ಗೊತ್ತಲ್ವಾ ಹೇಗೆ ಆಡಬೇಕು ಅಂತ, ನಾನು ಮತ್ತೇನು ಹೇಳೋದಿಲ್ಲ; ವಿರಾಟ್ ಕೊಹ್ಲಿ ಅವರಿಗೆ ವಾಸೀಂ ಜಾಫರ್​ ಸಲಹೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಗೊತ್ತಲ್ವಾ ಹೇಗೆ ಆಡಬೇಕು ಅಂತ, ನಾನು ಮತ್ತೇನು ಹೇಳೋದಿಲ್ಲ; ವಿರಾಟ್ ಕೊಹ್ಲಿ ಅವರಿಗೆ ವಾಸೀಂ ಜಾಫರ್​ ಸಲಹೆ

ಗೊತ್ತಲ್ವಾ ಹೇಗೆ ಆಡಬೇಕು ಅಂತ, ನಾನು ಮತ್ತೇನು ಹೇಳೋದಿಲ್ಲ; ವಿರಾಟ್ ಕೊಹ್ಲಿ ಅವರಿಗೆ ವಾಸೀಂ ಜಾಫರ್​ ಸಲಹೆ

Wasim Jaffer on Virat Kohli Batting: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅವರು ಹೇಗೆ ಆಡಬೇಕು ಎಂಬುದನ್ನು ಮಾಜಿ ಕ್ರಿಕೆಟಿಗ ವಾಸೀಂ ಜಾಫರ್​​ ಬಹಿರಂಗಪಡಿಸಿದ್ದಾರೆ.

ಗೊತ್ತಲ್ವಾ ಹೇಗೆ ಆಡಬೇಕು ಅಂತ, ನಾನು ಮತ್ತೇನು ಹೇಳೋದಿಲ್ಲ; ವಿರಾಟ್ ಕೊಹ್ಲಿ ಅವರಿಗೆ ವಾಸೀಂ ಜಾಫರ್​ ಸಲಹೆ
ಗೊತ್ತಲ್ವಾ ಹೇಗೆ ಆಡಬೇಕು ಅಂತ, ನಾನು ಮತ್ತೇನು ಹೇಳೋದಿಲ್ಲ; ವಿರಾಟ್ ಕೊಹ್ಲಿ ಅವರಿಗೆ ವಾಸೀಂ ಜಾಫರ್​ ಸಲಹೆ

ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯಲ್ಲಿ (T20 World Cup 2024) ವಿರಾಟ್ ಕೊಹ್ಲಿ (Virat Kohli) ಅವರು ಹೇಗೆ ಬ್ಯಾಟಿಂಗ್ ನಡೆಸಬೇಕು ಎಂಬುದನ್ನು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ (Wasim Jaffer)​ ಸಲಹೆ ಕೊಟ್ಟಿದ್ದಾರೆ. ಜೂನ್ 5ರ ಬುಧವಾರ ಐರ್ಲೆಂಡ್ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಜಾಫರ್ ಈ ಸಲಹೆ ನೀಡಿದ್ದಾರೆ. ನ್ಯೂಯಾರ್ಕ್​​ನ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಐರ್ಲೆಂಡ್ (India vs Ireland) ನಡುವಿನ ಪಂದ್ಯ ನಡೆಯಲಿದೆ.

ತಮ್ಮ ಯೂಟ್ಯೂಟ್ ಚಾನೆಲ್​​ನಲ್ಲಿ ಮಾತನಾಡಿರುವ ಜಾಫರ್, ವಿರಾಟ್​ಗೆ ಮಾತ್ರವಲ್ಲ ಭಾರತ ತಂಡಕ್ಕೆ ಅತ್ಯುತ್ತಮ ಸಲಹೆ ನೀಡಿದ್ದಾರೆ. ಈ ವಿಶ್ವಕಪ್​​ನಲ್ಲಿ ಯಾವ ರೀತಿ ಬ್ಯಾಟಿಂಗ್ ಮಾಡಬೇಕು ಎಂದು ತಿಳಿಸಿದೆ. ಈ ಹಿಂದಿನ ಮೂರು ವಿಶ್ವಕಪ್ ಟೂರ್ನಮೆಂಟ್​​ಗಳಲ್ಲಿ ಟೀಮ್ ಇಂಡಿಯಾ ನಿರ್ಭಿತವಾಗಿ ಬ್ಯಾಟ್ ಬೀಸುವಲ್ಲಿ ವಿಫಲಗೊಂಡಿದೆ ಎಂದು ಕಳೆದ ಎರಡು ವಿಶ್ವಕಪ್​​ಗಳಲ್ಲಿ ರೋಹಿತ್ ಪಡೆಯ ಅಗ್ರ-ಕ್ರಮಾಂಕ ನೀಡಿದ್ದ ಪ್ರದರ್ಶನವನ್ನೇ ಉಲ್ಲೇಖಿಸಿದ್ದಾರೆ.

2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಾದರೂ ಟೀಮ್ ಇಂಡಿಯಾ ನಿರ್ಭಿತವಾಗಿ ಬ್ಯಾಟಿಂಗ್ ಮಾಡಬೇಕಿದೆ. ಕಳೆದ 2-3 ವರ್ಷಗಳಲ್ಲಿ ತಂಡವು ಈ ಕ್ರಮವನ್ನು ಅನುಕರಿಸಿಲ್ಲ. ನೀವು ಅಗ್ರೆಸ್ಸಿವ್ ಆಗಿ ಆಡುವ ಅಗತ್ಯ ಇದೆ ಎಂದ ಜಾಫರ್, ಹಾರ್ದಿಕ್ ಪಾಂಡ್ಯ ಆಲ್​ರೌಂಡಿಂಗ್ ಪ್ರದರ್ಶನ ಇಲ್ಲಿ ನಿರ್ಣಾಯಕ ಪ್ರದರ್ಶನ ನೀಡಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ ಎಂದಿದ್ದಾರೆ.

ಕೊಹ್ಲಿ ಅಗ್ರೆಸ್ಸಿವ್ ಆಗಿ ಆಡಬೇಕು ಎಂದ ಜಾಫರ್​

ಟೀಮ್ ಇಂಡಿಯಾದಲ್ಲಿ ವಿಶೇಷವಾಗಿ ವಿರಾಟ್ ಕೊಹ್ಲಿ ಅವರು 17ನೇ ಆವೃತ್ತಿ ಐಪಿಎಲ್​ನಲ್ಲಿ ನೀಡಿದ ಪ್ರದರ್ಶನ ಮುಂದುವರೆಸಬೇಕು. ಅದೇ ಅಗ್ರೆಸ್ಸಿವ್ ಬ್ಯಾಟಿಂಗ್ ಪ್ರದರ್ಶನವನ್ನು ಇಲ್ಲಿಯೂ ತೋರಬೇಕು ಎಂಬುದು ಜಾಫರ್ ಸಲಹೆ. ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್​ನಲ್ಲಿ​ ಆರೆಂಜೆ ಕ್ಯಾಪ್ ಗೆದ್ದಿದ್ದ ವಿರಾಟ್, 15 ಪಂದ್ಯಗಳಿಂದ 741 ರನ್ ಚಚ್ಚಿದ್ದರು. ಆ ಮೂಲಕ ಈ ಆವೃತ್ತಿಯಲ್ಲಿ ಅತ್ಯಧಿಕ ರನ್ ಕಲೆ ಹಾಕಿದ ಅಗ್ರ ಬ್ಯಾಟರ್​ಗಳಲ್ಲಿ ಒಬ್ಬರಾಗಿದ್ದರು.

ಪ್ರಸಕ್ತ ಟಿ20 ವಿಶ್ವಕಪ್​​ನಲ್ಲಿ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಾರಾ? ಅಥವಾ ಮೂರನೇ ಕ್ರಮಾಂಕದಲ್ಲಿ ಆಡುತ್ತಾರಾ ಎನ್ನುವುದರ ಕುರಿತು ಮಾಹಿತಿ ಇಲ್ಲ. ಆದರೆ ಶ್ರೀಮಂತ ಲೀಗ್​​​ನಲ್ಲಿ ಅಗ್ರೆಸ್ಸಿವ್​ ಬ್ಯಾಟಿಂಗ್ ಪ್ರದರ್ಶನ ನೀಡಬೇಕು. ಅದನ್ನೇ ಇಲ್ಲಿಯೂ ಮುಂದುವರೆಸಬೇಕಿದೆ. ಅದರ ನಿರೀಕ್ಷೆಯೂ ಇದೆ ಎಂದು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತದ ಟಿ20 ವಿಶ್ವಕಪ್ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಿವಂ ದುಬೆ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮೀಸಲು ಆಟಗಾರರು: ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Whats_app_banner