Video: ಹೊಸ ವರ್ಷದ ಪಾರ್ಟಿ ಮೂಡ್‌ನಲ್ಲಿ ವಿರುಷ್ಕಾ; ಸಿಡ್ನಿ ಬೀದಿಯಲ್ಲಿ ಕೈ ಕೈ ಹಿಡಿದು ನಡೆದ ಅನುಷ್ಕಾ-ವಿರಾಟ್
ಹೊಸ ವರ್ಷ 2025ರ ಪಾರ್ಟಿಯಲ್ಲಿ ಭಾರತದ ಸ್ಟಾರ್ ಜೋಡಿಯಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಭಾಗವಹಿಸಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿದೆ. ಆಸ್ಟ್ರೇಲಿಯಾದ ಸಿಡ್ನಿ ಬೀದಿಯಲ್ಲಿ ವಿರುಷ್ಕಾ ಜೋಡಿ ಕೈ ಕೈ ಹಿಡಿದು ನಡೆದ ವಿಡಿಯೋ ಇಲ್ಲಿದೆ.
ಹೊಸ ವರ್ಷ 2025ನ್ನು ಜಗತ್ತು ಸಂಭ್ರಮದಿಂದ ಸ್ವಾಗತಿಸಿದೆ. ಒಂದು ಸುಂದರ ವರ್ಷ ಮುಗಿದು ಮತ್ತೊಂದು ವರ್ಷ ಬಂದಾಗಿದೆ. ಒಂದಷ್ಟು ನಿರ್ಣಯಗಳೊಂದಿಗೆ ಕ್ಯಾಲೆಂಡರ್ ವರ್ಷ 2025ನ್ನು ಶುಭಾರಂಭ ಮಾಡುವುದು ಜನರ ಸಂಕಲ್ಪ. ಡಿಸೆಂಬರ್ 31ರ ರಾತ್ರಿ, ಹೊಸ ವರ್ಷವನ್ನು ಸ್ವಾಗತಿಸಲು ಹಲವರು ಪಾರ್ಟಿಗಳಲ್ಲಿ ನಿರತರಾಗಿದ್ದರು. ಶುಭಾಶಯಗಳ ವಿನಿಮಯವೂ ಆಗುತ್ತಿವೆ. ಈ ನಡುವೆ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ಕೂಡಾ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಪ್ರಸ್ತುತ, ಟೀಮ್ ಇಂಡಿಯಾ ಕ್ರಿಕೆಟಿಗರು ಆಸ್ಟ್ರೇಲಿಯಾದಲ್ಲಿದ್ದಾರೆ. ಮೆಲ್ಬೋರ್ನ್ ಟೆಸ್ಟ್ ಮುಗಿಸಿ ಸಿಡ್ನಿಗೆ ತಂಡ ಪ್ರಯಾಣಿಸಿದೆ. ಭಾರತ ತಂಡದ ಆಟಗಾರರು ಅಲ್ಲೇ ಹೊಸ ವರ್ಷವನ್ನು ಆಚರಿಸಿದ್ದಾರೆ.
ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ, ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಹೊಸ ವರ್ಷದ ಪಾರ್ಟಿ ನಡೆಸಿದ್ದಾರೆ ಎನ್ನಲಾದ ವಿಡಿಯೋಗಳು ಈಗ ವೈರಲ್ ಆಗಿವೆ. ಡಿಸೆಂಬರ್ 31ರ ಮಂಗಳವಾರ ಸಿಡ್ನಿಯ ಬೀದಿಗಳಲ್ಲಿ ವಿರುಷ್ಕಾ ಜೋಡಿ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿ ಅವರೊಂದಿಗೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲಿರುವ ಕನ್ನಡಿಗ ದೇವದತ್ ಪಡಿಕ್ಕಲ್ ಕೂಡಾ ಕಾಣಿಸಿಕೊಂಡಿದ್ದಾರೆ. ಇವರು ಹೊಸ ವರ್ಷದ ಪಾರ್ಟಿಗೆ ಹೋಗುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹೇಳಲಾಗಿದೆ. ಈ ದೃಶ್ಯಗಳು ವೈರಲ್ ಆಗಿದೆ.
ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಸೋತಿದೆ. ಆ ನಂತರ ಅನುಭವಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಟೆಸ್ಟ್ ವೃತ್ತಿಜೀವನದ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಸರಣಿಯಲ್ಲಿ ಇಬ್ಬರ ಕಳಪೆ ಪ್ರದರ್ಶನ ಮುಂದುವರೆದಿದ್ದು, ಭಾರಿ ಟೀಕೆಗಳನ್ನು ಎದುರಿಸುತ್ತಿದ್ದಾರೆ.
ಭಾರತ ತಂಡ ಯಶಸ್ವಿ ನಾಯಕ
122 ಪಂದ್ಯಗಳ ಟೆಸ್ಟ್ ವೃತ್ತಿಜೀವನದಲ್ಲಿ ಕೊಹ್ಲಿ ಈವರೆಗೆ 30 ಶತಕಗಳು ಸೇರಿದಂತೆ 9207 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಕಂಡ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸರಣಿ ವಿಜಯಗಳನ್ನು ಒಳಗೊಂಡಂತೆ ಭಾರತವನ್ನು ಹಲವು ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿದ್ದಾರೆ.
ವಿಡಿಯೋಗಳು ವೈರಲ್
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸಿಡ್ನಿಯ ಬೀದಿಗಳಲ್ಲಿ ಅಡ್ಡಾಡುತ್ತಿರುವುದು ಅಭಿಮಾನಿಗಳ ಕಣ್ಣಿಗೆ ಬಿದ್ದಿದೆ. ಇಬ್ಬರೂ ಕಪ್ಪು ಬಣ್ಣದ ಉಡುಪು ಧರಿಸಿ ಪಾರ್ಟಿ ಮೂಡ್‌ನಲ್ಲಿ ಬೀದಿಗಳಲ್ಲಿ ನಡೆದು ಸಾಗುತ್ತಿದ್ದಾರೆ. ಇದು ನೆಟ್ಟಿಗರ ಗಮನಕ್ಕೆ ಬಂದಿದೆ. ಅಭಿಮಾನಿಗಳು ಸ್ಟಾರ್ ದಂಪತಿಗಳು ಹಬ್ಬದ ವಾತಾವರಣದ ಸಂಭ್ರಮವನ್ನು ಸೆರೆಹಿಡಿದಿದ್ದಾರೆ. ಆರ್‌ಸಿಬಿ ಸಹ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಅವರ ಇನ್‌ಸ್ಟಾಗ್ರಾಮ್ ಸ್ಟೋರಿ ಪ್ರಕಾರ, ವಿರುಷ್ಕಾ ದಂಪತಿ ಹೊಸ ವರ್ಷದ ವಿಶೇಷ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
ಭಾರತ ತಂಡವು ಮುಂದೆ ಜನವರಿ 3ರಿಂದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope