ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್​ಗೂ ಮುನ್ನ ರ‍್ಯಾಂಕಿಂಗ್​ನಲ್ಲಿ ವೆಸ್ಟ್ ಇಂಡೀಸ್ ಭರ್ಜರಿ ಜಿಗಿತ; ಭಾರತ, ಆಸ್ಟ್ರೇಲಿಯಾ ಎಲ್ಲಿವೆ?

ಟಿ20 ವಿಶ್ವಕಪ್​ಗೂ ಮುನ್ನ ರ‍್ಯಾಂಕಿಂಗ್​ನಲ್ಲಿ ವೆಸ್ಟ್ ಇಂಡೀಸ್ ಭರ್ಜರಿ ಜಿಗಿತ; ಭಾರತ, ಆಸ್ಟ್ರೇಲಿಯಾ ಎಲ್ಲಿವೆ?

T20I Cricket Ranking: 2007ರಲ್ಲಿ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಟೀಮ್ ಇಂಡಿಯಾ, 264 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಸೌತ್ ಆಫ್ರಿಕಾ ವಿರುದ್ಧ ಸರಣಿ ಗೆದ್ದ ವೆಸ್ಟ್ ಇಂಡೀಸ್ 4ನೇ ಸ್ಥಾನಕ್ಕೆ ಜಿಗಿತ ಕಂಡಿದೆ.

ಟಿ20 ವಿಶ್ವಕಪ್​ಗೂ ಮುನ್ನ ರ‍್ಯಾಂಕಿಂಗ್​​ನಲ್ಲಿ ವೆಸ್ಟ್ ಇಂಡೀಸ್ ಭರ್ಜರಿ ಜಿಗಿತ; ಭಾರತ, ಆಸ್ಟ್ರೇಲಿಯಾ ಎಲ್ಲಿವೆ?
ಟಿ20 ವಿಶ್ವಕಪ್​ಗೂ ಮುನ್ನ ರ‍್ಯಾಂಕಿಂಗ್​​ನಲ್ಲಿ ವೆಸ್ಟ್ ಇಂಡೀಸ್ ಭರ್ಜರಿ ಜಿಗಿತ; ಭಾರತ, ಆಸ್ಟ್ರೇಲಿಯಾ ಎಲ್ಲಿವೆ?

T20I Cricket Ranking: ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ (T20 World Cup 2024) ಇನ್ನೆರಡೇ ದಿನ ಬಾಕಿ ಇದೆ. ಎಲ್ಲಾ ತಂಡಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ. ಜೂನ್ 1 ರಿಂದ ಚುಟುಕು ಸಮರ ಪ್ರಾರಂಭಕ್ಕೂ ಮುನ್ನವೇ ಸಹ ಆತಿಥೇಯ ವೆಸ್ಟ್ ಇಂಡೀಸ್ (West Indies) ತಂಡ ಅಂತಾರಾಷ್ಟ್ರೀಯ ಟಿ20 ರ್ಯಾಂಕಿಂಗ್​ನಲ್ಲಿ ಭರ್ಜರಿ ಏರಿಕೆ ಕಂಡಿದೆ. ಇತ್ತೀಚೆಗೆ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿ ಗೆದ್ದುಕೊಂಡ ಕೆರಿಬಿಯನ್ನರು, ಶ್ರೇಯಾಂಕಾ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

ಟ್ರೆಂಡಿಂಗ್​ ಸುದ್ದಿ

ಇದು ಟಿ20 ವಿಶ್ವಕಪ್​​ಗೂ ಮುನ್ನ ವೆಸ್ಟ್ ಇಂಡೀಸ್​ಗೆ ಬೂಸ್ಟ್ ಸಿಕ್ಕಂತಾಗಿದೆ. 2012 ಮತ್ತು 2016ರ ಟಿ20 ವಿಶ್ವಕಪ್​ ಚಾಂಪಿಯನ್ಸ್ ಐಸಿಸಿ ಪುರುಷರ ಟಿ20ಐ ತಂಡ ಶ್ರೇಯಾಂಕದಲ್ಲಿ ಎರಡು ಸ್ಥಾನ ಮೇಲೇರಿ 4ನೇ ಸ್ಥಾನದಲ್ಲಿದೆ. ಮೊದಲು ಪಾಕ್ ಮತ್ತು ನ್ಯೂಜಿಲೆಂಡ್​ಗಿಂತ ಹಿಂದಿತ್ತು. ಆಟಗಾರರು ಸಹ ಉತ್ತಮ ಫಾರ್ಮ್​ನಲ್ಲಿದ್ದು, ತಮ್ಮ ತವರಿನಲ್ಲೇ ಮತ್ತೊಂದು ವಿಶ್ವಕಪ್ ಎತ್ತಿಹಿಡಿಯುವ ಯೋಜನೆಯಲ್ಲಿದ್ದಾರೆ. ವಿಂಡೀಸ್, ದಕ್ಷಿಣ ಆಫ್ರಿಕಾ ವಿರುದ್ಧ 3-0 ಅಂತರದ ಗೆಲುವು ಸಾಧಿಸಿತು.

ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಯಾರಿಗೆ?

2007ರಲ್ಲಿ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಭಾರತ 264 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 2021ರ ಚಾಂಪಿಯನ್ ಆಸ್ಟ್ರೇಲಿಯಾ 257 ಅಂಕಗಳೊಂದಿಗೆ ಎರಡನೇ ಸ್ಥಾನ ಅಲಂಕರಿಸಿದ್ದಾರೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ 254 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ವಿಂಡೀಸ್ 252 ಪಾಯಿಂಟ್ಸ್​ಗಳೊಂದಿಗೆ 4ನೇ ಸ್ಥಾನ ಪಡೆದಿದೆ. ನ್ಯೂಜಿಲೆಂಡ್ 250 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.

ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಎರಡೂ 244 ಅಂಕಗಳೊಂದಿಗೆ 6 ಮತ್ತು 7ನೇ ಸ್ಥಾನ ಪಡೆದಿವೆ. ಜೂನ್ 2ರಂದು ಟಿ20 ವಿಶ್ವಕಪ್​​ನ ತಮ್ಮ ಆರಂಭಿಕ ಪಂದ್ಯದಲ್ಲಿ ಗಯಾನಾದಲ್ಲಿ ಪಪುವಾ ನ್ಯೂಗಿನಿಯಾ ವಿರುದ್ಧ ವೆಸ್ಟ್ ಇಂಡೀಸ್ ಸೆಣಸಾಟ ನಡೆಸಲಿದೆ. ತವರು ಸರಣಿಯಲ್ಲಿ ತಮ್ಮ ಅದ್ಭುತ ಪ್ರದರ್ಶನದ ಲಾಭವನ್ನು ಪಡೆದಿರುವ ವಿಂಡೀಸ್, ಇದೀಗ ಭರ್ಜರಿ ಆರಂಭ ಪಡೆಯಲು ಸಿದ್ಧಗೊಂಡಿದೆ.

ಆಟಗಾರರ ಶ್ರೇಯಾಂಕ

ಇದೇ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆರಂಭಿಕ ಆಟಗಾರ ಬ್ರೆಂಡನ್ ಕಿಂಗ್ ಸಹ ಟಿ20 ಬ್ಯಾಟರ್​​​ಗಳ ಶ್ರೇಯಾಂಕದಲ್ಲಿ ಐದು ಸ್ಥಾನ ಮೇಲೇರಿ 8ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಮೂರು ಪಂದ್ಯಗಳಲ್ಲಿ 159 ರನ್ ಗಳಿಸಿದ್ದರು. ಮೂರನೇ ಟಿ20ಯಲ್ಲಿ 26 ಎಸೆತಗಳಲ್ಲಿ 69 ರನ್ ಗಳಿಸಿದ ಜಾನ್ಸನ್ ಚಾರ್ಲ್ಸ್, 17 ಸ್ಥಾನ ಮೇಲಕ್ಕೇರಿ 20ನೇ ಸ್ಥಾನ ಪಡೆದಿದ್ದಾರೆ. ಕೈಲ್ ಮೇಯರ್ಸ್ 12 ಸ್ಥಾನಗಳ ಏರಿಕೆ ಕಂಡು 31ನೇ ಸ್ಥಾನ ತಲುಪಿದರೆ, ಎಡಗೈ ಸ್ಪಿನ್ನರ್ ಗುಡಕೇಶ್ ಮೋಟಿ 84 ಸ್ಥಾನ ಮೇಲಕ್ಕೇರಿ 27ನೇ ಸ್ಥಾನ ತಲುಪಿದ್ದಾರೆ.

ಬಾಂಗ್ಲಾದೇಶ-ಯುಎಸ್ಎ ಸರಣಿಯ ಕೊನೆಯ ಎರಡು ಪಂದ್ಯಗಳು ಮತ್ತು ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಸರಣಿಯ ಪ್ರದರ್ಶನವನ್ನು ಪರಿಗಣಿಸಿದ ಇತ್ತೀಚಿನ ರ್ಯಾಂಕಿಂಗ್​​ ನವೀಕರಣದಲ್ಲಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಏಳನೇ ಸ್ಥಾನಕ್ಕೆ ಏರಿದ್ದಾರೆ. ಜಾನಿ ಬೈರ್​​ಸ್ಟೋ 8 ಸ್ಥಾನ ಮೇಲೇರಿ 36ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಆರಂಭಿಕ ಆಟಗಾರ ಫಖರ್ ಜಮಾನ್, 57ರಿಂದ 51ನೇ ಸ್ಥಾನಕ್ಕೆ ಏರಿದ್ದಾರೆ.

ಬೌಲಿಂಗ್ ರ್ಯಾಂಕಿಂಗ್​​​ನಲ್ಲಿ ಪಾಕಿಸ್ತಾನದ ಶಾಹೀನ್ ಅಫ್ರಿದಿ ಮೂರು ಸ್ಥಾನ ಮೇಲಕ್ಕೇರಿ 11ನೇ ಸ್ಥಾನದಲ್ಲಿದ್ದರೆ, ಇಮಾದ್ ವಾಸಿಮ್ 14 ಸ್ಥಾನ ಮೇಲೇರಿ 38ನೇ ಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್ ರ್ಯಾಂಕಿಂಗ್​​ನಲ್ಲಿ ಸ್ಟೀವನ್ ಟೇಲರ್ 28 ಸ್ಥಾನ ಮೇಲಕ್ಕೇರಿ 109ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶದ ರಿಷದ್ ಹುಸೇನ್ 38 ಸ್ಥಾನ ಮೇಲಕ್ಕೇರಿ 52ನೇ ಸ್ಥಾನಕ್ಕೇರಿದ್ದಾರೆ.

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