ಎಂತಹ ಗುಣ, ಎಂತಹ ಸಂಸ್ಕಾರ; ತಮ್ಮ ಆರಾಧ್ಯ ದೈವ ಎಂಎಸ್ ಧೋನಿ ಪಾದಮುಟ್ಟಿ ನಮಸ್ಕರಿಸಿದ ವೈಭವ್ ಸೂರ್ಯವಂಶಿ, ವಿಡಿಯೋ
ಕನ್ನಡ ಸುದ್ದಿ  /  ಕ್ರಿಕೆಟ್  /  ಎಂತಹ ಗುಣ, ಎಂತಹ ಸಂಸ್ಕಾರ; ತಮ್ಮ ಆರಾಧ್ಯ ದೈವ ಎಂಎಸ್ ಧೋನಿ ಪಾದಮುಟ್ಟಿ ನಮಸ್ಕರಿಸಿದ ವೈಭವ್ ಸೂರ್ಯವಂಶಿ, ವಿಡಿಯೋ

ಎಂತಹ ಗುಣ, ಎಂತಹ ಸಂಸ್ಕಾರ; ತಮ್ಮ ಆರಾಧ್ಯ ದೈವ ಎಂಎಸ್ ಧೋನಿ ಪಾದಮುಟ್ಟಿ ನಮಸ್ಕರಿಸಿದ ವೈಭವ್ ಸೂರ್ಯವಂಶಿ, ವಿಡಿಯೋ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಮ್ಯಾಚ್ ವಿನ್ನಿಂಗ್ ಅರ್ಧಶತಕ ಬಾರಿಸಿದ 14 ವರ್ಷದ ವೈಭವ್ ಸೂರ್ಯವಂಶಿ ಅವರು ಪಂದ್ಯ ಮುಗಿದ ನಂತರ ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ವಿಡಿಯೋ ವೈರಲ್ ಆಗುತ್ತಿದೆ.

ಎಂತಹ ಗುಣ, ಎಂತಹ ಸಂಸ್ಕಾರ; ತಮ್ಮ ಆರಾಧ್ಯ ದೈವ ಎಂಎಸ್ ಧೋನಿ ಪಾದಮುಟ್ಟಿ ನಮಸ್ಕರಿಸಿದ ವೈಭವ್ ಸೂರ್ಯವಂಶಿ, ವಿಡಿಯೋ
ಎಂತಹ ಗುಣ, ಎಂತಹ ಸಂಸ್ಕಾರ; ತಮ್ಮ ಆರಾಧ್ಯ ದೈವ ಎಂಎಸ್ ಧೋನಿ ಪಾದಮುಟ್ಟಿ ನಮಸ್ಕರಿಸಿದ ವೈಭವ್ ಸೂರ್ಯವಂಶಿ, ವಿಡಿಯೋ

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ರಾಜಸ್ಥಾನ್ ರಾಯಲ್ಸ್ 6 ವಿಕೆಟ್​ಗಳ ಭರ್ಜರಿ ಗೆಲುವಿನೊಂದಿಗೆ ಅಭಿಯಾನ ಮುಗಿಸಿದೆ. ಈ ಗೆಲುವಿನೊಂದಿಗೆ 10ನೇ ಸ್ಥಾನ ತಪ್ಪಿಸಿಕೊಂಡಿತು. ಕಳೆದ 6 ಪಂದ್ಯಗಳಲ್ಲಿ ಬಹುತೇಕ ಗೆಲ್ಲುವ ಪಂದ್ಯಗಳನ್ನು ಕೈ ಚೆಲ್ಲಿದ್ದ ಆರ್​ಆರ್​ ಕೊನೆಗೂ ಜಯಿಸಿತು. ಆಡಿದ 14 ಪಂದ್ಯಗಳಲ್ಲಿ 4 ಗೆಲುವು, 10 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದೆ.

ಪಂದ್ಯದ ಸೋಲು-ಗೆಲುವಿನ ನಡುವೆ ಎಲ್ಲರ ಗಮನ ಸೆಳೆದಿದ್ದು 14 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಸಿಎಸ್​ಕೆ ನಾಯಕ ಎಂಎಸ್ ಧೋನಿ ಪಾದ ಮುಟ್ಟಿ ನಮಸ್ಕರಿಸಿದ್ದು ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ದೆಹಲಿ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್​ಕೆ ನಿಗದಿತ 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಆಯುಷ್ ಮಾತ್ರೆ (43), ಡೆವಾಲ್ಡ್ ಬ್ರೆವಿಸ್ (42), ಶಿವಂ ದುಬೆ (39) ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಚೆನ್ನೈ ಉತ್ತಮ ಮೊತ್ತ ಪೇರಿಸಿತು.

