ಕನ್ನಡ ಸುದ್ದಿ  /  Cricket  /  Virat Kohli In Ipl Smriti Mandhana In Wpl 1st Fifty In 3rd Match Of 2nd Season 4 Similarities Between Smriti Kohli Prs

ಇದೆಂಥಾ ಕಾಕತಾಳೀಯ ನೋಡಿ; ಆರ್​​ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಸ್ಮೃತಿ ಮಂಧಾನ ನಡುವೆ ಒಂದೇ ರೀತಿಯ ಸಾಮ್ಯತೆಗಳು

Virat Kohli vs Smriti Mandhana : ಆರ್​​ಸಿಬಿ ಪುರುಷರ ತಂಡದ ಕಿಂಗ್ ವಿರಾಟ್ ಕೊಹ್ಲಿ ಅವರ ಹಾದಿಯಲ್ಲೇ ಡಬ್ಲ್ಯುಪಿಎಲ್​​ನಲ್ಲಿ ಕ್ವೀನ್ ಸ್ಮೃತಿ ಮಂಧಾನ ಕೂಡ ನಡೆದು ಬರುತ್ತಿದ್ದಾರೆ. ಕಾಕತಾಳೀಯ ಎನ್ನುವಂತೆ ಅವರ ಅಂಕಿಅಂಶಗಳೇ ಸಾಕ್ಷಿ.

ಆರ್​​ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಸ್ಮೃತಿ ಮಂಧಾನ ನಡುವೆ ಒಂದೇ ರೀತಿಯ ಸಾಮ್ಯತೆಗಳು
ಆರ್​​ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಸ್ಮೃತಿ ಮಂಧಾನ ನಡುವೆ ಒಂದೇ ರೀತಿಯ ಸಾಮ್ಯತೆಗಳು

ಮಹಿಳಾ ಪ್ರೀಮಿಯರ್ ಲೀಗ್​​ನಲ್ಲಿ (WPL 2024) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು (RCB 2024) ಉತ್ತಮ ಪ್ರದರ್ಶನ ನೀಡುತ್ತಿದೆ. ಆಡಿದ ಮೂರು ಪಂದ್ಯಗಳಲ್ಲಿ ಎರಡಲ್ಲಿ ಜಯದ ನಗೆ ಬೀರಿದೆ. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಎದುರಿನ ಪಂದ್ಯದಲ್ಲಿ ಸ್ಮೃತಿ ಮಂಧಾನ ಬಳಗ ಮೊದಲ ಸೋಲಿನ ಕಹಿ ಅನುಭವಿಸಿತು. ಈ ಪಂದ್ಯದಲ್ಲಿ ನಾಯಕಿ ಸ್ಮೃತಿ ಮಂಧಾನ (Smriti Mandhana) 74 ರನ್​ಗಳ ಭರ್ಜರಿ ಇನ್ನಿಂಗ್ಸ್​​ ಕಟ್ಟಿದರೂ ಗೆಲುವು ದಕ್ಕಲಿಲ್ಲ.

ಸ್ಮೃತಿ ಮಂಧಾನ ಅವರು ತಮ್ಮ ಚೊಚ್ಚಲ ಅರ್ಧಶತಕದ ಮೂಲಕ ಕಾಕತಾಳೀಯ ಘಟನೆಯೊಂದು ನಡೆದಿದೆ. ಆರ್​​ಸಿಬಿ ಪುರುಷರ ತಂಡದ ಕಿಂಗ್ ವಿರಾಟ್ ಕೊಹ್ಲಿ (Virat Kohli) ಅವರ ಹಾದಿಯಲ್ಲೇ ಡಬ್ಲ್ಯುಪಿಎಲ್​​ನಲ್ಲಿ ಕ್ವೀನ್ ಸ್ಮೃತಿ ಮಂಧಾನ ಕೂಡ ನಡೆದು ಬರುತ್ತಿದ್ದಾರೆ. ಕಾಕತಾಳೀಯ ಎನ್ನುವಂತೆ ಅವರ ಅಂಕಿಅಂಶಗಳೇ ಸಾಕ್ಷಿ. ಇಬ್ಬರ ನಡುವೆ ಕಾಕತಾಳೀಯ ಘಟನೆ ಏನು ಇಲ್ಲಿದೆ ನೋಡಿ.

ಇಬ್ಬರ ಜೆರ್ಸಿಯೂ ಒಂದೇ ಸಂಖ್ಯೆ

ಸ್ಮೃತಿ ಮಂಧಾನ ಮತ್ತು ವಿರಾಟ್ ಕೊಹ್ಲಿ ಇಬ್ಬರ ಜರ್ಸಿ ಸಂಖ್ಯೆ 18 ಆಗಿದೆ. ಇಬ್ಬರು ಆರ್​​ಸಿಬಿ ಪರ ಆರಂಭಿಕ ಬ್ಯಾಟರ್​​ಗಳಾಗಿದ್ದಾರೆ.

2008ರಲ್ಲಿ ಐಪಿಎಲ್​​ ಉದಯವಾಯಿತು. ಆರ್​ಸಿಬಿ ತಂಡವನ್ನು ಸೇರಿಕೊಂಡ ವಿರಾಟ್ ಅಂದಿನಿಂದ ಇಲ್ಲಿಯವರೆಗೂ ಅದೇ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅಚ್ಚರಿ ಏನೆಂದರೆ ಅವರು ಮೊದಲ ಆವೃತ್ತಿಯಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಿರಲಿಲ್ಲ. ಆದರೆ ಎರಡನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ತಮ್ಮ ಮೊದಲ ಅರ್ಧಶತಕ (50) ಬಾರಿಸಿದ್ದರು. ಆದರೆ ಈ ಪಂದ್ಯದಲ್ಲಿ ಆರ್​​ಸಿಬಿ ಸೋತಿತ್ತು.

ಇನ್ನು ವುಮೆನ್ಸ್ ಪ್ರೀಮಿಯರ್​ ಲೀಗ್​ ಮೊದಲ ಆವೃತ್ತಿಯಲ್ಲಿ ಸ್ಮೃತಿ ಮಂಧಾನ ಸಹ ಒಂದೇ ಒಂದು ಹಾಫ್ ಸೆಂಚುರಿ ಸಿಡಿಸಿರಲಿಲ್ಲ. ಇದೀಗ ಎರಡನೇ ಆವೃತ್ತಿಯ 3ನೇ ಪಂದ್ಯದಲ್ಲಿ ಸ್ಮೃತಿ, ಡೆಲ್ಲಿ ಕ್ಯಾಪಿಟಲ್ಸ್ ಎದುರು ತಮ್ಮ ಚೊಚ್ಚಲ ಐವತ್ತನ್ನು ಸಿಡಿಸಿದರು. ಸ್ಮೃತಿ ಮಂಧಾನ ಬಾರಿಸಿದ ಅರ್ಧಶತಕ ಸಹ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಿಲ್ಲ. ಕೊಹ್ಲಿ ಮತ್ತು ಸ್ಮೃತಿ ಇಬ್ಬರು ಸಹ ತಮ್ಮ ಮೊದಲ ಅರ್ಧಶತಕವನ್ನು ಕಾಕತಾಳೀಯ ಎನ್ನುವಂತೆ ಎರಡನೇ ಆವೃತ್ತಿಯ ತಮ್ಮ 3ನೇ ಪಂದ್ಯದಲ್ಲೇ ಬಂದಿರುವುದು ವಿಶೇಷ.

ಆರ್​ಸಿಬಿ ಪ್ರದರ್ಶನ

ಮಹಿಳಾ ಪ್ರೀಮಿಯರ್​ ಲೀಗ್​​​ನಲ್ಲಿ ಆರ್​​ಸಿಬಿ ಕಳೆದ ಬಾರಿ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಮೊದಲ ಆವೃತ್ತಿಯಲ್ಲಿ ಮೊದಲ ಐದು ಪಂದ್ಯಗಳನ್ನು ಸೋತಿತ್ತು. ಆದರೆ ಈ ಬಾರಿ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಜಯಿಸಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದೇ ಅದ್ಭುತ ಪ್ರದರ್ಶನವನ್ನು ಮುಂದುವರೆಸಿ 16 ವರ್ಷಗಳಿಂದ ಕಪ್ ಗೆಲ್ಲದ ಆರ್​ಸಿಬಿ ತಂಡಕ್ಕೆ ಚೊಚ್ಚಲ ಕಪ್ ಗೆದ್ದುಕೊಡುವ ಲೆಕ್ಕಾಚಾರದಲ್ಲಿದೆ ಸ್ಮೃತಿ ಬಳಗ.

ಮಹಿಳಾ ತಂಡಕ್ಕೆ ಸ್ಮೃತಿ, ಪುರುಷರ ತಂಡಕ್ಕೆ ಕೊಹ್ಲಿ

ಕ್ರಿಕೆಟ್​​ ಜಗತ್ತಿನಲ್ಲಿ ಇಬ್ಬರಿಗೂ ವಿಶೇಷ ಫ್ಯಾನ್ ಫಾಲೋಯಿಂಗ್ ಇದೆ. ವಿರಾಟ್ ಕೊಹ್ಲಿ ಮತ್ತು ಸ್ಮೃತಿ ಮಂಧಾನ ಕ್ರಮವಾಗಿ ಪುರುಷರ ಮತ್ತು ಮಹಿಳಾ ಕ್ರಿಕೆಟ್​ ತಂಡಗಳ ಆಧಾರ ಸ್ಥಂಭಗಳು. ತಮ್ಮ ವಿಭಿನ್ನ ಆಟದ ಮೂಲಕ ವಿಶ್ವ ಕ್ರಿಕೆಟ್​​ನಲ್ಲಿ ಅಪಾರ ಖ್ಯಾತಿ ಪಡೆದವರು. ಈಗ ಇಬ್ಬರು ಸಹ ಆರ್​​ಸಿಬಿ ಪರವೇ ಆಡುತ್ತಿರುವುದು ಖುಷಿ ಸಂಗತಿಯಾಗಿದ್ದು, ಅಭಿಮಾನಿಗಳಿಂದ ಪೂರ್ಣ ಪ್ರಮಾಣದ ಬೆಂಬಲ ಸಿಗುತ್ತಿದೆ.

IPL_Entry_Point