ಒಂದೇ ಪಂದ್ಯದಲ್ಲಿ ಎರಡು ವೇಗದ ಅರ್ಧಶತಕ; ಕೆಲವೇ ಓವರ್​ಗಳ ಅಂತರದಲ್ಲಿ ಟ್ರಾವಿಡ್ ಹೆಡ್ ದಾಖಲೆ ಮುರಿದ ಅಭಿಷೇಕ್ ಶರ್ಮಾ
ಕನ್ನಡ ಸುದ್ದಿ  /  ಕ್ರಿಕೆಟ್  /  ಒಂದೇ ಪಂದ್ಯದಲ್ಲಿ ಎರಡು ವೇಗದ ಅರ್ಧಶತಕ; ಕೆಲವೇ ಓವರ್​ಗಳ ಅಂತರದಲ್ಲಿ ಟ್ರಾವಿಡ್ ಹೆಡ್ ದಾಖಲೆ ಮುರಿದ ಅಭಿಷೇಕ್ ಶರ್ಮಾ

ಒಂದೇ ಪಂದ್ಯದಲ್ಲಿ ಎರಡು ವೇಗದ ಅರ್ಧಶತಕ; ಕೆಲವೇ ಓವರ್​ಗಳ ಅಂತರದಲ್ಲಿ ಟ್ರಾವಿಡ್ ಹೆಡ್ ದಾಖಲೆ ಮುರಿದ ಅಭಿಷೇಕ್ ಶರ್ಮಾ

Abhishek Sharma: ಒಂದೇ ಪಂದ್ಯದಲ್ಲಿ ಎರಡು ವೇಗದ ಅರ್ಧಶತಕ ದಾಖಲಾಗಿದೆ. ಅದು ಕೂಡ ಕೆಲವೇ ಓವರ್​ಗಳ ಅಂತರದಲ್ಲಿ ಟ್ರಾವಿಡ್ ಹೆಡ್ ದಾಖಲೆಯನ್ನು ಅಭಿಷೇಕ್ ಶರ್ಮಾ ಅವರು ಮುರಿದಿದ್ದಾರೆ.

ಕೆಲವೇ ಓವರ್​ಗಳ ಅಂತರದಲ್ಲಿ ಟ್ರಾವಿಡ್ ಹೆಡ್ ದಾಖಲೆ ಮುರಿದ ಅಭಿಷೇಕ್ ಶರ್ಮಾ
ಕೆಲವೇ ಓವರ್​ಗಳ ಅಂತರದಲ್ಲಿ ಟ್ರಾವಿಡ್ ಹೆಡ್ ದಾಖಲೆ ಮುರಿದ ಅಭಿಷೇಕ್ ಶರ್ಮಾ

ಸನ್​ರೈಸರ್ಸ್ ಹೈದರಾಬಾದ್ ತಂಡವು ಅಕ್ಷರಶಃ ರೌದ್ರಾವತಾರ ಬ್ಯಾಟಿಂಗ್ ನಡೆಸಿದೆ. ಆರಂಭಿಕ ಆಟಗಾರ ಟ್ರಾವಿಸ್ ಹೆಟ್ 18 ಎಸೆತಗಳಲ್ಲಿ ದಾಖಲೆಯ ಅರ್ಧಶತಕ ಸಿಡಿಸಿದ ನಾಲ್ಕೇ ಓವರ್​​ಗಳ ಅಂತರದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಡಗೈ ಆಟಗಾರ ಅಭಿಷೇಕ್ ಶರ್ಮಾ ಆ ದಾಖಲೆಯನ್ನು ಧೂಳೀಪಟಗೊಳಿಸಿದ್ದಾರೆ. ಕೇವಲ 16 ಎಸೆತಗಳಲ್ಲಿ ಅರ್ಧಶತಕ ಶತಕ ಪೂರೈಸಿ ಸನ್​ರೈಸರ್ಸ್ ಹೈದರಾಬಾದ್ ಪರ ವಿಶೇಷ ದಾಖಲೆ ಬರೆದಿದ್ದಾರೆ.

16 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ ಅಭಿಷೇಕ್ ಶರ್ಮಾ, ಎಸ್​ಆರ್​ಹೆಚ್ ಪರ ವೇಗದ ಅರ್ಧಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಇದೇ ಪಂದ್ಯದಲ್ಲಿ ಟ್ರಾವಿಸ್ ಹೆಡ್ 18 ಎಸೆತಗಳಲ್ಲಿ 50ರ ಗಡಿ ದಾಟಿ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರು. ಟ್ರಾವಿಸ್ 5.4ನೇ ಓವರ್​​ನಲ್ಲಿ ಈ ರೆಕಾರ್ಡ್ ಸೃಷ್ಟಿಸಿದರೆ, ಅಭಿಷೇಕ್ 9.3ನೇ ಓವರ್​​ನಲ್ಲಿ ಈ ದಾಖಲೆ ಮುರಿದರು. ಅಲ್ಲದೆ, ಐಪಿಎಲ್​ನಲ್ಲಿ ವೇಗದ ಹಾಫ್ ಸೆಂಚುರಿ ಸಿಡಿಸಿದ 8ನೇ ಆಟಗಾರ ಎನಿಸಿದ್ದಾರೆ.

