2ನೇ ಮಗುವಿನ ನಿರೀಕ್ಷೆಯಲ್ಲಿ ವಿರುಷ್ಕ ದಂಪತಿ; ಖುಷಿ ಸುದ್ದಿಯನ್ನು ಗೌಪ್ಯವಾಗಿಡುತ್ತಿರುವುದೇಕೆ ವಿರಾಟ್ ಕೊಹ್ಲಿ?
Anushka Sharma Virat Kohli : ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು 2ನೇ ಮಗುವಿನ ನಿರೀಕ್ಷೆಯಲ್ಲಿರುವ ಖುಷಿ ಸುದ್ದಿಯನ್ನು ಗೌಪ್ಯವಾಗಿಡುತ್ತಿರುವುದೇಕೆ? ಇಲ್ಲಿದೆ ವಿವರ ನೋಡಿ.

ಭಾರತ ತಂಡದ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ (Virat Kohli - Anushka Sharma) ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಸುಳಿವು ನೀಡಿದ್ದಾರೆ. ಇದೇ ಕಾರಣಕ್ಕೆ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ 2ನೇ ಮಗುವಿನ ನಿರೀಕ್ಷೆಯಲ್ಲಿರುವ ಖುಷಿ ಸುದ್ದಿಯನ್ನು ಗೌಪ್ಯವಾಗಿಡುತ್ತಿರುವುದೇಕೆ ಎಂದು ಹಲವು ಕೇಳಿದ್ದಾರೆ.
ವಿರಾಟ್ ಮತ್ತು ಅನುಷ್ಕಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಈ ಹಿಂದೆ ವರದಿಯಾಗಿದ್ದ ಸುದ್ದಿಗಳು ಈಗ ನಿಜ ಎನ್ನಲಾಗುತ್ತಿದೆ. ಈ ಬಗ್ಗೆ ಸ್ಟಾರ್ ದಂಪತಿಗಳು ಅಧಿಕೃತವಾಗಿ ಖಚಿತಪಡಿಸಿಲ್ಲ. ಆದರೆ ಮೂಲಗಳು ಇದು ನಿಜ ಎನ್ನುತ್ತಿವೆ. ಈಗಾಗಲೇ ಮಗುವಿಗೆ ಜನ್ಮ ನೀಡಲು ದಿನಾಂಕ, ಸ್ಥಳ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಕೈಗಾರಿಕೋದ್ಯಮಿ ಗೋಯೆಂಕಾ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಇಬ್ಬರ ಹೆಸರನ್ನೂ ಉಲ್ಲೇಖಿಸದೆ ಎನ್ನುವಂತ ಸುಳಿವು ಕೊಟ್ಟಿದ್ದಾರೆ.
ಲಂಡನ್‌ನಲ್ಲಿ ಎರಡನೇ ಮಗುವಿಗೆ ಜನ್ಮ
ಅನುಷ್ಕಾ ಶರ್ಮಾ ಅವರು ಲಂಡನ್‌ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಗೋಯೆಂಕಾ ಹೇಳಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಮಗು ಜನಿಸಲಿದೆ! ಆ ಮಗು ಭಾರತೀಯ ಕ್ರಿಕೆಟ್ ಅನ್ನು ತಂದೆಯಂತೆ ಮತ್ತಷ್ಟು ಉನ್ನತ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ನಾನು ಭಾವಿಸುತ್ತೇವೆ. ಅಥವಾ ಆ ಮಗು ತಾಯಿಯಂತೆ ಸಿನಿಮಾ ತಾರೆಯಾಗುವುದೇ? ಎಂದು ಬರೆದಿದ್ದಾರೆ. #MadeInIndia #ToBeBornInLondon ಎಂಬ ಹ್ಯಾಶ್ಟ್ಯಾಗ್ಗಳನ್ನು ಬಳಸಿದ್ದಾರೆ. ಆದರೆ ಈ ಸುದ್ದಿ ಎಷ್ಟು ಸತ್ಯ ಎಂಬುದರ ಕುರಿತು ಇನ್ನಷ್ಟೇ ಮಾಹಿತಿ ಬರಬೇಕಿದೆ.
ಖುಷಿ ಸುದ್ದಿಯನ್ನು ಗೌಪ್ಯವಾಗಿಡುತ್ತಿರುವುದೇಕೆ?
