ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಕನಸಿನ ಮನೆಗೆ ಶೀಘ್ರದಲ್ಲೇ ಗೃಹ ಪ್ರವೇಶ; 32 ಕೋಟಿ ವೆಚ್ಚದ ಭವ್ಯ ಬಂಗಲೆಯಲ್ಲಿ ಏನೇನಿದೆ? VIDEO
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಅವರ ಹೊಸ ಮನೆ ಸಿದ್ಧವಾಗಿದೆ. ಅಲಿಬಾಗ್‌ನ ಹೊಸ ವಿಲ್ಲಾದಲ್ಲಿ ಗೃಹಪ್ರವೇಶದ ಪೂಜೆಗೆ ತಯಾರಿ ನಡೆಸುತ್ತಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಭಾರತ ತಂಡದ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಮತ್ತು ಪತ್ನಿ ಅನುಷ್ಕಾ ಶರ್ಮಾ (Anushka Sharma) ದಂಪತಿಯ ಕನಸಿನ ಮನೆ ಸಿದ್ಧಗೊಂಡಿದ್ದು, ಇದೇ ವಾರ ಗೃಹ ಪ್ರವೇಶ ನಡೆಯಲಿದೆ ಎಂದು ವರದಿಯಾಗಿದೆ. ದಕ್ಷಿಣ ಮುಂಬೈನ ಅಲಿಬಾಗ್‌ನಲ್ಲಿ ನೂತನ ಮನೆ ನಿರ್ಮಿಸಲಾಗಿದೆ. 2022ರಲ್ಲಿ ಅಲಿಬಾಗ್‌ನಲ್ಲಿ 19 ಕೋಟಿಗೆ 8 ಖರೀದಿಸಿದ್ದ ವಿರಾಟ್, ಈಗ 32 ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯ ಬಂಗಲೆಯನ್ನು ನಿರ್ಮಿಸಿದ್ದಾರೆ. ಇದರೊಂದಿಗೆ ಭಾರತ ಬಿಟ್ಟು ಲಂಡನ್ಗೆ ಶಾಶ್ವತವಾಗಿ ಸ್ಥಳಾಂತರವಾಗಲಿದ್ದಾರೆ ಎಂದು ಈ ಹಿಂದೆ ವರದಿಯಾಗಿದ್ದನ್ನು ತಳ್ಳಿ ಹಾಕಿದ್ದಾರೆ.
ಕೊಹ್ಲಿ ಮತ್ತು ಅನುಷ್ಕಾ ಅವರ ಹಾಲಿಡೇ ಹೋಮ್ ಅನ್ನು ಫಿಲಿಪ್ ಫೌಚೆ ನೇತೃತ್ವದ ಸ್ಟೀಫನ್ ಆಂಟೋನಿ ಓಲ್ಮೆಸ್ಡಾಲ್ ಟ್ರೂನ್ ಆರ್ಕಿಟೆಕ್ಟ್ಸ್ (SAOTA) ವಿನ್ಯಾಸಗೊಳಿಸಿದ್ದಾರೆ ಎಂದು ಆರ್ಕಿಟೆಕ್ಚರಲ್ ಡೈಜೆಸ್ಟ್ ವರದಿ ತಿಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಮನೆ ಅಲಂಕೃತಗೊಂಡಿರುವ ವಿಡಿಯೋಗಳು ವೈರಲ್ ಆಗುತ್ತಿದೆ. ಇದೇ ವಾರ ಗೃಹ ಪ್ರವೇಶ ನಡೆಯಲಿದ್ದು, ಮಗ ಅಕಾಯ್ ಮತ್ತ ಮಗಳು ವಮಿಕಾ ಕೂಡ ಪೂಜೆಯಲ್ಲಿ ಭಾಗವಹಿಸಲಿದ್ದಾರೆ. 7,171 ಚದರ ಅಡಿ ವಿಸ್ತೀರ್ಣದ ಐಷಾರಾಮಿ ಮನೆ ಇದಾಗಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ನಕಲಿ ಸುದ್ದಿಗಳಿಗೆ ಜಸ್ಪ್ರೀತ್ ಬುಮ್ರಾ ಸ್ಪಷ್ಟನೆ
ಇದಲ್ಲದೇ ವಿರಾಟ್ ಕೊಹ್ಲಿ ಅವರು ಗುರುಗ್ರಾಮದಲ್ಲಿ 80 ಕೋಟಿ ಮೌಲ್ಯದ ಬಂಗಲೆಯನ್ನೂ ಹೊಂದಿದ್ದಾರೆ. ವಿರಾಟ್ ಕೊಹ್ಲಿ 2022 ರಲ್ಲಿ ದಿವಂಗತ ಗಾಯಕ ಕಿಶೋರ್ ಕುಮಾರ್ ಅವರ ಬಂಗಲೆಯನ್ನು ಬಾಡಿಗೆಗೆ ಪಡೆದಿದ್ದರು. ಜುಹುದಲ್ಲಿರುವ ಈ ಆಸ್ತಿಯನ್ನು ಕೊಹ್ಲಿ 5 ವರ್ಷಗಳ ಕಾಲ ಭೋಗ್ಯಕ್ಕೆ ತೆಗೆದುಕೊಂಡಿದ್ದಾರೆ. ವಿರಾಟ್-ಅನುಷ್ಕಾ ಮುಂಬೈನ ಐಷಾರಾಮಿ ಪ್ರದೇಶವಾದ ಜುಹುದಲ್ಲಿನ ಫ್ಲಾಟ್‌ಗೆ ತಿಂಗಳಿಗೆ 2.76 ಲಕ್ಷ ರೂ ಬಾಡಿಗೆ ಪಾವತಿಸುತ್ತಾರೆ ಎನ್ನಲಾಗಿದೆ.
