ಕನ್ನಡ ಸುದ್ದಿ  /  Cricket  /  Up Warriorz Have Won The Toss And Have Opted To Field Against Rcb In Wpl 2024 Royal Challengers Bangalore Playing Xi Prs

ಬಲಿಷ್ಠ ಆಟಗಾರ್ತಿಯರನ್ನೇ ಕಣಕ್ಕಿಳಿಸಿದ ಆರ್​​ಸಿಬಿ; ಟಾಸ್ ವೇಳೆ ಸ್ಮೃತಿ ಮಂಧಾನ ಮಾತಾಡಲು ಬಿಡದ ಅಭಿಮಾನಿಗಳು

WPL 2024 : ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಬಲಿಷ್ಠ ಆಟಗಾರ್ತಿಯರನ್ನು ಕಣಕ್ಕಿಳಿಸಿದ ಆರ್​​ಸಿಬಿ
ಬಲಿಷ್ಠ ಆಟಗಾರ್ತಿಯರನ್ನು ಕಣಕ್ಕಿಳಿಸಿದ ಆರ್​​ಸಿಬಿ

ಎರಡನೇ ಆವೃತ್ತಿಯ ಡಬ್ಲ್ಯುಪಿಎಲ್‌ಗೆ (Women's Premier League 2024) ಫೆಬ್ರವರಿ 23ರ ಅದ್ಧೂರಿ ಚಾಲನೆ ಸಿಕ್ಕಿದೆ. ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಗೆದ್ದು ಬೀಗಿದೆ. ಟೂರ್ನಿಯ ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಟಾಸ್ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬ್ಯಾಟಿಂಗ್ ನಡೆಸಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆತಿಥ್ಯ ವಹಿಸುತ್ತಿದೆ.

ಕಳೆದ ಆವೃತ್ತಿಯಲ್ಲಿ ಬಲಿಷ್ಠ ತಂಡವಿದ್ದರೂ ಕಳಪೆ ಪ್ರದರ್ಶನ ನೀಡಿದ್ದ ಸ್ಮೃತಿ ಮಂಧಾನ ಬಳಗ 2ನೇ ಆವೃತ್ತಿಯಲ್ಲಿ ದಿಟ್ಟ ಹೋರಾಟ ನಡೆಸುವ ವಿಶ್ವಾಸದಲ್ಲಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ಆಡಿದ ಒಟ್ಟು ಎಂಟು ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಆರ್‌ಸಿಬಿ ಗೆದ್ದಿತ್ತು. ನಾಕೌಟ್‌ ಹಂತಕ್ಕೆ ಲಗ್ಗೆ ಹಾಕಲು ಸಾಧ್ಯವಾಗದೆ ಟೂರ್ನಿಯಿಂದ ಹೊರಬಿದ್ದಿತ್ತು.

ಸ್ಮೃತಿ ಮಾತಾಡಲು ಬಿಡದ ಫ್ಯಾನ್ಸ್

ಯುಪಿ ವಾರಿಯರ್ಸ್ ತಂಡದ ನಾಯಕಿ ಅಲಿಸಾ ಹೀಲಿ ಟಾಸ್ ಗೆದ್ದು ಮಾತನಾಡಿದ ಬಳಿಕ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಮಾತನಾಡಲು ಬಂದರು. ಆದರೆ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳು ಆರ್​​ಸಿಬಿ… ಆರ್​ಸಿಬಿ… ಹೋ ಎಂದು ಇಡೀ ಸ್ಟೇಡಿಯಂ ರಿಸೌಂಡ್ ಬರುವಂತೆ ಕೂಗಿದರು. ಈ ಸೌಂಡ್​ಗೆ ಸ್ಮೃತಿ ಮಾತನಾಡಲು ಸಾಧ್ಯವಾಗಲಿಲ್ಲ. ಸ್ಮೃತಿ ಮಂಧಾನ ಸಹ ಆರ್​ಸಿಬಿ ಅಭಿಮಾನಿಗಳ ಪ್ರೀತಿಯನ್ನು ಹೆಚ್ಚು ಖುಷಿಪಟ್ಟರು.

