ಶೇ 1ರಷ್ಟೂ ಅವಕಾಶ ಇಲ್ಲದಿದ್ದರೂ ಬಾಂಗ್ಲಾ ತಂಡದ ವಿರುದ್ಧವೇ ಸರಣಿ ಗೆದ್ದು ಚರಿತ್ರೆ ಸೃಷ್ಟಿಸಿದ ಯುಎಇ!
ಬಾಂಗ್ಲಾದೇಶ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಯುಎಇ 2-1ರ ಅಂತರದಿಂದ ಟಿ20 ಸರಣಿಯನ್ನು ವಶಪಡಿಸಿಕೊಂಡು ಇತಿಹಾಸ ನಿರ್ಮಿಸಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮೇ 21ರ ಬುಧವಾರ ರಾತ್ರಿ ಬಾಂಗ್ಲಾದೇಶ ತಂಡವನ್ನು ಮೂರನೇ ಟಿ20 ಪಂದ್ಯದಲ್ಲಿ ಸೋಲಿಸುವ ಮೂಲಕ ಚರಿತ್ರೆ ಸೃಷ್ಟಿಸಿದೆ. ಶಾರ್ಜಾದಲ್ಲಿ ನಡೆದ ಈ ಪಂದ್ಯದಲ್ಲಿ ಪ್ರವಾಸಿಗರನ್ನು 7 ವಿಕೆಟ್ಗಳಿಂದ ಮಣಿಸಿದ ಯುಎಇ 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು. ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ವಿರುದ್ಧ ತನ್ನ ಮೊದಲ ಸರಣಿ ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿ ಸಂಭ್ರಮಿಸಿದೆ. ನಿಜ ಹೇಳಬೇಕೆಂದರೆ, ಯುಎಇಗೆ ಸರಣಿ ಗೆಲ್ಲಲು ಶೇ 1ರಷ್ಟೂ ಅವಕಾಶ ಇರಲಿಲ್ಲ. ಹೀಗಿದ್ದರೂ ಅಸಾಧ್ಯವನ್ನೂ ಸಾಧ್ಯವಾಗಿಸಿ ವಿನೂತನ ದಾಖಲೆ ಬರೆದಿದೆ. ಆದರೆ ಬಾಂಗ್ಲಾ ಅತಿಯಾದ ಆತ್ಮವಿಶ್ವಾಸದೊಂದಿಗೆ ಮುಜುಗರದ ಸೋಲು ಅನುಭವಿಸಿದೆ.
ಯುಎಇ-ಬಾಂಗ್ಲಾದೇಶ ಟಿ20 ಸರಣಿಯು ಹಿಂದಿನ ವೇಳಾಪಟ್ಟಿಯ ಪ್ರಕಾರ ಕೇವಲ ಎರಡು ಪಂದ್ಯಗಳಾಗಿತ್ತು. ಸರಣಿಯು ಮೇ 17ರಂದು ಪ್ರಾರಂಭವಾಯಿತು. ಮೊದಲ ಟಿ20 ಪಂದ್ಯವನ್ನು 27 ರನ್ಗಳಿಂದ ಗೆದ್ದ ಬಾಂಗ್ಲಾ 1-0 ಮುನ್ನಡೆ ಸಾಧಿಸಿತು. ಈ ಪಂದ್ಯದ ನಂತರ, ಬಾಂಗ್ಲಾದೇಶದ ಸ್ಟಾರ್ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಐಪಿಎಲ್ ಆಡಲು ಭಾರತಕ್ಕೆ ಆಗಮಿಸಿದರು. ಸರಣಿಯಲ್ಲಿ 2 ಪಂದ್ಯಗಳು ಮಾತ್ರ ನಡೆಯಲಿದ್ದ ಕಾರಣ ಬಾಂಗ್ಲಾ ಸರಣಿಯನ್ನು ಕಳೆದುಕೊಳ್ಳುವ ಶೇ 1ರಷ್ಟೂ ಇರಲಿಲ್ಲ. ಯುಎಇ ಎರಡನೇ ಪಂದ್ಯವನ್ನು ಗೆದ್ದರೂ, ಸರಣಿ ಡ್ರಾ ಆಗುತ್ತಿತ್ತು. ಆದರೆ ಆದರೆ ಪಾಕಿಸ್ತಾನ ಪ್ರವಾಸದಲ್ಲಿ ಅನಿಶ್ಚಿತತೆಯ ವಾತಾವರಣ ನಿರ್ಮಾಣವಾದ ಕಾರಣ ಸರಣಿಗೆ ಇನ್ನೂ 1 ಪಂದ್ಯ ಸೇರಿಸುವಂತೆ ಬಿಸಿಬಿ, ಯುಎಇಗೆ ಒತ್ತಾಯಿಸಿತು. ಅದರಂತೆ ಮೂರು ಪಂದ್ಯಗಳ ಸರಣಿ ಮಾಡಲಾಯಿತು.
