ಕನ್ನಡ ಸುದ್ದಿ  /  ಕ್ರಿಕೆಟ್  /  ಅಫ್ಘಾನಿಸ್ತಾನ ವಿರುದ್ಧ 104 ರನ್​ಗಳಿಂದ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್; ವಿಶ್ವದಾಖಲೆ ನಿರ್ಮಿಸಿದ ಕೆರಿಬಿಯನ್ನರು

ಅಫ್ಘಾನಿಸ್ತಾನ ವಿರುದ್ಧ 104 ರನ್​ಗಳಿಂದ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್; ವಿಶ್ವದಾಖಲೆ ನಿರ್ಮಿಸಿದ ಕೆರಿಬಿಯನ್ನರು

West Indies won: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಗುಂಪು ಹಂತದ ಕೊನೆಯ ಪಂದ್ಯವು ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ 104 ರನ್​ಗಳಿಂದ ಗೆದ್ದ ವಿಂಡೀಸ್ ಹಲವು ದಾಖಲೆ ಬರೆಯಿತು.

ಅಫ್ಘಾನಿಸ್ತಾನ ವಿರುದ್ಧ 104 ರನ್​ಗಳಿಂದ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್; ವಿಶ್ವದಾಖಲೆ ನಿರ್ಮಿಸಿದ ಕೆರಿಬಿಯನ್ನರು
ಅಫ್ಘಾನಿಸ್ತಾನ ವಿರುದ್ಧ 104 ರನ್​ಗಳಿಂದ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್; ವಿಶ್ವದಾಖಲೆ ನಿರ್ಮಿಸಿದ ಕೆರಿಬಿಯನ್ನರು (AFP)

ಸತತ 3 ಪಂದ್ಯಗಳಲ್ಲಿ ಎದುರಾಳಿ ತಂಡಗಳನ್ನು 100ರೊಳಗೆ ಆಲೌಟ್ ಮಾಡಿದ್ದ ಅಫ್ಘಾನಿಸ್ತಾನ ತಂಡವು, ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನೂರು ರನ್​​ಗಳ ಅಂತರದಿಂದ ಸೋತಿದೆ. ಆಫ್ಘನ್ ವಿರುದ್ಧ ಬ್ಯಾಟಿಂಗ್​-ಬೌಲಿಂಗ್ ಎರಡರಲ್ಲೂ ಬೊಂಬಾಟ್ ಪ್ರದರ್ಶನ ತೋರಿದ ವಿಂಡೀಸ್​ 104 ರನ್​ಗಳ ಅಂತರದಿಂದ ಗೆದ್ದಿದೆ. ಈ ಉಭಯ ತಂಡಗಳು ಸೂಪರ್​​-8 ಪ್ರವೇಶಿಸಿದೆ. ಈ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಕೆರಿಬಿಯನ್ನರು ಹಲವು ದಾಖಲೆ ಬರೆದರು.

ಸೇಂಟ್ ಲೂಸಿಯಾದ ಡರೇನ್ ಸ್ಯಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್​, ಬೃಹತ್ ಮೊತ್ತ ಪೇರಿಸಿತು. ನಿಕೋಲಸ್ ಪೂರನ್ ಅವರ ಶತಕ ವಂಚಿತ ಆಟದ ನೆರವಿನಿಂದ ವಿಂಡೀಸ್ ತನ್ನ ಪಾಲಿನ 20 ಓವರ್​​ಗಳಲ್ಲಿ 218 ರನ್ ಪೇರಿಸಿತು. ಕಳೆದ ಮೂರು ಪಂದ್ಯಗಳಲ್ಲಿ ಮಿಂಚಿದ್ದ ಆಫ್ಘನ್ ಬೌಲರ್​​​ಗಳು ಈ ಪಂದ್ಯದಲ್ಲಿ ವಿಫಲರಾದರು. 219 ರನ್​ಗಳ ಗುರಿ ಬೆನ್ನಟ್ಟುವಲ್ಲೂ ಆಫ್ಘನ್ ವಿಫಲವಾಯಿತು. 16.2 ಓವರ್​​ಗಳಲ್ಲೇ 114 ರನ್​​ ಗಳಿಸಲಷ್ಟೇ ಶಕ್ತವಾಯಿತು.

ನಿಕೋಲಸ್ ಪೂರನ್ ಪವರ್​ಫುಲ್ ಆಟ

ಕಳೆದ ಮೂರು ಪಂದ್ಯಗಳಲ್ಲಿ ಶಿಸ್ತಿನ ಬೌಲಿಂಗ್ ದಾಳಿ ನಡೆಸಿ ಗಮನ ಸೆಳೆದಿದ್ದ ಆಫ್ಘನ್ ಬೌಲರ್​​ಗಳಿಗೆ ನಿಕೋಲಸ್ ಪೂರನ್ ಬೆಂಡೆತ್ತಿದರು. ಮನಬಂದಂತೆ ದಂಡಿಸಿದರು. ಒಂದೇ ಓವರ್​​ನಲ್ಲಿ 36 ರನ್​ ಕೂಡ ಸಿಡಿಸಿದರು. 53 ಎಸೆತಗಳಲ್ಲಿ 8 ಸಿಕ್ಸರ್​​, 6 ಬೌಂಡರಿ ಸಹಿತ 98 ರನ್ ಸಿಡಿಸಿದರು. ಆದರೆ ರನೌಟ್ ಆಗಿ ಶತಕ ವಂಚಿತರಾದರು. ನೂರು ಗಳಿಸಲು ಸಾಧ್ಯವಾಗದಿದ್ದರೂ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಟಿ20ಐಗಳಲ್ಲಿ ವೆಸ್ಟ್ ಇಂಡೀಸ್ ಅತಿ ದೊಡ್ಡ ಗೆಲುವಿನ ಅಂತರ

