ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ‘ವಿ’ 5ಜಿ ಸೇವೆ ಲಭ್ಯ; ಪಂದ್ಯದ ವೇಳೆ ಉಚಿತವಾಗಿ ಸೇವೆ ಪಡೆಯಬಹುದು ಪ್ರೇಕ್ಷಕರು
Chinnaswamy Stadium: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ‘ವಿ’ 5ಜಿ ಸೇವೆ ಲಭ್ಯವಿದ್ದು, ಪ್ರೇಕ್ಷಕರು ಪಂದ್ಯದ ವೇಳೆ ಉಚಿತವಾಗಿ ಸೇವೆ ಪಡೆಯಬಹುದು.

ದೇಶದೆಲ್ಲೆಡೆ ಐಪಿಎಲ್ ಟಿ20 ಕ್ರಿಕೆಟ್ ಉತ್ಸಾಹ ಮೊಳಗುತ್ತಿರುವಾಗ, ವೊಡಾಫೋನ್ ಐಡಿಯಾ-ವಿಐ (ವಿ) ತನ್ನ 5ಜಿ ತಂತ್ರಜ್ಞಾನ ಸೇವೆಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತಂದಿದೆ. ಬೆಂಗಳೂರಿನಲ್ಲಿರುವ ಕ್ರಿಕೆಟ್ ಪ್ರಿಯರು ನೇರ ಕ್ರಿಕೆಟ್ ವೀಕ್ಷಣೆಯಲ್ಲಿ ಮುಳುಗಿರುವಾಗಲೇ, ಅತ್ಯಂತ ವೇಗದ ಡೇಟಾ ಪ್ರಸರಣದ ಅನುಭವ ಪಡೆಯುವುದನ್ನು ಖಚಿತಪಡಿಸಲು, ಕ್ರೀಡಾಂಗಣದಲ್ಲೇ ತಡೆರಹಿತ 5ಜಿ ಸಂಪರ್ಕ ಒದಗಿಸಲು ‘ವಿ’ ತನ್ನ ಡೇಟಾ ನೆಟ್‌ವರ್ಕ್ ಮೂಲಸೌಕರ್ಯವನ್ನು ಬಲಪಡಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೇರ ಕ್ರಿಕೆಟ್ ಪ್ರಸಾರ ಆನಂದಿಸಲು ಸೇರುವ ಸಾವಿರಾರು ಪ್ರೇಕ್ಷಕರಿಗೆ ಹೆಚ್ಚಿನ ವೇಗದ ಸಂಪರ್ಕ ಖಚಿತಪಡಿಸಲು, ‘ವಿ’ ಹೆಚ್ಚುವರಿ 5ಜಿ ನೆಟ್‌ವರ್ಕ್ ಸೈಟ್‌ಗಳನ್ನು ನಿಯೋಜಿಸಿದೆ. ಬೇಸ್ ಟ್ರಾನ್ಸೀವರ್ ಸ್ಟೇಷನ್ (Base Transceiver Station-BTS) ಮತ್ತು ಬೃಹತ್ Multiple-Input Multiple-Output(MIMO)ನಂತಹ ತಂತ್ರಜ್ಞಾನಗಳೊಂದಿಗೆ ತನ್ನ ಜಾಲವನ್ನು ಬಲಪಡಿಸಿದೆ.
ಅತ್ಯಂತ ವೇಗದ ಡೇಟಾ ಪ್ರಸರಣ ಜಾಲದ ಬಲವರ್ಧನೆಯು ಅತ್ಯುತ್ತಮ ಡಿಜಿಟಲ್ ಅನುಭವ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಕ್ರಿಕೆಟ್ ಅಭಿಮಾನಿಗಳು ಕಿಕ್ಕಿರಿದ ಕ್ರೀಡಾಂಗಣಗಳಲ್ಲೂ ವೇಗವಾದ, ವಿಶ್ವಾಸಾರ್ಹ ಡೇಟಾ ಸಂಪರ್ಕ ಆನಂದಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ. ಲೈವ್-ಸ್ಟ್ರೀಮಿಂಗ್ ಕ್ಷಣಗಳಾಗಲಿ, ರೀಲ್‌ಗಳನ್ನು ಅಪ್‌ಲೋಡ್ ಮಾಡುವುದಾಗಲಿ ಅಥವಾ ಸ್ನೇಹಿತರೊಂದಿಗೆ ಸಂಪರ್ಕದಲ್ಲಿ ಇರುವುದಾಗಲಿ – ಕ್ರಿಕೆಟ್ ಪಂದ್ಯ ವೀಕ್ಷಿಸುವ ಮತ್ತು ಆನಂದಿಸುವ ಇಡೀ ದಿನದ ಅನುಭವವನ್ನು ಹೆಚ್ಚಿಸಲು ವಿ 5ಜಿ ಇಲ್ಲಿದೆ.
ಕ್ರೀಡಾಂಗಣದಲ್ಲಿ ‘ವಿ’ 5ಜಿ ಅನ್ನು ಯಾರು ಪಡೆಯಬಹುದು?
5ಜಿ-ಸಕ್ರಿಯಗೊಳಿಸಿದ ಹ್ಯಾಂಡ್‌ಸೆಟ್‌ಗಳನ್ನು ಹೊಂದಿರುವ ‘ವಿ’ ಗ್ರಾಹಕರು ತಮ್ಮ ಮೊಬೈಲ್ ಸೆಟ್ಟಿಂಗ್‌ಗಳಲ್ಲಿ 5ಜಿ ಬಳಕೆ ಆನ್ ಮಾಡುವ ಮೂಲಕ ಈ ಕ್ರೀಡಾಂಗಣಗಳಲ್ಲಿ ಅನಿಯಮಿತ ‘ವಿ’ 5ಜಿ ಅನ್ನು ಉಚಿತವಾಗಿ ಅನುಭವಿಸಬಹುದು.
‘ವಿ’ 5ಜಿ ಈಗ ಭಾರತದಾದ್ಯಂತ 11 ಕ್ರೀಡಾಂಗಣಗಳಲ್ಲಿ ಲಭ್ಯ
ಈಡನ್ ಗಾರ್ಡನ್ಸ್‌ನಲ್ಲಿ ‘ವಿ’ 5ಜಿ ಲೋಕಾರ್ಪಣೆಯು, ಕ್ರಿಕೆಟ್ ಅಭಿಮಾನಿಗಳಿಗೆ ಭಾರತದಾದ್ಯಂತ 11 ಪ್ರಮುಖ ಕ್ರೀಡಾಂಗಣಗಳಲ್ಲಿ ವಿ 5ಜಿಯ ಪೂರ್ವವೀಕ್ಷಣೆಗೆ ಅವಕಾಶ ನೀಡುವ ವಿಯ ಕಾರ್ಯತಂತ್ರ ಭಾಗವಾಗಿದೆ. ಅವುಗಳೆಂದರೆ…
- ಈಡನ್ ಗಾರ್ಡನ್ಸ್ (ಕೋಲ್ಕತ್ತಾ)
- ನರೇಂದ್ರ ಮೋದಿ ಕ್ರೀಡಾಂಗಣ (ಅಹಮದಾಬಾದ್)
- ಎಂ. ಚಿನ್ನಸ್ವಾಮಿ ಕ್ರೀಡಾಂಗಣ (ಬೆಂಗಳೂರು)
- ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಕ್ರೀಡಾಂಗಣ (ಚಂಡೀಗಢ)
- ಎಂಎ.ಚಿದಂಬರಂ ಕ್ರೀಡಾಂಗಣ (ಚೆನ್ನೈ)
- ಅರುಣ್ ಜೇಟ್ಲಿ ಕ್ರೀಡಾಂಗಣ (ದೆಹಲಿ)
- ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ (ಹೈದರಾಬಾದ್)
- ಸವಾಯಿ ಮಾನ್ಸಿಂಗ್ ಕ್ರೀಡಾಂಗಣ (ಜೈಪುರ)
- ಏಕಾನಾ ಕ್ರೀಡಾಂಗಣ (ಲಕ್ನೋ)
- ವಾಂಖೆಡೆ ಕ್ರೀಡಾಂಗಣ (ಮುಂಬೈ)
- ಡಾ. ವೈಎಸ್ಆರ್ಎಸಿಎ-ವಿಡಿಸಿಎ ಕ್ರೀಡಾಂಗಣ (ವಿಶಾಖಪಟ್ಟಣಂ)
ಇದನ್ನೂ ಓದಿ: ಧೋನಿ ಹಿಡಿದಿದ್ದು ಬ್ಯಾಟಲ್ಲ, ಖಡ್ಗ ಎಂದ ರಾಯುಡು; ನಿಮ್ಮ ಆರಾಧ್ಯ ದೈವ ಊಸರವಳ್ಳಿ ಎಂದ ಸಿಕ್ಸರ್ ಸಿಧು, ವಿಡಿಯೋ
‘ವಿ’ ಒಟ್ಟು 53 5ಜಿ ಸೈಟ್‌ಗಳನ್ನು ಯಶಸ್ವಿಯಾಗಿ ಸ್ಥಾಪಿಸಿದೆ. 44 ಸೈಟ್‌ಗಳಲ್ಲಿ ಸಾಮರ್ಥ್ಯ ಹೆಚ್ಚಿಸಿದೆ. ಕ್ರೀಡಾಂಗಣಗಳ ಸುತ್ತಮುತ್ತ 9 ಸೆಲ್ ಆನ್ ವ್ಹೀಲ್‌ಗಳನ್ನು(CoW) ನಿಯೋಜಿಸಿದೆ. ಕ್ರಿಕೆಟ್ ಅಭಿಮಾನಿಗಳು ಹಿಂದೆಂದಿಗಿಂತಲೂ ಉತ್ತಮವಾಗಿ ಮೊಬೈಲ್ ಸಂಪರ್ಕದಲ್ಲಿರಲು ಸಾಧ್ಯವಾಗುವಂತೆ ಇದು ನೋಡಿಕೊಳ್ಳುತ್ತದೆ!
ಕ್ರೀಡಾಂಗಣಗಳಲ್ಲಿ ಪಂದ್ಯದ ನೇರ ಪ್ರಸಾರ ವೀಕ್ಷಿಸಲು ಸಾಧ್ಯವಾಗದ ‘ವಿ’ ಗ್ರಾಹಕರು ತಮ್ಮ ಮನೆಯಿಂದಲೇ ಅಥವಾ ಪ್ರಯಾಣದಲ್ಲಿರುವಾಗಲೂ ಅದನ್ನು ಅನುಭವಿಸಬಹುದು. ಕೇವಲ 101 ರೂಪಾಯಿಗಳಿಂದ ಪ್ರಾರಂಭವಾಗುವ ಅನಿಯಮಿತ ಡೇಟಾದೊಂದಿಗೆ ಜಿಯೊ ಹಾಟ್ ಸ್ಟಾರ್ (Jio Hotstar)ಗೆ ಚಂದಾದಾರಿಕೆ ನೀಡುವ ವಿಶೇಷ ‘ವಿ’ ರೀಚಾರ್ಜ್ ಪ್ಯಾಕ್‌ಗಳೊಂದಿಗೆ ಈ ಸೇವೆಗಳನ್ನು ಆನಂದಿಸಬಹುದು. ಗ್ರಾಹಕರು ‘ವಿ’ ಅಪ್ಲಿಕೇಶನ್ ಮೂಲಕ ಅಥವಾ www.myVi.inಗೆ ಭೇಟಿ ನೀಡುವ ಮೂಲಕ ಈ ರೀಚಾರ್ಜ್‌ಗಳನ್ನು ಆಯ್ಕೆ ಮಾಡಬಹುದು.
