಕದಿನ ಮಾದರಿಯಲ್ಲಿ ಆಡಿದರು. ಪರಿಣಾಮ 111 ಎಸೆತಗಳಲ್ಲೇ ನೂರರ ಗಡಿ ದಾಟಿ ವಿಶೇಷ ದಾಖಲೆಯನ್ನೂ ತನ್ನದಾಗಿಸಿಕೊಂಡರು. ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವೇಗವಾಗಿ ಶತಕ ಸಿಡಿಸಿದ ಆಟಗಾರ ಎನಿಸಿಕೊಂಡರು.

41 ಎಸೆತಗಳಲ್ಲಿ 140 ರನ್ ಗಳಿಸಿದ ಹೆಡ್ ಅವರ ಇನ್ನಿಂಗ್ಸ್​​ನಲ್ಲಿ, 17 ಬೌಂಡರಿ, 4 ಸಿಕ್ಸರ್​ಗಳಿವೆ. ಮಾರ್ನಸ್ ಲಬುಶೇನ್ 64 ರನ್​ಗಳ ಮಹತ್ವದ ಕಾಣಿಕೆ ನೀಡಿದರು. ಆಸೀಸ್ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 337 ರನ್​ಗಳಿಗೆ ಆಲೌಟ್ ಆಗಿ 157 ರನ್​ಗಳ ಮುನ್ನಡೆ ಪಡೆಯಿತು. ಬುಮ್ರಾ ಮತ್ತು ಸಿರಾಜ್ ತಲಾ 4 ವಿಕೆಟ್ ಪಡೆದರು. ಇದಕ್ಕೂ ಮುನ್ನ ನಡೆದ ಮೊದಲ ಇನ್ನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಕೇವಲ 180 ರನ್​ಗಳಿಗೆ ಆಲೌಟ್ ಆಗಿತ್ತು. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

ಪಿಂಕ್ ಬಾಲ್ ಟೆಸ್ಟ್​ನಲ್ಲಿ ವೇಗದ ಶತಕ ಸಿಡಿಸಿದವರು

111 ಎಸೆತ - ಟ್ರಾವಿಸ್ ಹೆಡ್​ vs ಭಾರತ, ಅಡಿಲೇಡ್ 2024

112 ಎಸೆತ - ಟ್ರಾವಿಸ್ ಹೆಡ್​ vs ಇಂಗ್ಲೆಂಡ್, ಹೋಬಾರ್ಟ್ 2022

125 ಎಸೆತ - ಟ್ರಾವಿಸ್ ಹೆಡ್​ vs ವೆಸ್ಟ್ ಇಂಡೀಸ್, ಅಡಿಲೇಡ್ 2022

139 ಎಸೆತ - ಜೋ ರೂಟ್ vs ವೆಸ್ಟ್ ಇಂಡೀಸ್, ಎಡ್ಜ್‌ಬಾಸ್ಟನ್ 2017

140 ಎಸೆತ - ಅಸದ್ ಶಫೀಕ್ vs ಆಸ್ಟ್ರೇಲಿಯಾ, ಬ್ರಿಸ್ಬೇನ್ 2016

Whats_app_banner