ವಿನೋದ್ ಕಾಂಬ್ಳಿಗೆ ತೀವ್ರ ಅನಾರೋಗ್ಯ; ಒಂದು ಷರತ್ತಿನ ಮೇರೆಗೆ ಆರ್ಥಿಕ ನೆರವಿಗೆ ಒಪ್ಪಿದ ಕಪಿಲ್ ದೇವ್ ನೇತೃತ್ವದ ತಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿನೋದ್ ಕಾಂಬ್ಳಿಗೆ ತೀವ್ರ ಅನಾರೋಗ್ಯ; ಒಂದು ಷರತ್ತಿನ ಮೇರೆಗೆ ಆರ್ಥಿಕ ನೆರವಿಗೆ ಒಪ್ಪಿದ ಕಪಿಲ್ ದೇವ್ ನೇತೃತ್ವದ ತಂಡ

ವಿನೋದ್ ಕಾಂಬ್ಳಿಗೆ ತೀವ್ರ ಅನಾರೋಗ್ಯ; ಒಂದು ಷರತ್ತಿನ ಮೇರೆಗೆ ಆರ್ಥಿಕ ನೆರವಿಗೆ ಒಪ್ಪಿದ ಕಪಿಲ್ ದೇವ್ ನೇತೃತ್ವದ ತಂಡ

Vinod Kambli: ಕಪಿಲ್ ದೇವ್ ಮತ್ತು ಭಾರತದ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರು ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಅವರಿಗೆ ಸಹಾಯ ಮಾಡಲು ಒಪ್ಪಿಕೊಂಡಿದ್ದಾರೆ.

ವಿನೋದ್ ಕಾಂಬ್ಳಿಗೆ ತೀವ್ರ ಅನಾರೋಗ್ಯ; ಒಂದು ಷರತ್ತಿನ ಮೇರೆಗೆ ಆರ್ಥಿಕ ನೆರವಿಗೆ ಒಪ್ಪಿದ ಕಪಿಲ್ ದೇವ್ ನೇತೃತ್ವದ ತಂಡ
ವಿನೋದ್ ಕಾಂಬ್ಳಿಗೆ ತೀವ್ರ ಅನಾರೋಗ್ಯ; ಒಂದು ಷರತ್ತಿನ ಮೇರೆಗೆ ಆರ್ಥಿಕ ನೆರವಿಗೆ ಒಪ್ಪಿದ ಕಪಿಲ್ ದೇವ್ ನೇತೃತ್ವದ ತಂಡ

ಮಾಜಿ ಕ್ರಿಕೆಟಿಗ ರಮಾಕಾಂತ್ ಅಚ್ರೇಕರ್ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ವಿನೋದ್ ಕಾಂಬ್ಳಿ ಅವರು ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಮಾಜಿ ಆಟಗಾರನ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಕಳವಳದ ಅಲೆಯನ್ನು ಹುಟ್ಟುಹಾಕಿದೆ. ಈ ವೇಳೆ ಕಾಂಬ್ಳಿ ದೈಹಿಕವಾಗಿ ದುರ್ಬಲರಾಗಿದ್ದು ಕಂಡು ಬಂತು. ವೈರಲ್ ವಿಡಿಯೋದಲ್ಲಿ ತಮ್ಮ ಬಾಲ್ಯದ ಸ್ನೇಹಿತ ಸಚಿನ್ ತೆಂಡೂಲ್ಕರ್ ಅವರನ್ನೇ ಗುರುತು ಹಿಡಿಯದಷ್ಟು ಆರೋಗ್ಯ ಕ್ಷೀಣಿಸಿದ್ದನ್ನು ಕಾಣಬಹುದು. ಈ ಹೃದಯ ವಿದ್ರಾವಕ ಕ್ಷಣವು ಫ್ಯಾನ್ಸ್ ಮತ್ತು ಮಾಜಿ ಸಹ ಆಟಗಾರರ ಚಿಂತೆಯನ್ನು ಇನ್ನಷ್ಟು ಹೆಚ್ಚಿಸಿತು.

ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ವಿಡಿಯೋದಲ್ಲಿ ಆರಂಭದಲ್ಲಿ ಸಚಿನ್​ರನ್ನು ಕಾಂಬ್ಳಿ ಗುರುತು ಹಿಡಿಯಲಿಲ್ಲ. ಸಚಿನ್​ ಎಂದು ಗೊತ್ತಾದ ಬಳಿಕ ನಂತರ ತಿಳಿದುಕೊಂಡರು. ಆಗ ಸಚಿನ್​ ಕೈ ಬಿಡದೆ ಗಟ್ಟಿಯಾಗಿ ಹಿಡಿದುಕೊಂಡರು. ಕಾಂಬ್ಳಿ ನಡೆಯಲು ಸಹ ಹೆಣಗಾಡುತ್ತಿದ್ದಾರೆ. ಇತ್ತೀಚೆಗೆ ಕಾಂಬ್ಳಿ ಅವರ ಆಪ್ತರೂ ಆಗಿರುವ ಮಾಜಿ ಪ್ರಥಮ ದರ್ಜೆ ಅಂಪೈರ್ ಮಾರ್ಕಸ್ ಕೌಟೊ ಅವರು, ‘ವಿನೋದ್ ಅವರು ತೀವ್ರವಾದ ಅನೇಕ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ’ ಎಂದು ಟೈಮ್ಸ್ ಆಫ್ ಇಂಡಿಯಾಗೆ ಬಹಿರಂಗಪಡಿಸಿದ್ದರು.

ಕಾಂಬ್ಳಿ ಅವರು ಪುನರ್ವಸತಿಗೆ (ರಿಹ್ಯಾಬ್​ಗೆ) ಹೋಗುವುದರಲ್ಲಿ ಯಾವುದೇ ಅರ್ಥವಿಲ್ಲ. ಈಗಾಗಲೇ 14 ಬಾರಿ ಪುನರ್ವಸತಿಗೆ ಹೋಗಿದ್ದಾರೆ! 3 ಬಾರಿ ನಾವು ಅವರನ್ನು ವಸಾಯಿಯ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದಿದ್ದೆವು. ಆಗಸ್ಟ್​​ನಲ್ಲಿ ವೈರಲ್ ಆದ ವಿಡಿಯೋ ನೋಡಿದ ನಂತರ ತನ್ನ ಸಹೋದರ ರಿಕಿಯೊಂದಿಗೆ ಬಾಂದ್ರಾದಲ್ಲಿರುವ ಕಾಂಬ್ಳಿ ಅವರ ನಿವಾಸಕ್ಕೆ ಭೇಟಿ ನೀಡಿದ್ದೆವು ಎಂದು ಕೌಟೊ ಹೇಳಿದ್ದಾರೆ. ಕೌಟೊ ಅವರು, ಕಾಂಬ್ಳಿ ಅವರು ಆರೋಗ್ಯ ಮತ್ತು ವ್ಯಸನದೊಂದಿಗೆ ಹೋರಾಡುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಇದೀಗ 1983ರ ವಿಶ್ವಕಪ್ ತಂಡದ ಆಟಗಾರರು ವಿನೋದ್ ನೆರವಿಗೆ ಬರಲು ನಿರ್ಧರಿಸಿದ್ದಾರೆ.

