ಹೀಗೊಂದು ಕಾಕತಾಳೀಯ, 2009ರ ಐಪಿಎಲ್ ನೆನಪಿಸಿದ ಆರ್​ಸಿಬಿ ಮಹಿಳಾ ತಂಡ; ಅಂದು-ಇಂದು ಸೇಮ್​ ಟು ಸೇಮ್-what a coincidence rcb women team remembered the 2009 ipl wpl and ipl 2nd edition has a link with rcb delhi capitals prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಹೀಗೊಂದು ಕಾಕತಾಳೀಯ, 2009ರ ಐಪಿಎಲ್ ನೆನಪಿಸಿದ ಆರ್​ಸಿಬಿ ಮಹಿಳಾ ತಂಡ; ಅಂದು-ಇಂದು ಸೇಮ್​ ಟು ಸೇಮ್

ಹೀಗೊಂದು ಕಾಕತಾಳೀಯ, 2009ರ ಐಪಿಎಲ್ ನೆನಪಿಸಿದ ಆರ್​ಸಿಬಿ ಮಹಿಳಾ ತಂಡ; ಅಂದು-ಇಂದು ಸೇಮ್​ ಟು ಸೇಮ್

Royal Challengers Bangalore : ಐಪಿಎಲ್ ಮತ್ತು ಡಬ್ಲ್ಯುಪಿಎಲ್​​ನಲ್ಲಿ ಆರ್​​ಸಿಬಿ ತಂಡಕ್ಕೆ ಸಂಬಂಧಿಸಿ ಕಾಕತಾಳೀಯ ಘಟನೆಯೊಂದು ನಡೆದಿದೆ. ಅದು ಏನು ಎಂಬುದನ್ನು ಈ ಮುಂದೆ ನೋಡೋಣ.

2009ರ ಐಪಿಎಲ್ ನೆನಪಿಸಿದ ಆರ್​ಸಿಬಿ ಮಹಿಳಾ ತಂಡ
2009ರ ಐಪಿಎಲ್ ನೆನಪಿಸಿದ ಆರ್​ಸಿಬಿ ಮಹಿಳಾ ತಂಡ

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಜರುಗಿದ ಎಲಿಮಿನೇಟರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Bangalore) ಮಹಿಳೆಯರ ಪ್ರೀಮಿಯರ್​ ಲೀಗ್​​​ನಲ್ಲಿ (WPL) ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ನಿರ್ಣಾಯಕ ಪಂದ್ಯದಲ್ಲಿ ಖಡಕ್ ಬೌಲಿಂಗ್ ಪ್ರದರ್ಶಿಸಿದ ಆರ್​ಸಿಬಿ, 5 ರನ್​ಗಳಿಂದ ಗೆದ್ದು ಬೀಗಿದೆ. ಜಯದ ಬೆನ್ನಲ್ಲೇ ಆರ್​​ಸಿಬಿಗೆ ಸಂಬಂಧಿಸಿ ಕಾಕತಾಳೀಯ ಘಟನೆಯೊಂದು ನಡೆದಿದೆ.

ಕಾಕತಾಳೀಯ ಎಂಬಂತೆ ಆರ್​​ಸಿಬಿಗೆ ಐಪಿಎಲ್​​ನಲ್ಲಿ ನಡೆದಂತೆ ಡಬ್ಲ್ಯುಪಿಎಲ್​​ನಲ್ಲೂ ನಡೆದಿದೆ. 2008ರ ಉದ್ಘಾಟನಾ ಐಪಿಎಲ್​​ನಲ್ಲಿ ಆರ್​ಸಿಬಿ ಹೀನಾಯ ಪ್ರದರ್ಶನದೊಂದಿಗೆ ಲೀಗ್​ನಿಂದ ಹೊರಬಿದ್ದಿತ್ತು. ಆದರೆ 2ನೇ ಆವೃತ್ತಿಯಲ್ಲಿ ಆರ್​​​ಸಿಬಿ ಫೈನಲ್ ಪ್ರವೇಶಿಸಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಅದರಂತೆ ಡಬ್ಲ್ಯುಪಿಎಲ್​​ ಉದ್ಘಾಟನಾ ಆವೃತ್ತಿಯಲ್ಲಿ ಸತತ ಸೋಲಿನಿಂದ ಲೀಗ್​​ನಿಂದಲೇ​​ ಹೊರಬಿದ್ದಿದ್ದ ಸ್ಮೃತಿ ಮಂಧಾನ ಪಡೆ, 2ನೇ ಸೀಸನ್​ನಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ. ಆದರೆ ಡಬ್ಲ್ಯುಪಿಎಲ್​ನಲ್ಲಿ ಇನ್ನೂ ಉತ್ತರ ಸಿಗಬೇಕಿದೆ.

ಐಪಿಎಲ್ ಮತ್ತು ಡಬ್ಲ್ಯುಪಿಎಲ್​​ ಉದ್ಘಾಟನಾ ಟೂರ್ನಿಯಲ್ಲಿ ಹೀನಾಯ ಸೋಲನುಭವಿಸಿದ್ದ ಆರ್​ಸಿಬಿ, ತನ್ನ 2ನೇ ಸೀಸನ್​ನಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಮಹಿಳಾ ಮತ್ತು ಪುರುಷರ ತಂಡಗಳು ಫೈನಲ್​​ಗೇರಿರುವುದು ವಿಶೇಷ. ಆದರೆ 2009ರ ಫಲಿತಾಂಶವನ್ನು ಅಳಿಸಿ ಹಾಕಿ ಮಹಿಳೆಯರ ತಂಡ ಹೊಸ ದಾಖಲೆ ಬರೆಯಲು ಸನ್ನದ್ಧವಾಗಿದೆ. ಅಲ್ಲದೆ 16 ವರ್ಷಗಳಿಂದ ಟ್ರೋಫಿ ಬರ ಎದುರಿಸುತ್ತಿರುವ ಆರ್​​ಸಿಬಿಗೆ ಚೊಚ್ಚಲ ಪ್ರಶಸ್ತಿ ಗೆಲ್ಲುವ ಸುವರ್ಣಾವಕಾಶ ಸಿಕ್ಕಿದೆ.

