ವಿರಾಟ್ ಕೊಹ್ಲಿ 150 ಕೆಜಿ ತೂಕ ಎತ್ತಬಹುದು, ಸಿಕ್ಸರ್ ಹೊಡಿಯೋ ಸಾಮರ್ಥ್ಯ ಇರೋದು ರೋಹಿತ್ಗೆ; ಕಪಿಲ್ ದೇವ್
Kapil Dev on Rohit Sharma: ವಿರಾಟ್ ಕೊಹ್ಲಿ 150 ಕೆಜಿ ಮತ್ತು 250 ಕೆಜಿ ಡಂಬಲ್ಗಳನ್ನು ಎತ್ತಬಹುದು. ಹಾಗಂತ ರೋಹಿತ್ ಶರ್ಮಾ ಕೂಡ ಅದೇ ರೀತಿ ಮಾಡಬೇಕು ಎಂದರ್ಥವಲ್ಲ ಎಂದು ಕಪಿಲ್ ದೇವ್ ಹೇಳಿದ್ದಾರೆ.
ಭಾರತ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ (Kapil Dev) ಅವರು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ (Rohit Sharma and Virat Kohli) ಸುತ್ತ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಪ್ರಸ್ತುತ ಭಾರತ ನಾಯಕನ ಸ್ವಯಂ-ಅರಿವು ಮತ್ತು ತಂಡದ ನೈತಿಕತೆಯನ್ನು ಕಾಪಾಡಿಕೊಳ್ಳುವ ಸಾಮರ್ಥ್ಯಕ್ಕಾಗಿ ಹೊಗಳಿದ್ದಾರೆ. ಇತ್ತೀಚೆಗೆ ಭಾರತದ ವೃತ್ತಿಪರ ಗಾಲ್ಫ್ ಟೂರ್‌ನ ಅಧ್ಯಕ್ಷರಾಗಿ ನೇಮಕಗೊಂಡ ಕಪಿಲ್, ರೋಹಿತ್ ಅವರ ನಡವಳಿಕೆಯು ಕೊಹ್ಲಿ ಅವರಿಗಿಂತ ಭಿನ್ನವಾಗಿದೆ ಎಂದು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಅವರಂತೆಲ್ಲಾ ಅವರು (ರೋಹಿತ್ ಶರ್ಮಾ) ಜಿಗಿಯುವುದಿಲ್ಲ. ಅಗ್ರೆಸ್ಸಿವ್ ಆಗಿ ಇರುವುದಿಲ್ಲ. ಅವರು ತಮ್ಮ ಮಿತಿಗಳನ್ನು ತಿಳಿದಿದ್ದಾರೆ. ಆದರೆ, ಆ ಮಿತಿಗಳಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂದಿದ್ದಾರೆ. ಹಾಗೆಯೇ 1983 ರ ವಿಶ್ವಕಪ್ ವಿಜೇತ ಭಾರತದ ನಾಯಕ ಕಪಿಲ್ ದೇವ್, ರೋಹಿತ್ ಅವರ ನಾಯಕತ್ವ ಕೌಶಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೋಹಿತ್ ಇಡೀ ತಂಡವನ್ನು ಯಾವಾಗಲೂ ಸಂತೋಷವಾಗಿರಿಸುತ್ತಾರೆ ಹೇಳಿರುವ ಕಪಿಲ್ ದೇವ್, ರೋಹಿತ್ ಮತ್ತು ಕೊಹ್ಲಿ ಅವರ ಚಾಕ್ ಮತ್ತು ಚೀಸ್ ಸ್ವಭಾವದ ಬಗ್ಗೆ ಮಾತನಾಡಿದ್ದಾರೆ. ಕೊಹ್ಲಿಯಷ್ಟು ಸಿಕ್ಸ್ ಪ್ಯಾಕ್ ಮೈಕಟ್ಟು ಹೊಂದಿರದಿದ್ದರೂ ಪಾರ್ಕ್‌ನಾದ್ಯಂತ ಚೆಂಡನ್ನು ಹೊಡೆಯುವ ರೋಹಿತ್ ಅವರ ಪ್ರಭಾವಶಾಲಿ ಸಾಮರ್ಥ್ಯವನ್ನು ಕಪಿಲ್ ಶ್ಲಾಘಿಸಿದ್ದಾರೆ.
