ಶ್ರೀಲಂಕಾ ಸರಣಿಗಿಲ್ಲ ರೋಹಿತ್​ ಶರ್ಮಾ-ವಿರಾಟ್ ಕೊಹ್ಲಿ; ಹಾರ್ದಿಕ್ ಪಾಂಡ್ಯ ಅಥವಾ ಕೆಎಲ್ ರಾಹುಲ್​ಗೆ ನಾಯಕತ್ವ?
ಕನ್ನಡ ಸುದ್ದಿ  /  ಕ್ರಿಕೆಟ್  /  ಶ್ರೀಲಂಕಾ ಸರಣಿಗಿಲ್ಲ ರೋಹಿತ್​ ಶರ್ಮಾ-ವಿರಾಟ್ ಕೊಹ್ಲಿ; ಹಾರ್ದಿಕ್ ಪಾಂಡ್ಯ ಅಥವಾ ಕೆಎಲ್ ರಾಹುಲ್​ಗೆ ನಾಯಕತ್ವ?

ಶ್ರೀಲಂಕಾ ಸರಣಿಗಿಲ್ಲ ರೋಹಿತ್​ ಶರ್ಮಾ-ವಿರಾಟ್ ಕೊಹ್ಲಿ; ಹಾರ್ದಿಕ್ ಪಾಂಡ್ಯ ಅಥವಾ ಕೆಎಲ್ ರಾಹುಲ್​ಗೆ ನಾಯಕತ್ವ?

Virat Kohli, Rohit Sharma : ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯುವ ನಿರೀಕ್ಷೆಯಿದೆ. ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಭಾರತವನ್ನು ಮುನ್ನಡೆಸಲಿದ್ದಾರೆ.

ಶ್ರೀಲಂಕಾ ಸರಣಿಗಿಲ್ಲ ರೋಹಿತ್​ ಶರ್ಮಾ-ವಿರಾಟ್ ಕೊಹ್ಲಿ; ಹಾರ್ದಿಕ್ ಪಾಂಡ್ಯ ಅಥವಾ ಕೆಎಲ್ ರಾಹುಲ್​ಗೆ ನಾಯಕತ್ವ?
ಶ್ರೀಲಂಕಾ ಸರಣಿಗಿಲ್ಲ ರೋಹಿತ್​ ಶರ್ಮಾ-ವಿರಾಟ್ ಕೊಹ್ಲಿ; ಹಾರ್ದಿಕ್ ಪಾಂಡ್ಯ ಅಥವಾ ಕೆಎಲ್ ರಾಹುಲ್​ಗೆ ನಾಯಕತ್ವ?

ಟಿ20 ವಿಶ್ವಕಪ್ 2024 ಟೂರ್ನಿಯ (T20 World Cup 2024) ನಂತರ ಟಿ20ಐ ಕ್ರಿಕೆಟ್​​ಗೆ ವಿದಾಯ ಘೋಷಿಸಿರುವ ರೋಹಿತ್​ ಶರ್ಮಾ ಮತ್ತು ವಿರಾಟ್ ಕೊಹ್ಲಿ (Rohit Sharma and Virat Kohli) ಏಕದಿನಕ್ಕೆ ಮರಳಲು ಮತ್ತಷ್ಟು ವಿಳಂಬ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ವಿಶ್ವಕಪ್ ವಿಜೇತ ಜೋಡಿ ಮುಂಬರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲ. ರಾಹುಲ್ ದ್ರಾವಿಡ್ (Rahul Dravid) ಬದಲಿಗೆ ಗೌತಮ್ ಗಂಭೀರ್ (Gautam Gambhir) ಮುಂದಿನ ಹೆಡ್​ಕೋಚ್ ಆಗಲಿದ್ದು, ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಅಥವಾ ಕೆಎಲ್ ರಾಹುಲ್ (KL Rahul) ತಂಡವನ್ನು ಮುನ್ನಡೆಸಲಿದ್ದಾರೆ.

