ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿಗೆ ಕರ್ನಾಟಕದ ನಂಟು; ಎರಡನೇ ತವರು ಬೆಂಗಳೂರಲ್ಲಿ ವಿರುಷ್ಕಾ ದಂಪತಿ ಓಡಾಡಿರುವ ಜಾಗಗಳಿವು

ವಿರಾಟ್ ಕೊಹ್ಲಿಗೆ ಕರ್ನಾಟಕದ ನಂಟು; ಎರಡನೇ ತವರು ಬೆಂಗಳೂರಲ್ಲಿ ವಿರುಷ್ಕಾ ದಂಪತಿ ಓಡಾಡಿರುವ ಜಾಗಗಳಿವು

ಉದ್ಯಾನ ನಗರಿ ಬೆಂಗಳೂರು ಅಂದ್ರೆ ವಿರಾಟ್‌ ಕೊಹ್ಲಿಗೆ ಬಹಳ ಪ್ರೀತಿ. ಆರ್‌ಸಿಬಿ ತಂಡದ ಪರ ಸುದೀರ್ಘ 17 ವರ್ಷಗಳಿಂದ ಆಡುತ್ತಿರುವ ಕೊಹ್ಲಿ, ಕ್ರಿಕೆಟ್‌ ವೃತ್ತಿಜೀವನ ಆರಂಭಿಸುವ ಮೊದಲೇ ಬೆಂಗಳೂರಿನೊಂದಿಗೆ ವಿಶೇಷ ನಂಟು ಹೊಂದಿದ್ದಾರೆ. ಕರ್ನಾಟಕದ ಜನರ ಪ್ರೀತಿ ಹಾಗೂ ಅಭಿಮಾನಕ್ಕೆ ಮನಸೋತಿದ್ದಾರೆ.

ಬೆಂಗಳೂರಲ್ಲಿ ವಿರುಷ್ಕಾ ದಂಪತಿ ಓಡಾಡಿರುವ ಜಾಗಗಳಿವು
ಬೆಂಗಳೂರಲ್ಲಿ ವಿರುಷ್ಕಾ ದಂಪತಿ ಓಡಾಡಿರುವ ಜಾಗಗಳಿವು

ಆರ್‌ಸಿಬಿ ತಂಡದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿಗೆ (Virat Kohli) ಬೆಂಗಳೂರು ಅಂದ್ರೆ ಅಚ್ಚುಮೆಚ್ಚು. ಐಪಿಎಲ್‌ ಆರಂಭದಿಂದಲೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಪರ ಆಡುತ್ತಿರುವ ದಿಗ್ಗಜ ಆಟಗಾರ, ಹಲವು ಪಂದ್ಯಗಳಲ್ಲಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ನೀಡಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿ ಒಂದೇ ತಂಡದ ಪರ ಎಲ್ಲಾ ಆವೃತ್ತಿಗಳಲ್ಲೂ ಆಡಿದ ಏಕೈಕ ಆಟಗಾರ ವಿರಾಟ್.‌ ಅದು ಆರ್‌ಸಿಬಿ ತಂಡದ ಹೆಮ್ಮೆ. ಹೀಗಾಗಿ ವಿರಾಟ್‌ ಕೊಹ್ಲಿ ಕನ್ನಡಿಗರ ಮನೆಮಗ. ಬೆಂಗಳೂರಿಗೆ ಆಗಾಗ ಬರುವ ವಿರಾಟ್‌ ನಗರದ ಹಲವು ಭಾಗಗಳಲ್ಲಿನ ಸುತ್ತಾಡಿದ್ದಾರೆ. ತಮ್ಮ ಪತ್ನಿ ಅನುಷ್ಕಾ (Anushka Sharma) ಅವರ ಜೊತೆಗೂ ವಿವಿಧ ಸ್ಥಳಗಳಲ್ಲಿ ಓಡಾಡಿದ್ದಾರೆ. ಹೀಗಾಗಿ ಅವರಿಗೆ ಬೆಂಗಳೂರು ಎರಡನೇ ತವರಿನಂತೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ನನ್ನ ಮನೆಯಿದ್ದಂತೆ. ಎರಡನೇ ತವರು ಎಂದರೆ ತಪ್ಪಾಗಬಹುದು. ದೆಹಲಿಯಂತೆ ಬೆಂಗಳೂರಿಗೂ ಮೊದಲ ಸ್ಥಾನ ಕೊಡುತ್ತೇನೆ ಎಂದು ಖುದ್ದು ವಿರಾಟ್‌ ಕೊಹ್ಲಿಯೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಬೆಂಗಳೂರಿನ ಜನ ನನಗೆ ವಿಶೇಷ ಪ್ರೀತಿ ಕೊಟ್ಟಿದ್ದಾರೆ. ಅದಕ್ಕೆ ಬೆಲೆ ಕಟ್ಟಲಾಗದು. ಅಭಿಮಾನಿಗಳು ತೋರಿದ ನಿಷ್ಠೆ ಮತ್ತು ಪ್ರೀತಿಯು ಕಪ್‌ ಅಥವಾ ಟ್ರೋಫಿಗಳಿಗಿಂತಲೂ ಹೆಚ್ಚು ಮೌಲ್ಯಯುತವಾಗಿದೆ. ತಾತ್ಕಾಲಿಕವಾಗಿ ಒಬ್ಬ ಆಟಗಾರ ಅಥವಾ ತಂಡಕ್ಕೆ ಅಭಿಮಾನಿಗಳು ಸಿಗಬಹುದು. ಆದರೆ ವರ್ಷಗಟ್ಟಲೆ ಒಂದು ತಂಡ ಮತ್ತು ಆಟಗಾರನ್ನು ಪ್ರೀತಿಸುತ್ತಾರೆ ಎಂದರೆ ಅದು ತುಂಬಾ ವಿಶೇಷ. ಹೀಗಾಗಿ ಬೆಂಗಳೂರು ಹಾಗೂ ಕರ್ನಾಟಕದ ಜನರ ಕುರಿತು ನನಗೆ ವಿಶೇಷ ಪ್ರೀತಿ ಎಂದು ಅವರು ಹೇಳಿದ್ದಾರೆ.

