ಕನ್ನಡ ಸುದ್ದಿ  /  ಕ್ರಿಕೆಟ್  /  ನಮ್ಮಲ್ಲಿ ಉತ್ತಮ ಆಟಗಾರರಿದ್ದಾರೆ, ಆದರೆ ತಂಡ..; ಟಿ20 ವಿಶ್ವಕಪ್ ಸೋಲಿಗೆ ತಂಡವನ್ನೇ ದೂರಿದ ಬಾಬರ್ ಅಜಮ್

ನಮ್ಮಲ್ಲಿ ಉತ್ತಮ ಆಟಗಾರರಿದ್ದಾರೆ, ಆದರೆ ತಂಡ..; ಟಿ20 ವಿಶ್ವಕಪ್ ಸೋಲಿಗೆ ತಂಡವನ್ನೇ ದೂರಿದ ಬಾಬರ್ ಅಜಮ್

Babar Azam: ನಮ್ಮಲ್ಲಿ ಉತ್ತಮ ಆಟಗಾರರಿದ್ದಾರೆ. ಆದರೆ ನಾವು ತಂಡವಾಗಿ ಗೆಲ್ಲಲು ಸಾಧ್ಯವಾಗಲಿಲ್ಲ. ನಾವು ವೈಯಕ್ತಿಕ ಪ್ರದರ್ಶನಗಳನ್ನು ನೀಡಿದ್ದೇವೆ ಎಂದು ಬಾಬರ್ ಅಜಮ್ ಹೇಳಿದ್ದಾರೆ.

ನಮ್ಮಲ್ಲಿ ಉತ್ತಮ ಆಟಗಾರರಿದ್ದಾರೆ, ಆದರೆ ತಂಡ..; ಟಿ20 ವಿಶ್ವಕಪ್​ನಿಂದ ನಿರ್ಗಮಿಸಿದ ಬಾಬರ್ ಅಜಮ್ ಪ್ರಾಮಾಣಿಕ ಹೇಳಿಕೆ
ನಮ್ಮಲ್ಲಿ ಉತ್ತಮ ಆಟಗಾರರಿದ್ದಾರೆ, ಆದರೆ ತಂಡ..; ಟಿ20 ವಿಶ್ವಕಪ್​ನಿಂದ ನಿರ್ಗಮಿಸಿದ ಬಾಬರ್ ಅಜಮ್ ಪ್ರಾಮಾಣಿಕ ಹೇಳಿಕೆ

ಪಾಕಿಸ್ತಾನ ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಟಿ20 ವಿಶ್ವಕಪ್ 2024 ಅಭಿಯಾನ ಕೊನೆಗೊಳಿಸಿತು. ತನ್ನ ಮೊದಲ ಎರಡು ಪಂದ್ಯಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದ ವಿರುದ್ಧ ಸೋತ ನಂತರ ಸೂಪರ್​-8 ಸ್ಪರ್ಧೆಯಿಂದ ಬಹುತೇಕ ಹೊರ ಬಿದ್ದಿತ್ತು. ಆದರೆ, ಒಂದೇ ಒಂದು ಅವಕಾಶ ಹೊಂದಿದ್ದ ಪಾಕಿಸ್ತಾನ, ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿತ್ತು. ಯುಎಸ್ಎ ವಿರುದ್ಧದ ಐರ್ಲೆಂಡ್​​ ಗೆಲುವು ಸಾಧಿಸಿದ್ದರೆ, ಪಾಕ್​ ಮುಂದಿನ ಹಂತಕ್ಕೆ ಹೋಗುತ್ತಿತ್ತು. ಆದರೆ, ಮಳೆ ಕಾರಣ ಪಂದ್ಯ ರದ್ದಾಗಿದ್ದು, ಅಮೆರಿಕ ಸೂಪರ್-8 ಪ್ರವೇಶಿಸಲು ನೆರವಾಯಿತು.

ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಗುಂಪು ಹಂತದ 36ನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಆಡಿದ ತನ್ನ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದು ಬೀಗಿತು. ಕೊನೆಯ ಪಂದ್ಯದಲ್ಲಿ ಪಾಲ್ ಸ್ಟಿರ್ಲಿಂಗ್ ನೇತೃತ್ವದ ತಂಡದ ವಿರುದ್ಧ ಬಾಬರ್ ಪಡೆ ಪ್ರಭಾವಶಾಲಿ ಬೌಲಿಂಗ್ ನಡೆಸಿತು. ಹೀಗಾಗಿ 20 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿತು. ಆದಾಗ್ಯೂ, ಪಾಕಿಸ್ತಾನದ ಬ್ಯಾಟಿಂಗ್ ಮತ್ತೊಮ್ಮೆ ಕುಸಿಯಿತು. ಅಗ್ರ ಮಧ್ಯಮ ಕ್ರಮಾಂಕವು ಮಿಂಚಲು ವಿಫಲವಾಯಿತು. ಒಂದು ಹಂತದಲ್ಲಿ ತಂಡವು ಚೇಸಿಂಗ್​ನಲ್ಲಿ 57/5ಕ್ಕೆ ಕುಸಿದಿತ್ತು. ಆಗ ಅಬ್ಬಾಸ್ ಅಫ್ರಿದಿ (17) ಮತ್ತು ಶಾಹೀನ್ ಅಫ್ರಿದಿ (13*) ಅವರು ಬಾಬರ್ ಜೊತೆಗೂಡಿ ತಂಡವನ್ನು ಗೆಲುವಿನ ಗೆರೆ ದಾಟಿದರು.

ಬಾಬರ್ ಅಜಮ್ ಹೇಳಿದ್ದೇನು?

ಪಂದ್ಯ ಮುಕ್ತಾಯಗೊಂಡ ನಂತರ ಮಾತನಾಡಿದ ಬಾಬರ್ ಅಜಮ್, ತಂಡದ ಕಳಪೆ ಪ್ರದರ್ಶನದ ಕುರಿತು ಒತ್ತಿ ಹೇಳಿದ್ದಾರೆ. ಪಂದ್ಯಾವಳಿಯುದ್ದಕ್ಕೂ ಅದರ ಬೌಲಿಂಗ್ ದಾಳಿ ಉತ್ತಮವಾಗಿದ್ದರೂ, ಪಾಕಿಸ್ತಾನದ ಬ್ಯಾಟಿಂಗ್ ಅವರನ್ನು ನಿರಾಸೆಗೊಳಿಸಿತು ಎಂದು ಹೇಳಿದ್ದಾರೆ. ಬೌಲಿಂಗ್​​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದೇವೆ. ಇಲ್ಲಿನ ಪಿಚ್​​ನ ಪರಿಸ್ಥಿತಿ ವೇಗದ ಬೌಲರ್​​ಗಳಿಗೆ ಸೂಕ್ತವಾಗಿವೆ. ಬ್ಯಾಟಿಂಗ್​ನಲ್ಲಿ ಯುಎಸ್ಎ ಮತ್ತು ಭಾರತದ ವಿರುದ್ಧ ಕೆಲವು ತಪ್ಪುಗಳನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆದರೆ, ಆ ಎರಡು ಪಂದ್ಯಗಳಲ್ಲಿ ನಾವು ಗೆಲ್ಲುವ ಸ್ಥಿತಿಯಲ್ಲಿದ್ದೆವು. ನೀವು ವಿಕೆಟ್ ಕಳೆದುಕೊಂಡ ತಕ್ಷಣ ಒತ್ತಡವನ್ನು ಹೆಚ್ಚಿಸುತ್ತದೆ. ಬೌಲಿಂಗ್​​ನಲ್ಲಿ ಸಕಾರಾತ್ಮಕ ಅಂಶಗಳಿವೆ ಎಂದು ಬಾಬರ್ ಹೇಳಿದ್ದಾರೆ. ಯುಎಸ್ಎಯಲ್ಲಿ ಪಾಕಿಸ್ತಾನ ತಂಡವು ತನ್ನ ಮೊದಲ ಪಂದ್ಯದಲ್ಲಿ ಆತಿಥೇಯರ ವಿರುದ್ಧ 159 ರನ್ ಗಳಿಸಿತು. ಆದರೆ, ಯುನೈಟೆಡ್ ಸ್ಟೇಟ್ಸ್​ ನೀಡಿದ ಅದ್ಭುತ ಪ್ರದರ್ಶನಕ್ಕೆ ಪಾಕ್​ ಶರಣಾಗಿತ್ತು. ಅದು ಕೂಡ ಸೂಪರ್​​ ಓವರ್​​ನಲ್ಲಿ ಗೆಲುವು ಸಾಧಿಸಿತ್ತು. ಅಂತಿಮವಾಗಿ ಪಾಕಿಸ್ತಾನ 20 ಓವರ್​​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಲಷ್ಟೇ ಶಕ್ತವಾಯಿತು.

