ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ; ಈ ಬೃಹತ್ ಐಪಿಎಲ್ ದಾಖಲೆ ನಿರ್ಮಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್
ಕನ್ನಡ ಸುದ್ದಿ  /  ಕ್ರಿಕೆಟ್  /  ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ; ಈ ಬೃಹತ್ ಐಪಿಎಲ್ ದಾಖಲೆ ನಿರ್ಮಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್

ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ; ಈ ಬೃಹತ್ ಐಪಿಎಲ್ ದಾಖಲೆ ನಿರ್ಮಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್

Virat Kohli : 17ನೇ ಆವೃತ್ತಿಯ ಐಪಿಎಲ್​ನಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ರೆಕಾರ್ಡ್ ನಿರ್ಮಿಸಿದ ಐಪಿಎಲ್​ನಲ್ಲಿ ಮೊದಲ ಆಟಗಾರ.

ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ
ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೂಪರ್​ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli), ತಮ್ಮ ಹೆಸರಿಗೆ ಇತಿಹಾಸ ಪುಸ್ತಕದಲ್ಲಿ ಮತ್ತೊಂದು ದಾಖಲೆಯನ್ನು ಸೇರ್ಪಡೆಗೊಳಿಸಿದ್ದಾರೆ. ಐಪಿಎಲ್​​ನಲ್ಲಿ 8ನೇ ಶತಕ ದಾಖಲಿಸಿದ ವಿರಾಟ್, ಇಂಡಿಯನ್ ಪ್ರೀಮಿಯರ್ ಲೀಗ್‌ ಚರಿತ್ರೆಯಲ್ಲಿ 7500+ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶನಿವಾರ (ಏಪ್ರಿಲ್ 6) ಸವಾಯಿ ಮಾನ್ಸಿಂಗ್ ಕ್ರಿಕೆಟ್​ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಲೀಗ್ ಹಂತದ ಪಂದ್ಯದ ವೇಳೆ ಕಿಂಗ್​ ಕೊಹ್ಲಿ ನೂತನ ಮೈಲಿಗಲ್ಲು ಮುಟ್ಟಿದ್ದಾರೆ. 34 ರನ್​ ಗಳಿಸಿದ ನೂತನ ದಾಖಲೆಯ ಪುಸ್ತಕ ತೆರೆದ ಕೊಹ್ಲಿ, ಸಿಡಿಸಿದ 7579 ರನ್​​​ಗಳೂ ಆರ್​ಸಿಬಿ ಪರವಾಗಿಯೇ ಬಂದಿರುವುದು ವಿಶೇಷ. ಲೀಗ್‌ನ ಇತಿಹಾಸದಲ್ಲಿ ಒಂದು ತಂಡದ ಪರವೇ ಆಡಿದ ಏಕೈಕ ಆಟಗಾರ ಕೊಹ್ಲಿ.

ತಮ್ಮ ಐಪಿಎಲ್ ವೃತ್ತಿಜೀವನ ಆರ್‌ಸಿಬಿಯೊಂದಿಗೆ ಪ್ರಾರಂಭಿಸಿದ ವಿರಾಟ್, ಅಂದಿನಿಂದ ಇಲ್ಲಿಯವರೆಗೂ ಅದೇ ತಂಡದ ಪರವೇ ಆಡುತ್ತಿದ್ದಾರೆ. ಇದರೊಂದಿಗೆ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಸೆಲೆಕ್ಟರ್​​ಗಳಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ. ಈಗಾಗಲೇ ಟಿ20 ವಿಶ್ವಕಪ್ ಟೂರ್ನಿಗೆ ವಿರಾಟ್ ಕೊಹ್ಲಿ ಬೇಡವೆಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ. ಈಗ ನಿರ್ಧಾರ ಬದಸುವ ಸಾಧ್ಯತೆ ಇದೆ.

ಐಪಿಎಲ್​ನಲ್ಲಿ 2008ರಿಂದ ಆರ್​ಸಿಬಿ ಪರವೇ ಆಡುತ್ತಿರುವ ವಿರಾಟ್ ಕೊಹ್ಲಿ, 242 ಪಂದ್ಯಗಳ 234 ಇನ್ನಿಂಗ್ಸ್​ಗಳ ಪೈಕಿ 38.12ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. 52 ಅರ್ಧಶತಕ ಮತ್ತು 8 ಶತಕ ಸಹಿತ 130.46ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​​ನಲ್ಲಿ 7579 ರನ್ ಗಳಿಸಿದ್ದಾರೆ. 8 ಶತಕ ಸಿಡಿಸಿರುವ ಕೊಹ್ಲಿ 2024ರ ಐಪಿಎಲ್​ನಲ್ಲಿ ಮೊದಲ ಶತಕ ಸಿಡಿಸಿದ ಆಟಗಾರ ಎನಿಸಿದ್ದಾರೆ.

ವಿರಾಟ್ ಕೊಹ್ಲಿ ಟಿ20 ವಿಶ್ವಕಪ್​ಗೆ ಸ್ಥಾನ ಪಡೆಯುತ್ತಾರಾ?

2024ರ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ, ಫಾರ್ಮ್ ಗಮನಿಸಿದರೆ, ವಿರಾಟ್ ಕೊಹ್ಲಿ 2024ರ ಟಿ20 ವಿಶ್ವಕಪ್ ತಂಡದ ಭಾಗವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. 2022ರ ವಿಶ್ವಕಪ್ ನಂತರ ಟಿ20ಐ ಕ್ರಿಕೆಟ್​ನಿಂದ ವಿರಾಮ ತೆಗೆದುಕೊಂಡ ಹಿರಿಯ ಆಟಗಾರರಲ್ಲಿ ಒಬ್ಬರು. ಅವರು 2023ರಲ್ಲಿ ಅವರು ಒಂದು ಟಿ20ಯೂ ಆಡಿರಲಿಲ್ಲ. ಆದರೆ ಅವಕಾಶ ಪಡೆಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಟಿ20 ವಿಶ್ವಕಪ್​​ನಲ್ಲಿ ರೋಹಿತ್ ಮೆನ್ ಇನ್ ಬ್ಲೂ ಮುನ್ನಡೆಸುತ್ತಾರೆ.

ವರ್ಷಪಂದ್ಯರನ್ಗರಿಷ್ಠಸರಾಸರಿಸ್ಟ್ರೈಕ್​ರೇಟ್10050
ಕೊಹ್ಲಿ ವೃತ್ತಿಜೀವನ242757911338.28130.63852
2024531683*91.67141.0312
202314639101*53.25139.8226
2022163417322.73115.9902
20211540572*28.92119.4603
20201546690*42.36121.3503
20191446410033.14141.4612
20181453092*48.18139.104
2017103086430.8122.2204
20161697311381.08152.0347
20151650582*45.9130.8203
2014143597327.61122.102
2013166349945.28138.7306
20121636473*28111.6502
2011165577146.41121.0804
2010163075827.9144.8101
2009162465022.36112.3201
2008131653815105.0900