ಕನ್ನಡ ಸುದ್ದಿ  /  ಕ್ರಿಕೆಟ್  /  ನಿಮ್ಮ ಪ್ರದರ್ಶನ ನೋಡಿ ನಿಮಗೆ ನಾಚಿಕೆಯಾಗಬೇಕು, ನೀವಾಗಿಯೇ ಮುಂದೆ ಬಂದು ನಿವೃತ್ತಿ ಘೋಷಿಸಿ; ಶಕೀಬ್‌ ಮೇಲೆ ಸೆಹ್ವಾಗ್‌ ಕಿಡಿ

ನಿಮ್ಮ ಪ್ರದರ್ಶನ ನೋಡಿ ನಿಮಗೆ ನಾಚಿಕೆಯಾಗಬೇಕು, ನೀವಾಗಿಯೇ ಮುಂದೆ ಬಂದು ನಿವೃತ್ತಿ ಘೋಷಿಸಿ; ಶಕೀಬ್‌ ಮೇಲೆ ಸೆಹ್ವಾಗ್‌ ಕಿಡಿ

Virender Sehwag: ಬಾಂಗ್ಲಾದೇಶದ ಅನುಭವಿ ಆಟಗಾರ ಶಕೀಬ್ ಅಲ್‌ ಹಸನ್‌, ಟಿ20 ಸ್ವರೂಪಕ್ಕೆ ನಿವೃತ್ತಿ ಘೋಷಿಸಬೇಕೆಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ನೀವಾಗಿಯೇ ಮುಂದೆ ಬಂದು ನಿವೃತ್ತಿ ಘೋಷಿಸಿ; ಶಕೀಬ್‌ ಮೇಲೆ ಸೆಹ್ವಾಗ್‌ ಕಿಡಿ
ನೀವಾಗಿಯೇ ಮುಂದೆ ಬಂದು ನಿವೃತ್ತಿ ಘೋಷಿಸಿ; ಶಕೀಬ್‌ ಮೇಲೆ ಸೆಹ್ವಾಗ್‌ ಕಿಡಿ

ಟಿ20 ವಿಶ್ವಕಪ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶ ಸೋಲು ಕಂಡಿತು. ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಬಾಂಗ್ಲಾದೇಶದ ಅನುಭವಿ ಆಟಗಾರ ಶಕೀಬ್ ಅಲ್ ಹಸನ್ ಮೇಲೆ ಭಾರತದ ದಿಗ್ಗಜ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ನೀಡಿದ 114 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಬಾಂಗ್ಲಾದೇಶವು, ಆರಂಭದಲ್ಲಿ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಆ ಬಳಿಕ ದಿಢೀರ್‌ ಕುಸಿತ ಕಂಡ ತಂಡವು, ಗುರಿ ತಲುಪಲಾಗದೆ 4 ರನ್‌ಗಳಿಂದ ಪಂದ್ಯ ಕಳೆದುಕೊಂಡಿತು. ಅನುಭವಕ್ಕೆ ತಕ್ಕಂತೆ ಆಡದ ಶಕೀಬ್‌ ಮೇಲೆ ವೀರೂ ಗರಂ ಆಗಿದ್ದಾರೆ.

ಪಂದ್ಯದಲ್ಲಿ ಅನುಭವಿ ಆಟಗಾರ ಶಕೀಬ್ 4 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿ ಔಟಾದರು. ಶಕೀಬ್ ಈ ಹಿಂದೆಯೇ ಟಿ20 ಸ್ವರೂಪಕ್ಕೆ ವಿದಾಯ ಹೇಳಬೇಕಿತ್ತು ಎಂದು ಹೇಳಿದ ಸೆಹ್ವಾಗ್, ಚುಟುಕು ಸ್ವರೂಪದಲ್ಲಿ ಇತ್ತೀಚೆಗೆ ಅವರು ನೀಡುತ್ತಿರುವ ಪ್ರದರ್ಶನವು ಅವಮಾನಕರ' ಎಂದು ವ್ಯಾಖ್ಯಾನಿಸಿದರು.

“ಕಳೆದ ವಿಶ್ವಕಪ್ ಸಮಯದಲ್ಲಿಯೇ ಅವರನ್ನು ಇನ್ನು ಮುಂದೆ ಟಿ20 ಸ್ವರೂಪಕ್ಕೆ ಆಯ್ಕೆ ಮಾಡಲ್ಲ ಎಂದು ನಾನು ಭಾವಿಸಿದ್ದೆವು. ಏಕೆಂದರೆ ನಿವೃತ್ತಿಯ ಸಮಯ ಬಹಳ ಹಿಂದೆಯೇ ಬಂದಿತ್ತು. ಅವರೊಬ್ಬ ಹಿರಿಯ ಆಟಗಾರ. ಬಾಂಗ್ಲಾದೇಶ ತಂಡದ ನಾಯಕರಾಗಿದ್ದವರು. ನಿಮ್ಮ ಇತ್ತೀಚಿನ ಪ್ರದರ್ಶನವನ್ನು ನೋಡಿ ನಿಮಗೆ ನಿಜಕ್ಕೂ ನಾಚಿಕೆಯಾಗಬೇಕು. ನೀವಾಗಿಯೇ ಮುಂದೆ ಬಂದು ಈ ಸ್ವರೂಪದಿಂದ ನಿವೃತ್ತಿ ಘೋಷಿಸಬೇಕು,” ಎಂದು ಸೆಹ್ವಾಗ್ ಕ್ರಿಕ್‌ಬಜ್‌ನಲ್ಲಿ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನೀವು ಆಡಮ್ ಗಿಲ್‌ಕ್ರಿಸ್ಟ್ ಅಥವಾ ಮ್ಯಾಥ್ಯೂ ಹೇಡನ್ ಅಲ್ಲ

ಶಕೀಬ್ “ಆಡಮ್ ಗಿಲ್‌ಕ್ರಿಸ್ಟ್ ಅಥವಾ ಮ್ಯಾಥ್ಯೂ ಹೇಡನ್ ಅಲ್ಲ” ಎಂದು ಹೇಳಿದ ಸೆಹ್ವಾಗ್, ತಮ್ಮ ಸ್ಟೈಲ್‌ಗೆ ತಕ್ಕಂತೆ ಆಡಲು ಸಲಹೆ ನೀಡಿದರು. “ನಿಮ್ಮ ಅನುಭವದಿಂದಾಗಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದರೆ, ಅದು ನಿಜವಾಗಿಯೂ ಸರಿಯಾದ ನಿರ್ಧಾರ ಎಂಬುದನ್ನು ಆಡಿ ತೋರಿಸಿ. ನೀವು ಕ್ರೀಸ್‌ನಲ್ಲಿ ಸ್ವಲ್ಪ ಸಮಯ ಕಳೆಯಬೇಕು. ನೀವು ಆಡಮ್ ಗಿಲ್‌ಕ್ರಿಸ್ಟ್ ಅಥವಾ ಮ್ಯಾಥ್ಯೂ ಹೇಡನ್ ಅಲ್ಲ. ಹುಕ್ಸ್ ಮತ್ತು ಪುಲ್‌ ಶಾಟ್‌ಗಳು ನಿಮ್ಮದಲ್ಲ. ನೀವು ಬಾಂಗ್ಲಾದೇಶದ ಆಟಗಾರ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆಡಿ” ಎಂದು ಸೆಹ್ವಾಗ್‌ ಖಡಕ್‌ ಸಲಹೆ ನೀಡಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವು ಆಡಿದ ಎರಡು ಪಂದ್ಯಗಳಲ್ಲಿ‌ ಒಂದರಲ್ಲಿ ಜಯ ಗಳಿಸಿದೆ. ಇದೀಗ 2 ಪಂದ್ಯಗಳಿಂದ 2 ಅಂಕಗಳನ್ನು ಗಳಿಸಿದೆ. ತಂಡವು ಸೂಪರ್‌ ಫೋರ್‌ ಹಂತಕ್ಕೆ ಲಗ್ಗೆ ಹಾಕಲು ಮುಂದಿನ ಪಂದ್ಯಗಳಲ್ಲಿ ಗೆಲ್ಲಲೇಬೇಕಾಗಿದೆ.