ಇಬ್ಬರು ಪ್ರಾಣ ಸ್ನೇಹಿತರು ಬದ್ಧವೈರಿಗಳಾದಾಗ..; ಕೊನೆಯ ಬಾರಿಗೆ ಎಂಎಸ್ ಧೋನಿ vs ವಿರಾಟ್ ಕೊಹ್ಲಿ ಫೈಟ್?
ಕನ್ನಡ ಸುದ್ದಿ  /  ಕ್ರಿಕೆಟ್  /  ಇಬ್ಬರು ಪ್ರಾಣ ಸ್ನೇಹಿತರು ಬದ್ಧವೈರಿಗಳಾದಾಗ..; ಕೊನೆಯ ಬಾರಿಗೆ ಎಂಎಸ್ ಧೋನಿ Vs ವಿರಾಟ್ ಕೊಹ್ಲಿ ಫೈಟ್?

ಇಬ್ಬರು ಪ್ರಾಣ ಸ್ನೇಹಿತರು ಬದ್ಧವೈರಿಗಳಾದಾಗ..; ಕೊನೆಯ ಬಾರಿಗೆ ಎಂಎಸ್ ಧೋನಿ vs ವಿರಾಟ್ ಕೊಹ್ಲಿ ಫೈಟ್?

Virat Kohli and MS MS Dhoni : ಸಿಎಸ್​ಕೆ ಮತ್ತು ಆರ್​ಸಿಬಿ ನಡುವಿನ ಪಂದ್ಯವು ರೋಚಕತೆ ಹೆಚ್ಚಿಸಿದೆ. ಎಂಎಸ್ ಧೋನಿ ಅವರು ವಿದಾಯ ಹೇಳುತ್ತಾರೆ ಎಂದು ಹೇಳಲಾಗುತ್ತಿದ್ದು, ವಿರಾಟ್ ಕೊಹ್ಲಿ ಅವರ ವಿರುದ್ಧ ಕೊನೆಯ ಬಾರಿಗೆ ಆಡಲಿದ್ದಾರೆ ಎನ್ನಲಾಗುತ್ತಿದೆ.

ಇಬ್ಬರು ಪ್ರಾಣ ಸ್ನೇಹಿತರು ಬದ್ಧವೈರಿಗಳಾದಾಗ..; ಕೊನೆಯ ಬಾರಿಗೆ ಎಂಎಸ್ ಧೋನಿ vs ವಿರಾಟ್ ಕೊಹ್ಲಿ ಫೈಟ್?
ಇಬ್ಬರು ಪ್ರಾಣ ಸ್ನೇಹಿತರು ಬದ್ಧವೈರಿಗಳಾದಾಗ..; ಕೊನೆಯ ಬಾರಿಗೆ ಎಂಎಸ್ ಧೋನಿ vs ವಿರಾಟ್ ಕೊಹ್ಲಿ ಫೈಟ್?

17ನೇ ಆವೃತ್ತಿಯ ಐಪಿಎಲ್​​​ ಮುಕ್ತಾಯದ ಹಂತ ತಲುಪಿದೆ. ಲೀಗ್​ನಲ್ಲಿ ಮೂರು ಪಂದ್ಯಗಳಷ್ಟೇ ಬಾಕಿ ಉಳಿದಿವೆ. ಪ್ಲೇಆಫ್​​​ನಲ್ಲಿ ಮೂರು ತಂಡಗಳು ಖಚಿತಗೊಂಡಿದ್ದು, ಇನ್ನೊಂದು ಸ್ಥಾನಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು (RCB vs CSK) ಕಾದಾಟಕ್ಕೆ ಸಜ್ಜಾಗಿವೆ. ಈ 2 ತಂಡಗಳಿಗೂ ಮುಂದಿನ ಹಂತ ತಲುಪುವ ಅವಕಾಶ ಹೆಚ್ಚಿದ್ದು, ಯಾವ ತಂಡಕ್ಕೆ ಅದೃಷ್ಟ ಒಲಿಯಲಿದೆ ಎಂಬ ಕುತೂಹಲ ದುಪ್ಪಟ್ಟಾಗಿಸಿದೆ. ಆದರೆ ಒಂದು ಬೇಸರದ ಸಂಗತಿ ಏನೆಂದರೆ ಅತ್ಯುತ್ತಮ ಸ್ನೇಹಿತರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರು ಇದೇ ಕೊನೆಯ ಬಾರಿಗೆ ಮುಖಾಮುಖಿಯಾಗಲಿದ್ದಾರೆ.

ಸಿಎಸ್​ಕೆ ಮತ್ತು ಆರ್​ಸಿಬಿ ನಡುವಿನ ಹೈವೋಲ್ಟೇಜ್ ಕದನಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನವು ಸಾಕ್ಷಿಯಾಗಲಿದೆ. ಉಭಯ ತಂಡಗಳ ಕದನಕ್ಕೆ ಕ್ರೇಜ್​ ದುಪ್ಪಟ್ಟಾಗಿದ್ದು, ಈ ಪಂದ್ಯವನ್ನು ಫೈನಲ್​ ಎಂದೇ ಬಿಂಬಿಸಲಾಗಿದೆ. ಪ್ಲೇಆಫ್​ಗೇರುವ ಲೆಕ್ಕಾಚಾರ ಹಾಕಿಕೊಂಡಿರುವ ಉಭಯ ತಂಡಗಳು ನಡುವಿನ ಫೈಟ್ ರೋಚಕತೆ ಹೆಚ್ಚಿಸಿದೆ. ಅದರಲ್ಲೂ ಎರಡೂ ಟೀಮ್​​ಗಳ ಮಾಜಿ ನಾಯಕರು ತಮ್ಮ ನಾಯಕತ್ವದಿಂದ ಕೆಳಗಿಳಿದರೂ ಇವರನ್ನೇ ಕೇಂದ್ರೀಕರಿಸಿ ಪಂದ್ಯಗಳು ಜರುಗುತ್ತಿರುವುದು ವಿಶೇಷ.

