RCB Captain: ನಮಗೆ ವಿರಾಟ್ ಕೊಹ್ಲಿಯೇ ನಾಯಕನಾಗಬೇಕು; ಆರ್‌ಸಿಬಿ ಕ್ಯಾಪ್ಟನ್ ಹೆಸರು ಜಾಲತಾಣಗಳಲ್ಲಿ ಸಖತ್ ಟ್ರೆಂಡಿಂಗ್
ಕನ್ನಡ ಸುದ್ದಿ  /  ಕ್ರಿಕೆಟ್  /  Rcb Captain: ನಮಗೆ ವಿರಾಟ್ ಕೊಹ್ಲಿಯೇ ನಾಯಕನಾಗಬೇಕು; ಆರ್‌ಸಿಬಿ ಕ್ಯಾಪ್ಟನ್ ಹೆಸರು ಜಾಲತಾಣಗಳಲ್ಲಿ ಸಖತ್ ಟ್ರೆಂಡಿಂಗ್

RCB Captain: ನಮಗೆ ವಿರಾಟ್ ಕೊಹ್ಲಿಯೇ ನಾಯಕನಾಗಬೇಕು; ಆರ್‌ಸಿಬಿ ಕ್ಯಾಪ್ಟನ್ ಹೆಸರು ಜಾಲತಾಣಗಳಲ್ಲಿ ಸಖತ್ ಟ್ರೆಂಡಿಂಗ್

RCB Captain: ಆರ್‌ಸಿಬಿಗೆ ಕಿಂಗ್ ವಿರಾಟ್ ಕೊಹ್ಲಿ ಅವರನ್ನೇ ನಾಯಕನ್ನಾಗಿ ಮಾಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಈ ಸಂಬಂಧ ಒಂದಷ್ಟು ಮಿಮ್ಸ್ ಗಳು ವೈರಲ್ ಆಗಿವೆ.

RCB Captain: ನಮಗೆ ವಿರಾಟ್ ಕೊಹ್ಲಿಯೇ ನಾಯಕನಾಗಬೇಕು ಎಂದು ಆರ್‌ಸಿಬಿ ಕ್ಯಾಪ್ಟನ್ ಸಂಬಂಧ ಕ್ರಿಕೆಟ್ ಅಭಿಮಾನಿಗಳು ಒತ್ತಾಡಿಸುತ್ತಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಮಿಮ್ಸ್ ವೈರಲ್ ಆಗ್ತಿವೆ.
RCB Captain: ನಮಗೆ ವಿರಾಟ್ ಕೊಹ್ಲಿಯೇ ನಾಯಕನಾಗಬೇಕು ಎಂದು ಆರ್‌ಸಿಬಿ ಕ್ಯಾಪ್ಟನ್ ಸಂಬಂಧ ಕ್ರಿಕೆಟ್ ಅಭಿಮಾನಿಗಳು ಒತ್ತಾಡಿಸುತ್ತಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಮಿಮ್ಸ್ ವೈರಲ್ ಆಗ್ತಿವೆ.

RCB Captain: ಮಾರ್ಚ್ 21 ರಿಂದ ಆರಂಭವಾಗಲಿರುವ ಐಪಿಎಲ್ ಹಬ್ಬಕ್ಕೆ ಪ್ರಾಂಚೈಸಿಗಳಿಂದ ಸಿದ್ಧತೆಗಳನ್ನು ಆರಂಭವಾಗಿದ್ದು, ಇಂದು (ಫೆಬ್ರವರಿ 13, ಗುರುವಾರ) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನನ್ನು ಘೋಷಣೆ ಮಾಡಲಾಗಿದೆ. ಯಾರು ಊಹಿಸದ ರೀತಿಯಲ್ಲಿ ಆರ್‌ಸಿಬಿಯ ನಾಯಕನಾಗಿ ರಜತ್ ಪಾಟಿದಾರ್ ಹೆಸರು ಘೋಷಣೆ ಮಾಡಲಾಗಿದೆ. ಇದಕ್ಕೂ ಮುನ್ನವೇ ಆರ್‌ಸಿಬಿ ನಾಯಕ ಎಂಬ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟೆಂಡ್ ಆಗಿದ್ದು, ನಮ್ಮ ನಾಯಕನಾಗಿ ಕಿಂಗ್ ಕೊಹ್ಲಿ ಅವರ ಹೆಸರನ್ನೇ ಘೋಷಣೆ ಮಾಡಬೇಕೆಂದು ಅಭಿಮಾನಿಗಳು ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಒಂದಷ್ಟು ಮಿಮ್ಸ್ ಗಳು ಕೂಡ ವೈರಲ್ ಆಗಿವೆ. ಕೆಲವೊಂದು ಮಿಮ್ಸ್ ಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಅನ್ ಬಾಕ್ಸ್ ಇವೆಂಟ್ ನಲ್ಲಿ ಆರ್‌ಸಿಬಿ ನಾಯಕ ಹೆಸರು ಘೋಷಣೆ ಮಾಡುತ್ತಿರುವುದು ಎಂದು ದಿ 1ಎ.ಎಂ ಕ್ರಿಟಿಕ್ ಎಂಬ ಎಕ್ಸ್ ಖಾತೆಯಲ್ಲಿ ಈ ಕೆಳಗಿನ ಮಿಮ್ಸ್ ಹಂಚಿಕೊಳ್ಳಲಾಗಿದೆ.