ಬೆಂಗಳೂರಲ್ಲೂ ಇದೆ ವಿರಾಟ್‌ ಕೊಹ್ಲಿ ರೆಸ್ಟೋರೆಂಟ್

ವಿರಾಟ್ ಕೊಹ್ಲಿ ಅವರ ರೆಸ್ಟೋರೆಂಟ್‌ ಬೆಂಗಳೂರಿನಲ್ಲೂ ಇದೆ. ಒನ್8 ಕಮ್ಯೂನ್ ರೆಸ್ಟೋರೆಂಟ್‌ ಅನ್ನು ತಮ್ಮ ನೆಚ್ಚಿನ ನಗರದಲ್ಲೂ ತೆರೆದಿದ್ದಾರೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯೇ ಈ ಔಟ್‌ಲೆಟ್ ತುಂಬಾ ಜನಪ್ರಿಯವಾಗಿದೆ.

ಬೆಂಗಳೂರಿನ ಆಹಾರ, ಹವಾಮಾನ ಹಾಗೂ ಭಾಷೆಯೂ ಇಷ್ಟ

ಬೆಂಗಳೂರಿನ ಬಗೆಬಗೆಯ ಆಹಾರಗಳು, ಇಲ್ಲಿನ ಹವಾಮಾನ, ಆಡುಭಾಷೆ ಕನ್ನಡ ವಿರಾಟ್‌ಗೆ ಭಾರಿ ಇಷ್ಟ. ಹೀಗಾಗಿ ಆಗಾಗ ಉದ್ಯಾನ ನಗರಿಗೆ ಬರಲು ಕಾಯುತ್ತಿರುತ್ತಾರೆ. ಮದುವೆಯ ಬಳಿಕವೂ ಈ ಬಾಂಧವ್ಯ ಮುಂದುವರೆದಿದೆ. ಕೊಹ್ಲಿ ಪತ್ನಿ ಅನುಷ್ಕಾ‌ ಅವರ ತಂದೆ ಬೆಳೆದದ್ದು ಬೆಂಗಳೂರಿನಲ್ಲಿಯೇ. ಅನುಷ್ಕಾ ಕೂಡಾ ಕೆಲವು ವರ್ಷ ಸಿಲಿಕಾನ್‌ ಸಿಟಿಯಲ್ಲೇ ಇದ್ದರು. ಹೀಗಾಗಿ ನಗರದೊಂದಿಗಿನ ನಂಟು ಹೆಚ್ಚಾಗಿದೆ. ಕ್ರಿಕೆಟ್‌ ಪಂದ್ಯಗಳಿಗಾಗಿ ಆಗಾಗ ನಗರಕ್ಕೆ ಬರುತ್ತಿರುವ ಕೊಹ್ಲಿ, ಐಪಿಎಲ್‌ ಸಮಯದಲ್ಲಿ ಸುದೀರ್ಘ ಅವಧಿಗೆ ಇಲ್ಲೇ ಇದ್ದು, ನಗರವನ್ನು ಎಕ್ಸ್‌ಪ್ಲೋರ್‌ ಮಾಡ್ತಾರೆ.

ಇದನ್ನೂ ಓದಿ | ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಂಡ ಆರ್​​ಸಿಬಿ ಹುಡ್ಗೀರು; ವಿರುಷ್ಕಾ ಜೊತೆ ಫೋಟೊಗೆ ಪೋಸ್​ ಕೊಟ್ಟ ಶ್ರೇಯಾಂಕಾ ಪಾಟೀಲ್

ಬೆಂಗಳೂರಿನಲ್ಲಿ ವಿವಿಧ ಸ್ಥಳ, ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಕೆಫೆಗಳಿಗೆ ವಿರುಷ್ಕಾ ಜೋಡಿ ಆಗಾಗ ಹೋಗುತ್ತಿರುತ್ತಾರೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡಿರುವ ಉದಾಹರಣೆಗಳು ಕಡಿಮೆ. ಏಕೆಂದರೆ ಸೆಲೆಬ್ರಿಟಿ ಜೋಡಿ ಬಹಿರಂಗವಾಗಿ ನಗರದಲ್ಲಿ ಓಡಾಡಿದರೆ, ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸುತ್ತುವರಿಯುತ್ತಾರೆ. ಹೀಗಾಗಿ ಊಟ, ಉಪಾಹಾರ ಹಾಗೂ ಸ್ನ್ಯಾಕ್‌ ಸೇವನೆಗೆಂದು ಇವರು ನಗರದದ ವಿವಿಧ ಆಹಾರಗೃಹಗಳಿಗೆ ಹೋಗುತ್ತಿರುತ್ತಾರೆ. ಅದರ ಫೋಟೋಗಳನ್ನು ಸೋಷಿಯಲ್‌‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಹಲವು ಬಾರಿ ನಗರದಲ್ಲಿ ನೈಟ್‌ ಔಟ್‌ ಹೋಗಿದ್ದಾರೆ.

ಈನಜೋಡಿಯು ಬೆಂಗಳೂರಿನ ಕಾರ್ನರ್ ಹೌಸ್‌ನಲ್ಲಿ ಕುಟುಂಬದ ಜೊತೆಗೆ ಆಹಾರ ಸೇವಿಸಿದ್ದಾರೆ. ಬೆಂಗಳೂರಿನ ಜನಪ್ರಿಯ ಉಪಾಹಾರ ಗ್ರಹಗಳಲ್ಲಿ ಒಂದಾದ ಶ್ರೀ ಸಾಗರ್ ಸೆಂಟ್ರಲ್ ಟಿಫಿನ್ ರೂಮ್ (ಸಿಟಿಆರ್), ನಾರು ನೂಡಲ್ ಬಾರ್ ಹೀಗೆ ಹಲವೆಡೆ ಈ ಜೋಡಿ ಹೀಗಿ ಆಹಾರ ಸವಿದಿದೆ.

ಇದನ್ನೂ ಓದಿ | Video: ನಿದ್ದೆಗೆಟ್ಟು ಸಂಭ್ರಮಾಚರಣೆಯಲ್ಲಿ ಮುಳುಗಿದ ಆರ್‌ಸಿಬಿ ಫ್ಯಾನ್ಸ್; ಇದು ಗ್ರೇಟೆಸ್ಟ್‌ ಕಂಬ್ಯಾಕ್ ಎಂದು ಹರ್ಷೋದ್ಘಾರ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024