ಕಾಲುಮುಟ್ಟಿ ನಮಸ್ಕರಿಸಿದ ವೈಭವ್

ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 17.1 ಓವರ್​ಗಳಲ್ಲೇ ಗೆದ್ದು ಬೀಗಿತು. ವೈಭವ್ (57) ಆರ್ಭಟಕ್ಕೆ ಬೆದರಿದ ಧೋನಿ ತಂಡವು ಸೋಲಿಗೆ ಶರಣಾಯಿತು. ಯಶಸ್ವಿ ಜೈಸ್ವಾಲ್ (36) ಮತ್ತು ಸಂಜು ಸ್ಯಾಮ್ಸನ್ (41) ಕೂಡ ಅದ್ಭುತ ಕಾಣಿಕೆ ನೀಡಿದರು. ಪರಿಣಾಮ ಸುಲಭ ಚೇಸಿಂಗ್ ನಡೆಸಲು ಸಾಧ್ಯವಾಯಿತು. ಆದರೆ ಪಂದ್ಯದ ನಂತರ 33 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಿತ 57 ರನ್ ಗಳಿಸಿದ ವೈಭವ್ ಅವರು ಉಭಯ ತಂಡಗಳ ಆಟಗಾರರೊಂದಿಗೆ ಶೇಕ್ ಹ್ಯಾಂಡ್ ಮಾಡುವ ವೇಳೆ ಎಂಎಸ್ ಧೋನಿ ಪಾದ ಮುಟ್ಟಿ ನಮಸ್ಕರಿಸಿದರು. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರಾಜಸ್ಥಾನ್ ರಾಯಲ್ಸ್ ಪಂದ್ಯ ಗೆದ್ದ ನಂತರ, ಎರಡೂ ತಂಡಗಳ ಆಟಗಾರರು ಮತ್ತು ಸಿಬ್ಬಂದಿ ಪರಸ್ಪರ ಕೈಕುಲುಕುತ್ತಿದ್ದರು. ಈ ಸಮಯದಲ್ಲಿ ವೈಭವ್ ತಮ್ಮ ಆರಾಧ್ಯ ದೈವ ಎಂಎಸ್ ಧೋನಿ ಅವರಿಗೆ ಶೇಕ್ ಹ್ಯಾಂಡ್ ಮಾಡಿ ಭೇಟಿಯಾದರು. ಧೋನಿ ಕಾಣಿಸಿಕೊಂಡ ಕೂಡಲೇ 14 ವರ್ಷದ ವೈಭವ್ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದರು. ಧೋನಿ ಕೂಡ ವೈಭವ್​ಗೆ ಏನನ್ನೋ ಹೇಳಿದರು. ಬಳಿಕ ಉಭಯ ಆಟಗಾರರು ಮುಂದೆ ಸಾಗಿದರು. ವೈಭವ್ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಕಾಲಿಗೆ ನಮಸ್ಕರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಐಪಿಎಲ್​ನ ಕಿರಿಯ, ಹಿರಿಯ ಆಟಗಾರರಿವರು!

ಪ್ರಸಕ್ತ ಐಪಿಎಲ್​ನಲ್ಲಿ ವೈಭವ್ ಸೂರ್ಯವಂಶಿ ಮತ್ತು ಎಂಎಸ್ ಧೋನಿ ಕ್ರಮವಾಗಿ ಅತ್ಯಂತ ಕಿರಿಯ ಮತ್ತು ಹಿರಿಯ ಆಟಗಾರರು. ಐಪಿಎಲ್​ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುವ ವೈಭವ್, ಈ ಆವೃತ್ತಿಯ ಹಿರಿಯ ಆಟಗಾರನ ಆಶೀರ್ವಾದ ಪಡೆದರು. ಇದೇ ಮೊದಲ ಬಾರಿಗೆ ಐಪಿಎಲ್ ಆಡಿದ ವೈಭವ್ ಕಣಕ್ಕಿಳಿದ 7 ಪಂದ್ಯಗಳಲ್ಲಿ 1 ಶತಕ, 1 ಅರ್ಧಶತಕ ಸಹಿತ 252 ರನ್ ಗಳಿಸಿದ್ದಾರೆ. ಇನ್ನು ಧೋನಿ ಅವರು 13 ಪಂದ್ಯಗಳಲ್ಲಿ 196 ರನ್ ಗಳಿಸಿದ್ದಾರೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.