ನೀನು ನಿಜವಾಗಲೂ ‘ಮಲಪ್ಪುರಂ ಗೋಲ್ಡ್’; ನೀತಾ ಅಂಬಾನಿ ಪಾದ ಮುಟ್ಟಿ ಆಶೀರ್ವಾದ ಪಡೆದ ವಿಘ್ನೇಶ್ ಪುತ್ತೂರು, VIDEO
ಕನ್ನಡ ಸುದ್ದಿ  /  ಕ್ರಿಕೆಟ್  /  ನೀನು ನಿಜವಾಗಲೂ ‘ಮಲಪ್ಪುರಂ ಗೋಲ್ಡ್’; ನೀತಾ ಅಂಬಾನಿ ಪಾದ ಮುಟ್ಟಿ ಆಶೀರ್ವಾದ ಪಡೆದ ವಿಘ್ನೇಶ್ ಪುತ್ತೂರು, Video

ನೀನು ನಿಜವಾಗಲೂ ‘ಮಲಪ್ಪುರಂ ಗೋಲ್ಡ್’; ನೀತಾ ಅಂಬಾನಿ ಪಾದ ಮುಟ್ಟಿ ಆಶೀರ್ವಾದ ಪಡೆದ ವಿಘ್ನೇಶ್ ಪುತ್ತೂರು, VIDEO

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋತರೂ ತನ್ನ ತಂಡದ ಪರ ಪರಿಣಾಮಕಾರಿ ಬೌಲಿಂಗ್ ಮಾಡಿದ ವಿಘ್ನೇಶ್ ಪುತ್ತೂರು ಅವರಿಗೆ ಎಂಐ ಡ್ರೆಸ್ಸಿಂಗ್ ರೂಮ್​ನಲ್ಲಿ 'ಅತ್ಯುತ್ತಮ ಬೌಲರ್' ಪ್ರಶಸ್ತಿ ನೀಡಲಾಯಿತು.

ಈತ ನಿಜವಾಗಲೂ ‘ಮಲಪ್ಪುರಂ ಗೋಲ್ಡ್’; ನೀತಾ ಅಂಬಾನಿ ಪಾದ ಮುಟ್ಟಿ ಆಶೀರ್ವಾದ ಪಡೆದ ವಿಘ್ನೇಶ್ ಪುತ್ತೂರು
ಈತ ನಿಜವಾಗಲೂ ‘ಮಲಪ್ಪುರಂ ಗೋಲ್ಡ್’; ನೀತಾ ಅಂಬಾನಿ ಪಾದ ಮುಟ್ಟಿ ಆಶೀರ್ವಾದ ಪಡೆದ ವಿಘ್ನೇಶ್ ಪುತ್ತೂರು

ಐಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಸೋಲಿನೊಂದಿಗೆ ತನ್ನ ಅಭಿಯಾನ ಪ್ರಾರಂಭಿಸಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ 4 ವಿಕೆಟ್​​ಗಳಿಂದ ಸೋಲನುಭವಿಸಿರುವ ಮುಂಬೈ, ತನ್ನ 2ನೇ ಪಂದ್ಯವನ್ನು ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಸೆಣಸಲಿದೆ. ಮುಂಬೈ ಭಾನುವಾರ (ಮಾರ್ಚ್ 23) ಚೆಪಾಕ್​ನಲ್ಲಿ ಸೋತಿರಬಹುದು, ಆದರೆ ಯುವ ಸ್ಪಿನ್ನರ್ ವಿಘ್ನೇಶ್ ಪುತ್ತೂರು (Vignesh Puthur) ತಮ್ಮ ಬೌಲಿಂಗ್​ನಿಂದ ಎಲ್ಲರ ಹೃದಯ ಗೆದ್ದಿದ್ದಾರೆ. ಇನ್ನೂ ದೇಶೀಯ ಕ್ರಿಕೆಟ್ ಆಡದ ಈತ ನಿಜವಾಗಲೂ ‘ಮಲಪ್ಪುರಂ ಗೋಲ್ಡ್’​! ಅದಕ್ಕೆ ಕಾರಣ ಇಲ್ಲಿದೆ.

ಕೇರಳದ ಮಲಪ್ಪುರಂನ 24 ವರ್ಷದ ವಿಘ್ನೇಶ್, ಮುಂಬೈ ಇಂಡಿಯನ್ಸ್ ಪರ ಕಣಕ್ಕೆ ಇಳಿಯುವುದರೊಂದಿಗೆ ಐಪಿಎಲ್​ಗೆ ಇದೇ ಮೊದಲ ಬಾರಿಗೆ ಪದಾರ್ಪಣೆ ಮಾಡಿದರು. 4 ಓವರ್ಗಳಲ್ಲಿ 32 ರನ್​ಗೆ 3 ನಿರ್ಣಾಯಕ ವಿಕೆಟ್​ ಪಡೆದರೂ ಗೆಲುವು ಮುಂಬೈಗೆ ಸಿಗಲಿಲ್ಲ. ಸಿಎಸ್​ಕೆ ನಾಯಕ ಋತುರಾಜ್ ಗಾಯಕ್ವಾಡ್ (53), ಶಿವಂ ದುಬೆ (9) ಮತ್ತು ದೀಪಕ್ ಹೂಡಾ (3) ಪೆವಿಲಿಯನ್​ಗೆ ಕಳುಹಿಸುವಲ್ಲಿ ಪುತ್ತೂರು ಪ್ರಮುಖ ಪಾತ್ರವಹಿಸಿದರು. 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಅವಕಾಶ ಗಿಟ್ಟಿಸಿಕೊಂಡು ಇಂಪ್ಯಾಕ್ಟ್​ಫುಲ್ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದರು.

ಪಾದ ಮುಟ್ಟಿ ನಮಸ್ಕರಿಸಿದ ವಿಘ್ನೇಶ್

ಒಂದು ಹಂತದಲ್ಲಿ ಸಿಎಸ್​ಗೆ 156 ರನ್ ಗುರಿ ಸುಲಭವಾಗಿ ಕಂಡರೂ ಕೇರಳದ 24 ವರ್ಷದ ಬೌಲರ್ ವಿಘ್ನೇಶ್ ತಮ್ಮ ಹಾದಿಯಲ್ಲಿ ಮುಳ್ಳುಗಳನ್ನು ಹಾಕಿದರು. ಹೀಗಾಗಿ ಚೆನ್ನೈ ಕೇವಲ 5 ಎಸೆತಗಳು ಬಾಕಿ ಇರುವಾಗ ಗೆದ್ದು ಬೀಗಿತು. ವಿಘ್ನೇಶ್​ರರ ಅತ್ಯುತ್ತಮ ಪ್ರದರ್ಶನಕ್ಕಾಗಿ ಮುಂಬೈ ಇಂಡಿಯನ್ಸ್ ಡ್ರೆಸ್ಸಿಂಗ್ ರೂಮ್​ನಲ್ಲಿ 'ಅತ್ಯುತ್ತಮ ಬೌಲರ್' ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ನಂತರ ವಿಘ್ನೇಶ್ ಮುಂಬೈ ಇಂಡಿಯನ್ಸ್ ಮಾಲೀಕರಾದ ನೀತಾ ಅಂಬಾನಿ ಅವರ ಪಾದ ಮುಟ್ಟಿ ತಮಗೆ ಅವಕಾಶ ನೀಡಿದ್ದಕ್ಕಾಗಿ ಫ್ರಾಂಚೈಸಿಗೆ ಧನ್ಯವಾದ ಅರ್ಪಿಸಿದರು. ಎಂಐ ಸೋಮವಾರ 'ಅತ್ಯುತ್ತಮ ಬೌಲರ್' ಪ್ರಶಸ್ತಿಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ನಿಜವಾಗಲೂ ‘ಮಲಪ್ಪುರಂ ಗೋಲ್ಡ್’ ಎಂದು ಕರೆಯುತ್ತಿದ್ದಾರೆ.

ಎಂಐ ಹಂಚಿಕೊಂಡ ವಿಡಿಯೋದಲ್ಲಿ ವಿಘ್ನೇಶ್, ಎಂಐ ಫ್ರಾಂಚೈಸಿ ನನಗೆ ಆಡಲು ಅವಕಾಶ ನೀಡಿತು. ನಾನು ಫ್ರಾಂಚೈಸಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಎಲ್ಲ ಆಟಗಾರರೊಂದಿಗೆ ಆಡುತ್ತೇನೆ ಎಂದು ನಾನು ನನ್ನ ಜೀವನದಲ್ಲಿ ಎಂದಿಗೂ ಯೋಚಿಸಿರಲಿಲ್ಲ. ನಾನು ತುಂಬಾ ಸಂತೋಷವಾಗಿದೆ. ತುಂಬಾ ಧನ್ಯವಾದಗಳು, ವಿಶೇಷವಾಗಿ ನಮ್ಮ ನಾಯಕ ಸೂರ್ಯ ಭಾಯ್ (ಸೂರ್ಯಕುಮಾರ್ ಯಾದವ್) ತುಂಬಾ ಬೆಂಬಲ ನೀಡಿದರು. ಅದಕ್ಕಾಗಿ ನಾನು ಹೆಚ್ಚು ಒತ್ತಡವನ್ನು ಅನುಭವಿಸಲಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಮುಂಬೈ ನಿಯಮಿತ ನಾಯಕ ಹಾರ್ದಿಕ್ ಪಾಂಡ್ಯ ಒಂದು ಪಂದ್ಯ ನಿಷೇಧ ಹೊಂದಿದ್ದ ಕಾರಣ ಚೆನ್ನೈ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದರು. ಹಾಗಾಗಿ ಸೂರ್ಯ ನಾಯಕತ್ವ ವಹಿಸಿದ್ದರು.

ಆಟೋ ಚಾಲಕನ ಮಗನ ವಿಘ್ನೇಶ್​

ಮುಂಬೈ ವಿಘ್ನೇಶ್ ಅವರನ್ನು 30 ಲಕ್ಷ ರೂ.ಗಳ ಮೂಲ ಬೆಲೆಗೆ ಖರೀದಿಸಿತ್ತು. ಅವರು ಇಲ್ಲಿಯವರೆಗೆ ಕೇರಳ ಸೀನಿಯರ್ ತಂಡಕ್ಕಾಗಿ ಯಾವುದೇ ಪಂದ್ಯವನ್ನು ಆಡಿಲ್ಲ. ಅವರು ಅಂಡರ್ -14 ಮತ್ತು ಅಂಡರ್ -19 ಮಟ್ಟದಲ್ಲಿ ರಾಜ್ಯಕ್ಕಾಗಿ ಆಡಿದ್ದಾರೆ. ಹೋರಾಟದ ಬೆಂಕಿಯಲ್ಲಿ ಉರಿಯುವ ಮೂಲಕ ವಿಘ್ನೇಶ್ ತನ್ನನ್ನು ತಾನು ಮರುಶೋಧಿಸಿಕೊಂಡಿದ್ದಾನೆ. ಅವರ ತಂದೆ ಆಟೋ ಚಾಲಕ. 11 ವರ್ಷ ವಯಸ್ಸಿನಲ್ಲೇ ಕ್ರಿಕೆಟ್‌ ಆಡಲು ಶುರುಮಾಡಿದಾತ ಇದೀಗ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾನೆ. ವಿಘ್ನೇಶ್ ಮಧ್ಯಮ ವೇಗ ಮತ್ತು ಸ್ಪಿನ್ ಬೌಲಿಂಗ್ ಮಾಡುತ್ತಿದ್ದರಂತೆ. ಆದರೆ ಸ್ಥಳೀಯ ಕ್ರಿಕೆಟಿಗರೊಬ್ಬರ ಸಲಹೆ ಮೇರೆಗೆ ಲೆಗ್ ಸ್ಪಿನ್ ಅಭ್ಯಾಸ ಆರಂಭವಾಯ್ತು. ನಂತರ ತ್ರಿಶೂರ್‌ಗೆ ತೆರಳಿ ಸೇಂಟ್ ಥಾಮಸ್ ಕಾಲೇಜಿನ ಪರ ಕೇರಳ ಕಾಲೇಜು ಪ್ರೀಮಿಯರ್ ಟಿ20 ಲೀಗ್‌ನಲ್ಲಿ ಪ್ರಮುಖ ಬೌಲರ್‌ ಆಗಿದ್ದರು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner