ಮೊದಲ ಬಾರಿಗೆ ಕಾಣಿಸಿಕೊಂಡ ಅಕಾಯ್; ಪಪ್ಪ ವಿರಾಟ್ ಕೊಹ್ಲಿ ಜೊತೆ ಲಂಡನ್​​ ಬೀದಿಗಳಲ್ಲಿ ಸುತ್ತಾಟ, ವಿಡಿಯೋ ವೈರಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ಮೊದಲ ಬಾರಿಗೆ ಕಾಣಿಸಿಕೊಂಡ ಅಕಾಯ್; ಪಪ್ಪ ವಿರಾಟ್ ಕೊಹ್ಲಿ ಜೊತೆ ಲಂಡನ್​​ ಬೀದಿಗಳಲ್ಲಿ ಸುತ್ತಾಟ, ವಿಡಿಯೋ ವೈರಲ್

ಮೊದಲ ಬಾರಿಗೆ ಕಾಣಿಸಿಕೊಂಡ ಅಕಾಯ್; ಪಪ್ಪ ವಿರಾಟ್ ಕೊಹ್ಲಿ ಜೊತೆ ಲಂಡನ್​​ ಬೀದಿಗಳಲ್ಲಿ ಸುತ್ತಾಟ, ವಿಡಿಯೋ ವೈರಲ್

Virat Kohli and Akaay : ಟಿ20 ವಿಶ್ವಕಪ್ 2024 ವಿಜಯಯಾತ್ರೆ ನಂತರ ಲಂಡನ್​ಗೆ ಪ್ರಯಾಣಿಸಿದ ವಿರಾಟ್ ಕೊಹ್ಲಿ, ಹಲವು ದಿನಗಳ ಬಳಿಕ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಅದು ಕೂಡ ಮಗ ಅಕಾಯ್​ ಜೊತೆಗೆ ಎಂಬುದು ವಿಶೇಷ.

ಮೊದಲ ಬಾರಿಗೆ ಕಾಣಿಸಿಕೊಂಡ ಅಕಾಯ್; ಪಪ್ಪ ವಿರಾಟ್ ಕೊಹ್ಲಿ ಜೊತೆ ಲಂಡನ್​​ ಬೀದಿಗಳಲ್ಲಿ ಸುತ್ತಾಟ, ವಿಡಿಯೋ ವೈರಲ್
ಮೊದಲ ಬಾರಿಗೆ ಕಾಣಿಸಿಕೊಂಡ ಅಕಾಯ್; ಪಪ್ಪ ವಿರಾಟ್ ಕೊಹ್ಲಿ ಜೊತೆ ಲಂಡನ್​​ ಬೀದಿಗಳಲ್ಲಿ ಸುತ್ತಾಟ, ವಿಡಿಯೋ ವೈರಲ್

ಕಳೆದ ತಿಂಗಳು ಯುಎಸ್​ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ (USA and West Indies) ಜರುಗಿದ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ (T20 World Cup 2024) ಭಾರತ ತಂಡದ ವಿಜಯಯಾತ್ರೆ ನಂತರ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಲಂಡನ್‌ನಲ್ಲಿ ತಮ್ಮ ಕುಟುಂಬದ ಅಮೂಲ್ಯ ಕ್ಷಣಗಳನ್ನು ಕಳೆಯುತ್ತಿದ್ದಾರೆ. ವಿಶ್ವಕಪ್ ಗೆದ್ದ ಬೆನ್ನಲ್ಲೇ ಚುಟುಕು ಕ್ರಿಕೆಟ್​ಗೆ ವಿದಾಯ ಘೋಷಿಸಿರುವ ಕೊಹ್ಲಿ, ಇದೀಗ ಮೊದಲ ಬಾರಿಗೆ ಮಗ ಅಕಾಯ್ (Akaay) ಜೊತೆಗೆ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ (Video Viral) ಆಗುತ್ತಿದೆ.

ಪ್ರಸ್ತುತ, ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಇಬ್ಬರು ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಅವರೊಂದಿಗೆ ಯುಕೆಯಲ್ಲಿ ಶಾಂತಿಯುತ ದಿನಗಳನ್ನು ಕಳೆಯುತ್ತಿರುವ ವಿರಾಟ್ ಕೊಹ್ಲಿ, ಭಾರತದಲ್ಲಿ ವಿಶ್ವಕಪ್ ವಿಜಯಯಾತ್ರೆ ಮುಗಿಸಿದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಕೊಹ್ಲಿ ಮತ್ತು ಅನುಷ್ಕಾ ಇತ್ತೀಚೆಗೆ ಲಂಡನ್‌ನ ಬೀದಿಗಳಲ್ಲಿ ಶಾಪಿಂಗ್ ಮಾಡುತ್ತಿರುವುದು ಕಂಡು ಬಂದಿದೆ. ಅಕಾಯ್ ಜನಿಸಿದ 6 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಬೀದಿ ಬದಿ ವಿರೂಷ್ಕಾ ಶಾಪಿಂಗ್