ಆರ್​ಸಿಬಿ ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ ಮತ್ತು ಸಿಎಸ್​ಕೆ ಅಭಿಮಾನಿಗಳ ಆರಾಧ್ಯ ದೈವ ಎಂಎಸ್ ಧೋನಿ ಅವರು ಇಬ್ಬರು ಸಹ ವಿಶ್ವ ಕ್ರಿಕೆಟ್​ನಲ್ಲಿ ಬೆಸ್ಟ್ ಫ್ರೆಂಡ್ಸ್​. ಆದರೀಗ ಈ ಪಂದ್ಯಕ್ಕಾಗಿ ಪ್ರಾಣ ಸ್ನೇಹಿತರೇ ಬದ್ಧವೈರಿಗಳಾಗುತ್ತಿದ್ದಾರೆ. 17 ವರ್ಷಗಳಿಂದ ಪರಸ್ಪರ ಎದುರಾಗುತ್ತಿದ್ದ ಇಬ್ಬರು ಕೊನೆಯ ಬಾರಿಗೆ ಮುಖಾಮುಖಿಯಾಗಲು ಸಜ್ಜಾಗಿದ್ದಾರೆ. ಎಂಎಸ್ ಧೋನಿ 17ನೇ ಆವೃತ್ತಿಯ ನಂತರ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನ. ವಿದಾಯ ಹೇಳುತ್ತಾರೆ ಎನ್ನುವುದಕ್ಕೆ ಕಾರಣ ನಾಯಕತ್ವ ಹಸ್ತಾಂತರಿಸುವುದು.

ಧೋನಿಗೆ ಬಹುತೇಕ ಇದೇ ಕೊನೆಯ ಐಪಿಎಲ್ 

2020ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಎಂಎಸ್ ಧೋನಿ, ಅಂದಿನಿಂದ ಐಪಿಎಲ್​ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸಕ್ತ ಐಪಿಎಲ್​ ಅವರಿಗೆ ಕೊನೆಯ ಐಪಿಎಲ್ ಎಂದು ಹೇಳಲಾಗ್ತಿದೆ. ಅಧಿಕೃತವಾಗಿ ಯಾವುದೇ ಘೋಷಣೆ ಮಾಡದಿದ್ದರೂ ಮೂಲಗಳು ಇದೇ ನಿಜ ಎನ್ನುತ್ತಿವೆ. 2024ರ ಆವೃತ್ತಿಗೂ ಮುನ್ನವೇ ಋತುರಾಜ್ ಗಾಯಕ್ವಾಡ್ ಅವರಿಗೆ ನಾಯಕತ್ವ ಹಸ್ತಾಂತರಿಸಿರುವ ಧೋನಿ ಅವರ ವಯಸ್ಸು ಸಹ 42ರ ಸಮೀಪದಲ್ಲಿದೆ. ಅಲ್ಲದೆ, ಕ್ರಿಕೆಟ್ ಆಡಲು ದೇಹವು ಸರಿಯಾಗಿ ಸ್ಪಂದಿಸುತ್ತಿಲ್ಲ. ಫಿಟ್​ನೆಸ್​ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಒನ್​ ಲಾಸ್ಟ್ ಟೈಮ್​ ಭೇಟಿ

ಒಂದು ವೇಳೆ ಸೋತು ಪ್ಲೇಆಫ್​ನಿಂದ ಹೊರಬಿದ್ದರೆ ಅವರ ಪಾಲಿಗೆ ಇದೇ ಕೊನೆಯ ಐಪಿಎಲ್ ಪಂದ್ಯವಾಗಲಿದೆ ಆಗಲಿದೆ. ಅಲ್ಲದೆ, ವಿರಾಟ್ ಕೊಹ್ಲಿ ಮತ್ತು ಧೋನಿ ಮುಖಾಮುಖಿಯೂ ಮತ್ತೊಮ್ಮೆ ಇರುವುದಿಲ್ಲ. ಒಂದು ವೇಳೆ ಗೆದ್ದರೆ ಪ್ಲೇಆಫ್​ನಲ್ಲೂ ಕಣಕ್ಕಿಳಿಯದ್ದಾರೆ. ಆದರೂ ಕೊಹ್ಲಿ ಮತ್ತು ಧೋನಿಗೆ ಇದೇ ಕೊನೆಯ ಮುಖಾಮುಖಿಯಾಗಲಿದೆ. ಇದೇ ಕಾರಣಕ್ಕಾಗಿ ಟಿಕೆಟ್​ ಖರೀದಿಸಲು ಅಭಿಮಾನಿಗಳು ಮುಗಿಬೀಳುತ್ತಿದ್ದರು. ಎಷ್ಟಾದರೂ ದುಡ್ಡು ನಾವು ಕೊಡುತ್ತೇವೆ ಎಂದು ಟಿಕೆಟ್ ಕೊಟ್ಟರೆ ಸಾಕೆಂದು ಅಭಿಮಾನಿಗಳು ಬೇಡಿಕೆಯಿಡುತ್ತಿದ್ದರು.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner