ಭಾರತ ವಿರುದ್ಧದ ಟಿ20ಐ ಸರಣಿಗೂ ಮುನ್ನ ಶ್ರೀಲಂಕಾ ತಂಡಕ್ಕೆ ಆಘಾತ; ಗಾಯಗೊಂಡು ಹೊರಬಿದ್ದ ಸ್ಟಾರ್ ವೇಗಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ವಿರುದ್ಧದ ಟಿ20ಐ ಸರಣಿಗೂ ಮುನ್ನ ಶ್ರೀಲಂಕಾ ತಂಡಕ್ಕೆ ಆಘಾತ; ಗಾಯಗೊಂಡು ಹೊರಬಿದ್ದ ಸ್ಟಾರ್ ವೇಗಿ

ಭಾರತ ವಿರುದ್ಧದ ಟಿ20ಐ ಸರಣಿಗೂ ಮುನ್ನ ಶ್ರೀಲಂಕಾ ತಂಡಕ್ಕೆ ಆಘಾತ; ಗಾಯಗೊಂಡು ಹೊರಬಿದ್ದ ಸ್ಟಾರ್ ವೇಗಿ

India vs Sri Lanka : ಜುಲೈ 27ರಿಂದ ಪ್ರಾರಂಭವಾಗುವ ಟೀಮ್ ಇಂಡಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಿಂದ ಶ್ರೀಲಂಕಾ ತಂಡದ ವೇಗದ ಬೌಲರ್ ದುಷ್ಮಂತಾ ಚಮೀರಾ ಅವರು ಗಾಯಗೊಂಡು ಹೊರಬಿದ್ದಿದ್ದಾರೆ.

ಭಾರತ ವಿರುದ್ಧದ ಟಿ20ಐ ಸರಣಿಗೂ ಮುನ್ನ ಶ್ರೀಲಂಕಾ ತಂಡಕ್ಕೆ ಆಘಾತ; ಗಾಯಗೊಂಡು ಹೊರಬಿದ್ದ ಸ್ಟಾರ್ ವೇಗಿ?
ಭಾರತ ವಿರುದ್ಧದ ಟಿ20ಐ ಸರಣಿಗೂ ಮುನ್ನ ಶ್ರೀಲಂಕಾ ತಂಡಕ್ಕೆ ಆಘಾತ; ಗಾಯಗೊಂಡು ಹೊರಬಿದ್ದ ಸ್ಟಾರ್ ವೇಗಿ?

ಟೀಮ್ ಇಂಡಿಯಾ ವಿರುದ್ಧದ 3 ಪಂದ್ಯಗಳ ಟಿ20ಐ ಸರಣಿಗೂ ಮುನ್ನ ಶ್ರೀಲಂಕಾ ತಂಡಕ್ಕೆ (India vs Sri Lanka) ದೊಡ್ಡ ಹೊಡೆತ ಬಿದ್ದಿದೆ. ಸ್ಟಾರ್ ವೇಗಿ ದುಷ್ಮಂತ ಚಮೀರಾ (Dushmantha Chameera) ಗಾಯದ ಕಾರಣದಿಂದ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಆದರೆ, ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕಳಪೆ ಪ್ರದರ್ಶನದ ನಂತರ ವನಿಂದು ಹಸರಂಗ ಅವರು ನಾಯಕತ್ವದಿಂದ ಕೆಳಗಿಳಿದಿದ್ದರು. ಇದೀಗ ಅವರ ಸ್ಥಾನಕ್ಕೆ ಚರಿತ್ ಅಸಲಂಕಾ ಅವರನ್ನು ನೇಮಿಸಲಾಗಿದೆ. ವಿಶ್ವಕಪ್​​​ ಟಿಕೆಟ್ ತಪ್ಪಿಸಿಕೊಂಡಿದ್ದ ಹಿರಿಯ ಬ್ಯಾಟರ್ ದಿನೇಶ್ ಚಾಂಡಿಮಾಲ್ ತಂಡಕ್ಕೆ ಮರಳಿದರೆ, ದಸುನ್ ಶನಕ ತನ್ನ ಸ್ಥಾನ ಉಳಿಸಿಕೊಂಡಿದ್ದಾರೆ.