ಬೀದಿ ಬದಿ ಹೂ ಕುಂಡಗಳನ್ನು ಅನುಷ್ಕಾ ಶರ್ಮಾ ಖರೀದಿಸುತ್ತಿರುವ ದೃಶ್ಯವನ್ನು ವೈರಲ್ ಆದ ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಕೊಹ್ಲಿ ಅಕಾಯ್​ನನ್ನು ಎತ್ತಿಕೊಂಡಿದ್ದರು. ಈ ವಿಡಿಯೋ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ ಅಕಾಯ್ ಮುಖ ಎಲ್ಲೂ ಕಾಣಿಸುವುದಿಲ್ಲ. ಅಕಾಯ್ ಫಸ್ಟ್ ಲುಕ್​ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವಿರಾಟ್ ಮತ್ತು ಅನುಷ್ಕಾ ಅವರು ತಮ್ಮಿಬ್ಬರ ಮಕ್ಕಳ ಮುಖವನ್ನು ಈಗಲೇ ಸಾರ್ವಜನಿಕವಾಗಿ ತೋರಿಸುವುದಿಲ್ಲ ಎಂದು ಘೋಷಿಸಿದ್ದರು.

ಶ್ರೀಲಂಕಾ ಸರಣಿಗೆ ಕೊಹ್ಲಿ ಅಲಭ್ಯ?

ಭಾರತೀಯ ಕ್ರಿಕೆಟ್ ತಂಡವು ಜುಲೈ 27 ರಿಂದ ಪ್ರಾರಂಭವಾಗುವ ವೈಟ್-ಬಾಲ್ ಸರಣಿಗೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲು ಸಜ್ಜಾಗಿದೆ. ವಿರಾಟ್ ಕೊಹ್ಲಿ ಅವರು ವಿಶ್ರಾಂತಿ ಪಡೆಯುತ್ತಿರುವುದಾಗಿ ಬಿಸಿಸಿಐಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ. ಆದರೆ ಗೌತಮ್ ಗಂಭೀರ್, ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಏಕದಿನ ಸರಣಿಗೆ ಮರಳಬೇಕು ಎಂದು ಸೂಚಿಸಿದ್ದಾರೆ. ಈ ಸರಣಿಗೆ ಶೀಘ್ರದಲ್ಲೇ ತಂಡ ಪ್ರಕಟಗೊಳ್ಳಲಿದ್ದು, ಯಾರಿಗೆಲ್ಲಾ ಅವಕಾಶ ಸಿಗುತ್ತದೆ ಎಂಬುದರ ಕುರಿತು ಕಾದುನೋಡೋಣ.

ಒಂದು ವೇಳೆ ವಿರಾಟ್ ಕೊಹ್ಲಿ ಅವರು ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದರೆ, ಅವರು ಮುಂದಿನ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ದ್ವಿಪಕ್ಷೀಯ ಟೆಸ್ಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲೂ ಕೊಹ್ಲಿ ಭಾಗವಹಿಸಲಿದ್ದಾರೆ. ಟಿ20 ವಿಶ್ವಕಪ್ 2024ರ ಫೈನಲ್‌ನಲ್ಲಿ ಟೀಂ ಇಂಡಿಯಾ ಗೆಲುವಿನಲ್ಲಿ ಕೊಹ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ವಿಶ್ವಕಪ್ ಫೈನಲ್​ನಲ್ಲಿ ಅಬ್ಬರ

ವಿಶ್ವಕಪ್​​​ನಲ್ಲಿ ಲೀಗ್, ಸೂಪರ್​​-8, ಸೆಮಿಫೈನಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕೊಹ್ಲಿ ಫೈನಲ್​ನಲ್ಲಿ ಅಬ್ಬರಿಸಿದ್ದರು. 59 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​ ಸಹಿತ ಆಕರ್ಷಕ 76 ರನ್‌ ಸಿಡಿಸಿದ್ದರು. ಅವರ ಅದ್ಭುತ ಆಟದ ನೆರವಿನಿಂದ ಟೀಮ್ ಇಂಡಿಯಾ 176 ರನ್ ಚಚ್ಚಿತ್ತು. ಆದರೆ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ 169 ರನ್ ಗಳಿಸಿ 7 ರನ್​​ಗಳಿಂದ ಸೋಲು ಕಂಡಿತು. ಇದರೊಂದಿಗೆ ಭಾರತ ಎರಡನೇ ಬಾರಿಗೆ ಚಾಂಪಿಯನ್ ಆಯಿತು. ಆದರೆ ಚೊಚ್ಚಲ ಐಸಿಸಿ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದ್ದ ದಕ್ಷಿಣ ಆಫ್ರಿಕಾ ಕನಸು ಭಗ್ನಗೊಂಡಿತು.

Whats_app_banner