ಕನ್ನಡ ಸುದ್ದಿ  /  ಕ್ರಿಕೆಟ್  /  ನೋಡದೆಯೇ 98 ಮೀಟರ್​ ದೂರ ಸಿಕ್ಸರ್​ ಬಾರಿಸಿದ ವಿರಾಟ್ ಕೊಹ್ಲಿ; ಕಣ್ ಕಣ್ ಬಿಟ್ಟು ನೋಡಿದ ಎಂಎಸ್ ಧೋನಿ, Video

ನೋಡದೆಯೇ 98 ಮೀಟರ್​ ದೂರ ಸಿಕ್ಸರ್​ ಬಾರಿಸಿದ ವಿರಾಟ್ ಕೊಹ್ಲಿ; ಕಣ್ ಕಣ್ ಬಿಟ್ಟು ನೋಡಿದ ಎಂಎಸ್ ಧೋನಿ, VIDEO

Virat Kohli: ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧದ ಪಂದ್ಯದ ಮೂರನೇ ಓವರ್‌ನಲ್ಲಿ ವೇಗಿ ತುಷಾರ್ ದೇಶಪಾಂಡೆ ಅವರಿಗೆ ದೈತ್ಯಾಕಾರದ ಸಿಕ್ಸರ್ ಸಿಡಿಸುವ ಮೂಲಕ ವಿರಾಟ್​ ಕೊಹ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ನೋಡದೆ 98 ಮೀಟರ್​ ದೂರ ಸಿಕ್ಸರ್​ ಬಾರಿಸಿದ ವಿರಾಟ್ ಕೊಹ್ಲಿ; ಕಣ್ ಕಣ್ ಬಿಟ್ಟು ನೋಡಿದ ಎಂಎಸ್ ಧೋನಿ, VIDEO
ನೋಡದೆ 98 ಮೀಟರ್​ ದೂರ ಸಿಕ್ಸರ್​ ಬಾರಿಸಿದ ವಿರಾಟ್ ಕೊಹ್ಲಿ; ಕಣ್ ಕಣ್ ಬಿಟ್ಟು ನೋಡಿದ ಎಂಎಸ್ ಧೋನಿ, VIDEO

ಐಪಿಎಲ್​ನ ಬಹುನಿರೀಕ್ಷಿತ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs CSK) ಉತ್ತಮ ಆರಂಭ ಪಡೆಯಿತು. ಮೊದಲ ಓವರ್​​ನಲ್ಲಿ ಮೊದಲ ಓವರ್​​ನಲ್ಲಿ 2 ರನ್ ಪಡೆದರೂ 2 ಮತ್ತು 3ನೇ ಓವರ್​​​​ನಲ್ಲಿ ರನ್​ಗಳು ಹರಿದು ಬಂದವು. ಅದರಲ್ಲೂ ವಿರಾಟ್ ಕೊಹ್ಲಿ (Virat Kohli) ಸಿಡಿಸಿದ ಸಿಕ್ಸರ್​ವೊಂದು ಸಂಚಲನ ಸೃಷ್ಟಿಸಿದೆ. ನೋ ಲುಕ್ ಸಿಕ್ಸರ್ ಅನ್ನು ಸಿಎಸ್ಕೆ ಮಾಜಿ ನಾಯಕ ಎಂಎಸ್ ಧೋನಿ ಅವರು ಕಣ್ ಕಣ್ ಬಿಟ್ಟು ನೋಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇನ್ನಿಂಗ್ಸ್​ನ ಆರಂಭಿಕ ಓವರ್​​ನಲ್ಲಿ ಕೇವಲ 2 ರನ್ ಬಿಟ್ಟುಕೊಟ್ಟಿದ್ದ ಸಿಎಸ್​ಕೆ ವೇಗಿ ತುಷಾರ್​ ದೇಶಪಾಂಡೆ, ಎಸೆದ ಮೂರನೇ ಓವರ್​​ನ ಮೊದಲ ಎಸೆತದಲ್ಲೇ ಸಿಕ್ಸರ್​ ಚಚ್ಚಿಸಿಕೊಂಡರು. ವಿರಾಟ್ ಕೊಹ್ಲಿ ನೋಡದೆಯೇ ಬಾರಿಸಿದ ಚೆಂಡು ಚಿನ್ನಸ್ವಾಮಿ ಸ್ಟೇಡಿಯಂನ ಮೇಲ್ಛಾವಣಿಗೆ (ರೂಫ್​ಗೆ) ಬಡಿಯಿತು. ಈ ಸಿಕ್ಸರ್​ 98 ಮೀಟರ್​ಗಳ ದೂರ ಹೋಯಿತು. ಕೊಹ್ಲಿ ವೃತ್ತಿಜೀವನದಲ್ಲೇ ತಾನು ಸಿಡಿಸಿದ ಅಮೋಘ ಸಿಕ್ಸರ್​ಗಳಲ್ಲಿ ಇದು ಒಂದು.

