ಫ್ಲೋರಿಡಾದಲ್ಲಿ ಮೊದಲ ಟಿ20 ಪಂದ್ಯ: ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ ಗೆಲುವಿನ ಶುಭಾರಂಭ
ಕನ್ನಡ ಸುದ್ದಿ  /  ಕ್ರಿಕೆಟ್  /  ಫ್ಲೋರಿಡಾದಲ್ಲಿ ಮೊದಲ ಟಿ20 ಪಂದ್ಯ: ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ ಗೆಲುವಿನ ಶುಭಾರಂಭ

ಫ್ಲೋರಿಡಾದಲ್ಲಿ ಮೊದಲ ಟಿ20 ಪಂದ್ಯ: ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ ಗೆಲುವಿನ ಶುಭಾರಂಭ

ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ್ ಗೆಲುವಿನ ಶುಭಾರಂಭ ಮಾಡಿದೆ. ಫ್ಲೋರಿಡಾದಲ್ಲಿ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 14 ರನ್ ಗಳಿಂದ ಜಯ ಗಳಿಸಿದೆ. ಪಾಕ್ ಪರ ಮೊಹಮ್ಮದ್ ನವಾಜ್ 3 ವಿಕೆಟ್ ಪಡೆದಿದ್ದಾರೆ.

ಪಾಕ್ ಪರ ಆರಂಭಿಕ ಬ್ಯಾಟರ್ ಸೈಯಮ್ ಅಯ್ಯೂಬ್ 38 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 57 ರನ್ ಗಳ ಅರ್ಧ ಶತಕ ಸಡಿಸಿದರು. (ಫೋಟೊ-ಐಸಿಸಿ)
ಪಾಕ್ ಪರ ಆರಂಭಿಕ ಬ್ಯಾಟರ್ ಸೈಯಮ್ ಅಯ್ಯೂಬ್ 38 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 57 ರನ್ ಗಳ ಅರ್ಧ ಶತಕ ಸಡಿಸಿದರು. (ಫೋಟೊ-ಐಸಿಸಿ)

ಫ್ಲೋರಿಡಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ 14 ರನ್ ಗಳ ಗೆಲುವು ಸಾಧಿಸಿದೆ. ಪಾಕ್ ಪರ ಮೊಹಮ್ಮದ್ ನವಾಜ್ ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ನಿನ್ನೆ (ಜುಲೈ 31, ಗುರುವಾರ) ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಆರಂಭಿಕ ಬ್ಯಾಟರ್ ಸೈಯಮ್ ಅಯ್ಯೂಬ್ 38 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 57 ರನ್ ಬಾರಿಸಿದರು. ಉಳಿದಂತೆ ಸಾಬಿಬ್ಜಾದ ಫರ್ಹಾನ್ 14, ಫಖರ್ ಜಮಾನ್ 28, ಹಸನ್ ನವಾಜ್ 24 ರನ್ ಗಳಿಸಿದರು. ವಿಂಡೀಸ್ ಪರ ಶಮರ್ ಜೋಸೆಫ್ 3 ವಿಕೆಟ್ ಪಡೆದರು.

179 ರನ್ ಗಳ ಗುರಿಯನ್ನು ಬೆನ್ನತ್ತಿದ ವಿಂಡೀಸ್ ಪಡೆಗೆ ಜಾನ್ಸನ್ ಜಾರ್ಲ್ಸ್ ಮತ್ತು ಜ್ಯುವೆಲ್ ಆಂಡ್ರ್ಯೂ ಉತ್ತಮ ಆರಂಭವನ್ನು ಒದಗಿಸಿಕೊಟ್ಟರು. ಈ ಜೋಡಿ ಮುರಿಯದ ಮೊದಲ ವಿಕೆಟ್ ಗೆ 11.7 ಓವರ್ ಗಳಲ್ಲಿ 72 ರನ್ ಗಳಿಸಿತ್ತು. ವಿಕೆಟ್ ಕೀಪರ್ ಕಂ ಆರಂಭಿಕ ಬ್ಯಾಟರ್ ಜ್ಯುವೆಲ್ ಆಂಡ್ಯೂ 35 ರನ್ ಗಳಿಸಿ ಮೊಹಮ್ಮದ್ ನವಾಜ್ ಗೆ ವಿಕೆಟ್ ಒಪ್ಪಿಸಿದರು. ಜಾನ್ಸನ್ ಚಾರ್ಲ್ಸ್ 35 ರನ್ ಗಳಿಸಿ ಆಡುತ್ತಿದ್ದಾಗ ನವಾಜ್ ಬೌಲಿಂಗ್ ನಲ್ಲಿ ಔಟಾದರು. ಜೇಸನ್ ಹೋಲ್ಡರ್ ಔಟಾಗದೆ 30 ರನ್ ಗಳಿಸಿದರು. ಇವರನ್ನು ಹೊರತುಪಡಿಸಿದರೆ ಯಾವೊಬ್ಬ ಆಟಗಾರರನೂ ಕೂಡ ವಿಂಡೀಸ್ ಗೆ ಜಯ ತಂದುಕೊಡುವಂತಹ ಆಟವನ್ನು ಆಡಲಿಲ್ಲ. ಪರಿಣಾಮವಾಗಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಪಾಕಿಸ್ತಾನದ ಪರ ಮೊಹಮ್ಮದ್ ನವಾಜ್ 4 ಓವರ್ ಗಳನ್ನು ಎಸೆದು 23 ರನ್ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಗಳನ್ನು ಪಡೆಯುವ ಮೂಲಕ ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ನಡುವೆ 3 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. 2ನೇ ಮತ್ತು 3ನೇ ಟಿ20 ಪಂದ್ಯಗಳು ಕ್ರಮವಾಗಿ ಆಗಸ್ಟ್ 2 ಮತ್ತು 3 ರಂದು ಫ್ಲೋರಿಡಾದಲ್ಲಿ ನಡೆಯಲಿವೆ. 3 ಏಕದಿನ ಪಂದ್ಯಗಳು ಕ್ರಮವಾಗಿ ಆಗಸ್ಟ್ 8, 10 ಹಾಗೂ 12 ರಂದು ಟ್ರಿನಿಡಾಡ್ ನಲ್ಲಿ ನಡೆಯಲಿವೆ.

ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.