ಅಂದು-ಇಂದು ಡಿಸಿ ವಿರುದ್ಧವೇ ಫೈನಲ್ ಪಂದ್ಯ

ಮತ್ತೊಂದು ಅಚ್ಚರಿ ಸಂಗತಿ ಏನೆಂದರೆ, 2009ರಲ್ಲಿ ಆರ್​ಸಿಬಿ ಪುರುಷರ ತಂಡದ ಎದುರಿಸಿದ್ದು ಡಿಸಿಯನ್ನೇ ಅಂದರೆ, ಡೆಕ್ಕನ್ ಚಾರ್ಜಸ್ ಎಂದು. ಈಗ ಆರ್​​ಸಿಬಿ ಮಹಿಳಾ ತಂಡವು ಸಹ ಡಿಸಿ ಅಂದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೇ ಫೈನಲ್​ನಲ್ಲಿ ಸೆಣಸಾಣ ನಡೆಸಲಿದೆ. ಅಂದು-ಇಂದು ಡಿಸಿ ವಿರುದ್ಧವೇ ಫೈನಲ್ ಪಂದ್ಯವನ್ನಾಡಲು ಸಜ್ಜಾಗಿದೆ ಆರ್​ಸಿಬಿ. ಆದರೆ ಯಾರು ಗೆದ್ದು ಪ್ರಶಸ್ತಿ ಗೆಲ್ಲುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಫೈನಲ್ ಪಂದ್ಯ ಯಾವಾಗ?

ಡಬ್ಲ್ಯುಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಅರ್ಹತೆ ಪಡೆದಿತ್ತು. ಆದರೆ, ಪಾಯಿಂಟ್ಸ್ ಟೇಬಲ್​ನಲ್ಲಿ ಮೂರನೇ ಸ್ಥಾನದಲ್ಲಿದ್ದ ಆರ್​​ಸಿಬಿ, 2ನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್​ ವಿರುದ್ಧ ಎಲಿಮಿನೇಟರ್​​ ಪಂದ್ಯದಲ್ಲಿ ಸೆಣಸಾಟ ನಡೆಸಿದವು. ಆದರೆ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಮುಂಬೈ ತೀವ್ರ ನಿರಾಸೆಗೊಂಡಿದೆ. ಫೈನಲ್ ಪಂದ್ಯವು ಮಾರ್ಚ್​ 17ರಂದು ಭಾನುವಾರ ನಡೆಯಲಿದೆ.

ಅಂಕಪಟ್ಟಿಯಲ್ಲೂ ಸೇಮ್​ ಟು ಸೇಮ್

2008ರ ಉದ್ಘಾಟನಾ ಐಪಿಎಲ್​ನಲ್ಲಿ ಆರ್​​​ಸಿಬಿ 14 ಪಂದ್ಯಗಳಲ್ಲಿ 1 ಗೆಲುವು, 10 ಸೋಲು ಸಾಧಿಸಿತ್ತು. ಇದರಿಂದ ಅಂಕಪಟ್ಟಿಯಲ್ಲಿ ಕೊನೆಯ ಎರಡನೇ ಸ್ಥಾನವನ್ನು ಪಡೆದಿತ್ತು. ಬಳಿಕ 2ನೇ ಆವೃತ್ತಿಯ ಐಪಿಎಲ್​ನಲ್ಲಿ ಆಡಿದ 14 ಪಂದ್ಯಗಳಲ್ಲಿ 8ರಲ್ಲಿ ಜಯಿಸಿ 3ನೇ ಸ್ಥಾನ ಪಡೆದು ಎರಡನೇ ಸೆಮಿಫೈನಲ್​ ಆಡಿತ್ತು. ಇದೀಗ ಡಬ್ಲ್ಯುಪಿಎಲ್​ನ ಉದ್ಘಾಟನಾ ಟೂರ್ನಿಯ ಅಂಕಪಟ್ಟಿಯ ಕೊನೆಯ 2ನೇ ಸ್ಥಾನವನ್ನು ಪಡೆದಿದ್ದ ಆರ್​​ಸಿಬಿ, ಎರಡನೇ ಆವೃತ್ತಿಯ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದು ಇದೀಗ ಫೈನಲ್​ಗೆ ಎಂಟ್ರಿಕೊಟ್ಟಿದೆ.

ಎಲಿಮಿನೇಟರ್​​ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್​​ಸಿಬಿ 20 ಓವರ್​​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು. ಎಲ್ಲೀಸ್ ಪೆರ್ರಿ ಭರ್ಜರಿ ಅರ್ಧಶತಕ ಸಿಡಿಸಿದ್ದರು. ಆದರೆ ಈ ಗುರಿ ಬೆನ್ನಟ್ಟಿದ ಮುಂಬೈ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಲು ಮಾತ್ರ ಶಕ್ತವಾಯಿತು. ಬೌಲಿಂಗ್​​ನಲ್ಲಿ ಶ್ರೇಯಾಂಕಾ ಪಾಟೀಲ್ 2 ವಿಕೆಟ್ ಪಡೆದು ಮಿಂಚಿದರು.

mysore-dasara_Entry_Point