ಆರ್​ಸಿಬಿಗೆ ತವರಿನ ಮೈದಾನ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚಿನ್ನಸ್ವಾಮಿ ತವರು ಮೈದಾನವಾಗಿದೆ. ಕಳೆದ ಬಾರಿ ಮುಂಬೈನಲ್ಲಿ ಪಂದ್ಯಗಳು ನಡೆದಿದ್ದ ಕಾರಣ ಆರ್​ಸಿಬಿ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರು. ಸದ್ಯ ತವರಿನ ಮೈದಾನದಲ್ಲಿ ಆಡುತ್ತಿರುವ ಬೆಂಗಳೂರಿಗೆ ಸಿಕ್ಕಾಪಟ್ಟೆ ಬೆಂಬಲ ದೊರೆಯುತ್ತಿದೆ. ಈಗಾಗಲೇ ಮೈದಾನವು ಸಹ ಬಹುತೇಕ ಪೂರ್ಣಗೊಂಡಿದೆ. ಹಾಗಾಗಿ ಹೋಮ್​ ಸ್ಟೇಡಿಯಂನಲ್ಲಿ ಅಭಿಮಾನಿಗಳ ಮುಂದೆ ಆರ್​​ಸಿಬಿ ಅಬ್ಬರಿಸುವ ನಿರೀಕ್ಷೆ ಇದೆ.

ಬಲಿಷ್ಠ ಆಟಗಾರ್ತಿಯರನ್ನು ಕಣಕ್ಕಿಳಿದ ಆರ್​ಸಿಬಿ

ಆಡುವ 11ರ ಬಳಗದಲ್ಲಿ ಬಲಿಷ್ಠ ಆಟಗಾರ್ತಿಯರ ದಂಡೇ ಇದೆ. ಹೆಚ್ಚಿನದಾಗಿ ಫೂರ್ಣಕಾಲಿಕ ಆಲ್‌ರೌಂಡರ್​​ಗಳಿಗೆ ಮಣೆ ಹಾಕಲಾಗಿದೆ. ಸ್ಮತಿ ಮಂಧಾನ ಜೊತೆಗೆ ಕಳೆದ ಬಾರಿ ಅಬ್ಬರಿಸಿದ್ದ ಎಲ್ಲಿಸ್ ಪೆರ್ರಿ ಹಾಗೂ ಸೋಫಿ ಡಿವೈನ್ ಅವಕಾಶ ಪಡೆದಿದ್ದಾರೆ. ಹಾಗೆಯೇ ಸಬ್ಬಿನೇನಿ ಮೇಘನಾ, ರಿಚಾ ಘೋಷ್, ಸೋಫಿ ಮೊಲಿನಕ್ಸ್, ಜಾರ್ಜಿಯಾ ವೆರ್ಹ್ಯಾಮ್ ಸಹ ಬ್ಯಾಟಿಂಗ್​ ವಿಭಾಗಕ್ಕೆ ಶಕ್ತಿ ತುಂಬಲಿದ್ದಾರೆ. ಇನ್ನು ಶ್ರೇಯಾಂಕಾ ಪಾಟೀಲ್, ಸಿಮ್ರಾನ್ ಬಹದ್ದೂರ್, ಆಶಾ ಶೋಭನಾ, ರೇಣುಕಾ ಸಿಂಗ್ ಬೌಲಿಂಗ್​ ವಿಭಾಗದ ಅಸ್ತ್ರಗಳಾಗಿದ್ದಾರೆ. ತಂಡದಲ್ಲಿ ಬಹುತೇಕರು ಆಲ್​ರೌಂಡರ್​ಗಳೇ ತುಂಬಿರುವುದು ವಿಶೇಷ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ

ಸೋಫಿ ಡಿವೈನ್, ಸ್ಮೃತಿ ಮಂಧಾನ (ನಾಯಕಿ), ಎಲ್ಲಿಸ್ ಪೆರ್ರಿ, ಸಬ್ಬಿನೇನಿ ಮೇಘನಾ, ರಿಚಾ ಘೋಷ್ (ವಿಕೆಟ್‌ ಕೀಪರ್), ಸೋಫಿ ಮೊಲಿನಕ್ಸ್, ಜಾರ್ಜಿಯಾ ವೆರ್ಹ್ಯಾಮ್, ಸಿಮ್ರಾನ್ ಬಹದ್ದೂರ್, ಶ್ರೇಯಾಂಕಾ ಪಾಟೀಲ್, ಆಶಾ ಶೋಭನಾ, ರೇಣುಕಾ ಸಿಂಗ್.

ಯುಪಿ ವಾರಿಯರ್ಜ್ ಆಡುವ ಬಳಗ

ಅಲಿಸ್ಸಾ ಹೀಲಿ (ನಾಯಕಿ, ವಿಕೆಟ್ ಕೀಪರ್), ಸೋಫಿ ಎಕ್ಲೆಸ್ಟೋನ್, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್, ಕಿರಣ್ ನವಗಿರೆ, ವೃಂದಾ ದಿನೇಶ್, ಪೂನಂ ಖೇಮ್ನಾರ್, ಶ್ವೇತಾ ಸೆಹ್ರಾವತ್, ಗ್ರೇಸ್ ಹ್ಯಾರಿಸ್, ಸೈಮಾ ಥಾಕರ್.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point