ತಂಡವಾಗಿ ಗೆಲ್ಲಲು ಸಾಧ್ಯವಾಗಿಲ್ಲ ಎಂದ ಪಾಕ್ ನಾಯಕ

ನಾವು ನಿಕಟ ಪಂದ್ಯಗಳನ್ನು ಹೊಂದಿದ್ದೇವೆ. ಆದರೆ ನಾವು ಉತ್ತಮವಾಗಿ ಮುಗಿಸಲು ಸಾಧ್ಯವಾಗಲಿಲ್ಲ. ಒಂದು ತಂಡವಾಗಿ ನಾವು ಉತ್ತಮವಾಗಿಲ್ಲ. ನಮ್ಮಲ್ಲಿ ಉತ್ತಮ ಆಟಗಾರರಿದ್ದಾರೆ. ಆದರೆ ನಾವು ತಂಡವಾಗಿ ಗೆಲ್ಲಲು ಸಾಧ್ಯವಾಗಲಿಲ್ಲ. ನಾವು ವೈಯಕ್ತಿಕ ಪ್ರದರ್ಶನಗಳನ್ನು ನೀಡಿದ್ದೇವೆ ಎಂದು ಬಾಬರ್ ಹೇಳಿದ್ದಾರೆ. ಆರಂಭಿಕ 2 ಪಂದ್ಯಗಳ ಸೋಲಿನ ನಂತರ ಬಾಬರ್ ಬ್ಯಾಟಿಂಗ್ ಕ್ರಮಾಂಕದಲ್ಲಿ 3ನೇ ಸ್ಥಾನದಲ್ಲಿ ಆಡಲು ಆರಂಭಿಸಿದರು. ಮೊಹಮ್ಮದ್ ರಿಜ್ವಾನ್ ಅವರೊಂದಿಗೆ ಸೈಮ್ ಅಯೂಬ್ ಆರಂಭಿಕರಾಗಿ ಕಣಕ್ಕಿಳಿದರು.

ಇದೇ ವೇಳೆ ಟಿ20 ಕ್ರಿಕೆಟ್​ನಲ್ಲಿ ಆರಂಭಿಕರಾಗಿಯೇ ಕಣಕ್ಕಿಳಿಯುತ್ತೀರಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ಬಾಬರ್ ಅಜಮ್, ತಂಡಕ್ಕೆ ನನ್ನ ಓಪನಿಂಗ್ ಅಗತ್ಯವಿದ್ದರೆ, ನಾನು ಓಪನಿಂಗ್ ಮಾಡುತ್ತೇನೆ. ಅವರಿಗೆ 3ನೇ ಕ್ರಮಾಂಕದಲ್ಲಿ ನನ್ನ ಅಗತ್ಯವಿದ್ದರೆ, ನಾನು ಅದನ್ನೂ ಮಾಡುತ್ತೇನೆ. ಇದು ತಂಡಕ್ಕೆ ಏನು ಬೇಕು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಪಾಕಿಸ್ತಾನ ನಾಯಕ ಹೇಳಿದ್ದಾರೆ.