ಆಫ್ ಸ್ಟಂಪ್ ಹೊರಗಿನ ಎಸೆತಗಳ ಪಜಲ್, ನಿಲ್ಲುತ್ತಿಲ್ಲ ವಿರಾಟ್ ಕೊಹ್ಲಿ ಸ್ಟ್ರಗಲ್; 4 ವರ್ಷದಲ್ಲಿ 22 ಬಾರಿ ಒಂದೇ ರೀತಿ ಔಟ್
ಕನ್ನಡ ಸುದ್ದಿ  /  ಕ್ರಿಕೆಟ್  /  ಆಫ್ ಸ್ಟಂಪ್ ಹೊರಗಿನ ಎಸೆತಗಳ ಪಜಲ್, ನಿಲ್ಲುತ್ತಿಲ್ಲ ವಿರಾಟ್ ಕೊಹ್ಲಿ ಸ್ಟ್ರಗಲ್; 4 ವರ್ಷದಲ್ಲಿ 22 ಬಾರಿ ಒಂದೇ ರೀತಿ ಔಟ್

ಆಫ್ ಸ್ಟಂಪ್ ಹೊರಗಿನ ಎಸೆತಗಳ ಪಜಲ್, ನಿಲ್ಲುತ್ತಿಲ್ಲ ವಿರಾಟ್ ಕೊಹ್ಲಿ ಸ್ಟ್ರಗಲ್; 4 ವರ್ಷದಲ್ಲಿ 22 ಬಾರಿ ಒಂದೇ ರೀತಿ ಔಟ್

Virat Kohli: ವಿರಾಟ್ ಕೊಹ್ಲಿ ಅವರ ಆಫ್ ​ಸ್ಟಂಪ್ ಹೊರಗಿನ ಎಸೆತಗಳಿಗೆ ಔಟ್ ಆಗುತ್ತಿರುವ ಸಮಸ್ಯೆ ಬಗೆಹರಿದಿಲ್ಲ. ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​​ನಲ್ಲೂ ಅದೇ ರೀತಿ ಔಟಾಗಿ ನಿರಾಸೆ ಮೂಡಿಸಿದ್ದಾರೆ.

ಆಫ್ ಸ್ಟಂಪ್ ಹೊರಗಿನ ಎಸೆತಗಳ ಪಜಲ್, ನಿಲ್ಲುತ್ತಿಲ್ಲ ವಿರಾಟ್ ಕೊಹ್ಲಿ ಸ್ಟ್ರಗಲ್; 4 ವರ್ಷದಲ್ಲಿ 22 ಬಾರಿ ಒಂದೇ ರೀತಿ ಔಟ್
ಆಫ್ ಸ್ಟಂಪ್ ಹೊರಗಿನ ಎಸೆತಗಳ ಪಜಲ್, ನಿಲ್ಲುತ್ತಿಲ್ಲ ವಿರಾಟ್ ಕೊಹ್ಲಿ ಸ್ಟ್ರಗಲ್; 4 ವರ್ಷದಲ್ಲಿ 22 ಬಾರಿ ಒಂದೇ ರೀತಿ ಔಟ್

ಮೊದಲ ಬಾರಿಗೆ ತಪ್ಪು ಎಸಗಿದರೆ ಅದು ಸಹಜ ಎನ್ನಬಹುದು, 2ನೇ ಬಾರಿಗೂ ಅದೇ ತಪ್ಪು ಮಾಡಿದರೆ ಎಚ್ಚರಿಕೆ ನೀಡಿ ಕ್ಷಮಿಸಬಹುದು. ಆದರೆ 3ನೇ ಬಾರಿಯೂ ಅದೇ ತಪ್ಪು ಪುನರಾವರ್ತಿಸಿದರೆ ಏನು ಮಾಡಬೇಕು? ಶಿಕ್ಷೆ ನೀಡಬೇಕು ಅಲ್ಲವೇ? ಹಾಗಾದರೆ, ವಿರಾಟ್ ಕೊಹ್ಲಿ ಒಂದೇ ರೀತಿಯ ತಪ್ಪನ್ನು 22 ಸಲ ಮಾಡಿದ್ದಾರೆ. ಅದು ಕೂಡ ಕಳೆದ ನಾಲ್ಕು ವರ್ಷಗಳಿಂದ. ಹೀಗಿದ್ದಾಗ, ದಾಖಲೆಗಳ ಸರದಾರ ವಿರಾಟ್​​ಗೆ ಏನು ಶಿಕ್ಷೆ ನೀಡಬೇಕು? ಇದನ್ನು ನಿಮ್ಮ ಊಹೆಗೆ ಬಿಡುತ್ತೇನೆ.! ಆದರೆ ಪದೇ ಪದೇ ಮಾಡಿದ್ದ ತಪ್ಪನೇ ಮಾಡಿದರೆ ಹೇಗೆ?

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಸ್ಟಾರ್ ವಿರಾಟ್ ಕೊಹ್ಲಿ (69 ಎಸೆತ, 17 ರನ್) ಅವರು ಮತ್ತೆ ಔಟ್​ಸೈಡ್ ಆಫ್ ಸ್ಟಂಪ್ ಎಸೆತಕ್ಕೆ ವಿಕಟ್ ಒಪ್ಪಿಸಿದ್ದಾರೆ. ಸ್ಕಾಟ್ ಬೋಲ್ಯಾಂಡ್ ಅವರು ಎಸೆದ ಗಂಟೆಗೆ 135.8 ಕಿಲೋ ಮೀಟರ್ ವೇಗದ ಎಸೆತವನ್ನು ಎದುರಿಸುವಾಗ ಚೆಂಡು ಬ್ಯಾಟ್ ಎಡ್ಜ್​ ಆಗಿ ಬ್ಯೂ ವೆಬ್​ಸ್ಟರ್​ ಅವರ ಕೈ ಸೇರಿತು. ಇದು ಆಫ್​ ಸ್ಟಂಪ್ ಹೊರಗೆ ಬಂದ ಎಸೆತವಾಗಿತ್ತು. ಇದೇ ಸರಣಿಯಲ್ಲಿ ಅವರು 7 ಬಾರಿ ಇದೇ ರೀತಿ ವಿಕೆಟ್ ಒಪ್ಪಿಸಿರುವುದು ವಿಪರ್ಯಾಸದ ಸಂಗತಿ.

ವಿರಾಟ್ ಕೊಹ್ಲಿ 22 ಸಲ ಒಂದೇ ರೀತಿ ಔಟ್

ಬಾರ್ಡರ್​-ಗವಾಸ್ಕರ್ ಟ್ರೋಫಿಯಲ್ಲೇ ಏಳು ಸಲ ಒಂದೇ ರೀತಿ ವಿಕೆಟ್ ಒಪ್ಪಿಸಿರುವ ಕೊಹ್ಲಿ, ವೇಗದ ಬೌಲರ್​ಗಳಿಗೆ ಕಳೆದ 4 ವರ್ಷಗಳಿಂದ ಅಂದರೆ 2021ರ ಆರಂಭದಿಂದ ಇಲ್ಲಿಯವರೆಗೂ ಒಟ್ಟು 22 ಸಲ ಆಫ್ ಸ್ಟಂಪ್ ಹೊರಗಿನ ಎಸೆತಗಳಿಗೆ ಔಟಾಗಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ಈ ಪಂದ್ಯದಲ್ಲಿ ವಿರಾಟ್​ ಆಡಿದ ಮೊದಲ ಎಸೆತದಲ್ಲೇ ಔಟಾಗಬೇಕಿತ್ತು. ಅದೃಷ್ಟವಶಾತ್​ ನಾಟೌಟ್ ಆಗಿದ್ದರು. ಇದರೊಂದಿಗೆ ಜೀವದಾನ ಪಡೆದಿದ್ದ ವಿರಾಟ್, ಬೃಹತ್ ಇನ್ನಿಂಗ್ಸ್ ಕಟ್ಟುವ ಗುರಿ ಹೊಂದಿದ್ದರು. ಆದರೆ ಅವರ ಆಟ 17 ರನ್​ಗಳಿಗೆ ಸುಖಾಂತ್ಯ ಕಂಡಿತು. ಕಿಂಗ್ ಕೊಹ್ಲಿ ಕಳಪೆಯಾಟಕ್ಕೆ ಇದೀಗ ಕ್ರಿಕೆಟ್ ಲೋಕದಲ್ಲಿ ಟೀಕೆ ವ್ಯಕ್ತವಾಗಿದೆ.

ಪ್ರಸ್ತುತ ಸರಣಿಯಲ್ಲಿ ಕೊಹ್ಲಿ 5 ಪಂದ್ಯಗಳ 8 ಇನ್ನಿಂಗ್ಸ್​​ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಆದರೆ, ಗಳಿಸಿರುವುದು 184 ರನ್ ಮಾತ್ರ. ಇದರಲ್ಲಿ ಒಂದು ಶತಕವೂ ಸೇರಿದೆ. ಆದರೆ ಉಳಿದ 7 ಇನ್ನಿಂಗ್ಸ್​​ಗಳಲ್ಲಿ (5, 11, 7, 3, 36, 5, 17) ಗಳಿಸಿರುವ ಸ್ಕೋರ್​ 84. ಅವರ ಬ್ಯಾಟಿಂಗ್ ಸರಾಸರಿ 26.29. ಕೊಹ್ಲಿ ಅವರ ಕೊನೆಯ 20 ಟೆಸ್ಟ್​​ ಇನ್ನಿಂಗ್ಸ್​​ಗಳ ಬ್ಯಾಟಿಂಗ್ ಸರಾಸರಿ 17.57. ಪಂದ್ಯದಿಂದ ಪಂದ್ಯಕ್ಕೆ ಕಳಪೆ ಪ್ರದರ್ಶನ ನೀಡುತ್ತಿರುವುದನ್ನು ಮುಂದುವರೆಸಿದ ಕೊಹ್ಲಿ ವಿರುದ್ಧ ಮಾಜಿ ಕ್ರಿಕೆಟಿಗರು ಮತ್ತು ಫ್ಯಾನ್ಸ್ ಕಿಡಿಕಾರಿದ್ದಾರೆ.

ಸಚಿನ್ ನೋಡಿ ಕಲಿ ಎಂದ ಇರ್ಫಾನ್ ಪಠಾಣ್

ಪದೇ ಪದೇ ಒಂದೇ ರೀತಿ ಔಟಾಗುತ್ತಿರುವ ವಿರಾಟ್ ಕೊಹ್ಲಿಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಸಲಹೆಯೊಂದನ್ನು ಮುಂದಿಟ್ಟಿದ್ದಾರೆ. ಈ ಹಿಂದೆ ಸುನಿಲ್ ಗವಾಸ್ಕರ್ ಸೇರಿದಂತೆ ಅನೇಕರು ಇದೇ ಸಲಹೆ ನೀಡಿದ್ದರು. ಆದರೆ ಕೊಹ್ಲಿ ಎಲ್ಲರ ಸಲಹೆಯನ್ನು ನಿರ್ಲಕ್ಷಿಸುತ್ತಿದ್ದಾರೆ. ಅದೇನೆಂದರೆ ಸಿಡ್ನಿಯಲ್ಲಿ ಅಂದರೆ ಪ್ರಸ್ತುತ ಪಂದ್ಯ ನಡೆಯುತ್ತಿರುವ ಮೈದಾನದಲ್ಲೇ ಸಚಿನ್ ತೆಂಡೂಲ್ಕರ್ ಒಂದೇ ಒಂದು ಆಫ್ ಸ್ಟಂಪ್ ಹೊರಗಿನ ಎಸೆತ ಮುಟ್ಟದೆಯೇ ದ್ವಿಶತಕ ಸಿಡಿಸಿದ್ದರು. ಈ ಇನ್ನಿಂಗ್ಸ್​ನಿಂದ ಸ್ಪೂರ್ತಿ ಪಡೆಯುವಂತೆ ಸೂಚಿಸಿದ್ದಾರೆ.

ಕೊಹ್ಲಿ ಎದುರಿಸುತ್ತಿರುವ ಸಮಸ್ಯೆಯನ್ನು ವಿವರಿಸಿದ ಇರ್ಫಾನ್ ಪಠಾಣ್, ವಿರಾಟ್ ಕೊಹ್ಲಿ ಕೆಲವು ಪ್ರಮುಖ ಹೊಡೆತಗಳ ಮೇಲಷ್ಟೇ ಹೆಚ್ಚು ಅವಲಂಬಿತವಾಗಿದ್ದಾರೆ. ಉದಾಹರಣೆಗೆ ಕವರ್​ಡ್ರೈವ್​ ಶಾಟ್. ಆದರೆ ಇವರಿಗಿಂತ ಸಚಿನ್ ಭಿನ್ನ. ಅವರು ಕಟ್ ಶಾಟ್, ಸ್ಕ್ವೇರ್ ಶಾಟ್, ಅಪ್ಪರ್​ ಕಟ್​ನಂತಹ ಪರ್ಯಾಯ ಶಾಟ್​​​ಗಳ ಆಯ್ಕೆಯನ್ನು ಹೊಂದಿದ್ದರು. ಆ ಮೂಲಕ ಬೌಲರ್​ಗಳಿಗೆ ಗೊಂದಲ ಸೃಷ್ಟಿಸುವ ಮತ್ತು ಒತ್ತಡ ತರುವಂತಹ ಕೆಲಸ ಮಾಡುತ್ತಿದ್ದರು ಎಂದಿದ್ದಾರೆ.

Whats_app_banner