ನಮಗೆ ಕಿಂಗ್ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್ ಆಗಬೇಕು ಎಂದು ಶುಭ ಎಂಬುವರು ಜಾಲತಾಣ ಎಕ್ಸ್ ನಲ್ಲಿ ಮಿಮ್ಸ್ ಹಾಗೂ ವಿರಾಟ್ ಕೊಹ್ಲಿಯವರು ಫೋಟೊವನ್ನು ಹಂಚಿಕೊಂಡಿದ್ದಾರೆ.

ಕಂಟೆಂಟ್ ಅವೆಂಜರ್ ಎಂಬ ಎಕ್ಸ್ ಖಾತೆಯಲ್ಲಿ ಆರ್‌ಸಿಬಿ ಕ್ಯಾಪ್ಟನ್ ಅನೌನ್ಸ್ಮೆಂಟ್ ಡೇ ಎಂಬ ಒಕ್ಕಣೆ ಬರೆದು ಸೂಪರ್ ಸ್ಟಾರ್ ರಜನಿಕಾಂತ್ ಇರುವ ಮಿಮ್ಸ್ ವೊಂದು ಹಂಚಿಕೊಂಡಿದ್ದಾರೆ.

ಹೀಗೆ ವಿವಿಧ ಬಗೆಯ ಮಿಮ್ಸ್ ಗಳು #Rcbcaptain ಹೆಸರಿನಲ್ಲಿ ಟೆಂಡ್ ಆಗುತ್ತಿವೆ. ಇನ್ನೂ ಈ ಮಿಮ್ಸ್ ಗಳಿಗೆ ನೆಟ್ಟಿಗರು ಕೂಡ ಸ್ಪಂದಿಸಿ ತಮ್ಮ ಆದ ಶೈಲಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಆರ್‌ಸಿಬಿ ನಾಯಕನ ಆಯ್ಕೆ ವಿಚಾರ ಸಂಬಂಧ ವಿರಾಟ್ ಕೊಹ್ಲಿಯ ಜೊತೆಗೆ ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡೆ ಹಾಗೂ ರಜತ್ ಪಾಟಿದಾರ್ ಅವರ ಹೆಸರುಗಳು ಮುಂಚೂಣಿಯಲ್ಲಿದ್ದವು. ವಿರಾಟ್ ಕೊಹ್ಲಿ ಹಲವು ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದ್ದಾರೆ. ಭುವಿ, ಕೃನಾಲ್ ಹಾಗೂ ರಜತ್ ಈಗಾಗಲೇ ದೇಶಿಯ ಕ್ರಿಕೆಟ್ ನಲ್ಲಿ ನಾಯಕತ್ವ ವಹಿಸಿಕೊಂಡಿದ್ದರು. ಮೂವರಿಗೆ ನಾಯಕತ್ವ ವಹಿಸಿಕೊಂಡಿರುವ ಅನುಭವ ಇತ್ತು. ಅಂತಿಮವಾಗಿ ಚಾಲೆಂಜರ್ಸ್ ತಂಡದ ಪ್ರಾಂಚೈಸಿ ರಜತ್ ಪಾಟಿದಾರ್ ಅವರಿಗೆ ಮಣೆಹಾಕಿದೆ.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner