ಪಂದ್ಯದ ದಿನ ಹೇಗಿರುತ್ತೆ ಆಟಗಾರರ ಆಹಾರ ಕ್ರಮ; ಮ್ಯಾಚ್‌ ನಡುವೆ ಖಡಕ್ಕಾಗಿರಲು ಕ್ರಿಕೆಟರ್ಸ್ ಏನೆಲ್ಲಾ ತಿಂತಾರೆ ನೋಡಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಪಂದ್ಯದ ದಿನ ಹೇಗಿರುತ್ತೆ ಆಟಗಾರರ ಆಹಾರ ಕ್ರಮ; ಮ್ಯಾಚ್‌ ನಡುವೆ ಖಡಕ್ಕಾಗಿರಲು ಕ್ರಿಕೆಟರ್ಸ್ ಏನೆಲ್ಲಾ ತಿಂತಾರೆ ನೋಡಿ

ಪಂದ್ಯದ ದಿನ ಹೇಗಿರುತ್ತೆ ಆಟಗಾರರ ಆಹಾರ ಕ್ರಮ; ಮ್ಯಾಚ್‌ ನಡುವೆ ಖಡಕ್ಕಾಗಿರಲು ಕ್ರಿಕೆಟರ್ಸ್ ಏನೆಲ್ಲಾ ತಿಂತಾರೆ ನೋಡಿ

ಐಪಿಎಲ್‌ ಸೇರಿದಂತೆ ಕ್ರಿಕೆಟ್‌ ಪಂದ್ಯದ ದಿನ ಹಾಗೂ ಪಂದ್ಯ ನಡೆಯುವ ಸಮಯದಲ್ಲಿ ಕ್ರಿಕೆಟಿಗರು ಏನೆಲ್ಲಾ ಸೇವಿಸ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲ ನಿಮಗಿರಬಹುದು. ಬೆಳಗ್ಗಿನ ಉಪಾಹಾರ ಸೇರಿದಂತೆ ಮೈದಾನದಲ್ಲಿ ಆಡುವ ಸಮಯದಲ್ಲಿ ಆಟಗಾರರ ಆಹಾರಕ್ರಮ ಹೀಗಿರುತ್ತೆ ನೋಡಿ.

ಪಂದ್ಯದ ದಿನ ಆಟಗಾರರ ಆಹಾರ ಕ್ರಮ ಹೇಗಿರುತ್ತೆ; ಮ್ಯಾಚ್‌ ಸಮಯದಲ್ಲಿ ಏನೇನು ಸೇವಿಸುತ್ತಾರೆ?
ಪಂದ್ಯದ ದಿನ ಆಟಗಾರರ ಆಹಾರ ಕ್ರಮ ಹೇಗಿರುತ್ತೆ; ಮ್ಯಾಚ್‌ ಸಮಯದಲ್ಲಿ ಏನೇನು ಸೇವಿಸುತ್ತಾರೆ?

ಕ್ರಿಕೆಟ್‌ ಸೇರಿದಂತೆ ಯಾವುದೇ ಕ್ರೀಡೆಯಾದರೂ ಆಟಗಾರರಿಗೆ ಫಿಟ್‌ನೆಸ್‌ ತುಂಬಾ ಮುಖ್ಯ. ಮೈದಾನದಲ್ಲಿ ಪಾದರಸದಂತೆ ಚಂಚಲವಾಗಿ ಓಡಾಡಲು ಆ ದೇಹ ಫಿಟ್‌ ಆಗಿರಬೇಕು. ದೇಹ ಮತ್ತು ಮನಸ್ಸು ಆಟದ ವಾತಾವರಣಕ್ಕೆ ಸಜ್ಜಾದರೆ ಮಾತ್ರ ಚೆನ್ನಾಗಿ ಆಡಲು ಸಾಧ್ಯ. ಫಿಟ್‌ ಆಗಬೇಕಂದ್ರೆ ಆಹಾರ ಕ್ರಮ ಸರಿಯಾಗಿರಬೇಕು. ಅದರಲ್ಲೂ ಪಂದ್ಯದ ದಿನ ಹಾಗೂ ಸಮಯದಲ್ಲಿ ಜಾಗರೂಕರಾಗಿ ಆಹಾರ ಸೇವಿಸಬೇಕು. ಹೊಟ್ಟೆ ತುಂಬಾ ಆಹಾರ ಸೇವಿಸಿದರೆ, ಮೈದಾನಕ್ಕಿಳಿದು ಆಡೋದು ಕಷ್ಟ. ಹಾಗಿದ್ದರೆ ಪಂದ್ಯದ ಸಮಯದಲ್ಲಿ ಆಟಗಾರರು ಆಹಾರ ಸೇವನೆ ಯಾವಾಗ ಮಾಡುತ್ತಾರೆ? ಎಷ್ಟು ಪ್ರಮಾಣದಲ್ಲಿ ಸೇವಿಸ್ತಾರೆ? ಯಾವ ಸಮಯದಲ್ಲಿ ಏನೇನು ಸೇವಿಸುತ್ತಾರೆ ಎಂಬ ಮಾಹಿತಿ ಇಲ್ಲಿದೆ.

ಐಪಿಎಲ್‌ ಸೇರಿದಂತೆ ಕ್ರಿಕೆಟ್‌ನಲ್ಲಿ ಟಿ20 ವಿಚಾರಕ್ಕೆ ಬಂದರೆ, ಪಂದ್ಯ 3ರಿಂದ 4 ಗಂಟೆಗಳ ನಡೆಯುತ್ತೆ. ಏಕದಿನ ಪಂದ್ಯಗಳಾದರೆ 10 ಗಂಟೆಗಳು ಬೇಕಾಗುತ್ತದೆ. ಇನ್ನು ಟೆಸ್ಟ್‌ ಪಂದ್ಯಗಳು ದಿನಪೂರ್ತಿ, ಐದು ದಿನಗಳ ಕಾಲ ನಡೆಯುತ್ತದೆ. ಇಂಥಾ ಸಮಯದಲ್ಲಿ ಆಹಾರ ಸೇವನೆ ವಿಚಾರದಲ್ಲೂ ಆಟಗಾರರು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ನಿರ್ದಿಷ್ಟ ಪಂದ್ಯದಲ್ಲಿ ಆಟಗಾರರು ಮೊದಲು ಬ್ಯಾಟಿಂಗ್ ಮಾಡುತ್ತಾರೋ ಅಥವಾ ಬೌಲಿಂಗ್ ಮಾಡುತ್ತಾರೋ ಎಂಬುದು ಟಾಸ್ ಪ್ರಕ್ರಿಯೆ ನಂತರವೇ ತಿಳಿಯುತ್ತದೆ. ಹೆಚ್ಚೆಂದರೆ ಪಂದ್ಯ ಆಟರಂಭಕ್ಕೂ ಅರ್ಧ ಗಂಟೆ ಮುಂಚಿತವಾಗಿ ಟಾಸ್‌ ನಡೆಯುತ್ತದೆ. ಹೀಗಾಗಿ, ಸುಲಭವಾಗಿ ಜೀರ್ಣವಾಗುವಂಥ ಸಮತೋಲಿತ ಲಘು ಆಹಾರವನ್ನು ಪಂದ್ಯಕ್ಕಿಂತ ಕನಿಷ್ಠ 2ರಿಂದ 4 ಗಂಟೆಗಳ ಮೊದಲು ತಿನ್ನಬೇಕು.

ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ ಇರುವ ಆಹಾರ

ಆಟಗಾರರು ಸೇವಿಸುವ ಆಹಾರದಲ್ಲಿ ಕೊಬ್ಬಿನಾಂಶ ಕಡಿಮೆ ಇರುತ್ತದೆ. ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ ಹೊಂದಿರುವ ಆಹಾರ ಹಾಗೂ ತರಕಾರಿ ಸೇವಿಸುತ್ತಾರೆ. ತರಕಾರಿ ಮತ್ತು ಹಣ್ಣುಗಳ ಸ್ಯಾಂಡ್‌ವಿಟ್‌, ಸಿಹಿ ಗೆಣಸು, ಚಿಕನ್ ಅಥವಾ ಮೀನು, ಸ್ಟಫ್ಡ್ ಆಮ್ಲೆಟ್, ಹಾಲು, ಹಣ್ಣುಗಳನ್ನು ಸೇವಿಸಬಹುದು. ಹೆಚ್ಚುವರಿ ಕೊಬ್ಬು ಮತ್ತು ಎಣ್ಣೆ ಅಂಶವಿರುವ ಘನ ಆಹಾರ ಸೇವಿಸುವಂತಿಲ್ಲ. ಇದರಿಂದ ಹೊಟ್ಟೆ ತುಂಬಿದಂತಾಗಿ ಆಡುವ ಫಿಟ್‌ನೆಸ್‌ ಕಳೆದುಕೊಳ್ಳುತ್ತಾರೆ. ಅಲ್ಲದೆ ಆಲಸ್ಯ ಹೆಚ್ಚುತ್ತದೆ.

ಇದನ್ನೂ ಓದಿ | ಐಪಿಎಲ್ ಪ್ಲೇಆಫ್​ಗೂ ಮುನ್ನ ನೈಟ್​ ರೈಡರ್ಸ್ ಸೇರಿದ ಶಕೀಬ್ ಅಲ್ ಹಸನ್; ಆದರೆ ಇಲ್ಲೊಂದಿದೆ ಟ್ವಿಸ್ಟ್

ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್‌ ಸಮೃದ್ಧವಾಗಿರುವ ಆಹಾರ ಸೇವನೆಯಿಂದಾಗಿ ಆಟಗಾರರು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು. ಇದು ಮೈದಾನದಲ್ಲಿ ಓಡುವಾಗ, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಮಾಡುವಾಗ ಅವರ ದೈಹಿಕ ಸಾಮರ್ಥ್ಯಕ್ಕೆ ಅಡ್ಡಿಯಾಗುವುದಿಲ್ಲ. ಪಂದ್‌ಯ ಪೂರ್ತಿ ಫಿಟ್‌ ಆಗಿ ಆಡಬಹುದು.

ಉಪಾಹಾರ ಸೇವನೆ ಮುಖ್ಯ

ಪಂದ್ಯದ ದಿನದಂದು ಉಪಾಹಾರ ಸೇವನೆ ಮಾಡುವುದು ಬಹಳ ಮುಖ್ಯ. ಪಂದ್ಯಕ್ಕೂ ಗಂಟೆಗಳಿಗಿಂತ ಮುಂಚಿತವಾಗಿ ಹೊಟ್ಟೆಗೆ ಸಾಕಷ್ಟು ಆಹಾರ ಸಿಗಬೇಕು. ಹೀಗಾಗಿ ಬೆಳಗ್ಗೆ ಕ್ರಿಕೆಟಿಗರು ಗಟ್ಟಿ ತಿನ್ನುತ್ತಾರೆ. ಬೆಳಗ್ಗಿನ ಉಪಾಹಾರದಲ್ಲಿ ಆಟಗಾರರು ಸಾಮಾನ್ಯವಾಗಿ ಕಂದು ಬ್ರೆಡ್, ಪ್ರೋಟೀನ್ ಬಾರ್ ಮತ್ತು ಪೀನಟ್‌ ಬಟರ್‌ನೊಂದಿಗೆ ಬಾಳೆಹಣ್ಣು ತಿನ್ನುತ್ತಾರೆ. ಆ ಬಳಿಕ ಪಂದ್ಯಕ್ಕೆ ಸಮಯ ಇರುವುದರಿಂದ ಜೀರ್ಣವಾಗುತ್ತದೆ.

ಪಂದ್ಯ ನಡೆಯುವ ವೇಳೆ ಘನ ಆಹಾರ ಸೇವಿಸುವುದಿಲ್ಲ. ಪಂದ್ಯ ನಡೆಯುತ್ತಿದ್ದಂತೆಯೇ ಎನರ್ಜಿ ಡ್ರಿಂಕ್ ಕುಡಿಯುತ್ತಾರೆ. ಜೊತೆಗೆ ಬಾಳೆಹಣ್ಣು ಸೇವಿಸುತ್ತಾರೆ. ಆಟದ ಸಮಯದಲ್ಲಿ ಆಟಗಾರರು ಆಹಾರ ಸೇವನೆ ತಪ್ಪಿಸುತ್ತಾರೆ. ಆಗ ಕೇವಲ ಎನರ್ಜಿ ಡ್ರಿಂಕ್ಸ್‌ ಅಥವಾ ಕ್ರೀಡಾ ಸಮಯದಲ್ಲಿ ಕುಡಿಯುವ ಪಾನೀಯವನ್ನು ಕುರಿಯುತ್ತಾರೆ. ಒಂದು ಇನ್ನಿಂಗ್ಸ್‌ ಬಳಿಕ ಬ್ರೇಕ್‌ ವೇಳೆಯೂ ಪಾನೀಯ, ಹಣ್ಣು ಹಾಗೂ ಲಘು ಆಹಾರ ಮಾತ್ರ ಸೇವನೆ ಮಾಡುತ್ತಾರೆ.

ಇದನ್ನೂ ಓದಿ | ಆರ್‌ಸಿಬಿ vs ಸಿಎಸ್‌ಕೆ ಮುಖಾಮುಖಿಯಲ್ಲಿ ಹೆಚ್ಚು ರನ್‌, ವಿಕೆಟ್‌, ಸಿಕ್ಸ್-ಫೋರ್ ಗಳಿಸಿದವರು ಯಾರು? ಹೀಗಿದೆ ತಂಡಗಳ ಬಲಾಬಲ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner