ಕನ್ನಡ ಸುದ್ದಿ  /  ಕ್ರಿಕೆಟ್  /  ಸೀತಾ ಮತ್ತು ಗೀತಾ; ಶುಭ್ಮನ್-ಇಶಾನ್ ಕಿಶನ್ ಬ್ರೋಮಾನ್ಸ್ ಕುರಿತು ವಿರಾಟ್ ಕೊಹ್ಲಿ ಪ್ರತಿಕ್ರಿಯೆಗೆ ಎದ್ದು ಬಿದ್ದು ನಕ್ಕ ಪ್ರೇಕ್ಷಕರು

ಸೀತಾ ಮತ್ತು ಗೀತಾ; ಶುಭ್ಮನ್-ಇಶಾನ್ ಕಿಶನ್ ಬ್ರೋಮಾನ್ಸ್ ಕುರಿತು ವಿರಾಟ್ ಕೊಹ್ಲಿ ಪ್ರತಿಕ್ರಿಯೆಗೆ ಎದ್ದು ಬಿದ್ದು ನಕ್ಕ ಪ್ರೇಕ್ಷಕರು

Virat Kohli: ಶುಮ್ಮನ್ ಗಿಲ್ ಮತ್ತು ಇಶಾನ್ ಕಿಶನ್‌, ಭಾರತ ಕ್ರಿಕೆಟ್‌ ತಂಡದ ಉತ್ತಮ ಸ್ನೇಹಿತರು. ಇವರಿಬ್ಬರು ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇವರ ಸ್ನೇಹದ ಕುರಿತು ಇದೀಗ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. ಅವರನ್ನು ಅವಳಿಗಳು ಎಂದು ಕರೆದಿದ್ದಾರೆ.

ಶುಭ್ಮನ್-ಇಶಾನ್ ಕಿಶನ್ ಬ್ರೋಮಾನ್ಸ್ ಕುರಿತು ವಿರಾಟ್ ಕೊಹ್ಲಿ ಪ್ರತಿಕ್ರಿಯೆಗೆ ಎದ್ದು ಬಿದ್ದು ನಕ್ಕ ಪ್ರೇಕ್ಷಕರು
ಶುಭ್ಮನ್-ಇಶಾನ್ ಕಿಶನ್ ಬ್ರೋಮಾನ್ಸ್ ಕುರಿತು ವಿರಾಟ್ ಕೊಹ್ಲಿ ಪ್ರತಿಕ್ರಿಯೆಗೆ ಎದ್ದು ಬಿದ್ದು ನಕ್ಕ ಪ್ರೇಕ್ಷಕರು

ಭಾರತ ಕ್ರಿಕೆಟ್‌ ತಂಡದ ಇಬ್ಬರು ಯುವ ಆಟಗಾರರಾದ ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್ ನಡುವಿನ‌ ಸ್ನೇಹ ಸಂಬಂಧದ ಕುರಿತು ತಿಳಿಯದವರಿಲ್ಲ. ಇವರಿಬ್ಬರೂ ಆತ್ಮೀಯ ಸ್ನೇಹಿತರು ಎಂಬುದು ಕ್ರಿಕೆಟ್‌ ಲೋಕಕ್ಕೆ ತಿಳಿದಿದೆ. ಇವರಿಬ್ಬರ ಒಟನಾಟಕ್ಕೆ ಬ್ರೊಮ್ಯಾನ್ಸ್ ಎಂದೇ ಕರೆಯಲಾಗುತ್ತಿದೆ. ಭಾರತ ತಂಡದಲ್ಲಿ ಈ ಇಬ್ಬರು ಹಲವು ಬಾರಿ ಜೊತೆಯಾಗಿ ಆಡಿದ್ದು, ಡ್ರೆಸ್ಸಿಂಗ್ ರೂಮ್‌ನಲ್ಲಿ ಆಗಾಗ ತಮಾಷೆಗಳಲ್ಲಿ ತೊಡಗುವುದು, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋಗಳನ್ನು ಹಂಚುವುದು ಸೇರಿದಂತೆ ತಮಾಷೆಯ ಸನ್ನಿವೇಷಗಳಲ್ಲಿ ತೊಡಗಿಕೊಂಡಿರುತ್ತಾರೆ. ಐಪಿಎಲ್‌ನಲ್ಲಿ ಈ ಇಬ್ಬರು ಬೇರೆ ಬೇರೆ ತಂಡಗಳ ಪರ ಆಡುತ್ತಿದ್ದಾರೆ. ಇಶಾನ್ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದರೆ, ಗಿಲ್ ಗುಜರಾತ್ ಟೈಟಾನ್ಸ್ ತಂಡದ ನಾಯಕ. ಇತ್ತೀಚೆಗೆ ನಡೆದ ಉಭಯ ತಂಡಗಳ ನಡುವಿನ ಪಂದ್ಯದ ನಂತರ, ಈ ಇಬ್ಬರೂ ಸುದೀರ್ಘ ಕಾಲ ಮಾತುಕತೆಯಲ್ಲಿ ತೊಡಗಿಕೊಂಡಿದ್ದರು.

ಟ್ರೆಂಡಿಂಗ್​ ಸುದ್ದಿ

ಉಭಯ ಆಟಗಾರರ ಕುರಿತು ಸೋಷಿಯಲ್‌ ಮೀಡಿಯಾದಲ್ಲೂ ಆಗಾಗ ಚರ್ಚೆಗಳಾಗುತ್ತವೆ. ಇತ್ತೀಚೆಗೆ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಈರ್ವರ ಬಗ್ಗೆ ಮಾತನಾಡಿದ ಭಾರತ ಕ್ರಿಕೆಟ್‌ ತಂಡದ ಹಿರಿಯ ಆಟಗಾರ ವಿರಾಟ್ ಕೊಹ್ಲಿ, ಗಿಲ್ ಮತ್ತು ಇಶಾನ್ ಸ್ನೇಹದಲ್ಲಿರುವ ಆತ್ಮೀಯತೆಯ ಕುರಿತು ವಿವರಿಸಿದರು.

“ಸೀತಾ ಮತ್ತು ಗೀತಾ (ಇಶಾನ್ ಮತ್ತು ಶುಭ್ಮನ್) ತುಂಬಾ ಫನ್ನಿ. ಅವರಿಬ್ಬರ ನಡುವೆ ಏನ್ ನಡೀತಿದೆ ಎನ್ನುವುದರ ಬಗ್ಗೆ ನನಗೆ ಯಾವುದೇ ಸುಳಿವಿಲ್ಲ. ಅವರ ಬಗ್ಗೆ ನನಗೆ ಹೆಚ್ಚು ಹೇಳಲು ಆಗಲ್ಲ. ಆದರೆ ನಾವು ಪ್ರವಾಸ ಹೋಗುವು ಸಮಯದಲ್ಲಿ ಅವರು ಏಕಾಂಗಿಯಾಗಿ ಇರುವುದೇ ಇಲ್ಲ. ಊಟಕ್ಕಾಗಿ ಹೊರಗೆ ಹೋಗುವಾಗಲೂ ಅವರಿಬ್ಬರು ಒಟ್ಟಿಗೆ ಬರುತ್ತಾರೆ. ಚರ್ಚೆಯ ಸಮಯದಲ್ಲಿಯೂ ಅವರು ಜೊತೆಗೆ ಇರುತ್ತಾರೆ. ನಾನು ಅವರಿಬ್ಬರು ಒಬ್ಬಂಟಿಯಾಗಿ ಇರುವುದನ್ನು ನೋಡೇ ಇಲ್ಲ. ಅವರು ಅಷ್ಟು ಒಳ್ಳೆಯ ಸ್ನೇಹಿತರು,” ಎಂದು ಕೊಹ್ಲಿ ಟೀಮ್‌ ಇಂಡಿಯಾ ಯುವ ಆಟಗಾರರ ಕುರಿತು ಹೇಳಿದರು.

ಹೇಮಾ ಮಾಲಿನಿ ನಟನೆಯ ಚಿತ್ರ

ಸೀತಾ ಔರ್ ಗೀತಾ 1972ರಲ್ಲಿ ಬಿಡುಗಡೆಯಾದ ಬಾಲಿವುಡ್ ಚಿತ್ರ. ಜನಪ್ರಿಯ ಚಿತ್ರದ ನಾಯಕಿಯರು ಒಂದೇ ರೀತಿ ಕಾಣುವ ಅವಳಿ ಜವಳಿಗಳು. ಖ್ಯಾತ ನಟಿ ಹೇಮಾ ಮಾಲಿನಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | RCB Playoff Scenario: ಆರ್​​ಸಿಬಿ 6ರಲ್ಲಿ 5 ಸೋತರೂ ಪ್ಲೇಆಫ್ ಪ್ರವೇಶಿಸಲು ಇನ್ನೂ ಇದೆ ಅವಕಾಶ; ಹೀಗಿದೆ ​ಲೆಕ್ಕಾಚಾರ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶುಭ್ಮನ್‌ ಗಿಲ್‌ ಮತ್ತು ಇಶಾನ್‌ ಕಿಶನ್‌ ಇಗಾಗಲೇ ಹಲವು ದಾಖಲೆಗಳನ್ನು ಮಾಡಿದ್ದಾರೆ. ಇಬ್ಬರ ಹೆಸರಲ್ಲೂ ಏಕದಿನ ದ್ವಿಶತಕಗಳು ಕೂಡಾ ದಾಖಲಾಗಿವೆ. ಸ್ಟ್ಯಾಂಡಿಂಗ್ ಪ್ರದರ್ಶನ ಮಾತ್ರವಲ್ಲದೆ ಸ್ಫೋಟಕ ಬ್ಯಾಟಿಂಗ್‌ ನಡೆಸುವಲ್ಲೂ ಈ ಇಬ್ಬರು ಎತ್ತಿದ ಕೈ.

ಮುಂಬರುವ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಇವರಿಬ್ಬರೂ ಕಣದಲ್ಲಿದ್ದಾರೆ. ಇಬ್ಬರಿಲ್ಲಿ ಶುಭ್ಮನ್‌ ಗಿಲ್‌ ಆಯ್ಕೆ ಬಹುತೇಕ ಖಚಿತವಾಗಿದ್ದು, ವಿಕೆಟ್‌ ಕೀಪರ್‌ ಆಗಿ ಇಶಾನ್‌ ಕಿಶಾನ್ ಆಯ್ಕೆ ಕಷ್ಟಸಾಧ್ಯ. ಏಪ್ರಿಲ್ ಅಂತ್ಯದ ವೇಳೆಗೆ ಬಿಸಿಸಿಐ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಅತ್ತ, ಜೂನ್‌ ತಿಂಗಳಲ್ಲಿ ನಡೆಯಲಿರುವ ಐಸಿಸಿ ಟೂರ್ನಿಯಲ್ಲಿ 15 ಸದಸ್ಯರ ತಂಡದಲ್ಲಿ ಕೊಹ್ಲಿ ಈಗಾಗಲೇ ತಮ್ಮ ಸ್ಥಾನವನ್ನು ಕಾಯ್ದಿರಿಸಿದ್ದಾರೆ ಎಂದು ವರದಿಯೊಂದು ಸೂಚಿಸಿದೆ.

IPL_Entry_Point