ಚೆಂಡನ್ನೇ ದಿಟ್ಟಿಸಿ ನೋಡಿದ ಎಂಎಸ್ ಧೋನಿ

ವಿರಾಟ್ ಅವರ ನೋ ಲುಕ್ ಸಿಕ್ಸ್​ ಕಂಡು ಎಂಎಸ್ ಧೋನಿ ಫಿದಾ ಆಗಿದ್ದಾರೆ. ಬ್ಯಾಟ್​ನಿಂದ ಚೆಂಡು ಚಿಮ್ಮುತ್ತಿದ್ದಂತೆ ಸಿಎಸ್​ಕೆ ಮಾಜಿ ನಾಯಕ ಆಕಾಶದಲ್ಲಿ ಹೋಗುತ್ತಿದ್ದ ಚೆಂಡನ್ನೇ ದಿಟ್ಟಿಸಿ ನೋಡಿದರು. ಮಾಹಿ ಅಚ್ಚರಿಯ ರಿಯಾಕ್ಷನ್ ಕೊಟ್ಟರೆ, ಅಮೇಜಿಂಗ್ ಸಿಕ್ಸರ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೆ, ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ವಿರಾಟ್ 98 ಮೀಟರ್ ಸಿಕ್ಸ್ ಬಾರಿಸುತ್ತಿದ್ದಂತೆ ಸ್ಟೇಡಿಯಂನಲ್ಲಿ 123 ಡೆಸಿಬಲ್​ನಷ್ಟು ಶಬ್ದ ಕೇಳಿ ಬಂತು.

ಮ್ಯಾಚ್ ನೋಡ್ತಿದ್ದಾರೆ ಶ್ರೇಯಾಂಕಾ, ಸ್ಮೃತಿ ಮಂಧಾನ

ಪ್ಲೇಆಫ್​ ಡಿಸೈಡರ್ ಪಂದ್ಯವನ್ನು ಮಹಿಳಾ ತಂಡದ ಆರ್​ಸಿಬಿ ಆಟಗಾರ್ತಿಯರಾದ ಸ್ಮೃತಿ ಮಂಧಾನ, ಶ್ರೇಯಾಂಕಾ ಪಾಟೀಲ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ಮಹಿಳಾ ತಂಡದ ಜೆಮಿಮಾ ರೋಡ್ರಿಗಸ್ ಪಂದ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದು, ಆರ್​ಸಿಬಿಗೆ ಚಿಯರ್ ಮಾಡುತ್ತಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಕೂಡ ಪತ್ನಿ ವಿರಾಟ್​ಗೆ ಚಿಯರ್ ಮಾಡುತ್ತಿದ್ದಾರೆ. ಇದರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಚಿನ್ನಸ್ವಾಮಿಯಲ್ಲಿ ವಿರಾಟ್ ದಾಖಲೆ

ತನ್ನ ಫೇವರಿಟ್ ಮೈದಾನದ ಚಿನ್ನಸ್ವಾಮಿಯಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಪಂದ್ಯಕ್ಕೂ ಮುನ್ನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ವಿರಾಟ್‌ 2993 ರನ್‌ ಗಳಿಸಿದ್ದರು. 3000 ರನ್​​ಗಳ ಮೈಲಿಗಲ್ಲಿ ತಲುಪಲು 7 ರನ್​ಗಳ ಅಗತ್ಯ ಇತ್ತು. ಸ್ಫೋಟಕ ಸಿಕ್ಸರ್​​​ನೊಂದಿಗೆ ಈ ಸಾಧನೆ ಮಾಡಿದರು. ವಿರಾಟ್‌ ಕೊಹ್ಲಿ 86 ಪಂದ್ಯಗಳಲ್ಲಿ 3000 ರನ್‌ ಗಡಿ ದಾಟಿದ್ದಾರೆ. ಐಪಿಎಲ್‌ನಲ್ಲಿ ಚಿನ್ನಸ್ವಾಮಿ ಮೈದಾನ ಮಾತ್ರವಲ್ಲದೆ, ಯಾವುದೇ ಕ್ರೀಡಾಂಗಣದಲ್ಲಿ ಆಟಗಾರರೊಬ್ಬರು ಕಲೆಹಾಕಿದ ಅತಿ ಹೆಚ್ಚು ರನ್‌ ಇದಾಗಿದೆ.

ಮೈದಾನವೊಂದರಲ್ಲಿ ಅತ್ಯಧಿಕ ರನ್ (ಐಪಿಎಲ್)

3005* - ವಿರಾಟ್ ಕೊಹ್ಲಿ (ಚಿನ್ನಸ್ವಾಮಿ ಮೈದಾನ, ಬೆಂಗಳೂರು)

2295 - ರೋಹಿತ್​ ಶರ್ಮಾ (ವಾಂಖೆಡೆ ಕ್ರಿಕೆಟ್ ಮೈದಾನ, ಮುಂಬೈ)

1960 -ಎಬಿ ಡಿವಿಲಿಯರ್ಸ್ (ಚಿನ್ನಸ್ವಾಮಿ ಮೈದಾನ, ಬೆಂಗಳೂರು)

2024ರ ಐಪಿಎಲ್​ನಲ್ಲಿ ಕೊಹ್ಲಿ ಅತ್ಯಧಿಕರ್ ಸಿಕ್ಸರ್​

2024ರ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ್ದಾರೆ. ಒಟ್ಟು ಈ ಟೂರ್ನಿಯಲ್ಲಿ 37 ಸಿಕ್ಸರ್ ಸಿಡಿಸಿದ್ದಾರೆ. ಆ ಮೂಲಕ ನಿಕೋಲಸ್ ಪೂರನ್ ಅವರ 36 ಸಿಕ್ಸರ್​ಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024