ನಿಜ, ಈ ಟ್ವೀಟ್ ಬೆನ್ನಲ್ಲೇ ಮಗುವಿನ ನಿರೀಕ್ಷೆಯಲ್ಲಿರುವುದು ಖುಷಿ ಸುದ್ದಿಯಾಗಿದ್ದರೂ ಗೌಪ್ಯತೆ ಕಾಡುತ್ತಿರುವುದೇಕೆ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪತ್ರಕರ್ತ ಅಭಿಷೇಕ್ ತ್ರಿಪಾಠಿ ಅವರು ಅನುಷ್ಕಾ ಶರ್ಮಾ ಪ್ರಗ್ನೆನ್ಸಿಯಲ್ಲಿ ಸಮಸ್ಯೆ ಇರುವುದು ಕಂಡು ಬಂದಿದೆ. ಜೊತೆಗೆ ಕೆಲವು ಆರೋಗ್ಯ ಸಮಸ್ಯೆಗಳನ್ನೂ ಎದುರಿಸುತ್ತಿದ್ದಾರೆ ಎಂದು ಪೋಸ್ಟ್ ಮಾಡಿದ್ದರು. ಹಾಗಾಗಿ ವಿರಾಟ್ ಕೊಹ್ಲಿ ಕುಟುಂಬದ ಜೊತೆಗಿರಲು ಬಯಸಿದ ಕಾರಣ ಅವರು ಸರಣಿಯಿಂದ ಹಿಂದೆ ಸರಿದಿದ್ದಾರೆ. ಸದ್ಯ ಅನುಷ್ಕಾ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ, ಇದು ಅಧಿಕೃತ ಸುದ್ದಿಯಲ್ಲ.
ಮಗುವಿನ ನಿರೀಕ್ಷೆಯಲ್ಲಿರುವ ಕಾರಣಕ್ಕಾಗಿಯೇ ವಿರಾಟ್ ಕೊಹ್ಲಿ ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರ ಬಿದ್ದಿದ್ದಾರೆ. ವೈಯಕ್ತಿಕ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದಿದ್ದ ಕೊಹ್ಲಿ, ಎರಡನೇ ಬಾರಿಗೆ ತಂದೆಯಾಗಲಿದ್ದಾರೆ ಎನ್ನಲಾಗಿದೆ. ಅಲ್ಲದೆ, ಬಿಸಿಸಿಐ ವಿರಾಟ್ ಕೊಹ್ಲಿ ಗೌಪ್ಯತೆ ಕಾಪಾಡುವಂತೆ ಮನವಿ ಮಾಡಿತ್ತು. ಗೆಳೆಯ ಎಬಿ ಡಿವಿಲಿಯರ್ಸ್ ತನ್ನ ಯೂಟ್ಯೂಟ್ ಚಾನೆಲ್ನಲ್ಲಿ ಇದೇ ವಿಚಾರವನ್ನು ಬಹಿರಂಗಪಡಿಸಿದ್ದರು. ಆದರೆ ಇದಾದ ಕೆಲವೇ ದಿನಗಳ ನಂತರ ನಾನು ದೊಡ್ಡ ಪ್ರಮಾದ ಮಾಡಿದೆ ಎಂದಿದ್ದರು.
ಇದು ಸುಳ್ಳು ಎಂದಿದ್ದ ಎಬಿಡಿ
ಮತ್ತೊಂದೊಡೆ ಎಬಿ ಡಿವಿಲಿಯರ್ಸ್ ಇದೇ ಸುದ್ದಿ ಹೇಳಿದ್ದರು. ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ನನಗೆ ತಿಳಿದ ಮಾಹಿತಿ ಪ್ರಕಾರ ವಿರಾಟ್ ತನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಬಯಸಿದ್ದಾರೆ. ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದಕ್ಕಿಂತ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಅವರ ನಿರ್ಧಾರ ಗೌರವಿಸಬೇಕು. ಹೀಗಾಗಿ ಇಂಗ್ಲೆಂಡ್ ಸರಣಿಯಿಂದ ಹೊರಗುಳಿದರು ಎಂದು ಎಬಿಡಿ ಹೇಳಿದ್ದರು. ಆದರೆ ಈ ಹೇಳಿಕೆ ಕೆಲವೇ ದಿನಗಳಲ್ಲಿ ನಾನು ಹೇಳಿದ್ದು ಸುಳ್ಳು ಎಂದು ಹೇಳಿದ್ದರು.
