ಕನ್ನಡ ಸುದ್ದಿ  /  Cricket  /  Virat Kohli And Rcb Receive Grand Welcome In Ms Dhonis Den Ahead Of Csk Encounter Fans Go Crazy Video Goes Viral Prs

ಚೆನ್ನೈನಲ್ಲಿ ಜೈಕಾರಗಳೊಂದಿಗೆ ಸಿಕ್ತು ಆರ್​ಸಿಬಿಗೆ ಅದ್ಧೂರಿ ಸ್ವಾಗತ; ವಿರಾಟ್ ಕೊಹ್ಲಿ ಕಂಡೊಡನೆ ಮುಗಿಲು ಮುಟ್ಟಿತು ಹರ್ಷೋದ್ಘಾರ

Virat Kohli : ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧದ ಉದ್ಘಾಟನಾ ಪಂದ್ಯಕ್ಕಾಗಿ ಚೆನ್ನೈಗೆ ಬಂದಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.

ವಿರಾಟ್ ಕೊಹ್ಲಿ ಕಂಡೊಡನೆ ಮುಗಿಲು ಮುಟ್ಟಿತು ಹರ್ಷೋದ್ಘಾರ!
ವಿರಾಟ್ ಕೊಹ್ಲಿ ಕಂಡೊಡನೆ ಮುಗಿಲು ಮುಟ್ಟಿತು ಹರ್ಷೋದ್ಘಾರ!

17ನೇ ಆವೃತ್ತಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಆರಂಭಿಕ ಪಂದ್ಯಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ಚೆನ್ನೈ ತಲುಪಿದ್ದು, ವಿಮಾನ ನಿಲ್ದಾಣದಲ್ಲಿ ಆರ್​ಸಿಬಿ ತಂಡಕ್ಕೆ ಭವ್ಯ ಸ್ವಾಗತ ಸಿಕ್ಕಿದೆ. ‘ಆರ್​ಸಿಬಿ ಅನ್​ಬಾಕ್ಸ್​ ಈವೆಂಟ್​’ ಮುಗಿಸಿದ ನಡೆಸಿದ ನಂತರ ರಾತ್ರೋರಾತ್ರಿ ಚೆನ್ನೈಗೆ ಚಾರ್ಟರ್ಡ್ ಫ್ಲೈಟ್ ಮೂಲಕ ಹಾರಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ (Virat Kohli) ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು.

ಮಾರ್ಚ್​ 22ರಂದು ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಆರ್​ಸಿಬಿ ಮತ್ತು ಸಿಎಸ್​ಕೆ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ. 2008ರ ನಂತರ ಚೆನ್ನೈ ನೆಲದಲ್ಲಿ ಗೆಲುವು ಕಾಣದ ಆರ್​​ಸಿಬಿ, ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಈಗಾಗಲೇ ಉಭಯ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಹೈವೋಲ್ಟೇಜ್ ಪಂದ್ಯದಲ್ಲಿ ಎರಡೂ ತಂಡಗಳು ಸಿಡಿಯುವ ಮುನ್ಸೂಚನೆ ನೀಡಿದ್ದು, ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷೆ ಇದೆ.

ಉದ್ಘಾಟನಾ ಪಂದ್ಯಕ್ಕಾಗಿ ಚೆನ್ನೈಗೆ ಬಂದಿಳಿದ ಆರ್​ಸಿಬಿಗೆ ಅದ್ಧೂರಿ ಸ್ವಾಗತ ಸಿಕ್ಕಿತು. ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್, ಕ್ಯಾಮರೂನ್ ಗ್ರೀನ್ ಸೇರಿದಂತೆ ಸ್ಟಾರ್​ ಆಟಗಾರರ ದಂಡೇ ಇದ್ದರೂ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಕೊಹ್ಲಿ, ಕೊಹ್ಲಿ ಎಂದು ಘೋಷಣೆಗಳನ್ನು ಕೂಗಿದರು. ಏಕೆಂದರೆ ಸುಮಾರು ಎರಡು ತಿಂಗಳ ನಂತರ ಅವರು ಕಾಣಿಸಿಕೊಂಡ ಕಾರಣ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ.

ವಿಮಾನ ನಿಲ್ದಾಣದಿಂದ ಹೊರ ಬಂದ ಕೊಹ್ಲಿ, ತಂಡದ ಬಸ್​ ಏರಿ ಆಟಗಾರರೊಂದಿಗೆ ಹೋಟೆಲ್​ ರೂಮ್​ಗೆ ಹೋದರು. ಈಗಾಗಲೇ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಕಳೆದ ಎರಡು ತಿಂಗಳಿಂದ ಕ್ರಿಕೆಟ್​ನಿಂದ ದೂರವಿದ್ದ ವಿರಾಟ್ ಕೊಹ್ಲಿ, ರಿದಮ್ ಕಂಡುಕೊಳ್ಳಲು ಸತತ ಅಭ್ಯಾಸ ನಡೆಸುತ್ತಿದ್ದಾರೆ. ಚೆನ್ನೈಗೆ ತೆರಳುವುದಕ್ಕೂ ಮುನ್ನ ಆರ್​​ಸಿಬಿ ತಂಡವು ಅನ್​​ಬಾಕ್ಸ್ ಈವೆಂಟ್​ನಲ್ಲಿ ಪಾಲ್ಗೊಂಡಿತ್ತು. ನೂತನ ಜೆರ್ಸಿ ಅನಾವರಣ, ತಂಡದ ಹೆಸರು ಬದಲಾವಣೆಯನ್ನು ಈ ಕಾರ್ಯಕ್ರಮದಲ್ಲಿ ಮಾಡಲಾಯಿತು.

ಧೋನಿಯೂ ಭರ್ಜರಿ ಸಮರಾಭ್ಯಸ

ಟೂರ್ನಿ ಆರಂಭಕ್ಕೆ 10 ದಿನಗಳ ಮುಂಚೆಯೇ ಸಿಎಸ್​ಕೆ ಕ್ಯಾಂಪ್ ಕೂಡಿಕೊಂಡಿದ್ದ ಎಂಎಸ್ ಧೋನಿ, ಸತತ ನೆಟ್​ ಸೆಷನ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಧೋನಿ ಅವರು ಸತತ ಬೆವರು ಹರಿಸುತ್ತಿರುವ ವಿಡಿಯೋಗಳು ನೆಟ್ಸ್​ನಲ್ಲಿ ಸಖತ್ ವೈರಲ್ ಆಗುತ್ತಿವೆ. ಹೆಲಿಕಾಪ್ಟರ್ ಶಾಟ್ ಮತ್ತು ಒನ್​ ಹ್ಯಾಡೆಂಡ್ ಶಾಟ್​​​ಗಳನ್ನು ಅಭ್ಯಾಸ ಮಾಡಿರುವುದನ್ನು ನಾವು ಕಾಣಬಹುದು. ತಲಾ ಅಭಿಮಾನಿಗಳು ಈ ವಿಡಿಯೋಗಳನ್ನು ಕಂಡು ಫಿದಾ ಆಗಿದ್ದಾರೆ.

ಕೊಹ್ಲಿ ಕಪ್ ಗೆಲ್ಲುವ ಭರವಸೆ

ಇತ್ತೀಚೆಗೆ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಮಹಿಳಾ ತಂಡ ಚಾಂಪಿಯನ್ ಆಯಿತು. ಈ ಕುರಿತು ಮಾತನಾಡಿದ ಕಿಂಗ್ ಕೊಹ್ಲಿ, ಈ ಸಂತಸವನ್ನು ದ್ವಿಗುಣಗೊಳಿಸಲು ಬಯಸಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ಆಗುವ ಮೂಲಕ ಅಭಿಮಾನಿಗಳಿಗೆ ದೊಡ್ಡ ಉಡುಗೊರೆ ನೀಡಿದೆ. ಈಗ ನಾವು ಕೂಡ ಟ್ರೋಫಿ ಗೆದ್ದು ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸಲಿದ್ದೇವೆ ಎಂದು ಅನ್‌ಬಾಕ್ಸಿಂಗ್ ಸಮಾರಂಭದಲ್ಲಿ ವಿರಾಟ್ ಕೊಹ್ಲಿ ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಅನೂಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮೆರಾನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರಣ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್.

IPL_Entry_Point