ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಗೌತಮ್ ಗಂಭೀರ್ ವಿಚಾರವಾಗಿ ಬಿಸಿಸಿಐಗೆ ವಿಶೇಷ ಭರವಸೆ ಕೊಟ್ಟ ವಿರಾಟ್ ಕೊಹ್ಲಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಗೌತಮ್ ಗಂಭೀರ್ ವಿಚಾರವಾಗಿ ಬಿಸಿಸಿಐಗೆ ವಿಶೇಷ ಭರವಸೆ ಕೊಟ್ಟ ವಿರಾಟ್ ಕೊಹ್ಲಿ

ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಗೌತಮ್ ಗಂಭೀರ್ ವಿಚಾರವಾಗಿ ಬಿಸಿಸಿಐಗೆ ವಿಶೇಷ ಭರವಸೆ ಕೊಟ್ಟ ವಿರಾಟ್ ಕೊಹ್ಲಿ

Gautam Gambhir and Virat Kohli : ಗೌತಮ್ ಗಂಭೀರ್ ಜತೆಗಿನ ಭಿನ್ನಾಭಿಪ್ರಾಯ ಹಾಗೂ ವೈರತ್ವ ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡುತ್ತೇವೆ. ಡ್ರೆಸ್ಸಿಂಗ್ ಕೋಣೆಯಲ್ಲಿ ಸಮಸ್ಯೆ ಸೃಷ್ಟಿಸುವುದಿಲ್ಲ ಎಂದು ವಿರಾಟ್ ಕೊಹ್ಲಿ, ಬಿಸಿಸಿಐಗೆ ಭರವಸೆ ನೀಡಿದ್ದಾರೆ.

ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಗೌತಮ್ ಗಂಭೀರ್ ವಿಚಾರವಾಗಿ ಬಿಸಿಸಿಐಗೆ ವಿಶೇಷ ಭರವಸೆ ಕೊಟ್ಟ ವಿರಾಟ್ ಕೊಹ್ಲಿ
ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಗೌತಮ್ ಗಂಭೀರ್ ವಿಚಾರವಾಗಿ ಬಿಸಿಸಿಐಗೆ ವಿಶೇಷ ಭರವಸೆ ಕೊಟ್ಟ ವಿರಾಟ್ ಕೊಹ್ಲಿ

ಗೌತಮ್ ಗಂಭೀರ್ ಹಾಗೂ ನನ್ನ ನಡುವಿನ ಹಿಂದಿನ ಜಗಳಗಳಿಂದ ಅವರಿಗೆ ಮತ್ತು ಆಟಗಾರರ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳುತ್ತೇನೆ ಎಂದು ವಿರಾಟ್ ಕೊಹ್ಲಿ, ಬಿಸಿಸಿಐಗೆ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ. ನೂತನ ಕೋಚ್​ ಆಗಿ ನೇಮಕಗೊಂಡ ಬೆನ್ನಲ್ಲೇ ಗಂಭೀರ್​ ಹಾಗೂ ಕೊಹ್ಲಿ ನಡುವೆ ವೈರತ್ವ ಮುಂದುವರೆಯಬಹುದು ಎಂಬ ಅಭಿಮಾನಿಗಳು ಊಹಿಸಿದ್ದರು. ಇದು ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂದು ಬಿಸಿಸಿಐ ಆತಂಕಕ್ಕೆ ಒಳಗಾಗಿತ್ತು. 

