ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ವೀರೇಂದ್ರ ಸೆಹ್ವಾಗ್ ಪುತ್ರನದ್ದೇ ಆಟ; 24 ವಿಕೆಟ್ ಪಡೆದು ಮಿಂಚಿದ 14 ವರ್ಷದ ವೇದಾಂತ್
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ವೀರೇಂದ್ರ ಸೆಹ್ವಾಗ್ ಪುತ್ರನದ್ದೇ ಆಟ; 24 ವಿಕೆಟ್ ಪಡೆದು ಮಿಂಚಿದ 14 ವರ್ಷದ ವೇದಾಂತ್

ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ವೀರೇಂದ್ರ ಸೆಹ್ವಾಗ್ ಪುತ್ರನದ್ದೇ ಆಟ; 24 ವಿಕೆಟ್ ಪಡೆದು ಮಿಂಚಿದ 14 ವರ್ಷದ ವೇದಾಂತ್

ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ವೀರೇಂದ್ರ ಸೆಹ್ವಾಗ್ ಅವರ ಕಿರಿಯ ಮಗ ವೇದಾಂತ್ ಅಬ್ಬರಿಸಿದ್ದಾರೆ. ಆಡಿದ 5 ಪಂದ್ಯಗಳಲ್ಲಿ 24 ವಿಕೆಟ್ ಪಡೆದು, ಅಪ್ಪ ಸೆಹ್ವಾಗ್‌ಗೆ ಹೆಮ್ಮೆ ತಂದಿದ್ದಾರೆ.

ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಮಿಂಚಿದ ವೀರೇಂದ್ರ ಸೆಹ್ವಾಗ್ ಪುತ್ರ ವೇದಾಂತ್
ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಮಿಂಚಿದ ವೀರೇಂದ್ರ ಸೆಹ್ವಾಗ್ ಪುತ್ರ ವೇದಾಂತ್ (Instagram)

ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೆಸರು ಕೇಳಿದಾಗ ಮೊದಲು ನೆನಪಾಗುವುದೇ ಅವರ ಸ್ಫೋಟಕ ಬ್ಯಾಟಿಂಗ್. ಇದೀಗ ಅವರ ಪುತ್ರ ಬೌಲಿಂಗ್‌ನಲ್ಲಿ ದಾಖಲೆಯೊಂದನ್ನು ಮಾಡಿದ್ದಾರೆ. ವಿಜಯ್ ಮರ್ಚಂಟ್ ಟ್ರೋಫಿಯಲ್ಲಿ 24 ವಿಕೆಟ್‌ಗಳನ್ನು ಕಬಳಿಸಿದ ಸೆಹ್ವಾಗ್‌ ಪುತ್ರನ ಬಗ್ಗೆ ತಿಳಿಯೋಣ. ಸೆಹ್ವಾಗ್‌ ಅವರ ಕಿರಿಯ ಪುತ್ರನ ಹೆಸರು ವೇದಾಂತ್. ವಿಜಯ್ ಮರ್ಚಂಟ್ ಟ್ರೋಫಿಯಲ್ಲಿ 24 ವಿಕೆಟ್‌ಗಳನ್ನು ಕಬಳಿಸಿದ ನಂತರ ಇದೀಗ ಸುದ್ದಿಯಲ್ಲಿದ್ದಾರೆ. ಇದೀಗ ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಕೂಡಾ, ತಮ್ಮ ಕಿರಿಯ ಪುತ್ರ ವೇದಾಂತ್‌ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರ

ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಸೆಹ್ವಾಗ್ ಅವರ ಕಿರಿಯ ಮಗ, ಕರಾರುವಕ್‌ ಬೌಲಿಂಗ್ ದಾಳಿ ನಡೆಸಿದರು. ವೇದಾಂತ್ ಆಡಿದ 5 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ. ಸೆಹ್ವಾಗ್‌ ಅವರ ಹಿರಿಯ ಮಗ ಆರ್ಯವೀರ್ ಸೆಹ್ವಾಗ್ ಬಗ್ಗೆ ಈಗಾಗಲೇ ಬಹುತೇಕರಿಗೆ ತಿಳಿದಿದೆ. ಆರ್ಯವೀರ್ ತಮ್ಮನ ಹೆಸರು ವೇದಾಂತ್. ಇವರು ವೀರೇಂದ್ರ ಸೆಹ್ವಾಗ್ ಅವರ ಕಿರಿಯ ಮಗ. ಅವನಿಗೆ ಈಗ 14 ವರ್ಷ ವಯಸ್ಸು.

14 ವರ್ಷದ ವೇದಾಂತ್ 2024-25ರ ವಿಜಯ್ ಮರ್ಚಂಟ್ ಟ್ರೋಫಿಯಲ್ಲಿ ದೆಹಲಿ ಪರ ಆಡುತ್ತಿದ್ದಾನೆ. 16 ವರ್ಷದೊಳಗಿನವರ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿದ ಮಗನನ್ನು ಕಂಡು ತಂದೆ ವೀರೇಂದ್ರ ಸೆಹ್ವಾಗ್ ಹೆಮ್ಮೆಯಿಂದ ಸಂಭ್ರಮಿಸಿದ್ದಾರೆ. ಮಗನ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸೆಹ್ವಾಗ್, ಅವರ ಆಟವನ್ನು ಶ್ಲಾಘಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಕಿರಿಯ ಪುತ್ರ ವೇದಾಂತ್ ಬೌಲಿಂಗ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಮಗನ ಹಾಡಿ ಹೊಗಳಿದ ಅಪ್ಪ

ವಿಡಿಯೋದಲ್ಲಿ ವೇದಾಂತ್ ಬ್ಯಾಟರ್‌ಗಳನ್ನು ಔಟ್ ಮಾಡುವುದನ್ನು ಕಾಣಬಹುದು. ಈ ವಿಡಿಯೋದೊಂದಿಗೆ ಸೆಹ್ವಾಗ್ ತಮ್ಮ ಮಗನನ್ನು ತುಂಬಾ ಹೊಗಳಿದ್ದಾರೆ. 'ವೇದಾಂತ್ ಸೆಹ್ವಾಗ್ ಉತ್ತಮವಾಗಿ ಆಡಿದ್ದಾನೆ. 5 ಪಂದ್ಯಗಳು, 24 ವಿಕೆಟ್‌, ಉತ್ತಮ ಕೆಲಸ.' ಎಂದು ಬರೆದಿದ್ದಾರೆ.

ದಾಖಲೆಯ ಬೌಲಿಂಗ್

ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ವೇದಾಂತ್ ಸೆಹ್ವಾಗ್ ಎರಡು ಬಾರಿ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದರೆ, ಎರಡು ಬಾರಿ 4 ವಿಕೆಟ್ ಗೊಂಚಲು ಪಡೆದಿದ್ದಾರೆ.‌

ದೆಹಲಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ವೇದಾಂತ್ ಹೊರಹೊಮ್ಮಿದ್ದಾರೆ. ತಂಡದಿಂದ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಏಕೈಕ ಬೌಲರ್ ಇವರು. ವೇದಾಂತ್ ಹೊರತುಪಡಿಸಿ, ಇಡೀ ಟೂರ್ನಿಯಲ್ಲಿ ದೆಹಲಿಯ ಯಾವುದೇ ಬೌಲರ್ 10 ವಿಕೆಟ್ ಕಬಳಿಸಿಲ್ಲ. ಮುಂದೆ ವೇದಾಂತ್‌ ಭಾರತ ಕ್ರಿಕೆಟ್‌ ತಂಡದ ಪರ ಆಡುವ ದಿನ ಶೀಘ್ರದಲ್ಲೇ‌ ಬರಬಹುದು.

Whats_app_banner