ಈಗಲೇ ಹೇಳ್ತಿದ್ದೇನೆ, ಯಾವುದೇ ಕಾರಣಕ್ಕೂ ಇವರನ್ನು ಬದಲಿಸಬೇಡಿ; ಭಾರತ ತಂಡಕ್ಕೆ ಎಚ್ಚರಿಸಿದ ವಾಸೀಂ ಜಾಫರ್
Wasim Jaffer : ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೂಪರ್-8 ಪಂದ್ಯಗಳಿಗೂ ಮುನ್ನ ಆರಂಭಿಕರನ್ನು ಯಾವುದೇ ಕಾರಣಕ್ಕೂ ಬದಲಿಸಬೇಡಿ ಎಂದು ವಾಸೀಂ ಜಾಫರ್ ಅವರು ಟೀಮ್ ಮ್ಯಾನೇಜ್ಮೆಂಟ್ಗೆ ಎಚ್ಚರಿಕೆ ನೀಡಿದ್ದಾರೆ.
ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಅಜೇಯವಾಗಿ ಸೂಪರ್-8ಕ್ಕೆ ಪ್ರವೇಶಿಸಿರುವ ಭಾರತ ತಂಡ, ಈಗ ಸೆಮಿಫೈನಲ್ ಮೇಲೆ ಕಣ್ಣಿಟ್ಟಿದೆ. ಲೀಗ್ನಲ್ಲಿ ಕೆನಡಾ, ಪಾಕಿಸ್ತಾನ, ಅಮೆರಿಕ ಎದುರು ಜಯಿಸಿದ ಭಾರತ ತಂಡ ತನ್ನ ಕೊನೆಯಲ್ಲಿ ಕೆನಡಾ ವಿರುದ್ಧ ಮಳೆಯಿಂದ ರದ್ದಾಯಿತು. ಇದೀಗ ಸೂಪರ್-8ರಲ್ಲಿ ಜೂನ್ 20ರಂದು ಮೆನ್ ಇನ್ ಬ್ಲ್ಯೂ ಭಾರತ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನ ಎದುರಿಸಲಿದೆ. ಆದರೆ, ಈ ಪಂದ್ಯಗಳಿಗೂ ಮುನ್ನ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಅವರು ಟೀಮ್ ಇಂಡಿಯಾಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಆದರೆ, ಲೀಗ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಕ್ರಮಾಂಕ ಬದಲಿಸಬೇಕು ಎಂಬ ಕೂಗು ಎದ್ದಿದೆ. ನ್ಯೂಯಾರ್ಕ್ನಲ್ಲಿ ಪರಿಸ್ಥಿತಿಗಳು ಉತ್ತಮವಾಗಿಲ್ಲ ಎಂದು ಕೆಲವರು ಕೊಹ್ಲಿ ಅವರನ್ನು ಸಮರ್ಥಿಸಿಕೊಂಡಿದ್ದೂ ಇದೆ. ಆರಂಭಿಕರಾಗಿ ಕಣಕ್ಕಿಳಿದು ತೀವ್ರ ವೈಫಲ್ಯ ಅನುಭವಿಸಿದ ಕೊಹ್ಲಿ ಅವರನ್ನು 3ನೇ ಕ್ರಮಾಂಕದಲ್ಲಿ ಆಡಿಸಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಕೊಹ್ಲಿಯನ್ನು ಆರಂಭಿಕರಾಗಿಯೇ ಆಡಿಸಬೇಕು ಎಂದು ವಾಸೀಂ ಜಾಫರ್ ಅವರು ಸೂಚಿಸಿದ್ದಾರೆ.
