ಕನ್ನಡ ಸುದ್ದಿ  /  ಕ್ರಿಕೆಟ್  /  ಕದನದೊಳ್ ಕಿಂಗ್ ಕೊಹ್ಲಿ ಕೆಣಕಿ ಉಳಿದವರಿಲ್ಲ; ರವೀಂದ್ರ ಜಡೇಜಾಗೆ ಅಲ್ಲೇ ಡ್ರಾ, ಅಲ್ಲೇ ಬಹುಮಾನ, ವಿಡಿಯೋ

ಕದನದೊಳ್ ಕಿಂಗ್ ಕೊಹ್ಲಿ ಕೆಣಕಿ ಉಳಿದವರಿಲ್ಲ; ರವೀಂದ್ರ ಜಡೇಜಾಗೆ ಅಲ್ಲೇ ಡ್ರಾ, ಅಲ್ಲೇ ಬಹುಮಾನ, ವಿಡಿಯೋ

Virat Kohli : ಆರ್​ಸಿಬಿ ಮತ್ತು ಸಿಎಸ್​ಕೆ ಪಂದ್ಯದಲ್ಲಿ ತನ್ನನ್ನು ಕೆಣಕಿದ ರವೀಂದ್ರ ಜಡೇಜಾಗೆ ವಿರಾಟ್ ಕೊಹ್ಲಿ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.

ಕದನದೊಳ್ ಕಿಂಗ್ ಕೊಹ್ಲಿ ಕೆಣಕಿ ಉಳಿದವರಿಲ್ಲ; ರವೀಂದ್ರ ಜಡೇಜಾಗೆ ಅಲ್ಲೇ ಡ್ರಾ, ಅಲ್ಲೇ ಬಹುಮಾನ, ವಿಡಿಯೋ
ಕದನದೊಳ್ ಕಿಂಗ್ ಕೊಹ್ಲಿ ಕೆಣಕಿ ಉಳಿದವರಿಲ್ಲ; ರವೀಂದ್ರ ಜಡೇಜಾಗೆ ಅಲ್ಲೇ ಡ್ರಾ, ಅಲ್ಲೇ ಬಹುಮಾನ, ವಿಡಿಯೋ

ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿಯನ್ನು (Virat Kohli) ಯಾವುದೇ ಕಾರಣಕ್ಕೂ ಕೆಣಕಬಾರದು. ಕೆಣಕಿ ಉಳಿದವರೂ ಇಲ್ಲ! ಅದು ಐಪಿಎಲ್ ಆಗಿರಲಿ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್ ಆಗಿರಲಿ, ತನ್ನ ಕೆಣಕಿದವರಿಗೆ ಅಲ್ಲೆ ಡ್ರಾ ಅಲ್ಲೇ ಬಹುಮಾನ ಕೊಡದೆ ಸುಮ್ಮನಿರಲ್ಲ ಕೊಹ್ಲಿ. ಇಂತಹದ್ದೇ ಘಟನೆ ಮತ್ತೊಮ್ಮೆ ನಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ರವೀಂದ್ರ ಜಡೇಜಾಗೆ (Ravindra Jadeja) ಮುಟ್ಟಿನೋಡಿಕೊಳ್ಳುವಂತೆ ಕೊಹ್ಲಿ ಉತ್ತರ ಕೊಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್‌ನಲ್ಲಿ ತಮ್ಮ ಕನಸಿನ ಓಟವನ್ನು ಉಳಿಸಿಕೊಂಡಿರುವ ಆರ್​​ಸಿಬಿ ಸ್ಟಾರ್​​ ಬ್ಯಾಟರ್ ವಿರಾಟ್ ಕೊಹ್ಲಿ ಅವರು ತವರು ನೆಲದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ತಮ್ಮ ಅಂತಿಮ ಗುಂಪು-ಹಂತದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಆರ್​​ಸಿಬಿ ಬಿಗ್​ಸ್ಕೋರ್ ಮಾಡಲು ನೆರವಾದ ಕೊಹ್ಲಿ 10ನೇ ಓವರ್‌ನಲ್ಲಿ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್​ನಲ್ಲಿ ಔಟಾದರು. ಕೇವಲ 29 ಎಸೆತಗಳಲ್ಲಿ 47 ರನ್ ಗಳಿಸಿದರು.

ತಾನು ಔಟಾಗುವ ಓವರ್​​ಗೂ ಮುನ್ನ ರವೀಂದ್ರ ಜಡೇಜಾ ಅವರು ವಿರಾಟ್ ಕೊಹ್ಲಿ ಕೆಣಕಿದ್ದರು. ಮಳೆ ಕಾಣಿಸಿಕೊಂಡ ನಂತರ ಸ್ಪಿನ್ನರ್​ಗಳಿಗೆ ಪಿಚ್​ ನೆರವಾಗುತ್ತಿತ್ತು. ಟರ್ನಿಂಗ್ ಟ್ರ್ಯಾಕ್​​ನಲ್ಲಿ ಫಾಫ್ ಮತ್ತು ಕೊಹ್ಲಿ ರನ್ ಗಳಿಸಲು ಪರದಾಡಿದರು. ಪವರ್​ಪ್ಲೇ ನಂತರ ಪುಟಿದೆದ್ದ ಕೊಹ್ಲಿ, ಸಿಎಸ್​ಕೆ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದರು. 9ನೇ ಓವರ್​​ನಲ್ಲಿ ವಿರಾಟ್​​ ಅವರನ್ನು ಜಡೇಜಾ ಸ್ಲೆಡ್ಜಿಂಗ್ ಮಾಡಿದರು.

9ನೇ ಓವರ್​​ನ 3ನೇ ಎಸೆತವನ್ನು ಎದುರಿಸಿದ ವಿರಾಟ್ ಬ್ಯಾಟ್​​ಗೆ ಚೆಂಡು ಸಿಗಲಿಲ್ಲ. ಚೆಂಡು ಟರ್ನ್​ ಆದ ಕಾರಣ ಧೋನಿ ಕೈ ಸೇರಿತ್ತು. ಟರ್ನ್​ ಆಗಿದ್ದು ನೋಡಿ ವಿರಾಟ್ ಕೂಡ ಶಾಕ್ ಆದರು. ಆದರೆ ಸುಮ್ಮನಿರದ ಜಡ್ಡು, ನಾಲಿಗೆಯನ್ನು ಹೊರಹಾಕಿ ವ್ಯಂಗ್ಯ ಮಾಡಿದರು. ಆಗ ಸುಮ್ಮನಿದ್ದ ಕೊಹ್ಲಿ, ಮರು ಎಸೆತದಲ್ಲೇ ಅದ್ಭುತ ಸಿಕ್ಸರ್​ ಸಿಡಿಸಿ ಜಡೇಜಾರವನ್ನು ನೋಡುತ್ತಲೇ ಅಗ್ರೆಸ್ಸಿವ್​ ಆಗಿ ಸೆಲೆಬ್ರೇಟ್ ಮಾಡಿದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಕದನದೊಳ್ ಕೊಹ್ಲಿ ಕೆಣಕಿ ಉಳಿದವರಿಲ್ಲ ಎಂದ ಫ್ಯಾನ್ಸ್

ವಿರಾಟ್​, ಜಡ್ಡುಗೆ ತಿರುಗೇಟು ನೀಡಿದ ಬೆನ್ನಲ್ಲೇ ಅಭಿಮಾನಿಗಳು ಕದನದೊಳ್ ಕಿಂಗ್ ಕೊಹ್ಲಿಯ ಕೆಣಕಿ ಉಳಿದವರಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ. ನಿಂಗಿದು ಬೇಕಿತ್ತಾ ಎಂದು ಜಡೇಜಾಗೆ ತರಾಟೆ ತೆಗೆದುಕೊಂಡಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್​ನ ವೇಗಿ ಕೇಸ್ರಿಕ್ ವಿಲಿಯಮ್ಸ್​, ವಿರಾಟ್ ಅವರನ್ನು ಔಟ್ ಮಾಡಿ ನೋಟ್ ಬುಕ್ ಸೆಲೆಬ್ರೇಷನ್ ಮಾಡಿದ್ದರು. ಅದರ ಮರು ಪಂದ್ಯದಲ್ಲೇ ಆತನಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದ ಕೊಹ್ಲಿ ಅದೇ ರೀತಿ ಸೆಲೆಬ್ರೇಷನ್ ಮಾಡಿದ್ದರು.

ಆರ್​ಸಿಬಿ vs ಸಿಎಸ್​ಕೆ ಸಂಕ್ಷಿಪ್ತ ಸ್ಕೋರ್​

ಸಿಎಸ್​ಕೆ ವಿರುದ್ಧ ಮೊದಲು ಬ್ಯಾಟಿಂಗ್ ಆರ್​ಸಿಬಿ, ಬೃಹತ್ ಮೊತ್ತ ಪೇರಿಸಿತು. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ರಜತ್ ಪಾಟೀದಾರ್​, ಕ್ಯಾಮರೂನ್ ಗ್ರೀನ್ ಬೊಂಬಾಟ್ ಬ್ಯಾಟಿಂಗ್ ನಡೆಸಿದರು. ಪರಿಣಾಮ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಸಿಎಸ್​ಕೆ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್​ಗಳಿಗೆ ಇನ್ನಿಂಗ್ಸ್​ ಮುಗಿಸಿತು. ರಚಿನ್ ರವೀಂದ್ರ ಮತ್ತು ರವೀಂದ್ರ ಜಡೇಜಾ ಪ್ರತಿರೋಧ ತೋರಿದರೂ ಗೆಲುವು ದಕ್ಕಲಿಲ್ಲ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