ರೋಹಿತ್ಗಿಂತ ಉತ್ತಮರಿಲ್ಲ ಎಂದ ಕಪಿಲ್ ದೇವ್
ವಿರಾಟ್ ಕೊಹ್ಲಿ 150 ಕೆಜಿ ಮತ್ತು 250 ಕೆಜಿ ಡಂಬಲ್ಗಳನ್ನು ಎತ್ತಬಹುದು. ಹಾಗಂತ ರೋಹಿತ್ ಕೂಡ ಅದೇ ರೀತಿ ಮಾಡಬೇಕು ಎಂದರ್ಥವಲ್ಲ. ರೋಹಿತ್ ತನ್ನ ಆಟವನ್ನು ಚೆನ್ನಾಗಿ ತಿಳಿದಿದ್ದಾರೆ. ಅವನು ತನ್ನೊಳಗೆ ಆಡುತ್ತಾರೆ. ಅವರು ವಿರಾಟ್ ಕೊಹ್ಲಿಯಂತೆ ಅಲ್ಲ. ಆತನಂತೆ ಜಿಗಿಯುವುದಿಲ್ಲ. ರೋಹಿತ್ಗೆ ತನ್ನ ಮಿತಿಗಳ ಬಗ್ಗೆ ಅರಿವಿದೆ. ಈ ವಿಷಯದಲ್ಲಿ ರೋಹಿತ್ಗಿಂತ ಉತ್ತಮವಾದವರು ಯಾರೂ ಇಲ್ಲ, ವಿರಾಟ್ ಸೇರಿದಂತೆ ಎಂದು ಕಪಿಲ್ ಎಬಿಪಿ ನ್ಯೂಸ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಮಾಜಿ ನಾಯಕ ವಾಸೀಂ ಅಕ್ರಮ್ ಕೂಡ ಭಾಗವಹಿಸಿದ್ದರು. ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ನಿರ್ವಹಿಸಿದರು. ರೋಹಿತ್ ಅವರ ನಾಯಕತ್ವದ ಕೌಶಲ್ಯಗಳ ಬಗ್ಗೆ ಸ್ವಲ್ಪ ಬೆಳಕು ಚೆಲ್ಲುವಂತೆ ಕಪಿಲ್ ಅವರನ್ನು ಕೇಳಿದರು. ರೋಹಿತ್ ಶ್ರೇಷ್ಠ ಆಟಗಾರ ಮಾತ್ರವಲ್ಲ, ಆಟಗಾರರಿಗೆ ಏನು ಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವ ಉತ್ತಮ ನಾಯಕ ಎಂದು ಕಪಿಲ್ ಹೇಳಿದ್ದಾರೆ.
ಅನೇಕ ದೊಡ್ಡ ಆಟಗಾರರು ಬರುತ್ತಾರೆ, ಹೋಗುತ್ತಾರೆ. ಆದರೆ ಅವರು ತಮಗಾಗಿ ಆಡುತ್ತಾರೆ, ತಮಗಾಗಿ ನಾಯಕತ್ವ ಮಾಡುತ್ತಾರೆ. ಆದರೆ ರೋಹಿತ್ ವಿಭಿನ್ನ. ಏಕೆಂದರೆ ಇಡೀ ತಂಡವನ್ನು ಸಂತೋಷವಾಗಿರಿಸುತ್ತಾರೆ ಎಂದಿದ್ದಾರೆ ಕಪಿಲ್. ಟೀಮ್ ಇಂಡಿಯಾ ಅಜೇಯವಾಗಿ ಟಿ20 ವಿಶ್ವಕಪ್ 2024 ಫೈನಲ್ ಪ್ರವೇಶಿಸಿದೆ. ಇಂದು (ಜೂನ್ 29) ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.
ರೋಹಿತ್ ಅದ್ಭುತ ಪ್ರದರ್ಶನ, ವಿರಾಟ್ ಕೊಹ್ಲಿ ಫೇಲ್
ಹಾಲಿ ವಿಶ್ವಕಪ್ 2024 ನಲ್ಲಿ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದಾರೆ. 7 ಪಂದ್ಯಗಳಲ್ಲಿ 3 ಅರ್ಧಶತಕ ಸಹಿತ 248 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 41.33. ಅಲ್ಲದೆ, ಅವರ ಸ್ಟ್ರೈಕ್ರೇಟ್ 155.97. ಮತ್ತೊಂದೆಡೆ ವಿರಾಟ್ ಕೊಹ್ಲಿ ಅಟ್ಟರ್ ಫ್ಲಾಪ್ ಪ್ರದರ್ಶನ ನೀಡಿದ್ದಾರೆ. 7 ಪಂದ್ಯಗಳಿಂದ ಒಂದೂ ಅರ್ಧಶತಕ ಸಿಡಿಸದೆ ಕೇವಲ 75 ರನ್ ಗಳಿಸಿದ್ದಾರೆ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