ಉಗಾಂಡಾ ವಿರುದ್ಧ 134 ರನ್, ಗಯಾನಾ, 2024

ಅಫ್ಘಾನಿಸ್ತಾನ ವಿರುದ್ಧ 104 ರನ್, ಗ್ರಾಸ್ ಐಲೆಟ್, 2024

ಪಾಕಿಸ್ತಾನ ವಿರುದ್ಧ 84 ರನ್, ಮೀರ್​​ಪುರ್, 2014

ಆಸ್ಟ್ರೇಲಿಯಾ ವಿರುದ್ಧ 74 ರನ್, ಕೊಲಂಬೊ, 2012

ಬಾಂಗ್ಲಾದೇಶ ವಿರುದ್ಧ 73 ರನ್, ಮೀರ್​​ಪುರ್, 2014

(ಈ ಐದು ಗೆಲುವುಗಳು ಬಂದಿರುವುದು ಟಿ20 ವಿಶ್ವಕಪ್​ನಲ್ಲೇ)

ಟಿ20ಐಯಲ್ಲಿ ಅಫ್ಘಾನಿಸ್ತಾನಕ್ಕೆ ಅತಿ ದೊಡ್ಡ ಸೋಲಿನ ಅಂತರ

ಇಂಗ್ಲೆಂಡ್ ವಿರುದ್ಧ 116 ರನ್, ಕೊಲಂಬೊ, 2012

ವೆಸ್ಟ್ ಇಂಡೀಸ್ ವಿರುದ್ಧ 104 ರನ್, ಗ್ರಾಸ್ ಐಲೆಟ್, 2024

ಭಾರತ ವಿರುದ್ಧ 101 ರನ್, ದುಬೈ, 2021

ಶ್ರೀಲಂಕಾ ವಿರುದ್ಧ 72 ರನ್, ಡಂಬುಲ್ಲಾ, 2024

ಐರ್ಲೆಂಡ್ ವಿರುದ್ಧ 68 ರನ್, ಅಬುಧಾಬಿ, 2013

ಪುರುಷರ ಟಿ20 ವಿಶ್ವಕಪ್​ನಲ್ಲಿ ತಂಡವೊಂದರ ಅತ್ಯಧಿಕ ಮೊತ್ತ

260/6 - ಶ್ರೀಲಂಕಾ vs ಕೀನ್ಯಾ, ಜೋಹಾನ್ಸ್‌ಬರ್ಗ್, 2007

230/8 - ಇಂಗ್ಲೆಂಡ್ vs ಸೌತ್ ಆಫ್ರಿಕಾ, ಮುಂಬೈ, 2016

229/4 - ಸೌತ್ ಆಫ್ರಿಕಾ vs ಇಂಗ್ಲೆಂಡ್, ಮುಂಬೈ, 2016

218/4 - ಭಾರತ vs ಇಂಗ್ಲೆಂಡ್, ಡರ್ಬನ್, 2007

218/5 - ವೆಸ್ಟ್ ಇಂಡೀಸ್ vs ಅಫ್ಘನಿಸ್ತಾನ, ಗ್ರಾಸ್ ಐಲೆಟ್, 2024

ಟಿ20ಐಯಲ್ಲಿ ವೆಸ್ಟ್ ಇಂಡೀಸ್ ಪರ ಹೆಚ್ಚು ಸಿಕ್ಸರ್‌ ಸಿಡಿಸಿದವರು

128 - ನಿಕೋಲಸ್ ಪೂರನ್

124 - ಕ್ರಿಸ್ ಗೇಲ್

111 - ಎವಿನ್ ಲೆವಿಸ್

99 - ಕೀರಾನ್ ಪೊಲಾರ್ಡ್

90 - ರೋವ್ಮನ್ ಪೊವೆಲ್

ಟಿ20ಯಲ್ಲಿ ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್

36 - ಯುವರಾಜ್ ಸಿಂಗ್ (IND) vs ಸ್ಟುವರ್ಟ್ ಬ್ರಾಡ್ (ENG), ಡರ್ಬನ್, 2007

36 - ಕೀರಾನ್ ಪೊಲಾರ್ಡ್ (WI) vs ಅಕಿಲಾ ಧನಂಜಯ (SL), ಕೂಲಿಡ್ಜ್, 2021

36 - ರೋಹಿತ್ ಶರ್ಮಾ-ರಿಂಕು ಸಿಂಗ್ (IND) vs ಕರೀಂ ಜನತ್ (AFG), ಬೆಂಗಳೂರು, 2024

36 - ದೀಪೇಂದ್ರ ಸಿಂಗ್ ಐರಿ (NEP) vs ಕಮ್ರಾನ್ ಖಾನ್ (QAT), ಅಲ್ ಅಮರತ್, 2024

36 - ನಿಕೋಲಸ್ ಪೂರನ್-ಜಾನ್ಸನ್ ಚಾರ್ಲ್ಸ್ (WI) vs ಅಜ್ಮತುಲ್ಲಾ ಒಮರ್ಜಾಯ್ (AFG), ಸೇಂಟ್ ಲೂಸಿಯಾ, 2024