ಕೊಹ್ಲಿ ಆರಂಭಿಕರಾಗಿಯೇ ಆಡಬೇಕು ಎಂದ ವಾಸೀಂ ಜಾಫರ್
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನ ಕಳವಳ ವ್ಯಕ್ತಪಡಿಸಿದ ವಾಸೀಂ ಜಾಫರ್, ಈ ಆರಂಭಿಕರನ್ನು ಸ್ಥಾನ ವಿಭಜಿಸಬಾರದು. ಏಕೆಂದರೆ, ಇದು ತಂಡದ ಸಂಯೋಜನೆಯನ್ನು ಗೊಂದಲಗೊಳಿಸುತ್ತದೆ. ಕೊಹ್ಲಿಯನ್ನು ನಂ.3ಕ್ಕೆ ತಳ್ಳಿದರೆ ರಿಷಭ್ ಪಂತ್, ಸೂರ್ಯಕುಮಾರ್ ಅವರ ಬ್ಯಾಟಿಂಗ್ ಸ್ಥಾನಗಳ ಬದಲಾವಣೆ ಭಾರತಕ್ಕೆ ಹಾನಿಯಾಗಬಹುದು ಎಂದು ಜಾಫರ್ ಉಲ್ಲೇಖಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ಅವರನ್ನು ಆಡಿಸಬೇಕು, ವಿರಾಟ್ ಅವರನ್ನು 3ನೇ ಕ್ರಮಾಂಕದಲ್ಲಿ ಆಡಿಸಬೇಕು ಎಂದು ಕೆಲವರು ಭಾವಿಸಿದ್ದೆ. ಹೀಗಾದರೆ, ಇಬ್ಬರನ್ನೂ ವಿಭಜಿಸಲಿದ್ದೀರಿ. ಬಹುಶಃ ಜೈಸ್ವಾಲ್ ಅನ್ನು ಆಡುವ ಬಗ್ಗೆ ಯೋಚಿಸಬಹುದು. ಮೂರನೇ ಮತ್ತು 4ನೇ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಿಷಭ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಕ್ರಮಾಂಕವನ್ನು ಬದಲಿಸಬೇಕಾಗುತ್ತದೆ. ಇದು ಇಡೀ ಬ್ಯಾಟಿಂಗ್ ಕ್ರಮಾಂಕವನ್ನು ಅಸ್ತವ್ಯಸ್ತಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದ್ದಾರೆ.
ಭಾರತ ತಂಡವನ್ನು ಮುನ್ನಡೆಸಲು ರೋಹಿತ್ ಮತ್ತು ಕೊಹ್ಲಿ ಪವರ್ಪ್ಲೇಯಲ್ಲಿ ಶ್ರಮಿಸಬೇಕು ಎಂದು ಜಾಫರ್ ಹೇಳಿದ್ದಾರೆ. ರಿಷಭ್ 3ನೇ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಸೂರ್ಯಕುಮಾರ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅದಕ್ಕೆ ಅಂಟಿಕೊಂಡಿರುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ, ಕೊಹ್ಲಿ-ರೋಹಿತ್ ಪವರ್ಪ್ಲೇನಲ್ಲಿ ನಿಜವಾಗಿಯೂ ಅದ್ಭುತ ಪ್ರದರ್ಶನ ನೀಡಬೇಕು. ವೆಸ್ಟ್ ಇಂಡೀಸ್ನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ ಎಂದಿದ್ದಾರೆ. ಆ ಮೂಲಕ ಯಾವುದೇ ಕಾರಣಕ್ಕೂ ಬ್ಯಾಟಿಂಗ್ ಕ್ರಮಾಂಕ ಬದಲಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಸೂಪರ್-8ರಲ್ಲಿ ಭಾರತದ ವೇಳಾಪಟ್ಟಿ ಹೀಗಿರುತ್ತದೆ ನೋಡಿ
ಜೂನ್ 20 - ಭಾರತ vs ಅಫ್ಘಾನಿಸ್ತಾನ, (ಕೆನ್ಸಿಂಗ್ಟನ್ ಓವಲ್ ಮೈದಾನ, ಬಾರ್ಬಡೋಸ್)
ಜೂನ್ 22 - ಭಾರತ vs ಡಿ2, (ಸರ್ ವಿವಿಯನ್ ರಿಚರ್ಡ್ಸ್ ಕ್ರಿಕೆಟ್ ಸ್ಟೇಡಿಯಂ, ಆಂಟಿಗುವಾ)
ಜೂನ್ 24 - ಭಾರತ vs ಆಸ್ಟ್ರೇಲಿಯಾ (ಡರೇನ್ ಸ್ಯಾಮಿ ನ್ಯಾಷನಲ್ ಕ್ರಿಕೆಟ್ ಮೈದಾನ, ಸೇಂಟ್ ಲೂಸಿಯಾ)