Vijay Hazare: ಮಹಾರಾಷ್ಟ್ರ ವಿರುದ್ಧ ವಿದರ್ಭ ತಂಡಕ್ಕೆ ಭರ್ಜರಿ ಗೆಲುವು, ಕನ್ನಡಿಗನ ಸಾರಥ್ಯದಲ್ಲಿ ಚೊಚ್ಚಲ ಫೈನಲ್ ಪ್ರವೇಶ
ಕನ್ನಡ ಸುದ್ದಿ  /  ಕ್ರಿಕೆಟ್  /  Vijay Hazare: ಮಹಾರಾಷ್ಟ್ರ ವಿರುದ್ಧ ವಿದರ್ಭ ತಂಡಕ್ಕೆ ಭರ್ಜರಿ ಗೆಲುವು, ಕನ್ನಡಿಗನ ಸಾರಥ್ಯದಲ್ಲಿ ಚೊಚ್ಚಲ ಫೈನಲ್ ಪ್ರವೇಶ

Vijay Hazare: ಮಹಾರಾಷ್ಟ್ರ ವಿರುದ್ಧ ವಿದರ್ಭ ತಂಡಕ್ಕೆ ಭರ್ಜರಿ ಗೆಲುವು, ಕನ್ನಡಿಗನ ಸಾರಥ್ಯದಲ್ಲಿ ಚೊಚ್ಚಲ ಫೈನಲ್ ಪ್ರವೇಶ

ವಿಜಯ್ ಹಜಾರೆ ಟ್ರೋಫಿಯ ಎರಡನೇ ಸೆಮಿಫೈನಲ್​ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ವಿದರ್ಭ ತಂಡ 69 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಕನ್ನಡಿಗನ ಸಾರಥ್ಯದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.

Vijay Hazare: ಮಹಾರಾಷ್ಟ್ರ ವಿರುದ್ಧ ವಿದರ್ಭ ತಂಡಕ್ಕೆ ಭರ್ಜರಿ ಗೆಲುವು, ಕನ್ನಡಿಗನ ಸಾರಥ್ಯದಲ್ಲಿ ಚೊಚ್ಚಲ ಫೈನಲ್ ಪ್ರವೇಶ
Vijay Hazare: ಮಹಾರಾಷ್ಟ್ರ ವಿರುದ್ಧ ವಿದರ್ಭ ತಂಡಕ್ಕೆ ಭರ್ಜರಿ ಗೆಲುವು, ಕನ್ನಡಿಗನ ಸಾರಥ್ಯದಲ್ಲಿ ಚೊಚ್ಚಲ ಫೈನಲ್ ಪ್ರವೇಶ

ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭ ತಂಡ ಜಯದ ನಾಗಾಲೋಟ ಮುಂದುವರೆಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು 69 ರನ್​ಗಳ ಅಂತರದಿಂದ ಮಣಿಸಿ ಅಜೇಯವಾಗಿ ಫೈನಲ್ ತಲುಪಿದೆ. ಜನವರಿ 16ರ ಗುರುವಾರ ನಡೆದ 2ನೇ ಸೆಮಿಫೈನಲ್​ನಲ್ಲಿ 380 ರನ್​​​ಗಳ ಬೃಹತ್ ಮೊತ್ತ ಪೇರಿಸಿದ್ದ ಕನ್ನಡಿಗ ಕರುಣ್ ನಾಯರ್​ ನೇತೃತ್ವದ ವಿದರ್ಧ, ಇದೇ ಮೊದಲ ಬಾರಿಗೆ ಫೈನಲ್​ ಟಿಕೆಟ್​ ಗಿಟ್ಟಿಸಿಕೊಂಡಿದೆ. ಇದೀಗ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 4 ಬಾರಿಯ ಚಾಂಪಿಯನ್ ಆಗಿರುವ ಕರ್ನಾಟಕ ತಂಡವನ್ನು ಎದುರಿಸಲು ಕರುಣ್ ಪಡೆ ಸಜ್ಜಾಗಿದೆ. ಜನವರಿ 18ರ ಶನಿವಾರ ಫೈನಲ್ ಪಂದ್ಯ ನಡೆಯಲಿದೆ.

