ಕನ್ನಡ ಸುದ್ದಿ  /  Cricket  /  Video Of Yashasvi Jaiswal Goes Viral Saying Darr Lagta Hai Unse On Captain Rohit Sharma India Vs England Test Series Jra

‌Video: ಅವರಂದ್ರೆ ನನಗೆ ಭಯ; ರೋಹಿತ್‌ ಶರ್ಮಾ ಕುರಿತು ಅಭಿಮಾನಿಗೆ ಅಚ್ಚರಿಯ ಪ್ರತಿಕ್ರಿಯ ನೀಡಿದ ಯಶಸ್ವಿ ಜೈಸ್ವಾಲ್

Yashasvi Jaiswal: ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಕುರಿತು ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಮಾತನಾಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹಿಟ್‌ಮ್ಯಾನ್‌ ಅಂದ್ರೆ ನಂಗೆ ತುಂಬಾ ಭಯ ಎಂದು ಅವರು ಹೇಳಿದ್ದಾರೆ.

ರೋಹಿತ್‌ ಶರ್ಮಾ ಕುರಿತು ಅಭಿಮಾನಿಗೆ ಅಚ್ಚರಿಯ ಪ್ರತಿಕ್ರಿಯ ನೀಡಿದ ಯಶಸ್ವಿ ಜೈಸ್ವಾಲ್
ರೋಹಿತ್‌ ಶರ್ಮಾ ಕುರಿತು ಅಭಿಮಾನಿಗೆ ಅಚ್ಚರಿಯ ಪ್ರತಿಕ್ರಿಯ ನೀಡಿದ ಯಶಸ್ವಿ ಜೈಸ್ವಾಲ್ (REUTERS)

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ (India vs England) ಸರಣಿಯಲ್ಲಿ, ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ (Yashasvi Jaiswal) ಸ್ಫೋಟಕ ಪ್ರದರ್ಶನ ನೀಡುತ್ತಿದ್ದಾರೆ. ಎರಡು ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಇವರೊಂದಿಗೆ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ, ಆರಂಭಿಕರಾಗಿ ಯುವ ಆಟಗಾರನಿಗೆ ಸಲಹೆ ನೀಡುತ್ತಿದ್ದಾರೆ. ಜೈಸ್ವಾಲ್ ಹಾಗೂ ರೋಹಿತ್ ಶರ್ಮಾ ಜೋಡಿಯು, ಸದ್ಯ ಸ್ಫೋಟಕ ಜೋಡಿಯಾಗಿ ಎದುರಾಳಿಗಳನ್ನು ಕಾಡುತ್ತಿದ್ದಾರೆ.

ಕಳೆದ ವರ್ಷ ಭಾರತ ಕ್ರಿಕೆಟ್‌ ತಂಡಕ್ಕೆ ಪದಾರ್ಪಣೆ ಮಾಡಿದ ಬಳಿಕ, ವಿಶ್ವ ಕ್ರಿಕೆಟ್‌ನಲ್ಲಿ ಜೈಸ್ವಾಲ್‌ ಭರವಸೆಯ ಆರಂಭಿಕ ಆಟಗಾರನಾಗಿ ಅಬ್ಬರಿಸುತ್ತಿದ್ದಾರೆ. ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ಪದಾರ್ಪಣೆ ಮಾಡಿದ ಜೈಸ್ವಾಲ್, ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಸ್ಮರಣೀಯ ಇನ್ನಿಂಗ್ಸ್‌ ಆಡಿದರು. ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ಭಾರತವು 2-1 ಅಂತರದಲ್ಲಿ ಮುನ್ನಡೆ ಸಾಧಿಸುವಲ್ಲಿ ಈ ಜೋಡಿಯ ಪ್ರದರ್ಶನ ಪ್ರಮುಖ ಪಾತ್ರ ವಹಿಸಿದೆ.

ಇದನ್ನೂ ಓದಿ | ಬೌಲಿಂಗ್-ಬ್ಯಾಟಿಂಗ್ ನಡೆಸದೆಯೇ ವಿಶ್ವದಾಖಲೆ ನಿರ್ಮಿಸಿದ ಜೇಮ್ಸ್ ಆಂಡರ್ಸನ್; ವಿವಿಯನ್ ರಿಚರ್ಡ್ಸ್ ಹಿಂದಿಕ್ಕಿದ ವೇಗಿ

ಬೆನ್‌ ಸ್ಟೋಕ್ಸ್‌ ಬಳಗದ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಉಭಯ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಜೈಸ್ವಾಲ್ ಇದುವರೆಗಿನ ಮೂರು ಪಂದ್ಯಗಳಲ್ಲಿ 545 ರನ್ ಪೇರಿಸುವ ಮೂಲಕ ಸರಣಿಯಲ್ಲೇ ಹೆಚ್ಚು ರನ್‌ ಕಲೆ ಹಾಕಿದ ಬ್ಯಾಟರ್‌ ಆಗಿ ಹೊರಹೊಮ್ಮಿದ್ದಾರೆ.

ರೋಹಿತ್ ಶರ್ಮಾ ಕಂಡ್ರೆ ಯಶಸ್ವಿ ಜೈಸ್ವಾಲ್‌ಗೆ ಭಯ ಅಂತೆ

ರೋಹಿತ್‌ ಶರ್ಮಾ ಕುರಿತು ಯಶಸ್ವಿ ಜೈಸ್ವಾಲ್‌ ಮಾತನಾಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಡ್ರೆಸ್ಸಿಂಗ್ ರೂಮ್‌ ಬಳಿ ನಿಂತಿದ್ದ ಜೈಸ್ವಾಲ್‌ ಬಳಿ ಅಭಿಮಾನಿಯೊಬ್ಬರು ಮಾತನಾಡಿಸಿದ್ದಾರೆ. ಈ ವೇಳೆ ನಿಮ್ಮ ಪಕ್ಕದಲ್ಲಿರುವವರನ್ನು ಕೂಡಾ ತೋರಿಸಿ ಎಂದು ಆಟೋಗ್ರಾಫ್‌ಗಾಗಿ ಅಭಿಮಾನಿ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಜೈಸ್ವಾಲ್, ಅವರಂದ್ರೆ ನನಗೆ ಭಯ ಎಂದು ಹೇಳಿದ್ದಾರೆ. “ಮೆರೆಕೊ ಭಿ ಡರ್ ಲಗ್ತಾ ಹೈ,” ಎಂದು ಜೈಸ್ವಾಲ್ ಹೇಳಿದ್ದಾರೆ. ಇದನ್ನು ಕೇಳಿದ ಅಭಿಮಾನಿಯು, ನಿಮಗೂ ಭಯ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.

2024ರ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ರೋಹಿತ್ ಶರ್ಮಾ ಹಾಗೂ ಜೈಸ್ವಾಲ್ ಜೋಡಿಯು ಭಾರತದ ಪರ ಇನ್ನಿಂಗ್ಸ್‌ ಓಪನ್‌ ಮಾಡುವ ಸಾಧ್ಯತೆ ಇದೆ. ಸದ್ಯ ಆಟಗಾರರು ಟೆಸ್ಟ್‌ ಸರಣಿಯಲ್ಲಿ ಆಡುತ್ತಿದ್ದು, ಆ ಬಳಿಕ ಐಪಿಎಲ್‌ ಆಡಲಿದ್ದಾರೆ. ಅದಾದ ಬೆನ್ನಲ್ಲೇ ಟಿ20 ವಿಶ್ವಕಪ್‌ ಪಂದ್ಯಾವಳಿ ನಡೆಯಲಿದ್ದು, ಯುಎಸ್‌ಎ ಹಾಗೂ ವೆಸ್ಟ್‌ ಇಂಡೀಸ್ ಪಂದ್ಯಾವಳಿಗೆ ಆತಿಥ್ಯ ವಹಿಸಲಿದೆ.‌

ಇದನ್ನೂ ಓದಿ | ‌IND vs ENG: ರೂಟ್‌-ರಾಬಿನ್ಸನ್‌ ಆಕರ್ಷಕ ಜೊತೆಯಾಟ; ಮೊದಲ ಇನ್ನಿಂಗ್ಸ್‌ನಲ್ಲಿ 353 ರನ್‌ ಗಳಿಸಿ ಇಂಗ್ಲೆಂಡ್‌ ಆಲೌಟ್

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point