ಹೀಗಾಗಿ, ಕೊಹ್ಲಿಯನ್ನು ಸಂಪರ್ಕಿಸಿದ ಬಿಸಿಸಿಐ ಮುಂದಿನ ದಿನಗಳಲ್ಲಿ ತಮ್ಮ ಮುನಿಸು ಪಕ್ಕಕ್ಕಿಡಬೇಕು ಎಂದು ಹೇಳಿದೆ. ಅದರಂತೆ, ನನ್ನಿಂದ ತಂಡಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಗಂಭೀರ್​ ಜೊತೆಗೂ ಆತ್ಮೀಯವಾಗಿ ಇರುತ್ತೇನೆ. ಡ್ರೆಸ್ಸಿಂಗ್​ ರೂಮ್ ವಾತಾವರಣವನ್ನೂ ಉತ್ತಮವಾಗಿಟ್ಟುಕೊಳ್ಳುತ್ತೇನೆ ಎಂದು ವಿರಾಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಗಂಭೀರ್ ನೇಮಕಕ್ಕೂ ಮುನ್ನ ಕೊಹ್ಲಿ ಅಭಿಪ್ರಾಯವನ್ನು ಬಿಸಿಸಿಐ ಕೇಳಿರಲಿಲ್ಲ.

ವೈರತ್ವ ಬದಿಗಿಟ್ಟು ಆಡುತ್ತೇವೆ ಎಂದ ಕೊಹ್ಲಿ

ಗಂಭೀರ್ ಅವರೊಂದಿಗಿನ ತಮ್ಮ ಹಿಂದಿನ ವೈರತ್ವವನ್ನು ಬದಿಗಿಟ್ಟು ಭಾರತೀಯ ಕ್ರಿಕೆಟ್​ ಕೊಡುಗೆಗೆ ಎಂದಿನಂತೆ ಕೆಲಸ ಮಾಡುವುದಾಗಿ ಕೊಹ್ಲಿ, ಮಂಡಳಿಗೆ ತಿಳಿಸಿದ್ದಾರೆ. ಕ್ರಿಕ್​ಬಜ್ ವರದಿಯ ಪ್ರಕಾರ, ಬಾರ್ಬಡೋಸ್​​ನಲ್ಲಿ ನಡೆದ ವಿಶ್ವಕಪ್ ಗೆಲುವಿನ ನಂತರ ಭಾರತೀಯ ಡ್ರೆಸ್ಸಿಂಗ್ ರೂಮ್​​ನಲ್ಲೂ ಈ ಕುರಿತು ಚರ್ಚೆಗಳು ನಡೆದಿದ್ದವು.

ಗಂಭೀರ್ ಅವರೊಂದಿಗೆ ಕೆಲಸ ಮಾಡಲು ಕೊಹ್ಲಿ ಆರಾಮದಾಯಕರಾಗಿದ್ದಾರೆ. ಇದನ್ನು ಸಂಬಂಧಿತ ಬಿಸಿಸಿಐ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಹಿಂದಿನ ಸಮಸ್ಯೆಗಳಿಂದ ಡ್ರೆಸ್ಸಿಂಗ್ ಕೋಣೆಯಲ್ಲಿ ತಮ್ಮ ವೃತ್ತಿಪರ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ. ಬಾರ್ಬಡೋಸ್​​ನಲ್ಲಿ ನಡೆದ ವಿಶ್ವಕಪ್ ಫೈನಲ್ ನಂತರ ಈ ವಿಷಯದ ಬಗ್ಗೆ ಚರ್ಚೆಗಳು ನಡೆದಿವೆ ಎಂದು ವರದಿಯಾಗಿದೆ. 

ಗಂಭೀರ್ ಅವರಂತೆ ದೆಹಲಿಯವರಾದ ಕೊಹ್ಲಿ, ಇಬ್ಬರೂ ತಮ್ಮ ಹಿಂದಿನ ಭಿನ್ನಾಭಿಪ್ರಾಯಗಳಿಂದ ಹೊರಬಂದು ತಂಡದಲ್ಲಿ ಹೊಸ ರೀತಿಯ ವಾತಾವರಣ ನಿರ್ಮಿಸುವುದಾಗಿ ಭರವಸೆ ಕೊಟ್ಟಿದ್ದಾರೆ ವರದಿ ತಿಳಿಸಿದೆ. ವಿಶೇಷವೆಂದರೆ, ಗಂಭೀರ್ ಮತ್ತು ಕೊಹ್ಲಿ ಇಬ್ಬರೂ ಐಪಿಎಲ್ 2024ರ ಸಮಯದಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಂಡು ವೈಮನಸ್ಸಿಗೆ ತೆರೆ ಎಳೆದಿದ್ದರು. 

ಈ ಹಿಂದೆ ಗಂಭೀರ್​, ಕೊಹ್ಲಿ ಹೇಳಿದ್ದೇನು?

ಪೂಮಾ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಕೊಹ್ಲಿ, ಗಂಭೀರ್​​ ಅವರನ್ನು ತಬ್ಬಿಕೊಂಡ ಕುರಿತು ಪ್ರತಿಕ್ರಿಯಿಸಿದ್ದರು. ನನ್ನ ನಡವಳಿಕೆಯಿಂದ ಜನರು ತುಂಬಾ ನಿರಾಶೆಗೊಂಡಿದ್ದಾರೆ. ನಾನು ನವೀನ್ ಅವರನ್ನು ತಬ್ಬಿಕೊಂಡೆ. ಇನ್ನೊಂದು ದಿನ, ಗೌತಿ ಭಾಯ್ [ಗೌತಮ್ ಗಂಭೀರ್] ಬಂದು ನನ್ನನ್ನು ತಬ್ಬಿಕೊಂಡನು. ಹೀಗಾಗಿ ನಿಮಗೆ ಸಿಗಬೇಕಿದ್ದ ಮಸಾಲಾ ಮುಗಿದಿದೆ ಎಂದು ಕಾರ್ಯಕ್ರಮದಲ್ಲಿ ಹೇಳಿದ್ದರು.

ಕೊಹ್ಲಿ ಬಳಿಕ ಗಂಭೀರ್​​ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ವಿರಾಟ್ ಕೊಹ್ಲಿ ಅವರೊಂದಿಗಿನ ನನ್ನ ಸಂಬಂಧವು ಈ ದೇಶಕ್ಕೆ ತಿಳಿಯುವ ಅಗತ್ಯವಿಲ್ಲ. ತನ್ನನ್ನು ವ್ಯಕ್ತಪಡಿಸಲು ಮತ್ತು ತಮ್ಮ ತಂಡಗಳು ಗೆಲ್ಲಲು ಸಹಾಯ ಮಾಡಲು ಅವರಿಗೂ ನನ್ನಷ್ಟೇ ಹಕ್ಕಿದೆ. ಸಾರ್ವಜನಿಕರಿಗೆ ಮಸಾಲೆ ನೀಡುವುದು ನಮ್ಮ ಸಂಬಂಧವಲ್ಲ ಎಂದು ಗಂಭೀರ್ ಐಪಿಎಲ್ ನಂತರ ಸಂವಾದದಲ್ಲಿ ಹೇಳಿದ್ದರು.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ವಿರಾಟ್ ಕೊಹ್ಲಿ ಸೇರಿ ಹಿರಿಯರು ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದರು. ಆದರೆ ಕೋಚ್ ಆಗಿ​ ಗಂಭೀರ್ ತಮ್ಮ ಮೊದಲ ಏಕದಿನ ಸರಣಿಯಲ್ಲಿ ಹಿರಿಯ ಆಟಗಾರರು ಇರಬೇಕೆಂದು ನಿರ್ಧರಿಸಿದ್ದ ಕಾರಣ ಅವರಿಗೆಲ್ಲರಿಗೂ ಅವಕಾಶ ನೀಡಲಾಗಿದೆ. ಹಾಗಾಗಿ, ಗಂಭೀರ್ ಮಾತಿಗೆ ಗೌರವ ಕೊಟ್ಟು ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಸರಣಿಗೆ ಲಭ್ಯರಾಗಿದ್ದಾರೆ. ಆದಾಗ್ಯೂ, ದೈನಂದಿನ ಕೆಲಸದ ಹೊರೆ ನಿರ್ವಹಣೆಯ ಭಾಗವಾಗಿ ಬುಮ್ರಾಗೆ ವಿರಾಮ ನೀಡಲಾಯಿತು.

Whats_app_banner