88 ಟೆಸ್ಟ್, 362 ವಿಕೆಟ್, 18,644 ಎಸೆತ; 21 ವರ್ಷಗಳ ಕರಿಯರ್ನಲ್ಲಿ ಒಂದೇ ಒಂದು ನೋ ಬಾಲ್ ಎಸೆಯದ ಬೌಲರ್ ಈತ!
ಈತ ಪಾಕಿಸ್ತಾನ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ. 88 ಟೆಸ್ಟ್, 362 ವಿಕೆಟ್ ಕಿತ್ತಿರುವ ಈ ಆಟಗಾರ ತನ್ನ 21 ವರ್ಷಗಳ ಟೆಸ್ಟ್ ಕ್ರಿಕೆಟ್ ಕರಿಯರ್ನಲ್ಲಿ ಒಂದೇ ಒಂದು ನೋ ಬಾಲ್ ಎಸೆದಿಲ್ಲ!

ಕ್ರಿಕೆಟ್ನಲ್ಲಿ ಪ್ರತಿದಿನ ಅನೇಕ ದಾಖಲೆಗಳು ನಿರ್ಮಾಣವಾಗುತ್ತವೆ. ಕೆಲವು ಮುರಿಯುತ್ತವೆ. ಕೆಲವು ಮುರಿಯಲು ಅಸಾಧ್ಯ. ಆದಾಗ್ಯೂ, ಕೆಲವು ಆಟಗಾರರು ತಮ್ಮ ವಿಶಿಷ್ಟತೆಯಿಂದ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇಲ್ಲೊಬ್ಬ ಕ್ರಿಕೆಟರ್ ತಮ್ಮ 21 ವರ್ಷಗಳ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ ಒಂದೇ ಒಂದು ನೋ ಬಾಲ್ ಎಸೆಯದೆಯೇ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದಾರೆ ಎಂಬ ವಿಷಯ ನಿಮಗೆ ಗೊತ್ತಾ?
ಉದ್ದೇಶಪೂರ್ವಕವಾಗಿ ನೋಬಾಲ್ ಅನ್ನು ಯಾರೂ ಎಸೆಯುವುದಿಲ್ಲ. ಕೆಲ ಬೌಲರ್ಗಳಂತೂ ಹೆಚ್ಚಾಗಿ ನೋ ಬಾಲ್ಗಳನ್ನು ಎಸೆಯುವುದೇ ಕೆಲಸ ಮಾಡಿಕೊಂಡಿರುತ್ತಾರೆ. ಕೆಲವೊಮ್ಮೆ ತಪ್ಪಾಗಿ ಸಂಭವಿಸಿದರೆ, ಕೆಲವರು ವಿಕೆಟ್ ಪಡೆದಿದ್ದರ ಎಸೆತವನ್ನು ನೋ-ಬಾಲ್ ಹಾಕಿರ್ತಾರೆ. ಇಂತಹ ತಪ್ಪುಗಳಿಂದಾಗಿ ತಂಡಗಳು ಹೆಚ್ಚಾಗಿ ಪಂದ್ಯಗಳನ್ನು ಸೋಲುತ್ತವೆ. ಆದರೀಗ ತನ್ನ ವೃತ್ತಿಜೀವನದಲ್ಲಿ ಒಂದೇ ಒಂದು ನೋ ಬಾಲ್ ಎಸೆಯದ ಬೌಲರ್ ಬಗ್ಗೆ ತಿಳಿದುಕೊಳ್ಳೋಣ.
ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ 21 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಒಂದೇ ಒಂದು ನೋ ಬಾಲ್ ಎಸೆಯದ ಬೌಲರ್ ಇದ್ದಾರೆ. ಲೆಜೆಂಡರಿ ವೇಗದ ಬೌಲಿಂಗ್ ಆಲ್ರೌಂಡರ್ ಮತ್ತು ಮಾಜಿ ನಾಯಕ ಇಮ್ರಾನ್ ಖಾನ್ ತಮ್ಮ 21 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಒಂದೇ ಒಂದು ನೋ ಬಾಲ್ ಅನ್ನು ಬೌಲ್ ಮಾಡಿಲ್ಲ. ಇಮ್ರಾನ್ ಖಾನ್ ಟೆಸ್ಟ್ ಕ್ರಿಕೆಟ್ನಲ್ಲಿ 362 ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಆದಾಗ್ಯೂ, ಅವರು ಎಂದಿಗೂ ನೋ ಬಾಲ್ ಬೌಲ್ ಮಾಡಲಿಲ್ಲ.
88 ಟೆಸ್ಟ್ ಪಂದ್ಯಗಳಲ್ಲಿ ಇಮ್ರಾನ್ ಕಣಕ್ಕೆ
ಇಮ್ರಾನ್ ನಾಯಕತ್ವದಲ್ಲಿ ಇಮ್ರಾನ್ ಖಾನ್ ಪಾಕಿಸ್ತಾನ ತಂಡಕ್ಕೆ 1992ರ ಏಕದಿನ ವಿಶ್ವಕಪ್ ಗೆದ್ದುಕೊಟ್ಟಿದ್ದರು. ಮಾಜಿ ನಾಯಕ ಇಮ್ರಾನ್ ಖಾನ್ ಅಪಾಯಕಾರಿ ಬೌಲಿಂಗ್ ಮತ್ತು ಸ್ಫೋಟಕ ಬ್ಯಾಟಿಂಗ್ ಎರಡರಲ್ಲೂ ನಿಪುಣರಾಗಿದ್ದರು. ಅವರ ಮಾರಕ ಬೌಲಿಂಗ್ ದಾಳಿಯಿಂದಾಗಿ ಎದುರಾಳಿ ಬ್ಯಾಟ್ಸ್ಮನ್ಗಳಿಗೆ ದುಃಸ್ವಪ್ನವಾಗಿದ್ದರು. ಇಮ್ರಾನ್ ಖಾನ್ ಪಾಕಿಸ್ತಾನ ಪರ 88 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 3807 ರನ್ ಗಳಿಸಿದ್ದಾರೆ. 175 ಏಕದಿನ ಪಂದ್ಯಗಳಲ್ಲಿ 3709 ರನ್ ಗಳಿಸಿದ್ದಾರೆ. ಟೆಸ್ಟ್ನಲ್ಲಿ 362 ವಿಕೆಟ್ ಮತ್ತು ಏಕದಿನ ಕ್ರಿಕೆಟ್ನಲ್ಲಿ 182 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
18,644 ಎಸೆತಗಳನ್ನು ಎಸೆದಿದ್ದಾರೆ!
ಪಾಕಿಸ್ತಾನ ಪರ ಇಮ್ರಾನ್ ಖಾನ್ ಟೆಸ್ಟ್ ಪಂದ್ಯಗಳಲ್ಲಿ 18,644 ಎಸೆತಗಳನ್ನು ಎಸೆದಿದ್ದಾರೆ. ಆದರೆ, ಒಂದೇ ಒಂದು ನೋ ಬಾಲ್ ಕೂಡ ಎಸೆಯಲಿಲ್ಲ. ಈ ದಾಖಲೆಯು ಇಮ್ರಾನ್ ಖಾನ್ ಬೌಲಿಂಗ್ನಲ್ಲಿ ಎಷ್ಟು ಶಿಸ್ತುಬದ್ಧರಾಗಿದ್ದರು ಎಂಬುದನ್ನು ನಿರೂಪಿಸುತ್ತದೆ. ಅಪರೂಪದ ವಿಶ್ವದಾಖಲೆ ಬರೆದಿರುವ ಈ ಆಟಗಾರ ಪ್ರಸ್ತುತ ಜೈಲಿನಲ್ಲಿದ್ದಾರೆ. ವಿಶ್ವಕಪ್ ವಿಜೇತ ನಾಯಕನಿಗೆ ಭೂ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ನ್ಯಾಯಾಲಯವು 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.