ವಡೋದರಾದ ಕೋಟಂಬಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ವಿದರ್ಭ, ಭರ್ಜರಿ ಆರಂಭ ಪಡೆಯಿತು. ಆರಂಭಿಕ ವಿಕೆಟ್​ಗೆ 224 ರನ್​ಗಳು ಹರಿದು ಬಂದವು. ಆರಂಭಿಕರಾಗಿ ಕಣಕ್ಕಿಳಿದಿದ್ದ ಧ್ರುವ್ ಶೋರೆ ಹಾಗೂ ಯಶ್ ರಾಥೋಡ್ ಇಬ್ಬರು ಅಬ್ಬರದ​ ಶತಕ ಸಿಡಿಸಿ ಮಿಂಚಿದರು. ಇನ್ನಿಂಗ್ಸ್​ನ 10 ಓವರ್​​ಗಳ ನಂತರ ಅಬ್ಬರದ ಬ್ಯಾಟಿಂಗ್ ನಡೆಸಲು ಶುರುವಿಟ್ಟ ಜೋಡಿ ಮಹಾರಾಷ್ಟ್ರ ಬೌಲರ್​ಗಳ ಮೇಲೆ ದಂಡಯಾತ್ರೆ ನಡೆಸಿದರು. ಯಶ್ 101 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ಸಹಿತ 116 ರನ್ ಸಿಡಿಸಿ ಔಟಾದರು. ಶೋರೆ 120 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್​​ಗಳ ಸಹಾಯದಿಂದ ರನ್ ಚಚ್ಚಿದರು.

ಮತ್ತೆ ಮಿಂಚಿದ ಕರುಣ್ ನಾಯರ್

3ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಬಂದರ ನಾಯಕ ಕರುಣ್ ನಾಯರ್ ಮತ್ತೊಮ್ಮೆ ಮಿಂಚಿದರು. ಮತ್ತೊಮ್ಮೆ ಅಜೇಯರಾಗಿ ಉಳಿದರು. ಜಿತೇಶ್ ಶರ್ಮಾ ಜೊತೆ ಸೇರಿ 4ನೇ ವಿಕೆಟ್​ಗೆ ಕೇವಲ 59 ಎಸೆತಗಳಲ್ಲಿ 93 ರನ್​ ಪೇರಿಸಿದ ಕರುಣ್, ಅಜೇಯ 88 ರನ್ ಬಾರಿಸಿದರು. ಜಿತೇಶ್ 33 ಎಸೆತಗಳಲ್ಲಿ ತಲಾ 3 ಬೌಂಡರಿ-ಸಿಕ್ಸರ್​ ಸಹಾಯದಿಂದ 51 ರನ್ ಬಾರಿಸಿದರು. ಕರುಣ್ 44 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಸಹಿತ ಔಟಾಗದೆ 88 ರನ್ ಬಾರಿಸಿದರು. ಆ ಮೂಲಕ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು. ವಿದರ್ಭ ತನ್ನ ನಿಗದಿತ 50 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 380 ರನ್​ ಪೇರಿಸಿತು.

ಮಹಾರಾಷ್ಟ್ರ 311ಕ್ಕೆ ಸುಸ್ತು

381 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಮಹಾರಾಷ್ಟ್ರ ತನ್ನ ನಿಗದಿತ 50 ಓವರ್​​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 311 ರನ್​ಗಳಿಸಲಷ್ಟೇ ಶಕ್ತವಾಯಿತು. ಅರ್ಶೀನ್ ಕುಲಕರ್ಣಿ 90 ರನ್ (101 ಎಸೆತ, 8 ಬೌಂಡರಿ, 1 ಸಿಕ್ಸರ್) ಹೋರಾಟ ನಡೆಸಿದರು. ಅಂಕಿತ್ ಬಾವ್ನೆ 50, ರಾಹುಲ್ ತ್ರಿಪಾಠಿ 27, ಸಿದ್ಧೇಶ್ ವೀರ್ 30, ನಿಖಿಲ್ ನಾಯ್ಕ್​ 49, ಅಜೀಮ್ ಕಾಜಿ 29 ರನ್​ಗಳ ಕಾಣಿಕೆ ನೀಡಿದರು. ಆದರೆ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಇವರ ಆಟದಿಂದ ಸೋಲಿನ ಅಂತರ ತಗ್ಗಿತು. ವಿದರ್ಭ ಪರ ದರ್ಶನ್ ನಾಲ್ಕಂಡೆ 3, 3, ಪಾರ್ತ್ ರಖಾಡೆ 1 ವಿಕೆಟ್ ಪಡೆದರು.

Whats_app_banner