ಶಾರೂಖ್ ಖಾನ್ ಜೊತೆ ರಿಂಕು ಸಿಂಗ್ ಡ್ಯಾನ್ಸ್; ಬಿದ್ದು ಬಿದ್ದು ನಕ್ಕ ವಿರಾಟ್ ಕೊಹ್ಲಿ, ವಿಡಿಯೋ ವೈರಲ್
ಐಪಿಎಲ್ ಉದ್ಘಾಟನಾ ಸಮಾರಂಭದ ವೇಳೆ ಜೊಮೆ ಜೋ ಪಠಾಣ್ ಹಾಡಿಗೆ ಶಾರೂಖ್ ಖಾನ್ ಜೊತೆಗೆ ವಿರಾಟ್ ಕೊಹ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ.

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಇಂದು (ಮಾರ್ಚ್ 22) ವರ್ಣರಂಜಿತ ಚಾಲನೆ ಪಡೆದುಕೊಂಡಿತು. ಗಾಯಕಿ ಶ್ರೇಯಾ ಘೋಷಾಲ್, ನಟಿ ದಿಶಾ ಪಟಾನಿ, ಕರಣ್ ಅಲುಜಾ ತಮ್ಮ ಪ್ರದರ್ಶನದೊಂದಿಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನು ರಂಜಿಸಿದರು. ಆದಾಗ್ಯೂ, ಶಾರುಕ್ ಖಾನ್ ಅವರೊಂದಿಗೆ ವಿರಾಟ್ ಕೊಹ್ಲಿ ಮತ್ತು ರಿಂಕು ಸಿಂಗ್ ಹಾಕಿದ ಸ್ಟೆಪ್ಸ್ ಹಾಕಿದ್ದು ಎಲ್ಲರನ್ನೂ ಮನಸೂರೆಗೊಳಿಸಿತು.
ಬಾಲಿವುಡ್ ದಂತಕಥೆ ಮತ್ತು ಕೆಕೆಆರ್ ಸಹ-ಮಾಲೀಕ ಶಾರುಖ್ ಖಾನ್ ಅವರು ಉದ್ಘಾಟನಾ ಸಮಾರಂಭದ ನಿರೂಪಣೆ ಹೊತ್ತಿದ್ದರು. ಈ ವೇಳೆ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಕೆಕೆಆರ್ ಫಿನಿಷರ್ ರಿಂಕು ಸಿಂಗ್ ಅವರನ್ನು ವೇದಿಕೆಗೆ ಸ್ವಾಗತಿಸಿದರು. ಕೊಹ್ಲಿ ಅವರ ಕ್ರಿಕೆಟ್ ವೃತ್ತಿಜೀವನವನ್ನು ಕೊಂಡಾಡಿದ ಬಾಲಿವುಡ್ ಬಾದ್‌ಶಾ, 18 ವರ್ಷ ಒಂದೇ ತಂಡದ ಪರ ಆಡುತ್ತಿರುವುದನ್ನು ಶ್ಲಾಘಿಸಿದರು.
ಶಾರುಖ್ ವೇದಿಕೆಗೆ ಕೊಹ್ಲಿಯನ್ನು ಆಹ್ವಾನಿಸಿದಾಗ ರೋಮಾಂಚಕಾರಿ ಕ್ಷಣ ಸೃಷ್ಟಿಯಾಯಿತು. ಇಡೀ ಮೈದಾನವೇ ಕೊಹ್ಲಿ ಕೊಹ್ಲಿ ಎಂದು ಕೂಗಿತು. ಜೊತೆಗೆ ಬಾಲಿವುಡ್ ಬಾದ್‌ಶಾ ಕೂಡ'ಕೊಹ್ಲಿ, ಕೊಹ್ಲಿ' ಎಂದು ಘೋಷಣೆ ಕೂಗಿದಾಗ ಆರ್‌ಸಿಬಿ ಬ್ಯಾಟ್ಸ್‌ಮನ್ ನಾಚಿದರು. ಕೊಹ್ಲಿ ಜತೆ ಸ್ವಲ್ಪ ಹೊತ್ತು ಮಾತನಾಡಿದ ನಂತರ, ಶಾರುಖ್ ಕೆಕೆಆರ್ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಅವರನ್ನು ವೇದಿಕೆಗೆ ಸೇರಲು ಕೇಳಿಕೊಂಡರು. ರಿಂಕು ಜೊತೆಯೂ ಕೆಲ ಹೊತ್ತು ಮಾತನಾಡಿದ ಬಳಿಕ ಶಾರುಖ್ ತಮ್ಮ ಹಾಡುಗಳಿಗೆ ಡ್ಯಾನ್ಸ್ ಮಾಡುವಂತೆ ರಿಂಕುರನ್ನು ಶಾರುಖ್ ಕೋರಿದರು.
ಇದಕ್ಕೆ ತಕ್ಷಣವೇ ಒಪ್ಪಿದ ರಿಂಕು ಡ್ಯಾನ್ಸ್ಗೆ ಮುಂದಾದರು. ರಿಂಕು ಸಿಂಗ್ 'ಡಂಕಿ' ಚಿತ್ರದ 'ಲುಟ್ ಪುಟ್ ಗಯಾ' ಹಾಡಿಗೆ ಕಿಂಗ್ ಖಾನ್ ಜೊತೆಗೆ ನೃತ್ಯ ಮಾಡುವ ಮೂಲಕ ಗಮನ ಸೆಳೆದರು. ಆದರೆ ರಿಂಕು ನೃತ್ಯ ಮಾಡುತ್ತಿದ್ದ ಅವಧಿಯಲ್ಲಿ ಪಕ್ಕದಲ್ಲಿದ್ದ ಕೊಹ್ಲಿ ಬಿದ್ದು ಬಿದ್ದು ನಗುತ್ತಿದ್ದರು. ನೃತ್ಯ ಮುಗಿದರೂ ಕೊಹ್ಲಿ ನಗು ಮಾತ್ರ ನಿಂತಿರಲಿಲ್ಲ. ರಿಂಕುರನ್ನು ಗೇಲಿ ಕೂಡ ಮಾಡಿದರು. ಇದರ ಬಳಿಕ ಕೊಹ್ಲಿ ಬ್ಲಾಕ್‌ಬಸ್ಟರ್ 'ಪಠಾಣ್' ಚಿತ್ರದ 'ಜೊಮೆ ಜೋ ಪಠಾಣ್' ಹಾಡಿಗೆ ತಮ್ಮ ನೃತ್ಯ ಪ್ರದರ್ಶನ ನೀಡಿದರು. ಇಬ್ಬರು ಪ್ರತ್ಯೇಕವಾಗಿ ಡ್ಯಾನ್ಸ್ ಮಾಡಿರುವ ವಿಡಿಯೋಗಳು ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI
ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಆಂಗ್ಕ್ರಿಶ್ ರಘುವಂಶಿ, ಸುನಿಲ್ ನರೈನ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI
ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ರಜತ್ ಪಾಟೀದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರಸಿಖ್ ದಾರ್ ಸಲಾಂ, ಸುಯಾಶ್ ಶರ್ಮಾ, ಜೋಶ್ ಹೇಜಲ್‌ವುಡ್, ಯಶ್ ದಯಾಳ್