ದುಷ್ಮಂತಾ ಚಮೀರಾ ಅವರು ಭಾರತದ ವಿರುದ್ಧದ ಸರಣಿಗೂ ಮುನ್ನ ಗಾಯಗೊಂಡಿದ್ದು, ಅವರ ಸ್ಥಾನಕ್ಕೆ ಅಸಿತಾ ಫೆರ್ನಾಂಡೋ ಅವರನ್ನು ಆಯ್ಕೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಲಂಕಾ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಅಸಿತಾ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಜಾಫ್ನಾ ಕಿಂಗ್ಸ್ ಗಾಲೆ ಮಾರ್ವೆಲ್ಸ್ ವಿರುದ್ಧ 3 ವಿಕೆಟ್ ಪಡೆದಿದ್ದರು.

ಚಮೀರಾ ಗಾಯದಿಂದ ಭಾರತದ ಟಿ20ಐ ಸಿರೀಸ್​ನಿಂದ ಹೊರ ಬಿದ್ದಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಶೀಘ್ರದಲ್ಲೇ ಬದಲಿ ಆಟಗಾರನನ್ನು ಪ್ರಕಟಿಸಲಿದೆ ಎಂದು ಎಕ್ಸ್​ ಖಾತೆಯಲ್ಲಿ ಶ್ರೀಲಂಕಾದ ಪತ್ರಕರ್ತ ರೆಕ್ಸ್ ಕ್ಲೆಮೆಂಟೈನ್ ಬರೆದಿದ್ದಾರೆ. ತವರಿನ ಮೈದಾನದಲ್ಲಿ ಅತ್ಯುತ್ತಮ ಬೌಲಿಂಗ್ ನಡೆಸುವ ದುಷ್ಮಂತಾ ಅಲಭ್ಯತೆ ಲಂಕಾಗೆ ಆಘಾತ ನೀಡಿದೆ.

ಶ್ರೀಲಂಕಾ ಟಿ20ಐ ತಂಡ

ಚರಿತ್ ಅಸಲಂಕಾ (ನಾಯಕ), ಪಾಥುಮ್ ನಿಸ್ಸಾಂಕಾ, ಕುಸಾಲ್ ಪೆರೆರಾ, ಅವಿಷ್ಕಾ ಫರ್ನಾಂಡೊ, ಕುಸಾಲ್ ಮೆಂಡಿಸ್, ದಿನೇಶ್ ಚಾಂಡಿಮಾಲ್, ಕಮಿಂಡು ಮೆಂಡಿಸ್, ದಸುನ್ ಶನಕ, ವನಿಂದು ಹಸರಂಗ, ದುನಿತ್ ವೆಲ್ಲಾಲಗೆ, ಮಹೀಶ್ ತೀಕ್ಷಾಣ, ಚಮಿಂದು ವಿಕ್ರಮಸಿಂಘೆ, ಮಥೀಶಾ ಪತಿರಾನಾ, ನುವಾನ್ ತುಷಾರ ಮತ್ತು ಬಿನುರಾ ಫರ್ನಾಂಡೊ.

ಭಾರತ ಟಿ20 ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿಕೆಟ್ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್.

ಕ್ರ,ಸಂದಿನ ಮತ್ತು ದಿನಾಂಕಸಮಯಪಂದ್ಯಗಳುಸ್ಥಳ
1ಶನಿವಾರ27-ಜುಲೈ-24ರಾತ್ರಿ 7.001ನೇ ಟಿ20ಐಪಲ್ಲೆಕೆಲೆ
2ಭಾನುವಾರ28-ಜುಲೈ-24ರಾತ್ರಿ 7.002ನೇ  ಟಿ20ಐಪಲ್ಲೆಕೆಲೆ
3ಮಂಗಳವಾರ30-ಜುಲೈ-24ರಾತ್ರಿ 7.003ನೇ  ಟಿ20ಐಪಲ್ಲೆಕೆಲೆ
4ಶುಕ್ರವಾರ2-ಆಗಸ್ಟ್-24ಮಧ್ಯಾಹ್ನ 02.301ನೇ  ಏಕದಿನಕೊಲಂಬೊ
5ಭಾನುವಾರ4-ಆಗಸ್ಟ್-24ಮಧ್ಯಾಹ್ನ 02.302ನೇ ಏಕದಿನಕೊಲಂಬೊ
6ಬುಧವಾರ7-ಆಗಸ್ಟ್-24ಮಧ್ಯಾಹ್ನ 02.303ನೇ  ಏಕದಿನಕೊಲಂಬೊ
Whats_app_banner