ಪಾಪರಾಜಿಗಳು ಹಂಚಿಕೊಂಡ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಪೂಜಾ ಸಾಮಗ್ರಿಗಳನ್ನು ತುಂಬಿದ ಬ್ಯಾಗ್ನಲ್ಲಿಅಲಿಬಾಗ್ಗೆ ತೆರಳಲು ದೋಣಿಗೆ ಲೋಡ್ ಮಾಡುತ್ತಿರುವುದು ಕಂಡು ಬಂದಿದೆ. ದೋಣಿಯ ಮೇಲೆ ಪೂಜಾರಿಯೊಬ್ಬರು ಕುಳಿತಿದ್ದು ಕಂಡು ಬಂದಿದೆ. ವಿರುಷ್ಕಾ ತಮ್ಮ ಕನಸಿನ ಮನೆಯನ್ನು ಅಲಿಬಾಗ್‌ನಲ್ಲಿ ನಿರ್ಮಿಸಲಾಗಿದೆ. ಪಂಡಿತ್ ಅವರನ್ನು ಸ್ನ್ಯಾಪ್ ಮಾಡಿದ್ದೇವೆ. ಏಕೆಂದರೆ ಅವರು ಗೃಹ ಪ್ರವೇಶಕ್ಕೆ ಹೊರಟಿದ್ದಾರೆ ಎಂದು ಪಾಪರಾಜಿಗಳು ಹೇಳಿದ್ದಾರೆ ಎಂದು india.com ವರದಿ ಮಾಡಿದೆ. ವಿರಾಟ್ ಅನುಷ್ಕಾ ಭಾರತದಲ್ಲಿದ್ದಾಗ ಇಲ್ಲಿಯೇ ಇರುತ್ತಾರೆ ಎಂದು ವರದಿಯಲ್ಲಿದೆ.
ಬಂಗಲೆಯಲ್ಲಿ ಏನೆಲ್ಲಾ ಇದೆ?
ಈ ಭವ್ಯ ಬಂಗಲೆಯಲ್ಲಿ ಎಲ್ಲವೂ ದುಬಾರಿ ಮತ್ತು ಐಷರಾಮಿ ವಸ್ತುಗಳೇ ಇರುವುದು ವಿಶೇಷ. ವಿಶಾಲವಾದ ಉದ್ಯಾನವನ ಇದೆ. ಬೃಹತ್ ಜಿಮ್ ಇದೆ, ತಾಪಮಾನ-ನಿಯಂತ್ರಿತ ಸ್ಮಿಮ್ಮಿಂಗ್ ಪೂಲ್, ಹಾಟ್ ಟಬ್, ಬೆಸ್ಪೋಕ್ ಅಡುಗೆಮನೆ ಇದೆ. ಇಟಾಲಿಯನ್ ಅಮೃತಶಿಲೆ, ಪ್ರಾಚೀನ ಕಲ್ಲು ಮತ್ತು ಟರ್ಕಿಶ್ ಸುಣ್ಣದ ಕಲ್ಲುಗಳನ್ನು ಟರ್ಕಿಶ್ ಸುಣ್ಣದ ಕಲ್ಲು ಬಳಸಿ ಒಳಾಂಗಣ ನಿರ್ಮಾಣ ಮಾಡಲಾಗಿದೆ.
ಲಂಡನ್ಗೆ ಶಿಫ್ಟ್ ಆಗುತ್ತಾರಾ ವಿರುಷ್ಕಾ ದಂಪತಿ?
ಟಿ20 ವಿಶ್ವಕಪ್ ಮುಕ್ತಾಯಗೊಂಡ ನಂತರ ಚುಟುಕು ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ, ತನ್ನ ಕುಟುಂಬದೊಂದಿಗೆ ಲಂಡನ್ನಲ್ಲಿ ನೆಲೆಸಲಿದ್ದಾರೆ ಎಂದು ವರದಿಯಾಗಿತ್ತು. ಮಾಜಿ ನಾಯಕ ತಮ್ಮ ಕುಟುಂಬ ಸದಸ್ಯರೊಂದಿಗೆ ಗುಣಮಟ್ಟದ ಸಮಯ ಕಳೆಯುವ ಸಲುವಾಗಿ ಜನಮನದಿಂದ ಹಿಂದೆ ಸರಿಯುವ ಉದ್ದೇಶದಿಂದ ಲಂಡನ್ಗೆ ಶಿಫ್ಟ್ ಆಗುತ್ತಾರೆ ಎಂದು ವರದಿಯಾಗಿತ್ತು. ವಿಶ್ವಕಪ್ ವಿಜಯದ ನಂತರ ತಕ್ಷಣವೇ ಭಾರತವನ್ನು ತೊರೆದಿದ್ದರು. ತಮ್ಮ ಕನಸಿನ ಮನೆ ಪೂರ್ಣಗೊಳಿಸಿರುವ ಕೊಹ್ಲಿ ದಂಪತಿ, ಲಂಡನ್ಗೆ ಶಿಫ್ಟ್ ಆಗುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ ಎಂದು ಹೇಳಬಹುದು.