ರೋಹಿತ್​ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಕೊನೆಯದಾಗಿ ಏಕದಿನ ಕ್ರಿಕೆಟ್ ಆಡಿದ್ದು 2023ರ ನವೆಂಬರ್​ 19ರಂದು. ಏಕದಿನ ವಿಶ್ವಕಪ್​ ಫೈನಲ್​​ ನಂತರ ಒಡಿಐ ಆಡದ ಹಿಟ್​ಮ್ಯಾನ್ ಮತ್ತು ಕಿಂಗ್​ ಇದೀಗ 50 ಓವರ್​​​​ಗಳ ಮಾದರಿಗೆ ಮರಳಲು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಕಳೆದ ತಿಂಗಳು ಕೆರಿಬಿಯನ್​ನಲ್ಲಿ ನಡೆದ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದ ನಂತರ ಚುಟುಕು ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದರೂ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್​ನಲ್ಲಿ ಕಾಣಿಸುವುದನ್ನು ಮುಂದುವರಿಸಲಿದ್ದಾರೆ.

ಕೊಹ್ಲಿ-ರೋಹಿತ್ ಶ್ರೀಲಂಕಾ ಹೊರಗುಳಿಯುವುದೇಕೆ?

ಏಕದಿನ ಮಾದರಿಯಲ್ಲಿ ಇಬ್ಬರೂ ಪ್ರಮುಖ ಪಿಲ್ಲರ್​​ಗಳಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಟೆಸ್ಟ್​ ಕ್ರಿಕೆಟ್​ನಲ್ಲಿ ನಿರಂತರವಾಗಿ ಕಾಣಿಸಿಕೊಳ್ಳಲಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ (ಡಬ್ಲ್ಯುಟಿಸಿ) ಯ ಪ್ರಸ್ತುತ ಆವೃತ್ತಿಗೆ ರೋಹಿತ್ ಅವರೇ ನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇತ್ತೀಚೆಗೆ ದೃಢಪಡಿಸಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ಡಬ್ಲ್ಯುಟಿಸಿಯಲ್ಲಿ ಎರಡು ಟೆಸ್ಟ್ ಸರಣಿಗೆ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಆ ಬಳಿಕ ನ್ಯೂಜಿಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿಯ ನಂತರ ಭಾರತ ತಂಡವು ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.

ಹಾರ್ದಿಕ್ ಪಾಂಡ್ಯ ವಿರುದ್ಧ ಕೆಎಲ್ ರಾಹುಲ್

ಚಾಂಪಿಯನ್ಸ್ ಟ್ರೋಫಿ 2025ರ ಫೆಬ್ರವರಿ ಮಧ್ಯದಲ್ಲಿ ನಡೆಯಲಿದೆ. ಕೊಹ್ಲಿ-ರೋಹಿತ್​ 3 ಪಂದ್ಯಗಳ ಏಕದಿನ ಸರಣಿಗೆ ಹೋಗುವ ಅಗತ್ಯವಿಲ್ಲ. ಒಂದು ವೇಳೆ ಅವರು ಬಯಸಿದರೆ, ಅವರನ್ನು ಸ್ವಾಗತಿಸುತ್ತೇವೆ. ಆದರೆ, ಈ ಜೋಡಿ ವಿಶ್ರಾಂತಿ ಬಯಸುತ್ತಿದೆ ಎಂದು ನಾನು ಭಾವಿಸುತ್ತೇನೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಅಥವಾ ಕೆಎಲ್ ರಾಹುಲ್ ಭಾರತ ತಂಡವನ್ನು ಮುನ್ನಡೆಸುವ ನಿರೀಕ್ಷೆ ಇದೆ. ಶ್ರೀಲಂಕಾ ಈ ತಿಂಗಳ ಕೊನೆಯಲ್ಲಿ 3 ಟಿ20 ಮತ್ತು ಏಕದಿನ ಪಂದ್ಯಗಳಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದೆ. 3 ಪಂದ್ಯಗಳ ಏಕದಿನ ಸರಣಿ ಆಗಸ್ಟ್​​ನಲ್ಲಿ ಪ್ರಾರಂಭವಾಗಲಿದೆ. ಪ್ರಸ್ತುತ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ ಟಿ20ಐ ಸರಣಿಯನ್ನು ಆಡುತ್ತಿದೆ.

Whats_app_banner