13 ವರ್ಷಗಳ ನಂತರ ದೆಹಲಿ ರಣಜಿ ತಂಡದಲ್ಲಿ ಸ್ಥಾನ ಪಡೆದ ವಿರಾಟ್ ಕೊಹ್ಲಿ; ಆದರೆ ಆಡೋದು ಅನುಮಾನ, ಕಾರಣವೇನು?
ಕನ್ನಡ ಸುದ್ದಿ  /  ಕ್ರಿಕೆಟ್  /  13 ವರ್ಷಗಳ ನಂತರ ದೆಹಲಿ ರಣಜಿ ತಂಡದಲ್ಲಿ ಸ್ಥಾನ ಪಡೆದ ವಿರಾಟ್ ಕೊಹ್ಲಿ; ಆದರೆ ಆಡೋದು ಅನುಮಾನ, ಕಾರಣವೇನು?

13 ವರ್ಷಗಳ ನಂತರ ದೆಹಲಿ ರಣಜಿ ತಂಡದಲ್ಲಿ ಸ್ಥಾನ ಪಡೆದ ವಿರಾಟ್ ಕೊಹ್ಲಿ; ಆದರೆ ಆಡೋದು ಅನುಮಾನ, ಕಾರಣವೇನು?

Virat Kohli: ಮುಂದಿನ ಎರಡು ಪಂದ್ಯಗಳಿಗೆ ದೆಹಲಿ ರಣಜಿ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಆದಾಗ್ಯೂ, ಅವರ ಭಾಗವಹಿಸುವಿಕೆಯ ಸಾಧ್ಯತೆ ತೀರಾ ಕಡಿಮೆ ಎಂದು ವರದಿಯಾಗಿದೆ.

13 ವರ್ಷಗಳ ನಂತರ ದೆಹಲಿ ರಣಜಿ ತಂಡದಲ್ಲಿ ಸ್ಥಾನ ಪಡೆದ ವಿರಾಟ್ ಕೊಹ್ಲಿ; ಆದರೆ ಆಡೋದು ಅನುಮಾನ, ಕಾರಣವೇನು?
13 ವರ್ಷಗಳ ನಂತರ ದೆಹಲಿ ರಣಜಿ ತಂಡದಲ್ಲಿ ಸ್ಥಾನ ಪಡೆದ ವಿರಾಟ್ ಕೊಹ್ಲಿ; ಆದರೆ ಆಡೋದು ಅನುಮಾನ, ಕಾರಣವೇನು? (AFP)

ಮುಂದಿನ ಎರಡು ರಣಜಿ ಟ್ರೋಫಿ ಪಂದ್ಯಗಳಿಗೆ ದೆಹಲಿ ತಂಡದಲ್ಲಿ ಸ್ಥಾನ ಪಡೆದಿರುವ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಭಾಗವಹಿಸುವಿಕೆ ಕುರಿತು ಅನುಮಾನ ಉಂಟಾಗಿದೆ. ಕೊಹ್ಲಿ ಕತ್ತು ಉಳುಕಿರುವ ಕಾರಣ ಜನವರಿ 23ರಿಂದ ಸೌರಾಷ್ಟ್ರ ವಿರುದ್ಧ ಆರಂಭವಾಗುವ ರಣಜಿ ಪಂದ್ಯಕ್ಕೆ ದೆಹಲಿ ಪರ ಕಣಕ್ಕಿಳಿಯುವುದು ಅನುಮಾನ ಎಂದು ಹೇಳಲಾಗುತ್ತಿದೆ. ರಣಜಿ ಟ್ರೋಫಿಯ ಎರಡನೇ ಸುತ್ತಿನಲ್ಲಿ ದೆಹಲಿ ತನ್ನ ಮುಂದಿನ ಪಂದ್ಯವನ್ನು ರಾಜ್​ಕೋಟ್​ನಲ್ಲಿ ಸೌರಾಷ್ಟ್ರ ವಿರುದ್ಧ ಜನವರಿ 23ರಿಂದ ಆಡಬೇಕಿದೆ.

ಕೊಹ್ಲಿ ಕತ್ತು ಉಳಿಕಿದ್ದು, ಇಂಜೆಕ್ಷನ್ ಪಡೆದುಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕೊಹ್ಲಿ ಆಯ್ಕೆಯಾದ 2 ಪಂದ್ಯಗಳಲ್ಲಿ ಮೊದಲನೇ ಪಂದ್ಯ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದರೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (DDCA) ಆಯ್ಕೆದಾರರಿಗೆ ಕೊಹ್ಲಿ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಈ ಬಗ್ಗೆ ಮಾಹಿತಿ ಒದಗಿಸಿದರೆ ಸ್ಪಷ್ಟ ಚಿತ್ರಣ ಸಿಗಲಿದೆ. ದೆಹಲಿ ತಂಡ ಜನವರಿ 20ರಂದು ಸೌರಾಷ್ಟ್ರ ತಲುಪಲಿದೆ. ಪಂದ್ಯದ ಆರಂಭಕ್ಕೂ ಮುನ್ನ 2 ತರಬೇತಿ ಅವಧಿಗಳಲ್ಲಿ ಪಾಲ್ಗೊಳ್ಳಲಿದೆ.

ಕೊಹ್ಲಿ ಜೊತೆಗೆ ರಿಷಭ್​ಗೂ ಸ್ಥಾನ

ಬಿಸಿಸಿಐ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಬಳಿಕ ಭಾರತ ತಂಡದ ಆಟಗಾರರು ರಣಜಿ ಆಡಲು ಸಜ್ಜಾಗಿದ್ದಾರೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ, ಬಾರ್ಡರ್​-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಹಿನ್ನೆಲೆ ರಾಷ್ಟ್ರೀಯ ತಂಡದ ಎಲ್ಲಾ ಆಟಗಾರರು ರಣಜಿ ಆಡುವುದು ಕಡ್ಡಾಯ ಎಂದು ಸೂಚನೆ ನೀಡಿದೆ. ಪರ್ತ್​​ನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಶತಕ ಬಾರಿಸಿದ್ದ ಕೊಹ್ಲಿ ಒಟ್ಟಾರೆ 9 ಇನ್ನಿಂಗ್ಸ್​​ಗಳಲ್ಲಿ ಕೇವಲ 190 ರನ್ ಗಳಿಸಿದ್ದರು.

ಆದರೆ ಬಿಜಿಟಿ ಸರಣಿಯಲ್ಲಿ 9 ಇನ್ನಿಂಗ್ಸ್​ ಪೈಕಿ 8 ಬಾರಿ ಕೊಹ್ಲಿ ಆಫ್ ಸ್ಟಂಪ್​ನ ಹೊರಗಿನ ಎಸೆತಗಳಿಗೆ ಔಟಾದರು. 36ರ ಹರೆಯದ ಆಟಗಾರ ಕಳೆದ 5 ವರ್ಷಗಳಿಂದ ಟೆಸ್ಟ್ ಕ್ರಿಕೆಟ್​​ನಲ್ಲಿ ಕೇವಲ 5 ಶತಕಗಳನ್ನಷ್ಟೇ ಸಿಡಿಸಿದ್ದಾರೆ. ಕಳಪೆ ಫಾರ್ಮ್​​ನಲ್ಲಿರುವ ಕೊಹ್ಲಿ, ರನ್ ಗಳಿಸಲು ಪರದಾಡುತ್ತಿದ್ದಾರೆ. ಕೊನೆಯ ಬಾರಿಗೆ 2012 ರಲ್ಲಿ ರಣಜಿ ಆಡಿದ್ದ ವಿರಾಟ್, 13 ವರ್ಷಗಳ ನಂತರ ಮೊದಲ ಬಾರಿಗೆ ದೇಶೀಯ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಕೊಹ್ಲಿ ಜತೆಗೆ ವಿಕೆಟ್-ಕೀಪರ್ ಬ್ಯಾಟರ್​ ರಿಷಭ್ ಪಂತ್ ಕೂಡ ಸ್ಥಾನ ಪಡೆದಿದ್ದಾರೆ.

7 ವರ್ಷಗಳ ರಣಜಿ ಆಡ್ತಿದ್ದಾರೆ ರಿಷಭ್

ಸೌರಾಷ್ಟ್ರ ಮತ್ತು ರೈಲ್ವೇಸ್ ವಿರುದ್ಧದ ಮುಂದಿನ ಎರಡು ರಣಜಿ ಟ್ರೋಫಿ ಪಂದ್ಯಗಳಿಗೆ ದೆಹಲಿ ತಂಡದಲ್ಲಿ ರಿಷಭ್ ಪಂತ್ ಹೆಸರಿಸಲಾಗಿದೆ. ಪಂತ್ ಸೌರಾಷ್ಟ್ರ ವಿರುದ್ಧ ಆಡಿದರೆ, 7 ವರ್ಷಗಳ ನಂತರ ಅವರ ಮೊದಲ ರಣಜಿ ಟ್ರೋಫಿ ಪಂದ್ಯವಾಗಲಿದೆ. ಮುಂಬರುವ ರಣಜಿ ಪಂದ್ಯಗಳಲ್ಲಿ ಆಯುಷ್ ಬದೋನಿ ದೆಹಲಿ ತಂಡವನ್ನು ಮುನ್ನಡೆಸಲಿದ್ದಾರೆ. ರಿಷಭ್ ಪಂತ್ ಸೌರಾಷ್ಟ್ರ ವಿರುದ್ಧದ ಪಂದ್ಯಕ್ಕೆ ತಮ್ಮ ಲಭ್ಯತೆ ಖಚಿತಪಡಿಸಿದ್ದಾರೆ. ಆದರೆ ಕೊಹ್ಲಿ ಆಡುವ ಬಗ್ಗೆ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ.

ಶಿಸ್ತು, ಏಕತೆ ಮತ್ತು ಸಕಾರಾತ್ಮಕ ತಂಡದ ವಾತಾವರಣವನ್ನು ಉತ್ತೇಜಿಸಲು ಬಿಸಿಸಿಐ ಗುರುವಾರ (ಜನವರಿ 16) ಸಂಜೆ ಕೇಂದ್ರ ಗುತ್ತಿಗೆ ಪಡೆದಿರುವ ಆಟಗಾರರಿಗೆ 10 ಅಂಶಗಳ ಮಾರ್ಗಸೂಚಿಯನ್ನು ಹೊರಡಿಸಿದೆ. ಪ್ರತಿಯೊಬ್ಬ ಆಟಗಾರನೂ ದೇಶೀಯ ಕ್ರಿಕೆಟ್ ಆಡುವುದು ಕಡ್ಡಾಯ ಎಂದು ಬಿಸಿಸಿಐ ಸೂಚಿಸಿದೆ. ಇದನ್ನು ಪಾಲಿಸದ ಆಟಗಾರರಿಗೆ ಶಿಕ್ಷೆಗೆ ಒಳಪಡಬೇಕಾಗುತ್ತದೆ. ಕೇಂದ್ರ ಗುತ್ತಿಗೆಯಿಂದ ಹೊರಗಿಡಲಾಗುತ್ತದೆ. ಮತ್ತು ಐಪಿಎಲ್​ ಆಡಲುನ ಅವಕಾಶವೂ ನೀಡುವುದಿಲ್ಲ ಎಂದು ಮಂಡಳಿ ಹೇಳಿದೆ.

 

Whats_app_banner