ಹೈದರಾಬಾದ್ ಪರ ವೇಗದ ಐಪಿಎಲ್​ ಅರ್ಧಶತಕ ಸಿಡಿಸಿದವರು (ಎಸೆತಗಳಲ್ಲಿ)

16 - ಅಭಿಷೇಕ್ ಶರ್ಮಾ vs ಮುಂಬೈ ಇಂಡಿಯನ್ಸ್, ಹೈದರಾಬಾದ್, 2024 (ಹೊಸ ಸೇರ್ಪಡೆ)

18 - ಟ್ರಾವಿಸ್ ಹೆಡ್ vs ಮುಂಬೈ ಇಂಡಿಯನ್ಸ್, ಹೈದರಾಬಾದ್, 2024 (ಹೊಸ ಸೇರ್ಪಡೆ)

20 - ಡೇವಿಡ್ ವಾರ್ನರ್ vs ಚೆನ್ನೈ ಸೂಪರ್ ಕಿಂಗ್ಸ್, ಹೈದರಾಬಾದ್, 2015

20 - ಡೇವಿಡ್ ವಾರ್ನರ್ vs ಕೋಲ್ಕತ್ತಾ ನೈಟ್​ ರೈಡರ್ಸ್, ಹೈದರಾಬಾದ್, 2017

20 - ಮೋಸೆಸ್ ಹೆನ್ರಿಕ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಹೈದರಾಬಾದ್, 2015

21 - ಡೇವಿಡ್ ವಾರ್ನರ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಬೆಂಗಳೂರು, 2016

ಮುಂಬೈ ವಿರುದ್ಧ ವೇಗದ ಅರ್ಧಶತಕ ಸಿಡಿಸಿದವರು (ಎಸೆತಗಳು)

14 - ಪ್ಯಾಟ್ ಕಮಿನ್ಸ್ (ಕೆಕೆಆರ್​) - ಪುಣೆ, 2022

16 - ಅಭಿಷೇಕ್ ಶರ್ಮಾ (ಎಸ್​ಆರ್​ಹೆಚ್​) - ಹೈದರಾಬಾದ್, 2024 (ಹೊಸ ಸೇರ್ಪಡೆ)

18 - ರಿಷಭ್ ಪಂತ್ (ಡೆಲ್ಲಿ) - ಮುಂಬೈ WS, 2018

18 - ಟ್ರಾವಿಸ್ ಹೆಡ್ (ಎಸ್​ಆರ್​ಹೆಚ್) - ಹೈದರಾಬಾದ್, 2024 (ಹೊಸ ಸೇರ್ಪಡೆ)

19 - ಅಜಿಂಕ್ಯ ರಹಾನೆ (ಸಿಎಸ್​ಕೆ) - ಮುಂಬೈ WS, 2023

ಅತಿ ವೇಗದ ಶತಕ (ತಂಡದ ಪರ)

ಐಪಿಎಲ್ ಇತಿಹಾಸದಲ್ಲಿ ತಂಡವೊಂದು ಕಡಿಮೆ ಓವರ್​​ಗಳಲ್ಲಿ ಶತಕ ಪೂರೈಸಿದ ನಾಲ್ಕನೇ ತಂಡ ಎಂಬ ದಾಖಲೆಗೂ ಸನ್​ರೈಸರ್ಸ್ ಹೈದರಾಬಾದ್ ಪಾತ್ರವಾಗಿದೆ. ಕೇವಲ 7 ಓವರ್​​ಗಳಲ್ಲಿ ಎಸ್​ಆರ್​ಹೆಚ್ ತಂಡವು 100ರ ಗಡಿ ಗಡಿ ದಾಟಿದೆ. ಸಿಎಸ್​ಕೆ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

6 ಓವರ್‌ಗಳಲ್ಲಿ 100+ ರನ್ : ಸಿಎಸ್​ಕೆ vs ಪಿಬಿಕೆಎಸ್, ವಾಂಖಡೆ, 2014

6 ಓವರ್‌ಗಳು 100+ ರನ್ : ಕೆಕೆಆರ್​​ vs ಆರ್​ಸಿಬಿ, ಬೆಂಗಳೂರು, 2017

6.5 ಓವರ್‌ಗಳು 100+ ರನ್ - ಸಿಎಸ್​ಕೆ vs ಮುಂಬೈ, ವಾಂಖೆಡೆ, 2015

7 ಓವರ್‌ಗಳು 100+ ರನ್ - ಎಸ್​ಆರ್​ಹೆಚ್ vs ಮುಂಬೈ, ಹೈದರಾಬಾದ್, 2024 (ಹೊಸ ಸೇರ್ಪಡೆ)

(ಹಿಂದಿನ ಮೂರು ನಿದರ್ಶನಗಳು ರನ್-ಚೇಸ್‌ನಲ್ಲಿ ಬಂದಿದ್ದವು)

ಪವರ್​​ಪ್ಲೇನಲ್ಲಿ ಅತ್ಯಧಿಕ ಸ್ಕೋರ್​ (ಸನ್​ರೈಸರ್ಸ್ ಹೈದರಾಬಾದ್ ತಂಡ)

81/1 vs ಮುಂಬೈ, ಹೈದರಾಬಾದ್ (2024) (ಹೊಸ ಸೇರ್ಪಡೆ)

79/0 vs ಕೋಲ್ಕತ್ತಾ ನೈಟ್ ರೈಡರ್ಸ್, ಹೈದರಾಬಾದ್ (2017)

77/0 vs ಪಂಜಾಬ್ ಕಿಂಗ್ಸ್, ಹೈದರಾಬಾದ್ (2019)

77/0 vs ಡೆಲ್ಲಿ ಕ್ಯಾಪಿಟಲ್ಸ್, ದುಬೈ (2020)

Whats_app_banner