2ನೇ ಟಿ20 ಪಂದ್ಯದಲ್ಲಿ 206 ರನ್ಗಳ ಗುರಿ ಬೆನ್ನಟ್ಟಿದ ಯುಎಇ ಒಂದು ಎಸೆತ ಬಾಕಿ ಇರುವಂತೆಯೇ 2 ವಿಕೆಟ್ಗಳಿಂದ ಗೆದ್ದು ಅಚ್ಚರಿ ಮೂಡಿಸಿತು. ಇದೀಗ 3ನೇ ಏಕದಿನ ಪಂದ್ಯದಲ್ಲಿ ಆತಿಥೇಯರು ಬಾಂಗ್ಲಾದೇಶ ತಂಡವನ್ನು 7 ವಿಕೆಟ್ಗಳಿಂದ ಮಣಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಜೊತೆಗೆ ಸರಣಿಯನ್ನೂ 2-1 ಅಂತರದಿಂದ ವಶಪಡಿಸಿಕೊಂಡಿತು. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸರಣಿಯಲ್ಲಿ ಮತ್ತೊಂದು ಪಂದ್ಯವನ್ನು ವಿಸ್ತರಿಸದೇ ಇದ್ದಿದ್ದರೆ, ಪ್ರವಾಸಿ ತಂಡವು ಈ ಮುಜುಗರದ ಸೋಲನ್ನು ಅನುಭವಿಸುತ್ತಿರಲಿಲ್ಲ. ಇದು ಪೂರ್ಣ ಸದಸ್ಯ ತಂಡದ ವಿರುದ್ಧ ಯುಎಇಯ 2ನೇ ಸರಣಿ ಗೆಲುವು. ಇದಕ್ಕೂ ಮುನ್ನ 2021ರಲ್ಲಿ ಐರ್ಲೆಂಡ್ ತಂಡವನ್ನು ಮಣಿಸಿತ್ತು.
ಪಂದ್ಯದ ಫಲಿತಾಂಶ
ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಪ್ರವಾಸಿ ತಂಡದ ಪರ ಆರಂಭಿಕ ಆಟಗಾರ ತಂಝಿದ್ ಹಸನ್ 40 ಮತ್ತು ವಿಕೆಟ್ ಕೀಪರ್ ಜೈಕರ್ ಅಲಿ ಕ್ರಮವಾಗಿ 40 ಮತ್ತು 41 ರನ್ ಗಳಿಸಿದರು. ಯುಎಇ ಪರ ಹೈದರ್ ಅಲಿ 4 ಓವರ್ಗಳಲ್ಲಿ ಕೇವಲ 7 ರನ್ ನೀಡಿ 3 ವಿಕೆಟ್ ಪಡೆದರು. 163 ರನ್ಗಳ ಗುರಿ ಬೆನ್ನತ್ತಿದ ಆತಿಥೇಯರು 5 ಎಸೆತಗಳು ಬಾಕಿ ಇರುವಾಗಲೇ 7 ವಿಕೆಟ್ ನಷ್ಟಕ್ಕೆ ಸುಲಭ ಗುರಿ ತಲುಪಿದರು. ಅಜೇಯ 68 ರನ್ ಗಳಿಸಿದ ಅಲಿಶಾನ್ ಶರಾಫು ಯುಎಇಯ ರನ್ ಚೇಸ್ನ ಹೀರೋ ಎನಿಸಿಕೊಂಡರು. ಆಸಿಫ್ ಖಾನ್ 41 ರನ್ಗಳ ಇನ್ನಿಂಗ್ಸ್ನೊಂದಿಗೆ ಅದ್ಭುತ ಸಾಥ್ ಕೊಟ್ಟರು.
ವಿಭಾಗ