ವಿನೋದ್ ಕಾಂಬ್ಳಿ ನೆರವಿಗೆ ಕಪಿಲ್ ದೇವ್ ತಂಡ

ಕಾಂಬ್ಳಿ ಮದ್ಯಪಾನದ ವ್ಯಸನ ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದು ತನ್ನ ಅನೇಕ ಕ್ರಿಕೆಟ್ ಸಹೋದ್ಯೋಗಿಗಳನ್ನು ವರ್ಷಗಳಿಂದ ದೂರ ಇರಿಸುವಂತೆ ಮಾಡಿದೆ. ಹೀಗಿದ್ದರೂ ಕಾಂಬ್ಳಿಗೆ ಈಗ ಅನಿರೀಕ್ಷಿತ ಕಡೆಯಿಂದ ಬೆಂಬಲ ಬಂದಿದೆ. ಭಾರತದ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರು ಸಹಾಯ ನೀಡಲು ಮುಂದೆ ಬಂದಿದ್ದಾರೆ. ಆದರೆ ಒಂದು ನಿರ್ಣಾಯಕ ಷರತ್ತನ್ನು ವಿಧಿಸಿದ್ದಾರೆ. ವಿನೋದ್ ಕಾಂಬ್ಳಿ ಚೇತರಿಕೆಯತ್ತ ಮೊದಲ ಹೆಜ್ಜೆ ಇಡಲು ಸಿದ್ಧರಿದ್ದರೆ ಮಾತ್ರ ತಾವು ನೆರವಾಗುವುದಾಗಿ ಕಪಿಲ್ ದೇವ್ ನೇತೃತ್ವದ ತಂಡವು ಹೇಳಿದೆ.

ಬಿಲ್ ಎಷ್ಟಾದರೂ ಪಾವತಿಸಲಿದ್ದೇವೆ ಎಂದ ಸಂಧು

‘ವಿನೋದ್ ಕಾಂಬ್ಳಿ ಅವರು ರಿಹ್ಯಾಬ್​ಗೆ ಹೋಗಲು ಬಯಸಿದರೆ ನಾವು ಅವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಸಿದ್ದರಿದ್ದೇವೆ ಎಂದು ಕಪಿಲ್ ದೇವ್ ಅವರು ನನಗೆ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಭಾರತದ ಮಾಜಿ ವೇಗಿ ಬಲ್ವಿಂದರ್ ಸಿಂಗ್ ಸಂಧು ಹೇಳಿದ್ದಾರೆ. ಕಾಂಬ್ಳಿ ಮೊದಲು ಪುನರ್ವಸತಿ ಪರಿಶೀಲಿಸಬೇಕು. ಅವರು ಅದನ್ನು ಮಾಡಿದರೆ ಮಾತ್ರ, ಚಿಕಿತ್ಸೆಯು ಎಷ್ಟು ಸಮಯದವರೆಗೆ ಇರುತ್ತದೆ ಎಂಬುದನ್ನು ಲೆಕ್ಕಿಸದೆ ನಾವು ಬಿಲ್ ಪಾವತಿಸಲು ಸಿದ್ಧರಿದ್ದೇವೆ’ ಎಂದು ಸಂಧು ಹೇಳಿದ್ದಾರೆ.

1983ರ ವಿಶ್ವಕಪ್ ತಂಡದ ಆಟಗಾರರು, ಈ ಹಿಂದೆ ಮಾಜಿ ಆರಂಭಿಕ ಆಟಗಾರ ಮತ್ತು ಕೋಚ್​​ ಅಂಶುಮಾನ್ ಗಾಯಕ್ವಾಡ್ ಅವರ ಕ್ಯಾನ್ಸರ್ ವಿರುದ್ಧದ ಹೋರಾಡುತ್ತಿದ್ದ ವೇಳೆ ಆರ್ಥಿಕ ನೆರವು ನೀಡಿದ್ದರು. ಬಿಸಿಸಿಐ ಆರ್ಥಿಕ ನೆರವು ನೀಡುವಂತೆ ಒತ್ತಾಯ ಮಾಡಿದ್ದರು. ಇವರ ನಡೆ 1983ರ ವಿಶ್ವಕಪ್ ತಂಡದಲ್ಲಿ ಬಲವಾಗಿ ಉಳಿದಿರುವ ಸ್ನೇಹವನ್ನು ಪ್ರದರ್ಶಿಸಿತು. ಈಗ ಕಾಂಬ್ಳಿ ಅವರ ನೆರವಿಗೂ ಮುಂದಾಗಿದ್ದಾರೆ. ಆದರೆ ಕಾಂಬ್ಳಿ ಅವರು ಯಾವ ರೀತಿಯ ಸ್ಪಂದಿಸುತ್ತಾರೆ ಎಂಬುದನ್ನು ಕಾದುನೋಡೋಣ.

Whats_app_banner